ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆ ಈಗ ಇನ್ನಷ್ಟು ಸುಲಭ! ಇಲ್ಲಿದೆ ಸುಲಭ ವಿಧಾನ
ಆಧಾರ್ ಕಾರ್ಡ್ ಬಳಕೆ ಮಾಡುವವರು ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವ ತಿದ್ದುಪಡಿ (Aadhaar Card correction) ಮಾಡಿಕೊಳ್ಳುವ ಬಗ್ಗೆಯೂ ಕೂಡ ಬಹಳ ಗಮನ ವಹಿಸಬೇಕು
UIADI ಮೂಲಕ ಭಾರತೀಯ ಪ್ರತಿಯೊಬ್ಬ ನಾಗರಿಕನು ಕೂಡ ಆಧಾರ್ ಕಾರ್ಡ್ (Aadhaar card) ಪಡೆದುಕೊಂಡಿರಬೇಕು, ನಮ್ಮ ಮೂಲ ಗುರುತಿನ ಚೀಟಿ (address proof) ಆಗಿ ಆಧಾರ್ ಕಾರ್ಡ್ ಅನ್ನು ಬಳಸುತ್ತೇವೆ.
ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು (personal information) ಯಾವುದೇ ಮೂಲೆಯಲ್ಲಿ ಕುಳಿತು ಬೇಕಾದರೂ ಆಧಾರ್ ಕಾರ್ಡ್ ಮೂಲಕ ತಿಳಿದುಕೊಳ್ಳಬಹುದು
ಆಧಾರ್ ಕಾರ್ಡ್ ಒಂದು ಇದ್ರೆ ಸರ್ಕಾರದ ಹಲವು ಸೌಲಭ್ಯಗಳು ಕೂಡ ಸಿಗುತ್ತವೆ, ಇನ್ನು ಯಾವುದೇ ಹಣಕಾಸಿನ ವ್ಯವಹಾರಕ್ಕೂ ಆಧಾರ್ ಕಾರ್ಡ್ ಎನ್ನುವುದು ಮೂಲ ದಾಖಲೆಯಾಗಿರುತ್ತದೆ.
ಆಧಾರ್ ಕಾರ್ಡ್ ಇಲ್ಲದೆ ಬೇರೆ ಯಾವುದೇ ಕೆಲಸ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ, ನಿಮ್ಮ ಗುರುತಿನ ಪುರಾವೆಯಾಗಿ ಬೇರೆ ಯಾವ ಗುರುತಿನ ಬಗ್ಗೆ ನಿಮ್ಮ ಬಳಿ ಮಾಹಿತಿ ಇದ್ದರು ಆಧಾರ್ ಕಾರ್ಡ್ ಇದ್ದಂತೆ ಆಗುವುದಿಲ್ಲ.
ಪದೇ ಪದೇ ಫೋನ್ ನಂಬರ್ ಬದಲಾವಣೆ ಮಾಡೋ ಹಾಗಿಲ್ಲ! ಬಂತು ಹೊಸ ನಿಯಮ
ಇನ್ನು ಆಧಾರ್ ಕಾರ್ಡ್ ಬಳಕೆ ಮಾಡುವವರು ಆಧಾರ್ ಕಾರ್ಡ್ ನಲ್ಲಿ ಅಗತ್ಯ ಇರುವ ತಿದ್ದುಪಡಿ (Aadhaar Card correction) ಮಾಡಿಕೊಳ್ಳುವ ಬಗ್ಗೆಯೂ ಕೂಡ ಬಹಳ ಗಮನ ವಹಿಸಬೇಕು.
ಆಧಾರ್ ಕಾರ್ಡ್ ನಲ್ಲಿ ಒಂದು ಸಣ್ಣ ತಪ್ಪು ಇದ್ದಾಗಲೂ ಕೂಡ ನಿಮಗೆ ಸಿಗಬೇಕಾಗಿರುವ ಸರ್ಕಾರದ ಸೌಲಭ್ಯ ಸಿಗುವುದಿಲ್ಲ ಹಾಗೂ ಸುಲಭವಾಗಿ ಹಣಕಾಸು ವ್ಯವಹಾರಗಳನ್ನು ಕೂಡ ಮಾಡಲು ಸಾಧ್ಯವಾಗುವುದಿಲ್ಲ.
ಆಧಾರ್ ಕಾರ್ಡ್ ತಿದ್ದುಪಡಿ
ನೀವು 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಮಾಡಿಸಿದ್ದೀರಾ ? ಹಾಗಾದ್ರೆ ಈಗ ಆಧಾರ್ ಕಾರ್ಡ್ ತಿದ್ದುಪಡಿಗೆ ಸರಿಯಾದ ಸಮಯ. ಡಿಸೆಂಬರ್ 21, 2023ರ ವರೆಗೆ ಆಧಾರ್ ಕಾರ್ಡ್ ಅನ್ನು ಆನ್ಲೈನ್ (online) ಮೂಲಕವೇ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್ ನ ಹೆಸರು ವಿಳಾಸ ಫೋಟೋ ಬಯೋಮೆಟ್ರಿಕ್ (biometric) ಮೊದಲಾದ ಬದಲಾವಣೆಗಳನ್ನು ಮಾಡಿಕೊಳ್ಳಬಹುದಾಗಿದೆ.
ರೈತರ ಸಾಲ ಮನ್ನಾ, ಸರ್ಕಾರದ ಬಂಪರ್ ಕೊಡುಗೆ! ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ನೋಡಿ
ಫೋಟೋ ಬದಲಾಯಿಸಿ
10 ವರ್ಷಗಳ ಹಿಂದೆ ನೀವು ಆಧಾರ್ ಕಾರ್ಡ್ ಮಾಡಿಸಿದ್ದರೆ ನಿಮ್ಮ ಮುಖ ಚರ್ಹೆಯಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳು ಆಗಿರುತ್ತದೆ. ಹೀಗಾಗಿ ಆಧಾರ್ ಕಾರ್ಡ್ ನಲ್ಲಿ ಈಗ ಫೋಟೋ ಬದಲಾಯಿಸಿಕೊಳ್ಳಲು ಸೂಕ್ತ ಸಮಯ ಎನ್ನಬಹುದು.
ಆಧಾರ್ ಕಾರ್ಡ್ ನಲ್ಲಿ ಫೋಟೋ ಮಾತ್ರವಲ್ಲದೇ ಬೇರೆ ಎಲ್ಲಾ ವಿವರಗಳನ್ನು ಕೂಡ ತಿದ್ದುಪಡಿ ಮಾಡಿಕೊಳ್ಳಬಹುದು. ನೀವು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ನಲ್ಲಿ ಆಧಾರ್ ಕೇಂದ್ರಗಳಿಗೆ (other centre) ಭೇಟಿ ನೀಡಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಬಹುದು.
ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಸಿಗುತ್ತೆ ಉಚಿತ ಗ್ಯಾಸ್ ಸಂಪರ್ಕ! ಹೀಗೆ ಅರ್ಜಿ ಸಲ್ಲಿಸಿ
ಆಧಾರ್ ಕಾರ್ಡ್ ನಲ್ಲಿ ಆನ್ಲೈನ್ ಮೂಲಕ ಫೋಟೋ ತಿದ್ದುಪಡಿ ಮಾಡುವುದು ಹೇಗೆ!
ಮೊದಲನೆಯದಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ (official website) ಆಗಿರುವ uidai.gov.inಗೆ ಭೇಟಿ ನೀಡಿ.
ಮುಖಪುಟ ತೆರೆಯುತ್ತಿದ್ದಂತೆ ಆಧಾರ್ ಕಾರ್ಡ್ ತಿದ್ದುಪಡಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ನಂತರ ಸ್ಕ್ರೀನ್ ಮೇಲೆ ಕಾಣಿಸುವ ದಾಖಲಾತಿ ಫಾರ್ಮ್ ಒಂದನ್ನು ಡೌನ್ಲೋಡ್ (Download) ಮಾಡಿಕೊಳ್ಳಬೇಕು.
ನಂತರ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ ನಿಮ್ಮ ಹತ್ತಿರದ ಸೇವಾ ಕೇಂದ್ರಗಳಿಗೆ ತೆಗೆದುಕೊಂಡು ಹೋದರೆ ಫೋಟೋವನ್ನು ಅಪ್ಡೇಟ್ ಮಾಡಬಹುದು.
ಬೇರೆಯಲ್ಲ ದಾಖಲೆಗಳು ಅಥವಾ ಬೇರೆ ಎಲ್ಲಾ ಬದಲಾವಣೆಗಳನ್ನು ಆನ್ಲೈನ್ ನಲ್ಲಿಯೇ ಮಾಡಬಹುದು ಆದರೆ ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆಗೆ ಮಾತ್ರ ಉಳಿದ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಮಾಡಿ ಫೋಟೋ ತೆಗೆಸಿಕೊಳ್ಳುವುದಕ್ಕೆ ಮಾತ್ರ ಆಧಾರ್ ಕೇಂದ್ರಕ್ಕೆ ಹೋಗುವುದು ಕಡ್ಡಾಯವಾಗಿದೆ.
points.uidai.gov.in/ ಈ ವೆಬ್ಸೈಟ್ ನಲ್ಲಿ ನಿಮ್ಮ ಹತ್ತಿರದ ಆಧಾರ್ ಕೇಂದ್ರ ಯಾವುದು ಎಂಬುದನ್ನು ತಿಳಿದುಕೊಳ್ಳಿ. ನಂತರ ಆಧಾರ್ ಕೇಂದ್ರಕ್ಕೆ ಅರ್ಜಿ ಫಾರಂ (application form) ತೆಗೆದುಕೊಂಡು ಹೋಗಿ ಸುಲಭವಾಗಿ ಆಧಾರ್ ಕಾರ್ಡ್ ಫೋಟೋ ಬದಲಾವಣೆಯನ್ನು ಮಾಡಿಕೊಂಡು ಬರಬಹುದು.
Photo Change in Aadhaar Card Now Easier, Here is the easy way