ವಾರ ಭವಿಷ್ಯ: ಸ್ನೇಹ, ಹಣ, ಕೆಲಸ – ಈ 7 ದಿನ ನಿಮ್ಮ ನಸಿಬ್ ಹೇಗಿರುತ್ತೆ? ಇಲ್ಲಿದೆ ಭವಿಷ್ಯ

Weekly Horoscope : ಈ ವಾರ ಭವಿಷ್ಯ (Vara Bhavishya) ಕೆಲವು ರಾಶಿಗಳಿಗೆ ಶುಭ ಅವಕಾಶಗಳನ್ನು ಸೃಷ್ಟಿಸುತ್ತಿದೆ ಎಂಬ ಸೂಚನೆ ಇದೆ.

ವಾರ ಭವಿಷ್ಯ (30 ಜೂನ್ ರಿಂದ 5 ಜೂನ್ 2025)

ಮೇಷ ರಾಶಿ : ಈ ವಾರ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ಆದರೆ, ಕೆಲವರು ನಿನ್ನನ್ನು ಸಹಜವಾಗಿ ಅರ್ಥಮಾಡಿಕೊಳ್ಳಲ್ಲ. ಹಣದ ವಿಷಯದಲ್ಲಿ ಬೇರೆಯವರ ಮಾತು ಕೇಳಬೇಡ. ಕುಟುಂಬದವರಿಂದ ಸಣ್ಣ ಒತ್ತಡವಿರಬಹುದು, ನಿಭಾಯಿಸಬಹುದು. ಹಳೆಯ ಸ್ನೇಹಿತರಿಂದ ಚರ್ಚೆ, ಆದರೆ ಸ್ಪಷ್ಟ ಮಾತು ಅವಶ್ಯಕ. ಆರೋಗ್ಯ ಯಥಾಸ್ಥಿತಿಯಲ್ಲಿದೆ, ವಿಶ್ರಾಂತಿ ಮುಖ್ಯ.

ವೃಷಭ ರಾಶಿ : ಈ ವಾರ ಕೆಲಸದ ಕಡೆ ಕೆಲಸ ಹೆಚ್ಚು, ಆದರೆ ಪ್ರಶಂಸೆ ಕಡಿಮೆ ಅನ್ನೋ ಭಾವನೆ. ಹಣದ ವಿಷಯದಲ್ಲಿ ಚಿಕ್ಕ ಸುಧಾರಣೆ ಇದ್ದರೂ ಖುಷಿಯಾಗುತ್ತದೆ. ಮನೆಯವ್ರ ಜೊತೆಗೆ ಕೆಲ ಹೊತ್ತು ಕಳೆಯೋದು ಒಳಿತು. ಆರೋಗ್ಯದಲ್ಲಿ ತಲೆನೋವು, ಒತ್ತಡದ ಲಕ್ಷಣಗಳು ಕಾಣಿಸಬಹುದು. ಯೋಗ ಧ್ಯಾನ ಸಹಕಾರಿ. ಈ ವಾರ ಅಂತೂ ತಾಳ್ಮೆ ನಿಮಗೆ ಶಕ್ತಿ ಕೊಡುವುದು ಖಚಿತ.

ಮಿಥುನ ರಾಶಿ : ವೃತ್ತಿಯಲ್ಲಿ ಚಿಂತೆಗಳು ಹೆಚ್ಚಾಗಬಹುದು ಆದರೆ ಸಹನೆ ಇರಲಿ. ನಿಮ್ಮ ಯೋಜನೆಗಳಿಗೆ ವಿರೋಧಿಗಳಿಂದ ತಡೆ ಬರಬಹುದು. ಹಣದ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಇರಿ. ದೈಹಿಕ ಆರೋಗ್ಯದಲ್ಲಿ ತುಸು ಒತ್ತಡ ಸ್ಥಿತಿ. ಕುಟುಂಬದಲ್ಲಿ ಸಣ್ಣ ಸಣ್ಣ ಮಾತುಗಳಿಂದ ಕಲಹ ಸಂಭವ. ನಿಮ್ಮ ಶಾಂತಿಯಿಂದ ಸಮಸ್ಯೆ ನಿವಾರಣೆಯಾಗಬಹುದು. ಭವಿಷ್ಯದಲ್ಲಿ ಲಾಭದ ಮಾರ್ಗ ತೆರೆದೀತು. ಗಮನ ಹರಿಸಿದರೆ ಅವಕಾಶಗಳು ಸಿಗುತ್ತವೆ.

ಕಟಕ ರಾಶಿ : ಈ ವಾರ ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಡುವುದು ಮುಖ್ಯ. ಕುಟುಂಬದವರು ನಿಮ್ಮಿಂದ ನಿರೀಕ್ಷೆಯುಳ್ಳವರು, ಸಹಾನುಭೂತಿಯಿಂದ ನಡೆದುಕೊಳ್ಳಿ. ಹಣಕಾಸಿನಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಿ. ಕೆಲಸದಲ್ಲಿ ನೂತನ ಅವಕಾಶಗಳು ಕಾಣಿಸುತ್ತವೆ. ಆರೋಗ್ಯದಲ್ಲಿ ಚಿಕ್ಕಚಿಕ್ಕ ತೊಂದರೆಗಳು ಉಂಟಾಗಬಹುದು. ಸ್ನೇಹಿತರಿಂದ ಸಹಕಾರ ದೊರಕುತ್ತದೆ.

ಸಿಂಹ ರಾಶಿ : ಗಮನ ಹರಿಸಿದರೆ ಈ ವಾರ ಯಶಸ್ಸು ನಿಮ್ಮ ಕಡೆಗೂ ಬರುತ್ತದೆ. ಕೆಲಸದಲ್ಲಿ ಪ್ರಮೋಷನ್ ಅಥವಾ ಪ್ರಶಂಸೆ ಸಾಧ್ಯತೆ ಇದೆ. ಹಣಕಾಸು ಹೂಡಿಕೆಯಲ್ಲಿ ಲಾಭ ಕಂಡುಬರುತ್ತದೆ. ಕುಟುಂಬದಲ್ಲಿ ಸಿಹಿ ಕ್ಷಣಗಳು ಕಾದಿವೆ. ಒತ್ತಡದಿಂದ ದೂರವಿರುವುದು ಆರೋಗ್ಯಕ್ಕಾಗಿ ಉತ್ತಮ. ಸ್ನೇಹಿತರೊಂದಿಗೆ ಬಾಂಧವ್ಯ ಗಟ್ಟಿ ಆಗಬಹುದು. ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವ ಸಮಯ. ಹೊಸ ಸಂಬಂಧಗಳು ಮೂಡುವ ಸಾಧ್ಯತೆ ಇದೆ.

ಕನ್ಯಾ ರಾಶಿ : ಈ ವಾರ ಸಂಯಮ ಮತ್ತು ಧೈರ್ಯ ಮುಖ್ಯವಾಗಲಿದೆ. ಕೆಲಸದಲ್ಲಿ ತಾಳ್ಮೆಯಿಂದ ಮುನ್ನಡೆಯಿರಿ, ಫಲ ಇರುತ್ತದೆ. ಹಣಕಾಸು ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಲಹೆ ಕೇಳಿ. ಕುಟುಂಬದಲ್ಲಿ ಮಕ್ಕಳ ಸಾಧನೆ ಸಂತೋಷ ತರಲಿದೆ. ಹೊಸ ಯೋಜನೆಗಳ ಪ್ರಾರಂಭಕ್ಕೆ ಉತ್ತಮ ಸಮಯ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರ ಸಹಾಯ ಲಭ್ಯವಾಗುತ್ತದೆ. ಯಾತ್ರೆಗೆ ಅವಕಾಶ ಬರಬಹುದು.

ವಾರ ಭವಿಷ್ಯ

ತುಲಾ ರಾಶಿ : ನಿರ್ಧಾರ ತೆಗೆದುಕೊಳ್ಳುವ ಮೊದಲು ಭಾವನೆಗಳನ್ನು ಬದಿಗಿಡಿ. ಕೆಲಸದಲ್ಲಿ ಸಣ್ಣ ತೊಂದರೆಗಳು ಕಾಡಬಹುದು, ಆದರೆ ಚಟುವಟಿಕೆಯಿಂದ ಪರಿಹಾರ ಸಾಧ್ಯ. ಹಣಕಾಸಿನಲ್ಲಿ ಒತ್ತಡದ ಸಾಧ್ಯತೆ. ಕುಟುಂಬದಲ್ಲಿ ಅಸ್ಥಿರತೆ ಮೂಡಬಹುದು. ಆರೋಗ್ಯದಲ್ಲಿ ನಿದ್ರಾಭಂಗ ಅಥವಾ ಜೀರ್ಣಕ್ರಿಯೆ ತೊಂದರೆ. ಸ್ನೇಹಿತನ ಸಹಕಾರದಿಂದ ಸಮಸ್ಯೆ ನಿವಾರಣೆಯಾಗಬಹುದು.

ವೃಶ್ಚಿಕ ರಾಶಿ : ವೃತ್ತಿಯಲ್ಲಿ ಹೊಸ ಅವಕಾಶಗಳು ಲಭ್ಯವಾಗಬಹುದು. ನಿಮ್ಮ ಉತ್ಸಾಹ ಮತ್ತು ಶ್ರಮ ಫಲ ಕೊಡಬಹುದು. ಹಣಕಾಸಿನಲ್ಲಿ ಬಂಡವಾಳ ಹೂಡಿಕೆ ವಿಚಾರ ಬಂದರೆ ತಜ್ಞರ ಸಲಹೆ ಕೇಳಿ. ಕುಟುಂಬದಲ್ಲಿ ಸಂಬಂಧ ಗಟ್ಟಿ ಆಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ಸ್ನೇಹಿತರಿಂದ ಪುನಃ ಸಂಪರ್ಕ. ಮಾನಸಿಕ ಒತ್ತಡವನ್ನು ದೂರವಿಡಿ. ತೀರ್ಥಯಾತ್ರೆ ಯೋಗವಿದೆ.

ಧನುಸ್ಸು ರಾಶಿ : ಈ ವಾರ ನೀವು ಉತ್ಸಾಹದಿಂದ ಮುಂದೆ ಸಾಗಲಿದ್ದೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರತಿಭೆ ಮೆರೆದೀತು. ಹಣಕಾಸಿನಲ್ಲಿ ನಿರ್ವಹಣೆಯ ನಿಟ್ಟಿನಲ್ಲಿ ಹೆಚ್ಚು ಜವಾಬ್ದಾರಿ ಬೇಕಾಗುತ್ತದೆ. ಮನೆಯವರೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ಆರೋಗ್ಯದಲ್ಲಿ ಯಾವುದೇ ಹೊಸ ತೊಂದರೆಯಿಲ್ಲ. ಹಳೆಯ ಗೆಳೆಯರಿಂದ ಸಂಪರ್ಕ. ಹೊಸ ಸಂಬಂಧಗಳಿಗೆ ಶುಭಸಮಯ. ಸ್ವಲ್ಪ ಧೈರ್ಯದಿಂದ ಮುಂದಾದರೆ ಯಶಸ್ಸು ಗ್ಯಾರಂಟಿ.

ಮಕರ ರಾಶಿ : ವೃತ್ತಿಪರ ಬದುಕಿನಲ್ಲಿ ಏರುಪೇರಿನ ದಿನಗಳಾಗಬಹುದು. ಕೆಲಸದ ಒತ್ತಡದಿಂದ ದೂರವಿರಲು ಸಮಯ ನಿರ್ವಹಣೆ ಅಗತ್ಯ. ಹಣಕಾಸು ನಿಟ್ಟಿನಲ್ಲಿ ನೆಮ್ಮದಿ ಇರಬಹುದು. ಕುಟುಂಬದೊಂದಿಗೆ ಸಮಯ ಕಳೆಯುವ ಮೂಲಕ ಮನಸ್ಸು ಸಂತೋಷವಾಗುತ್ತದೆ. ಆರೋಗ್ಯದಲ್ಲಿ ಸಮಸ್ಯೆ ಇಲ್ಲ. ಸ್ನೇಹಿತರ ಸಹಕಾರ ಸಿಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಬಹುದು. ಭವಿಷ್ಯದ ಯೋಜನೆಗೆ ಸಮಯ ಹರಿಸಿ.

ಕುಂಭ ರಾಶಿ : ಈ ವಾರ ನವೀನ ಯೋಚನೆಗಳು ಮೂಡಬಹುದು. ವೃತ್ತಿಯಲ್ಲಿ ಬದಲಾವಣೆ ಅಥವಾ ಹೊಸ ಪ್ರಾಜೆಕ್ಟ್ ಆರಂಭದ ಸಾಧ್ಯತೆ. ಹಣಕಾಸಿನಲ್ಲಿ ನಿರ್ಣಯ ತೆಗೆದುಕೊಳ್ಳುವ ಮೊದಲು ತಾಳ್ಮೆ ಇರಲಿ. ಕುಟುಂಬದಲ್ಲಿ ಸಂತೋಷದ ಸುದ್ದಿಯೊಂದು ಬರಬಹುದು. ಆರೋಗ್ಯ ಕಾಪಾಡಿಕೊಳ್ಳಿ. ಸ್ನೇಹಿತರಿಂದ ಸಹಾಯ ದೊರೆಯಬಹುದು. ವ್ಯಾಪಾರದಲ್ಲಿ ಬೆಳವಣಿಗೆಯ ಸೂಚನೆ.

ಮೀನಾ ರಾಶಿ : ಕೆಲಸದಲ್ಲಿ ಸಣ್ಣ ವಿಘ್ನಗಳನ್ನು ಮೀರಿ ಮುಂದೆ ಹೋಗಬಹುದು. ಹಣಕಾಸಿನಲ್ಲಿ ಹೊಸ ಆಯ್ಕೆಗಳು ಮುಂದೆ ಬರುವ ಸಾಧ್ಯತೆ. ಕುಟುಂಬದ ನೆರವಿನಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆರೋಗ್ಯದಲ್ಲಿ ನಿದಾನವಾಗಿ ಸುಧಾರಣೆ. ಸ್ನೇಹಿತರಿಂದ ಸಹಾಯ ಲಭ್ಯವಿದೆ. ಹೊಸ ಜವಾಬ್ದಾರಿಗಳತ್ತ ಮುಖ ಮಾಡಬಹುದು. ಧ್ಯಾನ, ಯೋಗದಲ್ಲಿ ತೊಡಗಿದರೆ ಶ್ರೇಷ್ಠ ಫಲ ಸಿಗುತ್ತದೆ.

Weekly Horoscope For 30 June To 5 July 2025

TRENDING ARTICLES1 / 8

Savitha

ಪತ್ರಿಕೋದ್ಯಮದಲ್ಲಿ 8 ವರ್ಷಗಳ ಬರವಣಿಗೆ ಅನುಭವ ಹೊಂದಿರುವ ಸವಿತಾ ರವರು, ಟ್ರೆಂಡಿಂಗ್ ವಿಷಯಗಳು, ಸೋಶಿಯಲ್ ಮೀಡಿಯಾ, ವೈರಲ್ ಕಂಟೆಂಟ್, ಧಾರ್ಮಿಕ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ… More »

Related Stories