ಜಿಯೋದಿಂದ ₹1748ಕ್ಕೆ 336 ದಿನಗಳ ವ್ಯಾಲಿಡಿಟಿ! ಹಾಗಾದ್ರೆ ಏರ್‌ಟೆಲ್ ಕತೆ ಏನು?

336 ದಿನಗಳ ವ್ಯಾಲಿಡಿಟಿಯೊಂದಿಗೆ ಜಿಯೋ ಬಿಡುಗಡೆ ಮಾಡಿದ ಹೊಸ ರೀಚಾರ್ಜ್ ಪ್ಲ್ಯಾನ್, ಬೆಲೆಗೆ ಪೂರಕವಾದ ಸೌಲಭ್ಯಗಳಿವೆ. ಡೇಟಾ, OTT ಕಂಟೆಂಟ್ ಬೇಕಾದ್ರೆ ಏರ್‌ಟೆಲ್ ಪರಿಗಣಿಸಿ.

  • ಜಿಯೋ ಹೊಸ ಪ್ಲ್ಯಾನ್‌ಗೆ 336 ದಿನಗಳ ವ್ಯಾಲಿಡಿಟಿ
  • ಏರ್‌ಟೆಲ್ 365 ದಿನಗಳ ಪ್ಲ್ಯಾನ್‌ಗೆ OTT ಸೌಲಭ್ಯ
  • ದೀರ್ಘಕಾಲದ ಪ್ಲ್ಯಾನ್ ಬಯಸುವವರಿಗೆ ಬೆಸ್ಟ್ ಆಪ್ಶನ್

ಮೊಬೈಲ್ ರೀಚಾರ್ಜ್ (Mobile Recharge) ಯುಗದಲ್ಲಿ, ಪ್ರತಿದಿನದ ಡೇಟಾ ಅಥವಾ ಪ್ರತಿ ತಿಂಗಳು ರೀಚಾರ್ಜ್ ಮಾಡಬೇಕಾದ ಅನಿವಾರ್ಯತೆ ಉಪಯೋಗದಾಯಕವಲ್ಲ. ಇದನ್ನು ತಡೆಯಲು ಹಲವು ಕಂಪನಿಗಳು ದೀರ್ಘಕಾಲದ (long validity) ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿವೆ.

ಬಜೆಟ್ ಪ್ರಿಯರಿಗೆ ಜಿಯೋ (Jio Recharge Plan) ನೀಡಿರುವ ₹1,748 ಪ್ಲ್ಯಾನ್ ಗಮನ ಸೆಳೆಯುತ್ತಿದೆ. ಈ ಪ್ಲ್ಯಾನ್‌‍ನಲ್ಲಿ 336 ದಿನಗಳ ಕಾಲ ಅನಿಯಮಿತ ಕರೆಗಳು (unlimited calls) ಮತ್ತು 3,600 ಎಸ್‌ಎಂಎಸ್‌ಗಳ ಸೌಲಭ್ಯ ಸಿಗುತ್ತದೆ. ಆದರೆ ಇದರಲ್ಲಿ ಡೇಟಾ ಸೇರಿಲ್ಲ. ಡೇಟಾ ಬೇಕಾದರೆ ಪ್ರತ್ಯೇಕ ಡೇಟಾ ವೋಚರ್ ತೆಗೆದುಕೊಳ್ಳಬೇಕಾಗುತ್ತದೆ.

ಇದರಲ್ಲಿ ಸೇರಿರುವ JioTV, JioCloud ಹೀಗೆ ಹಲವಾರು ಡಿಜಿಟಲ್ ಸೌಲಭ್ಯಗಳು ಲಭ್ಯ. Jio AI Cloud ಮೂಲಕ 50GB ಕ್ಲೌಡ್ ಸ್ಟೋರೇಜ್ ಸಿಗುತ್ತೆ, ಇದು ಫೈಲ್ ಬ್ಯಾಕಪ್ ಹಾಗೂ ಡೇಟಾ ಸಂಗ್ರಹಣೆಗೆ ಉಪಯುಕ್ತವಾಗುತ್ತದೆ. OTT ಕಂಟೆಂಟ್ ಪ್ರಿಯರಿಗೆ ಇದು ಸ್ವಲ್ಪ ಸಾಲದು ಅಂತಾನೂ ಹೇಳಬಹುದು.

Airtel Best Recharge Plan

ಬದಲಾಗಿ, ಡೇಟಾ ಹಾಗೂ OTT ಕಂಟೆಂಟ್ ಬಯಸುವವರಿಗೆ ಏರ್‌ಟೆಲ್‌ನ (Airtel Recharge Plan) ₹2,249 ಪ್ಲ್ಯಾನ್ ಸೂಕ್ತ. ಇದು 365 ದಿನಗಳ ವ್ಯಾಲಿಡಿಟಿ ಹೊಂದಿದ್ದು, 30GB ಒಟ್ಟು ಡೇಟಾ, 100 ಎಸ್‌ಎಂಎಸ್, ಅನಿಯಮಿತ ಕರೆಗಳೊಂದಿಗೆ Airtel Xstream App ಪ್ರವೇಶವನ್ನು ಉಚಿತವಾಗಿ ನೀಡುತ್ತದೆ. ಇದರ ಮೂಲಕ ನೀವು ಟಿವಿ ಶೋಗಳು, ಸಿನಿಮಾ ಮುಂತಾದ OTT ವಿಷಯಗಳನ್ನು ನೋಡಬಹುದು.

ಈಗಿರುವ ಸ್ಥಿತಿಯಲ್ಲಿ ಏರ್‌ಟೆಲ್ 336 ದಿನಗಳ ವ್ಯಾಲಿಡಿಟಿ ಪ್ಲ್ಯಾನ್ ನೀಡುತ್ತಿಲ್ಲ. ಆದರೆ ಜಿಯೋ ₹2,025 ಪ್ಲ್ಯಾನ್‌ನಲ್ಲಿ ಪ್ರತಿ ದಿನ 2.5GB ಡೇಟಾ, ಅನಿಯಮಿತ ಕರೆಗಳು ಹಾಗೂ 200 ದಿನಗಳ ಎಸ್‌ಎಂಎಸ್ ಲಭ್ಯ.

ನಿಮಗೆ calls ಹಾಗೂ SMS ಮುಖ್ಯವಾದರೆ ಜಿಯೋ ₹1,748 ಉತ್ತಮ ಆಯ್ಕೆ. ಆದರೆ ನಿಮಗೆ OTT ಸಹ ಬೇಕಾದರೆ ಏರ್‌ಟೆಲ್ ₹2,249 ಪ್ಲಾನ್ ಅತ್ಯುತ್ತಮ.

Jio vs Airtel, Best Long-Term Recharge Plan

Related Stories