ಮದುವೆಯ ನಂತರ ಹೆಣ್ಣು ಮಕ್ಕಳು ಆಧಾರ್ ಕಾರ್ಡ್ ನಲ್ಲಿ ಹೆಸರು ಬದಲಾಯಿಸುವುದು ಈಗ ಇನ್ನಷ್ಟು ಸುಲಭ!
ನೀವು ನಿಮ್ಮ ಮದುವೆಯ ನಂತರ ಗಂಡನ ಹೆಸರನ್ನು ನಿಮ್ಮ ಹೆಸರಿನ ಜೊತೆಗೆ ಸೇರಿಸುವುದಾದರೆ ಆಧಾರ್ ಕಾರ್ಡ್ ನಲ್ಲಿಯೂ ಬದಲಾವಣೆ ಮಾಡಿಕೊಳ್ಳಬೇಕು. ಇದರ ಜೊತೆಗೆ ಬ್ಯಾಂಕ್ ಅಕೌಂಟ್ ಹೊಂದಿದ್ದರೆ ಅದರಲ್ಲಿಯೂ ಹೆಸರು ತಿದ್ದುಪಡಿ ಮಾಡಿಕೊಳ್ಳಬೇಕಾಗುತ್ತದೆ.
ನಮ್ಮ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಕೂಡ ಆಧಾರ್ ಕಾರ್ಡ್ (Aadhar Card) ಪ್ರಮುಖ ಗುರುತಿನ ದಾಖಲೆಯಾಗಿದೆ, ಯಾವುದೇ ಹಣಕಾಸಿನ ವ್ಯವಹಾರ ಮಾಡೋದಿದ್ದರೂ ಆಧಾರ್ ಕಾರ್ಡ್ ಬೇಕೇ ಬೇಕು.
ಈಗಂತೂ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆ (bank Account) ಪ್ಯಾನ್ ಕಾರ್ಡ್ (Pan Card) ಹಾಗೂ ಮೊಬೈಲ್ ಸಂಖ್ಯೆಗಳೊಂದಿಗೆ ಕನೆಕ್ಟ್ ಅಥವಾ ಲಿಂಕ್ (link) ಮಾಡಿರುವುದರಿಂದ ನಮ್ಮ ಬಗ್ಗೆ ಸಂಪೂರ್ಣ ಮಾಹಿತಿ ಸರ್ಕಾರದ ಡಾಟಾ ಸಂಗ್ರಹದಲ್ಲಿ ರಿಜಿಸ್ಟರ್ ಆಗಿರುತ್ತದೆ.
ಕೇವಲ ನಿಮ್ಮ ಒಂದು ಆಧಾರ್ ಸಂಖ್ಯೆಯನ್ನು ನಮೂದಿಸಿದರೆ ಸಾಕು ನಿಮ್ಮ ಪ್ರತಿಯೊಂದು ದಾಖಲೆಗಳು ಕೂಡ ಸರ್ಕಾರಿ (ಡಾಟಾ) ಕಂಪ್ಯೂಟರ್ (Computer screen) ಪರದೆಯ ಮೇಲೆ ಕಾಣಿಸುತ್ತದೆ.
ಕೇವಲ 19,999ಕ್ಕೆ ಐಫೋನ್ ಮಾರಾಟಕ್ಕಿದೆ, ಇಂತಹ ಅವಕಾಶ ಮಿಸ್ ಮಾಡ್ಕೊಳ್ಳೋರು ಉಂಟಾ
ಆಧಾರ್ ಕಾರ್ಡ್ ನಲ್ಲಿ ಕೆಲವೊಮ್ಮೆ ಕೆಲವು ತಿದ್ದುಪಡಿಗಳನ್ನು ಮಾಡಿಕೊಳ್ಳುವುದು ಅನಿವಾರ್ಯವಾಗಿರುತ್ತದೆ, ಈಗಾಗಲೇ ಸರ್ಕಾರ ಇದಕ್ಕೂ ಕೂಡ ಅವಕಾಶ ನೀಡಿತ್ತು. ಈಗಲೂ ಇನ್ನಷ್ಟು ಸುಲಭವಾಗಿ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳಬಹುದು.
ಭಾರತದಲ್ಲಿ ಮದುವೆಯಾದ ನಂತರ ಹೆಣ್ಣು ಮಕ್ಕಳ ಹೆಸರಿನ ಮುಂದೆ ತಂದೆಯ ಹೆಸರಿನ ಬದಲು ಗಂಡನ ಹೆಸರನ್ನು ಸೇರಿಸಲಾಗುತ್ತದೆ ಹೀಗೆ ಹೆಸರು ಬದಲಾವಣೆ (Name Change) ಆದಾಗ ಅದು ಆಧಾರ್ ಕಾರ್ಡ್ ನಲ್ಲಿಯೂ ಬದಲಾವಣೆ ಆಗಬೇಕು. ಹೆಂಡತಿಯ ಹೆಸರಿನ ಮುಂದೆ ಗಂಡನ ಹೆಸರನ್ನು ಇನೇಶಿಯಲ್ (initial name) ಆಗಿ ಸೇರಿಸಲು ನೀವು ಈ ರೀತಿ ಮಾಡಿ.
ಹೆಂಡತಿ ಗಂಡನ ಹೆಸರನ್ನು ತನ್ನ ಹೆಸರಿನೊಂದಿಗೆ ಸೇರಿಸಿಕೊಂಡರೆ ಅದನ್ನು ಆಧಾರ್ ಕಾರ್ಡ್ ನಲ್ಲಿಯು ತಿದ್ದುಪಡಿ ಮಾಡಬೇಕು. ಆಧಾರ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮಾಡಲು ಯಾವೆಲ್ಲ ದಾಖಲೆಗಳು ಬೇಕು ನೋಡೋಣ.
• ಆಧಾರ್ ಸೇವಾ ಕೇಂದ್ರದಲ್ಲಿ ನಿಮಗೆ ಒಂದು ಫಾರ್ಮ್ ಕೊಡಲಾಗುತ್ತದೆ ಅದನ್ನು ನೀವು ಸರಿಯಾದ ಮಾಹಿತಿಯೊಂದಿಗೆ ಫಿಲ್ ಮಾಡಬೇಕು.
• ಆಧಾರ್ ಕಾರ್ಡ್ ಸಂಖ್ಯೆ ಮೊಬೈಲ್ ನಂಬರ್ ನಿಮ್ಮ ವಿಳಾಸ ಎಲ್ಲವನ್ನು ನಮೂದಿಸಬೇಕು.
• ಮದುವೆಯಾದ ಮಹಿಳೆಯರು ತಮ್ಮ ಹೆಸರು ಬದಲಾಯಿಸಿಕೊಳ್ಳಲು ಮದುವೆಯಾದ ಬಗ್ಗೆ ಮ್ಯಾರೇಜ್ ಸರ್ಟಿಫಿಕೇಟ್ (Marriage certificate) ನೀಡಬೇಕು.
• ಮದುವೆಯ ದೃಢೀಕರಣ ಪತ್ರದ ಜೊತೆಗೆ ಮದುವೆಯ ಆಮಂತ್ರಣ ಪತ್ರಿಕೆ ಕೂಡ ಕೊಡಬೇಕಾಗುತ್ತದೆ.
• ಅರ್ಜಿ ಸ್ವೀಕೃತಿಯ ಸಮಯದಲ್ಲಿ ನಿಮ್ಮ ಬೆರಳಚ್ಚು ಅಥವಾ ಥಂಬ್ ಇಂಪ್ರೆಶನ್ (thumb impression) ತೆಗೆದುಕೊಳ್ಳಲಾಗುತ್ತದೆ.
• ಜೊತೆಗೆ ಸ್ಥಳದಲ್ಲಿಯೇ ನಿಮ್ಮ ಫೋಟೋ ಕೂಡ ತೆಗೆದು ಅಪ್ಡೇಟ್ ಮಾಡಲಾಗುತ್ತದೆ.
• ನೀವು ಆಧಾರ್ ಕಾರ್ಡ್ ನಲ್ಲಿ ಈಗಿರುವ ಹೆಸರು ಹಾಗೂ ಬದಲಾಗಬೇಕಾಗಿರುವ ಹೆಸರನ್ನು ಸರಿಯಾಗಿ ಮೆನ್ಷನ್ ಮಾಡಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ಮಾಡಲಾದ ಆಧಾರ್ ಕಾರ್ಡ್ ನಿಮ್ಮ ಕೈ ಸೇರುತ್ತದೆ.
• ನೀವು ಸೈಬರ್ ಸೆಂಟರ್ ಗಳಲ್ಲಿ ಕೂಡ ಈ ಕೆಲಸ ಮಾಡಿಕೊಳ್ಳಬಹುದು. ಇದಕ್ಕೆ 50 ರಿಂದ 100 ರೂಪಾಯಿಗಳ ಶುಲ್ಕ ಇರುತ್ತದೆ.
ಈ ರೀತಿಯಾಗಿ ನೀವು ನಿಮ್ಮ ಮದುವೆಯ ನಂತರ ಗಂಡನ ಹೆಸರನ್ನು ನಿಮ್ಮ ಹೆಸರಿನ ಜೊತೆಗೆ ಸೇರಿಸುವುದಾದರೆ ಆಧಾರ್ ಕಾರ್ಡ್ ನಲ್ಲಿಯೂ ಬದಲಾವಣೆ ಮಾಡಿಕೊಳ್ಳಬೇಕು. ಇದರ ಜೊತೆಗೆ ಬ್ಯಾಂಕ್ ಅಕೌಂಟ್ ಹೊಂದಿದ್ದರೆ ಅದರಲ್ಲಿಯೂ ಹೆಸರು ತಿದ್ದುಪಡಿ ಮಾಡಿಕೊಳ್ಳಬೇಕಾಗುತ್ತದೆ.
How to change name in Aadhaar card for girls after marriage
Follow us On
Google News |