ರೈತರ ಬಳಿ ಬಹಳ ಪ್ರಮುಖವಾಗಿ ಇರಬೇಕಾದ ದಾಖಲೆ ಅವರ.ಜಮೀನಿನ ಪ್ರಮಾಣಪತ್ರ ಆಗಿರುತ್ತದೆ. ರೈತರು ಯಾವುದೇ ಕೆಲಸ ಮಾಡುವುದಕ್ಕೂ ಈ ದಾಖಲೆ ಬಹಳ ಮುಖ್ಯವಾಗಿ ಇರಲೇಬೇಕು. ಹಾಗಾಗಿ ರೈತರು ಪಹಣಿ ಪತ್ರವನ್ನು ಬಹಳ ಹುಷಾರಾಗಿ ನೋಡಿಕೊಳ್ಳಬೇಕು. ಹಾಗೆಯೇ ಅದರಲ್ಲಿ ಇರುವ ವಿವರಗಳು, ಮಾಹಿತಿಗಳು ಕೂಡ ಸರಿಯಾಗಿ ಇರಬೇಕು. ಇಲ್ಲದಿದ್ದರೆ ಮುಂದೆ ನಿಮಗೆ ತೊಂದರೆ ಆಗುತ್ತದೆ. ಹಾಗಾಗಿ ಪಹಣಿ ವಿಷಯದಲ್ಲಿ ಹುಷಾರಾಗಿರಿ.
ಒಂದು ವೇಳೆ ನಿಮ್ಮ ಪಹಣಿ ಪತ್ರದಲ್ಲಿ ಹೆಸರು ತಪ್ಪಾಗಿದ್ದರೆ, ಕೂಡಲೇ ಅದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು. ಹಾಗಿದ್ದಲ್ಲಿ ಇಂದು ನಿಮ್ಮ ಪಹಣಿ ಪತ್ರದಲ್ಲಿ ಹೆಸರು ಸರಿಪಡಿಸುವ ಸುಲಭ ವಿಧಾನ ಹೇಗೆ ಎಂದು ತಿಳಿದುಕೊಳ್ಳೋಣ.. ಹೆಸರು ತಿದ್ದುಪಡಿ ಮಾಡಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ ಎಂದು ಮೊದಲಿಗೆ ನೋಡುವುದಾದರೆ..
*ಆಧಾರ್ ಕಾರ್ಡ್ : ಇದರಿಂದ ನಿಮ್ಮ ಹೆಸರು, ಅಡ್ರೆಸ್, ಇದೆಲ್ಲವನ್ನು ಸರಿಯಾಗಿ ದೃಢೀಕರಿಸಲಾಗುತ್ತದೆ.
ಪಹಣಿ ಪತ್ರ: ಇದನ್ನು ತಹಸೀಲ್ದಾರ್ ಆಫೀಸ್ ಅಥವಾ ನೆಮ್ಮದಿ ಕೇಂದ್ರದಿಂದ ಪಡೆಯಬಹುದು. ನಿಮ್ಮ ಒಡೆತನದ ಭೂಮಿಯ ದಾಖಲೆ ಇದು.
20 ರೂಪಾಯಿ ಸ್ಟ್ಯಾಂಪ್ ಪೇಪರ್ : ಇದರಲ್ಲಿ ನೀವು ಪಹಣಿಯಲ್ಲಿ ಹೆಸರು ಸರಿಪಡಿಸುವ ಎಲ್ಲಾ ಮಾಹಿತಿಗಳನ್ನು ದಾಖಲೆಗಳನ್ನು ಫಿಲ್ ಮಾಡಬೇಕು. ಹಾಗೆಯೇ ನೋಟರಿ ಮಾಡಿಸಬೇಕು. ಇದು ಮುಖ್ಯವಾದ ಕೆಲಸ ಆಗುತ್ತದೆ.
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್! ಇಲ್ಲಿದೆ ಮಾಹಿತಿ
ಪಹಣಿ ತಿದ್ದುಪಡಿ ವಿಧಾನ:
ಹೆಸರು ತಿದ್ದುಪಡಿ: ಇಲಾಖೆ ಇಂದ ಹೆಸರು ತಿದ್ದುಪಡಿಗೆ ಕೊಡುವ ಅಪ್ಲಿಕೇಶನ್ ಪಡೆದು, ಅದರಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಬೇಕು. ಅರ್ಜಿಯ ಜೊತೆಗೆ ಅವಶ್ಯಕತೆ ಬರುವ ಆಧಾರ್ ಕಾರ್ಡ್, ಪಹಣಿ ಪತ್ರ, 20 ರೂಪಾಯಿಯ ಸ್ಟ್ಯಾಂಪ್ ಪೇಪರ್ ಈ ಎಲ್ಲಾ ದಾಖಲೆಗಳ ಜೊತೆಗೆ ಭೂಮಿ ಕೇಂದ್ರಕ್ಕೆ ಅರ್ಜಿ ತೆಗೆದುಕೊಂಡು ಹೋಗಿ ಕೊಡಬೇಕು.
ನೀವು ಈ ರೀತಿ ಕೊಡುವ ಅರ್ಜಿಯು ಗ್ರಾಮ ಲೆಕ್ಕಾಧಿಕಾರಿಗಳನ್ನು ತಲುಪುತ್ತದೆ. ಅವರು ನಿಮ್ಮ ಅರ್ಜಿಯನ್ನು ಕೂಲಂಕುಷವಾಗಿ ಚೆಕ್ ಮಾಡಿ, ಎಲ್ಲವೂ ಸರಿ ಇದ್ದರೆ ಹೆಸರು ತಿದ್ದುಪಡಿ ಪ್ರಕ್ರಿಯೆ ಮಾಡಿಕೊಡುತ್ತಾರೆ. ಅಕಸ್ಮಾತ್ ಹೆಸರು ಅಥವಾ ಇನ್ನಿತರ ಮಾಹಿತಿ ತಪ್ಪಾಗಿದ್ದರೆ, ನಿಮ್ಮ ಅರ್ಜಿಯನ್ನು ರಿಜೆಕ್ಟ್ ಮಾಡಲಾಗುತ್ತದೆ. ಹಾಗಾಗಿ ದಾಖಲೆಗಳನ್ನು ಕೊಡುವಾಗ ಹುಷಾರಾಗಿರಿ.
ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಿಗಲಿದೆ ಸಬ್ಸಿಡಿ ಸಾಲ ಸೌಲಭ್ಯ! ಮಾಹಿತಿ ಇಲ್ಲಿದೆ, ಅರ್ಜಿ ಸಲ್ಲಿಸಿ
ನಿಮ್ಮ ಹೆಸರು ತಿದ್ದುಪಡಿ ಆಗುತ್ತಿದ್ದ ಹಾಗೆ ಪಹಣಿ ತಿದ್ದುಪಡಿ ಕೂಡ ಆಗುತ್ತದೆ, ಕೆಲವು ದಿನಗಳಲ್ಲಿ ಈ ಕೆಲಸ ಮುಗಿದು, ಪಹಣಿ ಪತ್ರ ನಿಮ್ಮ ಕೈಸೇರುತ್ತದೆ.
ಇನ್ನು ಆನ್ಲೈನ್ ಮೂಲಕ ನಿಮ್ಮ ಭೂಮಿಯ ಪಹಣಿಯನ್ನು ಕೂಡ ಚೆಕ್ ಮಾಡಬಹುದು. https://landrecords.karnataka.gov.in/service2/ ಈ ಲಿಂಕ್ ಗೆ ಭೇಟಿ ನೀಡಿ, ನಿಮ್ಮ ಜಾಗದ ಬಗ್ಗೆ ಭೂಮಿಯ ಬಗ್ಗೆ ಇಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ನೀಡಿದರೆ, ನಿಮ್ಮ ಪಹಣಿ ಪತ್ರವನ್ನು ಆನ್ಲೈನ್ ನಲ್ಲಿಯೇ ನೋಡಬಹುದು. ಇದರಿಂದ ತಿದ್ದುಪಡಿ ಮಾಡಿಸಲು ಸುಲಭ ಆಗುತ್ತದೆ.
Wrong name on your land Documents, Change easily like this
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.