Business News

ಸ್ಟೇಟ್ ಬ್ಯಾಂಕ್ ನಿಂದ ವಿದ್ಯಾರ್ಥಿಗಳಿಗೆ 10,000 ಸ್ಕಾಲರ್ಶಿಪ್ ಸಿಗುತ್ತಿದೆ, ಈಗಲೇ ಅರ್ಜಿ ಸಲ್ಲಿಸಿ

Education Scholarship : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India – SBI) ತನ್ನ ಸಿಎಸ್ಆರ್ ಚಟುವಟಿಕೆಯಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (scholarship) ಸೌಲಭ್ಯವನ್ನು ನೀಡುತ್ತಿದೆ

2023ರಲ್ಲಿ ಸ್ಕಾಲರ್ಶಿಪ್ ಅನ್ನು ನೀಡುತ್ತಿರುವ ಎಸ್ ಬಿ ಐ ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಿಸಿದೆ. ಇದರಿಂದ ಇನ್ನಷ್ಟು ಬಡ ಹಾಗೂ talented ವಿದ್ಯಾರ್ಥಿಗಳು (students) ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.

free education under RTE

6ನೇ ತರಗತಿಯಲ್ಲಿ ಓದುತ್ತಿರುವವರೆಗೂ ಕೂಡ ಪ್ರತಿ ವರ್ಷ 10,000ರೂ.ಗಳನ್ನು ಕೊಡುವ ಆಶಾ ಸ್ಕಾಲರ್ಶಿಪ್ (asha scholarship) ಪಡೆಯಲು ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ.

ಸ್ಟೇಟ್ ಬ್ಯಾಂಕ್ ಪರ್ಸನಲ್ ಲೋನ್ ಆಫರ್! ಅಡಮಾನ ಬೇಕಿಲ್ಲ, ಹೆಚ್ಚುವರಿ ಶುಲ್ಕವೂ ಇಲ್ಲ

SBIF ಆಶಾ ಸ್ಕಾಲರ್ಶಿಪ್! (SBI asha scholarship 2023)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ಪ್ರತಿ ವರ್ಷ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನದ ಪ್ರೋಗ್ರಾಮ್ (scholarship program 2023) ನಡೆಸುತ್ತದೆ. ಬಡ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಮಾಡಲು ಅನುಕೂಲವಾಗಲು ಈ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಆರನೇ ತರಗತಿಯಲ್ಲಿ ಓದುವ ವಿದ್ಯಾರ್ಥಿಗಳಿಂದಲೂ ಕೂಡ ವಿದ್ಯಾರ್ಥಿ ವೇತನ ಪಡೆದುಕೊಳ್ಳುವ ಅವಕಾಶ ಕಲ್ಪಿಸಿಕೊಡಲಾಗಿದೆ.

ಯಾರಿಗೆ ಸೇರಿದೆ ಆಶಾ ಸ್ಕಾಲರ್ಶಿಪ್? (Who can apply)

*6ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ದ್ವಿತೀಯ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಆಶಾ ವಿದ್ಯಾರ್ಥಿವೇತನ ಪಡೆದುಕೊಳ್ಳಲು ಅರ್ಹತೆ ಹೊಂದಿರುತ್ತಾರೆ.

*ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ಮೀರಬಾರದು.

*ಮೇಲೆ ಹೇಳಿದೆ ತರಗತಿಯಲ್ಲಿ 75% ನಷ್ಟು ಅಂಕ ಗಳಿಸಿರಬೇಕು.

*ಭಾರತದ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಇದ್ರೂ ಕೂಡ ₹10,000 ಡ್ರಾ ಮಾಡಬಹುದು! ಹೊಸ ಯೋಜನೆ

Education Scholarshipವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Documents)

*ವಿದ್ಯಾರ್ಥಿ ಹಾಗೂ ಪೋಷಕರು ಆಧಾರ್ ಕಾರ್ಡ್

*ಶಾಲೆಗೆ ಸೇರಿಕೊಂಡಿದ್ದರು ಪುರಾವೆ (free receipt)

*ಕಳೆದ ವರ್ಷ 75% ಅಂಕ ಪಡೆದಿರುವ ಅಂಕಪಟ್ಟಿ (marks card)

*ಆದಾಯ ಪ್ರಮಾಣ ಪತ್ರ

*ವಿದ್ಯಾರ್ಥಿ ಅಥವಾ ಪೋಷಕರ ಬ್ಯಾಂಕು ಖಾತೆಯ ವಿವರ.

ಚಿನ್ನ ಖರೀದಿಗೂ ಇದೆ ಲಿಮಿಟ್, ಇದಕ್ಕಿಂತ ಹೆಚ್ಚಿನ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಕಟ್ಟಬೇಕು ಟ್ಯಾಕ್ಸ್

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: (last date to apply)

ಆಶಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15, 2003.

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ ಆಗಿರುವ https://www.buddy4study.com/page/sbi-asha-scholarship-program ಅನು ಗೂಗಲ್ ಬ್ರೌಸರ್ ನಲ್ಲಿ ಓಪನ್ ಮಾಡಿ. ಅಪ್ಲೈ ನೌ (apply now) ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಬೇಕಾಗಿರುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ವಿದ್ಯಾರ್ಥಿವೇತನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.

10,000 scholarship for students from State Bank, apply now

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories