ಹೊಸ ವೋಟರ್ ಐಡಿ ಮತ್ತು ತಿದ್ದುಪಡಿ ಮಾಡೋಕೆ ಅವಕಾಶ! ಬೇಕಾಗುವ ದಾಖಲೆಗಳ ಮಾಹಿತಿ ಇಲ್ಲಿದೆ
ನಮ್ಮ ದೇಶದ ನಾಗರೀಕರು ಅತ್ಯಂತ ಪ್ರಮುಖವಾಗಿ ಹೊಂದಿರಬೇಕಾದ ದಾಖಲೆ ವೋಟರ್ ಐಡಿ ಆಗಿದೆ. ಎಲೆಕ್ಷನ್ ನಡೆದಾಗ ಮತ ಚಲಾಯಿಸುವುದಕ್ಕೆ ವೋಟರ್ ಐಡಿ ಬೇಕೇ ಬೇಕು. ಇಲ್ಲದಿದ್ದರೆ, ವೋಟ್ ಹಾಕಲು ಸಾಧ್ಯವಿಲ್ಲ. ಹಾಗಾಗಿ 18 ವರ್ಷ ತುಂಬಿದ ಭಾರತದ ನಾಗರೀಕರ ಬಳಿ ವೋಟರ್ ಐಡಿ ಇರಲೇಬೇಕು. ಹಲವು ಜನರು ಹೊಸದಾಗಿ ವೋಟರ್ ಐಡಿ ಮಾಡಿಸಿಕೊಳ್ಳಬೇಕಾದ ಕಾರಣ ಹಾಗೂ ತಿದ್ದುಪಡಿ ಮಾಡಿಸಬೇಕಾದ ಕಾರಣ ಇದೀಗ ಸರ್ಕಾರವು ಅವಕಾಶ ನೀಡಿದೆ..
ಹೌದು, ಹೊಸದಾಗಿ ವೋಟರ್ ಐಡಿಗಾಗಿ ಅರ್ಜಿ ಸಲ್ಲಿಸುವುದಕ್ಕೆ ಹಾಗೂ ಈಗಾಗಲೇ ಇರುವ ವೋಟರ್ ಐಡಿಯನ್ನು ತಿದ್ದುಪಡಿ ಮಡಿಸುವುದಕ್ಕೆ ಸರ್ಕಾರ ಹೊಸದಾಗಿ ಒಂದು ಅವಕಾಶ ನೀಡಿದ್ದು, ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬಹುದು. 2024ರ ಆಗಸ್ಟ್ 18ರಿಂದ 2024ರ ಅಕ್ಟೊಬರ್ 18 ರವರೆಗೂ ಹೊಸದಾಗಿ ವೋಟರ್ ಐಡಿಗೆ ಅರ್ಜಿ ಸಲ್ಲಿಸುವುದಕ್ಕೆ ಹಾಗೂ ತಿದ್ದುಪಡಿ ಮಾಡಿಸುವುದಕ್ಕೆ ಅವಕಾಶ ಕೊಡಲಾಗಿದ್ದು, ಜನರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಪ್ರತಿ ತಿಂಗಳು ಸರ್ಕಾರ ಕೊಡುವ ರೇಷನ್ ಪಡೆಯಲು ಇನ್ಮುಂದೆ ಹೊಸ ರೂಲ್ಸ್! ಕಡ್ಡಾಯ ನಿಯಮ
ಅರ್ಜಿ ಸಲ್ಲಿಕೆ ಯಾವುದಕ್ಕೆ ಮಾಡಬಹುದು?
*ಹೊಸದಾಗಿ ವೋಟರ್ ಐಡಿ ಮಾಡಿಸಲು
*ವೋಟರ್ ಲಿಸ್ಟ್ ನಲ್ಲಿ ಹೆಸರು ತಿದ್ದುಪಡಿ
*ಅಡ್ರೆಸ್ ಚೇಂಜ್
*ನಿಧನರಾದವರ ಹಾಗೂ ಬೇರೆ ಕಡೆಗ ಹೋದವರ ಹೆಸರು ತೆಗೆಸುವುದು
*18 ವರ್ಷ ತುಂಬಿರುವವರು ಹೊಸದಾಗಿ ವೋಟರ್ ಐಡಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಒಂದು ವೇಳೆ ನೀವು ಹೊಸದಾಗಿ ವೋಟರ್ ಐಡಿ ಮಾಡಿಸಲು ಅರ್ಜಿ ಸಲ್ಲಿಸಬೇಕು ಎಂದರೆ, ಅಥವಾ ಇರುವ ವೋಟರ್ ಐಡಿ ತಿದ್ದುಪಡಿ ಮಾಡಬೇಕು ಎಂದರೆ, ಅದಕ್ಕಾಗಿ ನೀವು http://voters.eci.gov.in/ ಈ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ ಬೇಕಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ, ನಿಮ್ಮ ಹತ್ತಿರ ಮತಗಟ್ಟಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಈ ಎರಡು ರೀತಿಯ ಅವಕಾಶವನ್ನು ಸರ್ಕಾರ ನೀಡಿದೆ.
ಗೃಹಲಕ್ಷ್ಮಿ ಹಣ ₹2,000 ಮಾತ್ರ ಬಂತು, ಪೆಂಡಿಂಗ್ ಇರೋ ಇನ್ನು ₹2,000 ಬರೋದು ಯಾವಾಗ? ಇಲ್ಲಿದೆ ಮಾಹಿತಿ
ಬೇಕಾಗುವ ದಾಖಲೆಗಳು ಹೀಗಿದೆ;
ಹೊಸ ವೋಟರ್ ಐಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
*ವ್ಯಕ್ತಿಯ ಆಧಾರ್ ಕಾರ್ಡ್
*ಮನೆಯವರ ಆಧಾರ್ ಕಾರ್ಡ್
*ಫೋನ್ ನಂಬರ್
*ಅಡ್ರೆಸ್ ಪ್ರೂಫ್
ವೋಟರ್ ಐಡಿ ತಿದ್ದುಪಡಿಗೆ ಬೇಕಾಗುವ ದಾಖಲೆಗಳು:
*ಆಧಾರ್ ಕಾರ್ಡ್
*ಅಡ್ರೆಸ್ ಚೇಂಜ್ ಗೆ ವಾಸಸ್ಥಳ ದೃಢೀಕರಣ ಪತ್ರ
*ಫೋನ್ ನಂಬರ್
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕಿಯೆ:
*ಆನ್ಲೈನ್ ಮೂಲಕ ನೀವು ಹೊಸದಾಗಿ ವೋಟರ್ ಐಡಿ ಮಾಡಿಸಲು ಅರ್ಜಿಸಬೇಕು ಎಂದರೆ, ಈ ರೀತಿ ಮಾಡಿ.
*ಮೊದಲಿಗೆ https://voters.eci.gov.in/ ಸರ್ಕಾರದ ಈ ಅಧಿಕೃತ ವೆಬ್ಸೈಟ್ ಓಪನ್ ಮಾಡಿ
*ಈಗ ಬರುವ ಹೋಮ್ ಪೇಜ್ ನಲ್ಲಿ New Registration for General Electors ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಇಲ್ಲಿ ಹೊಸದಾಗಿ ವೋಟರ್ ಐಡಿ ಮಾಡಿಸಲು, ಅಪ್ಲಿಕೇಶನ್ ಹಾಕಬಹುದು.
*ಈ ಪೇಜ್ ನಲ್ಲಿ Shifting of residence/correction of entries in existing electoral roll/replacement of EPIC /marking of PwD ಈ ಆಪ್ಶನ್ ಸೆಲೆಕ್ಟ್ ಮಾಡಿ, ನಿಮ್ಮ ವೋಟರ್ ಐಡಿ ತಿದ್ದುಪಡಿ ಮಾಡುವುದಕ್ಕೆ ಅರ್ಜಿ ಸಲ್ಲಿಸಬಹುದು.
Here are the required documents for New Voter ID and correction
Our Whatsapp Channel is Live Now 👇