Business News

ಸ್ಟೇಟ್ ಬ್ಯಾಂಕ್ ಪರ್ಸನಲ್ ಲೋನ್ ಆಫರ್! ಅಡಮಾನ ಬೇಕಿಲ್ಲ, ಹೆಚ್ಚುವರಿ ಶುಲ್ಕವೂ ಇಲ್ಲ

Personal Loan : ನಾವು ಪ್ರತಿ ತಿಂಗಳು ಸಂಬಳವನ್ನು (monthly salary) ಸ್ವೀಕರಿಸಿದರು ಕೂಡ ತಿಂಗಳ ಕೊನೆಯಲ್ಲಿ ಜೇಬು ಬರಿದಾಗುತ್ತದೆ. ಅದೇಷ್ಟೋ ಅನಿವಾರ್ಯ ಕಾರಣಗಳಿಗೆ ಸಾಲ ಮಾಡುವುದು ಅತ್ಯಗತ್ಯವಾಗಿರುತ್ತದೆ.

ಹೀಗೆ ಸಾಲಕ್ಕಾಗಿ ಫೈನಾನ್ಸ್ ನಲ್ಲಿ ಹಣ (loan in finance) ತೆಗೆದುಕೊಂಡರೆ ಬಡ್ಡಿ ದರವು ಜಾಸ್ತಿ, ಆದರೆ ನೀವು ಬ್ಯಾಂಕ್ನಲ್ಲಿ ವೈಯಕ್ತಿಕ (personal loan in banks) ಸಾಲ ತೆಗೆದುಕೊಂಡರೆ ಯಾವುದೇ ಅಡಮಾನವೂ ಇಲ್ಲದೆ ಕೆಲವೇ ಗಂಟೆಗಳಲ್ಲಿ ಸಾಲ ಪಡೆದುಕೊಳ್ಳಬಹುದಾಗಿದೆ.

ಎಸ್‌ಬಿಐ ಬ್ಯಾಂಕ್ ಅಕೌಂಟ್ ಇರುವ ಗ್ರಾಹಕರಿಗೆ ಗುಡ್ ನ್ಯೂಸ್, ವಿಶೇಷ FD ಯೋಜನೆ ಗಡುವು ವಿಸ್ತರಣೆ

ಹೌದು, ಇತ್ತೀಚಿನ ದಿನಗಳಲ್ಲಿ ಸಾಲ ಪಡೆದುಕೊಳ್ಳುವುದು ಬಹಳ ಸುಲಭ ಯಾಕೆಂದರೆ ಬ್ಯಾಂಕುಗಳು ಮೊಬೈಲ್ ನಲ್ಲಿ ಕ್ಷಣಮಾತ್ರದಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಲು ಸಾಧ್ಯವಿದೆ. ಹಾಗೆ ನೀವು ಕೂಡ ಪರ್ಸನಲ್ ಲೋನ್ (personal loan) ತೆಗೆದುಕೊಳ್ಳಲು ಬಯಸಿದರೆ ಎಸ್ ಬಿ ಐ ಬ್ಯಾಂಕ್ (SBI Bank) ಅತ್ಯುತ್ತಮ ಆಫರ್ ನೀಡುತ್ತಿದೆ.

ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಇದ್ರೂ ಕೂಡ ₹10,000 ಡ್ರಾ ಮಾಡಬಹುದು! ಹೊಸ ಯೋಜನೆ

ಎಸ್ ಬಿ ಐ ವೈಯಕ್ತಿಕ ಸಾಲ (SBI Bank personal loan benefits)

ಖಾಸಗಿ ವಲಯದ ಹಾಗೂ ರಾಷ್ಟ್ರೀಕೃತ ಎಲ್ಲಾ ಬ್ಯಾಂಕುಗಳಲ್ಲಿಯೂ (nationalised bank) ವೈಯಕ್ತಿಕ ಸಾಲ ಸೌಲಭ್ಯ ಪಡೆದುಕೊಳ್ಳಬಹುದು, ಅದರಲ್ಲೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ವಿಶೇಷವಾದ ಸೌಲಭ್ಯವನ್ನು ನೀಡುತ್ತಿದ್ದು ಕಡಿಮೆ ಬಡ್ಡಿ ದರಕ್ಕೆ (less interest for personal loan) ವೈಯಕ್ತಿಕ ಸಾಲ ನೀಡಲು ಮುಂದಾಗಿದೆ

ಸಂಸ್ಕರಣ ವೆಚ್ಚವನ್ನು (processing fee) ಕೂಡ ಕಡಿತಗೊಳಿಸಲಾಗಿದೆ. ಯಾವುದೇ ಗುಪ್ತ ಶುಲ್ಕವನ್ನು ಕೂಡ ಎಸ್‌ಬಿಐ ವಿಧಿಸುವುದಿಲ್ಲ. ನೇರವಾಗಿ ನೀವು ತಿಂಗಳ ಕಂತಿನ ಹಣ ಪಾವತಿ ಮಾಡುವುದರ ಮೂಲಕ ಸಾಲ ತೀರಿಸಬಹುದು.

ಚಿನ್ನ ಖರೀದಿಗೂ ಇದೆ ಲಿಮಿಟ್, ಇದಕ್ಕಿಂತ ಹೆಚ್ಚಿನ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಕಟ್ಟಬೇಕು ಟ್ಯಾಕ್ಸ್

ಎಸ್ ಬಿ ಐ ಸಾಲಕ್ಕೆ ಎಷ್ಟಿದೆ ಬಡ್ಡಿದರ (SBI personal loan Interest rate)

Personal Loanಯಾವುದೇ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲದ ಬಡ್ಡಿದರ ಸಾಲ ಮಾಡುವ ಗ್ರಾಹಕರ ಕ್ರೆಡಿಟ್ ಸ್ಕೋರ್ (credit score) ಅನ್ನು ಅವಲಂಬಿಸಿರುತ್ತದೆ. ಅದೇ ರೀತಿ ಎಸ್ ಬಿ ಐ ಬ್ಯಾಂಕ್ ನ ಗ್ರಾಹಕರು ನೀವಾಗಿದ್ದು, ನಿಮ್ಮ ಸಿಬಿಲ್ ಸ್ಕೋರ್ (CIBIL score) ಉತ್ತಮ ಮಟ್ಟದಲ್ಲಿ ಇದ್ದರೆ ಅಂದರೆ ಸುಮಾರು 750 ಪಾಯಿಂಟ್ ಗಿಂತಲೂ ಜಾಸ್ತಿ ಇದ್ದರೆ ಬಡ್ಡಿದರವು ಕಡಿಮೆ ಇರುತ್ತದೆ ಹಾಗೂ ಬಹಳ ಬೇಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

ಅಷ್ಟೇ ಅಲ್ಲ ಇತ್ತೀಚಿನ ದಿನಗಳಲ್ಲಿ ವೈಯಕ್ತಿಕ ಸಾಲದ ಮೇಲೆ 0.50% ನಷ್ಟು ಬಡ್ಡಿ ದರದಲ್ಲಿ ಕಡಿತಗೊಳಿಸಿದೆ ಎಸ್ ಬಿ ಐ. ಇನ್ನು ಎಸ್‌ಬಿಐ ಬಡ್ಡಿದರ ನೋಡುವುದಾದರೆ 11.05% ನಿಂದ 14.05% ವರೆಗೆ ವೈಯಕ್ತಿಕ ಸಾಲದ ಮೇಲೆ ಬಡ್ಡಿ ವಿಧಿಸಲಾಗುವುದು. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಬಡ್ಡಿದರ 14.05% ಗಿಂತಲೂ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ.

ಎಲ್ಐಸಿಯಿಂದ ಹೊಸ ಪಾಲಿಸಿ; ಐದು ವರ್ಷಗಳ ಹೂಡಿಕೆಗೆ ಜೀವನ ಪೂರ್ತಿ ಆದಾಯ

ಎಷ್ಟು ಕ್ರೆಡಿಟ್ ಸ್ಕೋರ್ ಇದ್ದರೆ ಉತ್ತಮ (Credit Score)

ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ 300 ರಿಂದ 900 ಪಾಯಿಂಟ್ ಎಂದು ಲೆಕ್ಕಾಚಾರ ಮಾಡಲಾಗುತ್ತದೆ. ಅತಿ ಕಡಿಮೆ ಅಥವಾ ಕಳಪೆ ಕ್ರೆಡಿಟ್ ಸ್ಕೋರ್ ಆಗಿದ್ದರೆ, 900 ಪಾಯಿಂಟ್ ಹೊಂದಿದ್ದರೆ ಅದು ಅತ್ಯುತ್ತಮವಾದ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಎಂದು ಕರೆಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ 750 ಪಾಯಿಂಟ್ ಅಥವಾ ಅದಕ್ಕಿಂತ ಜಾಸ್ತಿ ಇದ್ದರೆ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗುತ್ತದೆ. ಈ ರೀತಿ ಎಸ್ ಬಿ ಐ ನಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳುವವರಿಗೆ ಬಹಳ ಉತ್ತಮವಾದ ಅವಕಾಶ ಲಭ್ಯವಿದ್ದು ಕೆಲವೇ ಗಂಟೆಗಳಲ್ಲಿ ವೈಯಕ್ತಿಕ ಸಾಲ ಪಡೆದುಕೊಳ್ಳಲು ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

ಇನ್ಮುಂದೆ ಇಂತಹವರಿಗೆ ಪ್ರತಿ ತಿಂಗಳು ಸಿಗಲಿದೆ ₹5,000 ಪಿಂಚಣಿ! ಹೀಗೆ ಅಪ್ಲೈ ಮಾಡಿ

no additional charges for State Bank Personal Loan

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories