ಬ್ಯಾಂಕ್ ಉದ್ಯೋಗ, ಕನ್ನಡ ಗೊತ್ತಿದ್ರೆ ಸಾಕು! ಅರ್ಜಿ ಹಾಕಿ ಜಾಬ್ ಗಿಟ್ಟಿಸಿಕೊಳ್ಳಿ
ಬೇಸಿಕ್ ಪದವಿದಾರರಿಗೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಅವಕಾಶ. ಭಾರತದಾದ್ಯಂತ 4500 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಲು ಜೂನ್ 23 ಕೊನೆಯ ದಿನ.

- 4500 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ
- ತಿಂಗಳಿಗೆ ₹15,000 ಸಂಬಳ
- ಆನ್‌ಲೈನ್ ಪರೀಕ್ಷೆ, ಭಾಷಾ ಪರೀಕ್ಷೆ ಮೂಲಕ ಆಯ್ಕೆ
ಬೆಂಗಳೂರು (Bengaluru): ಬ್ಯಾಂಕ್ ಉದ್ಯೋಗ ಕನಸು ಕಾಣುವ ಅಭ್ಯರ್ಥಿಗಳಿಗೆ ಹೊಸ ಅವಕಾಶ ಬಂದಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank of India) 4500 ಅಪ್ರೆಂಟಿಸ್ ಹುದ್ದೆಗಳಿಗೆ (Jobs) ನೇಮಕಾತಿ ಮಾಡುತ್ತಿದೆ. ಆಸಕ್ತರು ಜೂನ್ 23ರೊಳಗೆ ಅರ್ಜಿ ಸಲ್ಲಿಸಬೇಕು.
ಈ ನೇಮಕಾತಿಗೆ ಅರ್ಹರಾಗಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷದಿಂದ ಗರಿಷ್ಠ 28 ವರ್ಷವರೆಗೆ ಇರಬೇಕು.
ಇದನ್ನೂ ಓದಿ: ನಿಮ್ಮ ಮನೆಗೆ ಇನ್ನೂ ಹಳೆಯ ವಿದ್ಯುತ್ ಮೀಟರ್ ಇದ್ಯಾ? ಇಲ್ಲಿದೆ ಬಿಗ್ ಅಪ್ಡೇಟ್
ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಸರಿಯಾದ ವಯೋಮಿತಿ ಸಡಿಲಿಕೆಯನ್ನೂ ನೀಡಲಾಗಿದೆ.
ಅರ್ಜಿದಾರರು ₹15,000 ಸಂಬಳವನ್ನು ಪ್ರತಿ ತಿಂಗಳು ಪಡೆಯಲಿದ್ದಾರೆ. ಈ ಹುದ್ದೆಗಳು ಪಾನ್ ಇಂಡಿಯಾ ಲೆವಲ್‌ನಲ್ಲಿ (Pan India level) ಇದ್ದು, ಭಾರತದ ಎಲ್ಲ ರಾಜ್ಯಗಳಲ್ಲೂ ಉದ್ಯೋಗ ಅವಕಾಶ ಇದೆ.
ಅಭ್ಯರ್ಥಿಯು ಸ್ವಂತ ರಾಜ್ಯದ ಸ್ಥಳೀಯ ಭಾಷೆಯನ್ನು ತಿಳಿದಿದ್ದರೆ ಹೆಚ್ಚು ಅನುಕೂಲವಾಗುತ್ತದೆ, ಅಂದರೆ, ಉದಾಹರಣೆ ನೀವು ಕರ್ನಾಟಕದವರಾಗಿದ್ದು ನಿಮಗೆ ಕನ್ನಡ ಭಾಷೆ (Kannada Language) ಗೊತ್ತಿದ್ದರೆ ಸಾಕು, ಕನ್ನಡ ಭಾಷೆಯ ಪರೀಕ್ಷೆಯನ್ನೇ ಎದುರಿಸಬಹುದು.
ಇದನ್ನೂ ಓದಿ: ಕರ್ನಾಟಕ ರೈತರ ಕೃಷಿಗೆ ಹೊಸ ಸ್ಕೀಮ್! ಕುಸುಮ್-ಸಿ ಸೋಲಾರ್ ಯೋಜನೆ ಜಾರಿ
ಆಯ್ಕೆ ಪ್ರಕ್ರಿಯೆ ಆನ್‌ಲೈನ್ ಪರೀಕ್ಷೆ ಮೂಲಕ ನಡೆಯಲಿದೆ. ಜೊತೆಗೆ ಸ್ಥಳೀಯ ಭಾಷಾ ಪರೀಕ್ಷೆಯನ್ನೂ ಎದುರಿಸಬೇಕಾಗುತ್ತದೆ. ಪ್ರಕ್ರಿಯೆ ಸಂಪೂರ್ಣವಾಗಿ ನಿರ್ದಿಷ್ಟ www.nats.education.gov.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ನಡೆಯುತ್ತದೆ.
ಇದನ್ನೂ ಓದಿ: ಯಾರ್ಯಾರಿಗೆ ಗೃಹಲಕ್ಷ್ಮಿ ಯೋಜನೆ ಹಣ ಬರಲ್ಲ, ಏಕೆ? ಇಲ್ಲಿದೆ ಕಾರಣ! ಹೊಸ ಪಟ್ಟಿ
ಅರ್ಜಿದಾರರು ತಮ್ಮ ವರ್ಗಾನುಸಾರವಾಗಿ ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಎಲ್ಲಾ ಮಹಿಳೆಯರು ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹600 ಶುಲ್ಕವಿದ್ದು, ಇತರರಿಗೆ ₹800. ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ₹400 ನಿಗದಿಯಾಗಿದೆ.
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ಈ ಲಿಂಕ್ ಬಳಸಿ:
👉 https://nats.education.gov.in/student_type.php
Central Bank Recruitment for 4500 Apprentice Posts




