ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವವರಿಗೆ ಸರ್ಕಾರಈ ಕಡೆಯಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತದೆ. ಉಚಿತ ರೇಷನ್, ಆರೋಗ್ಯದ ವಿಚಾರದಲ್ಲಿ ಉಚಿತ ಚಿಕಿತ್ಸೆ, ಸರ್ಕಾರದ ಇನ್ನಷ್ಟು ಯೋಜನೆಗಳ ಸೌಲಭ್ಯ ಇದೆಲ್ಲವೂ ಲಭ್ಯವಿರುತ್ತದೆ.
ಇದರಿಂದ ಬಡಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಸರ್ಕಾರದ್ದು, ಬಹಳಷ್ಟು ಜನರು ದಿನನಿತ್ಯ ಆಹಾರಕ್ಕೂ ಕಷ್ಟಪಡುತ್ತಾರೆ. ಹಾಗಾಗಿ ಸರ್ಕಾರ ಬಿಪಿಎಲ್ ರೇಶನ್ ಕಾರ್ಡ್ ಗಳನ್ನು ಬಡತನದ ರೇಖೆಗಿಂತ ಕೆಳಗಿರುವವರಿಗೆ ವಿತರಿಸಿ ಸಹಾಯ ಮಾಡುತ್ತಿದೆ..
ಪಡಿತರ ಕೇಂದ್ರಗಳಲ್ಲಿ, ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರತಿ ತಿಂಗಳು ಬಿಪಿಎಲ್ ರೇಷನ್ ಕಾರ್ಡ್ (BPL Card) ಹೊಂದಿರುವವರಿಗೆ ಉಚಿತ ರೇಷನ್ ವಿತರಣೆ ಮಾಡಲಾಗುತ್ತದೆ. ಇನ್ನುಮುಂದೆ ಈ ರೀತಿ ಉಚಿತವಾಗಿ ರೇಷನ್ ಪಡೆಯುವುದಕ್ಕೆ ಜನರು ಒಂದು ಪ್ರಮುಖವಾದ ಕೆಲಸವನ್ನು ಮಾಡಬೇಕು. ಅದು ekyc ಮಾಡಿಸುವುದಾಗಿದೆ. ಈ ಒಂದು ಕೆಲಸ ಮಾಡಿದರೆ ಮಾತ್ರ ಇನ್ನುಮುಂದೆ ಪ್ರತಿ ತಿಂಗಳು ರೇಷನ್ ಪಡೆಯಲು ಸಾಧ್ಯ ಆಗುತ್ತದೆ..ಹಾಗಿದ್ದಲ್ಲಿ ekyc ಮಾಡಿಸುವುದು ಹೇಗೆ? ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ? ಎಲ್ಲವನ್ನು ತಿಳಿಸಿಕೊಡುತ್ತೇವೆ ನೋಡಿ..
ಗೃಹಲಕ್ಷ್ಮಿ ಹಣ ₹2,000 ಮಾತ್ರ ಬಂತು, ಪೆಂಡಿಂಗ್ ಇರೋ ಇನ್ನು ₹2,000 ಬರೋದು ಯಾವಾಗ? ಇಲ್ಲಿದೆ ಮಾಹಿತಿ
Ekyc ಮಾಡಿಸಬೇಕಿರುವುದು ಯಾಕೆ?
*ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗೂ ಪ್ರತಿ ತಿಂಗಳು ಪಡಿತರ ಸಿಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದಕ್ಕೆ.
*ekyc ಮಾಡಿಸುವುದರಿಂದ ಫೇಕ್ ರೇಷನ್ ಕಾರ್ಡ್ ಹೊಂದಿರುವವರನ್ನು ಪತ್ತೆ ಹಚ್ಚಿ, ತಡೆಗಟ್ಟಬಹುದು.
*ಯಾರಾದರೂ ನಿಧನರಾಗಿದ್ದರೆ, ಅವರನ್ನು ಗುರುತಿಸಿ ಹೆಸರನ್ನು ರೇಷನ್ ಕಾರ್ಡ್ ಇಂದ ತೆಗೆಸಿ ಹಾಕಬಹುದು. ಈ ಕಾರಣಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಗೆ ekyc ಮಾಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದೆ.
Ekyc ಮಾಡಿಸುವುದು ಎಲ್ಲಿ?
ಈಗ ಸರ್ಕಾರವು ಬಿಪಿಎಲ್ ರೇಶನ್ ಕಾರ್ಡ್ ಹೊಂದಿರುವ ಎಲ್ಲರೂ ಕೂಡ ekyc ಮಾಡಿಸುವುದು ಕಡ್ಡಾಯ ಎಂದು ತಿಳಿಸಿದ್ದು, ಈ ಒಂದು ಕೆಲಸವನ್ನು ನೀವು ಎಲ್ಲಿ ಮಾಡಿಸಬೇಕು ಎಂದು ಕೂಡ ಸರ್ಕಾರವೇ ತಿಳಿಸಿದೆ. ನಿಮ್ಮ ನ್ಯಾಯಬೆಲೆ ಅಂಗಡಿಗೆ ಹೋಗಿ, ರೇಷನ್ ಕಾರ್ಡ್, ಫೋನ್ ನಂಬರ್ ಹಾಗೂ ಅಗತ್ಯವಿರುವ ದಾಖಲೆಗಳನ್ನು ತೆಗೆದುಕೊಂಡು ಹೋಗಿ, ekyc ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಕೊಂಡು ಬರಬಹುದು. ಇದು ಮುಖ್ಯವಾಗಿ ನೀವು ಮಾಡಬೇಕಾದ ಕೆಲಸ ಆಗಿದೆ.
ನಿಮ್ಮ ಜಮೀನಿಗೆ ಹೋಗೋಕೆ ಅಕ್ಕ-ಪಕ್ಕದ ಜಮೀನಿನವರು ದಾರಿ ಕೊಡ್ತಿಲ್ವಾ? ಹಾಗಿದ್ರೆ ಈ ರೀತಿ ಮಾಡಿ!
Ekyc ಮಾಡಿಸಲು ಕೊನೆಯ ದಿನಾಂಕ:
ಸರ್ಕಾರ ಏನೋ ekyc ಪ್ರಕ್ರಿಯೆಯನ್ನು ಮಾಡಿಸುವುದು ಕಡ್ಡಾಯ ಎಂದು ತಿಳಿಸಿದೆ. ಹಾಗೆಯೇ ಇದರ ಜೊತೆಗೆ ekyc ಮಾಡಿಸುವುದಕ್ಕೆ ಕೊನೆಯ ದಿನಾಂಕವನ್ನು ಸಹ ನಿಗದಿ ಮಾಡಿದೆ. 2024ರ ಆಗಸ್ಟ್ 31 ಇದಕ್ಕೆ ಕೊನೆಯ ದಿನಾಂಕ ಆಗಿದ್ದು, ಈ ದಿನಾಂಕದ ಒಳಗೆ ನೀವು ಇಕೆವೈಸಿ ಮಾಡಿಸಬೇಕು. ನೀವು ಪ್ರತಿ ತಿಂಗಳು ರೇಷನ್ ಪಡೆಯುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಇಕೆವೈಸಿ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿಕೊಳ್ಳಿ.
New rules to get government ration every month, Follow Mandatory rule
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.