ಗೃಹಲಕ್ಷ್ಮಿ ಹಣ ₹2,000 ಮಾತ್ರ ಬಂತು, ಪೆಂಡಿಂಗ್ ಇರೋ ಇನ್ನು ₹2,000 ಬರೋದು ಯಾವಾಗ? ಇಲ್ಲಿದೆ ಮಾಹಿತಿ

10 ತಿಂಗಳ ಕಾಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿದರು, 11 ಮತ್ತು 12ನೇ ಕಂತಿನ ಹಣದ ವಿಷಯಕ್ಕೆ ಈಗ ಗೊಂದಲ ಶುರುವಾಗಿದೆ.

ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಯೋಜನೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಆಗಿದೆ. ಈ ಒಂದು ಯೋಜನೆಯ ಅನುಸಾರ ಮಹಿಳೆಯರಿಗೆ ಪ್ರತಿ ತಿಂಗಳು ₹2000 ರೂಪಾಯಿ ಅವರ ಬ್ಯಾಂಕ್ ಖಾತೆಗೆ ಜಮೆ ಆಗಬೇಕಿತ್ತು.

ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಈ ಯೋಜನೆಗೆ ಚಾಲನೆ ಸಿಕ್ಕಿತು. ಬಳಿಕ 10 ತಿಂಗಳ ಕಾಲ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಿದರು, 11 ಮತ್ತು 12ನೇ ಕಂತಿನ ಹಣದ ವಿಷಯಕ್ಕೆ ಈಗ ಗೊಂದಲ ಶುರುವಾಗಿದೆ. ಮಹಿಳೆಯರಿಗೆ ಹಣ ಬಂದಿಲ್ಲ.

ಜೂನ್ ಮತ್ತು ಜುಲೈ ತಿಂಗಳ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ (Bank Account) ಜಮೆ ಆಗಿಲ್ಲ ಎಂದು ಎಲ್ಲಾ ಮಹಿಳೆಯರು ಕೂಡ ಆತಂಕಕ್ಕೆ ಒಳಗಾಗಿದ್ದರು, ಮಹಿಳೆಯರಿಗೆ ಈ ಹಣ ಸಿಗುತ್ತೋ, ಇಲ್ಲವೋ ಎನ್ನುವ ಅನುಮಾನ ಕೂಡ ಶುರುವಾಗಿತ್ತು, ಲೋಕಸಭಾ ಚುನಾವಣೆಯ ನಂತರ ಈ ಗ್ಯಾರೆಂಟಿ ಯೋಜನೆಗಳೆಲ್ಲಾ ನಿಂತು ಹೋಗಬಹುದು ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಆದರೆ ಇದೆಲ್ಲದಕ್ಕೂ ಕೂಡ ಖುದ್ದು ಸರಕಾರವೇ ಕ್ಲಾರಿಟಿಯನ್ನು ಸಹ ಕೊಟ್ಟಿತು..

Gruha Lakshmi money received only 2,000, Update About Pending Money

ಸರ್ಕಾರದಿಂದ ಸಿಕ್ಕ ಮಾಹಿತಿಯ ಅನುಸಾರ, 5 ವರ್ಷಗಳ ಕಾಲ ಎಲ್ಲಾ ಯೋಜನೆಗಳ ಸೌಲಭ್ಯ ಜನರಿಗೆ ಸಿಗುತ್ತದೆ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಲಾಯಿತು. ಇತ್ತ ಈ ಯೋಜನೆಗಳ ಅನುಸಾರ 11 ಮತ್ತು 12ನೇ ಕಂತಿನ ಹಣ ಇನ್ನು ಯಾಕೆ ಬಂದಿಲ್ಲ ಎನ್ನುವ ಗೊಂದಲ ಜನರಲ್ಲಿ ಕಾಡುವುದಕ್ಕೆ ಶುರುವಾಗಿದೆ.

ಈ ಜಿಲ್ಲೆಗಳಲ್ಲಿ ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಮಹಿಳೆಯರೇ ಅರ್ಜಿ ಸಲ್ಲಿಸಿ, ಇಲ್ಲಿದೆ ಮಾಹಿತಿ

ಅದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾತನಾಡಿ, ಒಂದು ವಾರಗಳಲ್ಲಿ 11 ಮತ್ತು 12ನೇ ಕಂತಿನ ಹಣ ಜೊತೆಯಾಗಿ 4000 ಜಮೆ ಆಗುತ್ತದೆ ಎಂದು ತಿಳಿಸಿದರು..

ಆದರೆ ಸರ್ಕಾರದ ಈ ಮಾತಿನ ಹಾಗೆ 4000 ರೂಪಾಯಿ ಮಹಿಳೆಯರ ಖಾತೆಗೆ ಜಮೆ ಆಗಿಲ್ಲ, ಬದಲಾಗಿ ₹2000 ರೂಪಾಯಿ ಮಾತ್ರ ಜಮೆ ಆಗಿದೆ. ಇದು ಕೂಡ ಎಲ್ಲರ ಬ್ಯಾಂಕ್ ಖಾತೆಗೆ ಜಮೆ ಆಗಿಲ್ಲ. ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಮಾತ್ರ ಈ ಹಣ ಜಮೆ ಆಗಿದೆ.

ಇನ್ನು ಕೆಲವರಿಗೆ 11ನೇ ಕಂತಿನ ಹಣ ಕೂಡ ಬಂದಿಲ್ಲ. ಈ ವಿಚಾರವಾಗಿ ಮಹಿಳೆಯರಲ್ಲಿ ಈಗ ಮತ್ತೆ ಆತಂಕ ಶುರುವಾಗಿದೆ. 4000 ಒಟ್ಟಿಗೆ ಯಾವಾಗ ಬರುತ್ತದೆ, ಜುಲೈ ತಿಂಗಳ ಹಣ ಯಾವಾಗ ಬರುತ್ತದೆ ಎಂದು ಕೇಳಿದವರಿಗೆ ಇದೀಗ ಉತ್ತರ ಸಿಕ್ಕಿದೆ..

ನಿಮ್ಮ ಜಮೀನಿಗೆ ಹೋಗೋಕೆ ಅಕ್ಕ-ಪಕ್ಕದ ಜಮೀನಿನವರು ದಾರಿ ಕೊಡ್ತಿಲ್ವಾ? ಹಾಗಿದ್ರೆ ಈ ರೀತಿ ಮಾಡಿ!

ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ, ಇನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಜುಲೈ ತಿಂಗಳ ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. ಹಾಗೆಯೇ ಯಾವ ಜಿಲ್ಲೆಯ ಮಹಿಳೆಯರಿಗೆ ಜೂನ್ ತಿಂಗಳ ಹಣ ಜಮೆ ಆಗುತ್ತದೆ ಎಂದು ನೋಡುವುದಾದರೆ, ರಾಯಚೂರು, ಕೊಪ್ಪಳ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ಬಾಗಲಕೋಟೆ, ಹಾವೇರಿ, ಬೀದರ್, ವಿಜಯಪುರ, ಬೆಳಗಾವಿ, ಕಲಬುರ್ಗಿ, ಗದಗ, ಕೋಲಾರ ಈ ಜಿಲ್ಲೆಯ ಮಹಿಳೆಯರಿಗೆ 11ನೇ ಕಂತಿನ ಹಣ ಬಿಡುಗಡೆ ಆಗಿದೆ..

Gruha Lakshmi money received only 2,000, Update About Pending Money

Related Stories