ಕೂಡಲೇ ಈ ಕೆಲಸ ಮಾಡದೆ ಇದ್ರೆ, ಉಚಿತ ಎಲ್‍ಪಿಜಿ ಸಿಲಿಂಡರ್ ಸೌಲಭ್ಯ ರದ್ದು! ಮಹತ್ವದ ಆದೇಶ

ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್ (free LPG gas cylinder distribution) ವಿತರಣೆ ಮಾಡಿದೆ.

ಇಂದು ಬಹುತೇಕ ಎಲ್ಲರ ಮನೆಯಲ್ಲಿಯೂ ಗ್ಯಾಸ್ ಸಿಲೆಂಡರ್ (gas cylinder) ಬಳಸಿ ಅಡುಗೆ ಮಾಡುವುದು ಸಾಮಾನ್ಯ, ಯಾರು ಕೂಡ ಗ್ಯಾಸ್ ಬದಲಿಗೆ ಕಟ್ಟಿಗೆ ಒಲೆಯನ್ನು ಬಳಸುತ್ತಿಲ್ಲ

ಅದರಲ್ಲೂ ಹಳ್ಳಿಗಳಲ್ಲಿಯೂ ಗ್ಯಾಸ್ ಬಳಸಿ ಅಡುಗೆ ಮಾಡುವ ಪರಿಪಾಠ ಆರಂಭವಾಗಿದೆ, ಈ ಕಾರಣಕ್ಕೆ ನಿಜಕ್ಕೂ ಕೇಂದ್ರ ಸರ್ಕಾರಕ್ಕೆ (central government) ಧನ್ಯವಾದ ಹೇಳಲೇಬೇಕು.

ಯಾಕೆಂದರೆ ಸಾಕಷ್ಟು ಹಳ್ಳಿಗಳಲ್ಲಿ ಕಟ್ಟಿಗೆ ಒಲೆ ಉರಿಸಿ ಉರಿಸಿ ಹೆಣ್ಣು ಮಕ್ಕಳು ಅಸ್ತಮಾದಂತಹ ಕಾಯಿಲೆಗೂ ಕೂಡ ತುತ್ತಾಗುತ್ತಿದ್ದರು.

ಕೂಡಲೇ ಈ ಕೆಲಸ ಮಾಡದೆ ಇದ್ರೆ, ಉಚಿತ ಎಲ್‍ಪಿಜಿ ಸಿಲಿಂಡರ್ ಸೌಲಭ್ಯ ರದ್ದು! ಮಹತ್ವದ ಆದೇಶ - Kannada News

ಇನ್ಮುಂದೆ ಇಂತಹವರಿಗೆ ಪ್ರತಿ ತಿಂಗಳು ಸಿಗಲಿದೆ ₹5,000 ಪಿಂಚಣಿ! ಹೀಗೆ ಅಪ್ಲೈ ಮಾಡಿ

ಸರ್ಕಾರ ಇಂತಹ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಸಾಕಷ್ಟು ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಲ್‌ಪಿಜಿ ಗ್ಯಾಸ್ (free LPG gas cylinder distribution) ವಿತರಣೆ ಮಾಡಿದೆ.

ಇದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ (pradhanmantri Ujjwala Yojana). 2015ರಲ್ಲೇ ಯೋಜನೆ ಜಾರಿಗೆ ತರಲಾಗಿದ್ದು, ಇತ್ತೀಚಿನ ದಿನಗಳಲ್ಲಿ ಈ ಯೋಜನೆ ಹೆಚ್ಚು ಪ್ರಚಲಿತದಲ್ಲಿದೆ. ದೇಶದ ಕೋಟ್ಯಂತರ ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿದೆ ಎನ್ನಬಹುದು.

ಉಜ್ವಲ ಯೋಜನೆಯಲ್ಲಿ ಮಹತ್ವದ ನಿಯಮ

Gas Cylinderಇನ್ನು ಕೇಂದ್ರ ಸರ್ಕಾರ ಉಚಿತವಾಗಿ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ (LPG Gas Connection) ನೀಡುವ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಜಾರಿಗೆ ತಂದ ನಂತರ ಇದರಿಂದ ಸಾಕಷ್ಟು ಮಹಿಳೆಯರು ಪ್ರಯೋಜನ ಪಡೆದುಕೊಂಡಿದ್ದಾರೆ ನಿಜ..

ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ದಾಖಲೆಗಳನ್ನು ನೀಡಿ ಉಚಿತ ಎಲ್ಪಿಜಿ ಗ್ಯಾಸ್ ಪಡೆದುಕೊಳ್ಳುತ್ತಿರುವವರ ಸಂಖ್ಯೆ ಕೂಡ ಜಾಸ್ತಿ ಆಗಿದೆ. ಇಂತಹ ವಂಚನೆ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಯಾರ ಹೆಸರಿನಲ್ಲಿ ಸಿಲಿಂಡರ್ ಕನೆಕ್ಷನ್ ಇರುತ್ತದೆಯೋ ಅವರು ಈ ಕೆವೈಸಿ (KYC mandatory) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಬಯೋಮೆಟ್ರಿಕ್ (biometric) ಬೆರಳಚ್ಚು ವಿತರಣೆ ಮಾಡದೆ ಇರುವವರ ಗ್ಯಾಸ್ ಕನೆಕ್ಷನ್ ರದ್ದುಪಡಿಸುವುದಾಗಿಯೂ ಹೇಳಲಾಗಿದೆ, ಈ ಕೆಲಸ ಮಾಡಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನಾಂಕ.

ಈ ಪೋಸ್ಟ್ ಆಫೀಸ್ ಸ್ಕೀಮ್ ನೀಡುತ್ತೆ ಕೇವಲ ₹50 ರೂಪಾಯಿ ಹೂಡಿಕೆಗೆ ₹35 ಲಕ್ಷ ರೂಪಾಯಿ

ಇನ್ನು ಒಂದು ತಿಂಗಳ ಒಳಗೆ ಈ ಕೆಲಸ ಮಾಡಿ!

ಗ್ಯಾಸ್ ಸಿಲೆಂಡರ್ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಬಳಿ ಮೊಬೈಲ್ ನಲ್ಲಿ ಬಯೋಮೆಟ್ರಿಕ್ ವಿತರಣೆಗೆ ಅವಕಾಶವಿರುತ್ತದೆ, ಅವರು ನಿಮ್ಮ ಬೆರಳಚ್ಚು ದಾಖಲೆಗಳನ್ನು ತೆಗೆದುಕೊಳ್ಳುತ್ತಾರೆ. ಅದು ನಿಮ್ಮ ಮುಖದ ಸ್ಕ್ಯಾನ್ ಮಾಡಿ ಮೊಬೈಲ್ ನಲ್ಲಿ ಸರ್ಕಾರದ ವೆಬ್ಸೈಟ್ ಗೆ ಅಪ್ಲೋಡ್ (biometric details will upload to government website) ಮಾಡುತ್ತಾರೆ.

ಇಷ್ಟು ಮಾಡಿದ್ರೆ ನಿಮ್ಮ ಹೆಸರು ಸರಕಾರದ ವೆಬ್ಸೈಟ್ನಲ್ಲಿ ರಿಜಿಸ್ಟರ್ ಆಗುತ್ತದೆ. ನಂತರ ನಿಮ್ಮ ಹೆಸರಿನಲ್ಲಿ ಬೇರೆಯವರು ಗ್ಯಾಸ್ ಕನೆಕ್ಷನ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಮೂಲಕ ಸಾಕಷ್ಟು ವಂಚನೆ ಪ್ರಕರಣಗಳನ್ನು ತಡೆಗಟ್ಟಬಹುದು, ಹಾಗಾಗಿ ನಿಮ್ಮ ಮನೆ ಬಾಗಿಲಿಗೆ ಸಿಲಿಂಡರ್ ವಿತರಣೆ ಮಾಡಲು ಬಂದಿರುವ ವ್ಯಕ್ತಿಯ ಬಯೋಮೆಟ್ರಿಕ್ ಮಾಡಿಸಿಕೊಳ್ಳಲು ಮರೆಯಬೇಡಿ.

ಒಮ್ಮೆಲೇ ನಿಮ್ಮ ಬ್ಯಾಂಕ್ ಖಾತೆಯಿಂದ ಎಷ್ಟು ಹಣ ಡ್ರಾ ಮಾಡಬಹುದು? ಹೊಸ ನಿಯಮ

ಕೆ ವೈ ಸಿ ಮಾಡಿಸುವುದು ಮತ್ತು ಬಯೋಮೆಟ್ರಿಕ್ ವಿತರಣೆ ಈ ಎರಡು ಕೆಲಸಗಳನ್ನು ಡಿಸೆಂಬರ್ 31ರ ಒಳಗೆ ಮಾಡದೆ ಇದ್ದರೆ ಅಂತವರ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ಕಡಿತಗೊಳಿಸಲಾಗುವುದು. ನಂತರ ಮತ್ತೆ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಈ ಒಂದು ಕೆಲಸವನ್ನು ತಕ್ಷಣವೇ ನಿಮ್ಮ ಗ್ಯಾಸ್ ಏಜೆನ್ಸಿಗೆ ಹೋಗಿ ಮಾಡಿಸಿಕೊಳ್ಳಿ.

the facility of free LPG cylinder will be cancelled if You Not Did This

Follow us On

FaceBook Google News

the facility of free LPG cylinder will be cancelled if You Not Did This