ಎಲ್ಐಸಿಯಿಂದ ಹೊಸ ಪಾಲಿಸಿ; ಐದು ವರ್ಷಗಳ ಹೂಡಿಕೆಗೆ ಜೀವನ ಪೂರ್ತಿ ಆದಾಯ
ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ (Life insurance corporation of India) ಆಫ್ ಇಂಡಿಯಾ ದೇಶದ ಜನರಿಗೆ ಅನುಕೂಲವಾಗುವಂತಹ ಬೇರೆ ಬೇರೆ ಉಳಿತಾಯ ಯೋಜನೆಗಳನ್ನು (savings plan) ಜಾರಿಗೆ ತಂದಿದೆ
ಎಲ್ಐಸಿ (LIC) ಯಲ್ಲಿ ನಿಮ್ಮ ಆದಾಯಕ್ಕೆ ತಕ್ಕಂತೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಪಾಲಿಸಿ ಆಯ್ದು ಕೊಳ್ಳಬಹುದು, ನೀವು ಯಾವ ಪಾಲಿಸಿ ಆಯ್ದುಕೊಳ್ಳುತ್ತೀರಿ ಎನ್ನುವ ಆಧಾರದ ಮೇಲೆ ನೀವು ಪಡೆಯುವ ಆದಾಯ ನಿರ್ಧಾರಿತವಾಗುತ್ತದೆ.
ಡಿಸೆಂಬರ್ 1ರಿಂದ ಬದಲಾಗಲಿದೆ ಈ 5 ನಿಯಮಗಳು, ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ
ಎಲ್ಐಸಿ ಜೀವನ್ ಉತ್ಸವ್ ಯೋಜನೆ! (LIC Jeevan utsav policy)
ಎಲ್ಐಸಿ ಸೀಮಿತ ಅವಧಿಗೆ ಜೀವನ್ ಉತ್ಸವ ಎನ್ನುವ ಪಾಲಿಸಿ ಆರಂಭಿಸಿದ್ದು ಇದರಲ್ಲಿ ಅಪ್ರಾಪ್ತ ವಯಸ್ಸಿನವರು ಪುರುಷರು ಮಹಿಳೆಯರು ಎಲ್ಲಾ ವರ್ಗದವರು ಕೂಡ ಹೂಡಿಕೆ ಮಾಡಬಹುದು
ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಕಾಯುವಿಕೆ ನಿರ್ಧಾರವಾಗುತ್ತದೆ, ಅಂದರೆ ನೀವು ಹೆಚ್ಚು ಹೂಡಿಕೆ ಮಾಡಿದಾಗ ಪಾಲಿಸಿ ಮೊತ್ತ ಕೈಗೆ ಸಿಗುವ ಅವಧಿ ಕೂಡ ಕಡಿಮೆಯಾಗಿರುತ್ತದೆ.
ಜೀವನ್ ಉತ್ಸವ ಯೋಜನೆ ಪ್ರಯೋಜನ! (Benefits of Jeevan utsav policy)
ನವೆಂಬರ್ 29 2023 ರಂದು ಎಲ್ಐಸಿ ಜೀವನ್ ಉತ್ಸವ ಯೋಜನೆಯ ಬಗ್ಗೆ ಪ್ರಕಟಣೆ ಹೊರಡಿಸಿದೆ. ಇಲ್ಲಿ ನಿಮ್ಮ ಹೂಡಿಕೆಯ ಆದಾಯದ (investment returns) ಶೇಕಡ 10% ನಷ್ಟು ಜೀವಮಾನ ಆದಾಯವಾಗಿ (lifetime income) ಪಡೆಯಬಹುದು. ಪಾಲಿಸಿ ನಾವು ಒಮ್ಮೆ ತೆಗೆದುಕೊಂಡರೆ ಪಾಲಿಸಿ ಅವಧಿ ಮುಗಿದ ನಂತರ ಜೀವನಪೂರ್ತಿ ಪ್ರತಿ ವರ್ಷ ಆದಾಯ ಪಡೆಯಬಹುದಾಗಿದೆ.
ಪಾಲಿಸಿಯನ್ನ ತೆಗೆದುಕೊಳ್ಳಲು ಕನಿಷ್ಠ ವಯಸ್ಸು 90 ದಿನಗಳು ಹಾಗೂ ಗರಿಷ್ಠ 65 ವರ್ಷ. ಕನಿಷ್ಠ 5 ಲಕ್ಷಗಳ ಪಾಲಿಸಿ ತೆಗೆದುಕೊಳ್ಳಬೇಕು. 5ರಿಂದ 16 ವರ್ಷಗಳ ಪ್ರೀಮಿಯಂ ಆಯ್ದು ಕೊಳ್ಳಬಹುದು.
ಕೂಡಲೇ ಈ ಕೆಲಸ ಮಾಡದೆ ಇದ್ರೆ, ಉಚಿತ ಎಲ್‍ಪಿಜಿ ಸಿಲಿಂಡರ್ ಸೌಲಭ್ಯ ರದ್ದು! ಮಹತ್ವದ ಆದೇಶ
ಎಷ್ಟು ವರ್ಷಕ್ಕೆ ಪ್ರೀಮಿಯಂ ಆಯ್ಕೆ ಮಾಡಿದ್ರೆ ಎಷ್ಟು ವರ್ಷಕ್ಕೆ ರಿಟರ್ನ್ ಸಿಗುತ್ತೆ? (Return based on premium year)
ನೀವು ಎಷ್ಟು ವರ್ಷಕ್ಕೆ ಪಾಲಿಸಿ ಆಯ್ಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ಎಷ್ಟು ಬೇಗ ರಿಟರ್ನ್ಸ್ ಸಿಗುತ್ತದೆ ಎನ್ನುವುದನ್ನು ನಿರ್ಧರಿಸಬಹುದು. ಉದಾಹರಣೆಗೆ 5 ವರ್ಷಗಳ ಪ್ರೀಮಿಯಂ ಆಯ್ಕೆ (selection of premium) ಮಾಡಿದರೆ 5 ವರ್ಷಗಳಲ್ಲಿ ಪಾಲಿಸಿ ಸಿಗುತ್ತದೆ. ಅದೇ ನೀವು 6 ವರ್ಷಗಳ ಪ್ರೀಮಿಯಂ ಆಯ್ಕೆ ಮಾಡಿದರೆ ನಾಲ್ಕು ವರ್ಷ, 7 ವರ್ಷ ಪ್ರೀಮಿಯಂ ಆಯ್ಕೆ ಮಾಡಿದರೆ 3 ವರ್ಷ, 8-16 ವರ್ಷಗಳ ಪ್ರೀಮಿಯಂ ಆಯ್ಕೆಗೆ ಎರಡು ವರ್ಷ ಕಾಯುವಿಕೆಯ ಅವಧಿ ಇರುತ್ತದೆ. ಕಾಯುವ ಅವಧಿಯ ನಂತರ ನಿಮ್ಮ ಮತದ 10% ನಷ್ಟು ಹಣವನ್ನು ವಾರ್ಷಿಕ ಆದಾಯವಾಗಿ ಪಡೆಯಬಹುದು.
ಒಂದು ಲೆಕ್ಕಚಾರದ (calculation) ಪ್ರಕಾರ ನೀವು 5 ಲಕ್ಷ ರೂಪಾಯಿಗಳನ್ನು 5ರಿಂದ 16 ವರ್ಷಗಳ ಅವಧಿಗೆ ಆಯ್ದು ಕೊಳ್ಳಬಹುದು. ಐದು ವರ್ಷಗಳ ಅವಧಿಗೆ 5 ಲಕ್ಷ ಪ್ರೀಮಿಯಂ ಪಾವತಿಸುವುದಾದರೆ ಪ್ರತಿ ಪ್ರೀಮಿಯಂ ಮೊತ್ತ 1.16 ಲಕ್ಷ ರೂಪಾಯಿಗಳು ಆಗುತ್ತವೆ.
ಇನ್ಮುಂದೆ ಇಂತಹವರಿಗೆ ಪ್ರತಿ ತಿಂಗಳು ಸಿಗಲಿದೆ ₹5,000 ಪಿಂಚಣಿ! ಹೀಗೆ ಅಪ್ಲೈ ಮಾಡಿ
ಪ್ರೀಮಿಯಂ ಅವಧಿ ಮುಗಿದ ನಂತರ ಮತ್ತೆ ಐದು ವರ್ಷಗಳ ಕಾಲ ಕಾಯಬೇಕು. ಅಂದರೆ 11ನೇ ವರ್ಷದಿಂದ ನಿಮಗೆ ಪ್ರತಿ ವರ್ಷ ಆದಾಯದ 10% ನಷ್ಟು ಪಾವತಿ ಮಾಡಲಾಗುತ್ತದೆ ಅಂದರೆ ಪ್ರತಿವರ್ಷ 50,000 ರೂ. ಗಳಂತೆ ಜೀವಮಾನ ಪೂರ್ತಿ ಪಡೆಯಬಹುದು.
ಇದನ್ನು ಹೊರತುಪಡಿಸಿ ನೀವು ಸಂಪೂರ್ಣ ಪ್ರೀಮಿಯಂ ಮೊತ್ತವನ್ನು ಪಡೆಯುವುದಾದರೆ ಶೇಕಡ 75% ನಷ್ಟು ಹಣವನ್ನು ಕೊಡಲಾಗುತ್ತದೆ. ಉಳಿದ ಹಣಕ್ಕೆ ಬಡ್ಡಿ ಪಾವತಿಸಲಾಗುತ್ತದೆ. ನಿಮ್ಮ ಒಟ್ಟು ಪ್ರೀಮಿಯಂ ಮೊತ್ತ ಎಲ್ಐಸಿ ಯಲ್ಲಿಗೆ ಇರಿಸಿದರೇ 5.5% ಚಕ್ರಬಡ್ಡಿ ಕೂಡ ಸೇರಿಕೊಂಡಿದೆ. ಒಂದು ವೇಳೆ ಪಾಲಿಸಿ ಮಾಡಿದ ವ್ಯಕ್ತಿ ಮರಣ ಹೊಂದಿದರೆ ಸಂಪೂರ್ಣ ಸಂಚಿತ ಮೊತ್ತ ಬಡ್ಡಿಯ ಜೊತೆಗೆ ನಾಮಿನಿ ಕೈ ಸೇರುತ್ತದೆ.
New policy from LIC, Lifetime income for five years investment
Our Whatsapp Channel is Live Now 👇