ಡಿಸೆಂಬರ್ 1ರಿಂದ ಬದಲಾಗಲಿದೆ ಈ 5 ನಿಯಮಗಳು, ಗ್ರಾಹಕರ ಜೇಬಿಗೆ ಬೀಳಲಿದೆ ಕತ್ತರಿ
ಒಂದು ತಿಂಗಳು ಮುಗಿದು ಇನ್ನೊಂದು ತಿಂಗಳು ಆರಂಭವಾಗುತ್ತಿದ್ದಂತೆ ಸರ್ಕಾರ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಹೊಸ ನಿಯಮಗಳನ್ನು (new rules from December 1st) ಜಾರಿಗೆ ತರುತ್ತದೆ
ಜೊತೆಗೆ ಇರುವ ನಿಯಮಗಳಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ, ಅದರಲ್ಲೂ ಈಗ ಡಿಸೆಂಬರ್ ತಿಂಗಳು ನಾಳೆಯಿಂದಲೇ ಆರಂಭವಾಗಲಿದೆ ಇದು ವರ್ಷದ ಕೊನೆಯ ತಿಂಗಳು ಕೂಡ ಆಗಿದ್ದು ಕೆಲವು ಹಣಕಾಸಿನ ವಹಿವಾಟು (financial transaction) ವಿಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ.

ಬ್ಯಾಂಕ್ ವ್ಯವಹಾರ ಮಾಡುವವರು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು (investors) ಹಾಗೂ ಸರ್ಕಾರಿ ಕೆಲಸಗಳಲ್ಲಿ ಇರುವವರು ಈ ನಿಯಮಗಳನ್ನು ತಿಳಿದುಕೊಳ್ಳಬೇಕು
ಸಾಮಾನ್ಯರೂ ಕೂಡ ಡಿಸೆಂಬರ್ ತಿಂಗಳಿನಿಂದ ವಿಧಿಸಲಿರುವ ನಿಯಮಗಳನ್ನು ತಿಳಿದುಕೊಳ್ಳದಿದ್ದರೆ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ (penalty and punishment) ಅನುಭವಿಸಬೇಕಾಗಬಹುದು.
ಡಿಸೆಂಬರ್ ತಿಂಗಳು 2023ರ ಕೊನೆಯ ತಿಂಗಳಾಗಿದೆ ಹಾಗಾಗಿ ಮಹತ್ವದ ಬದಲಾವಣೆಗಳನ್ನು ಈ ತಿಂಗಳಿನಲ್ಲಿ ಮಾಡಲಾಗುತ್ತದೆ, ಜೊತೆಗೆ ಹೊಸ ನಿಯಮಗಳು ಕೂಡ ಜಾರಿಗೆ ಬರಲಿವೆ, ಡಿಸೆಂಬರ್ ತಿಂಗಳಲ್ಲಿ ಮಹತ್ವವಾದ 5 ಬದಲಾವಣೆಗಳು ಆಗಲಿದ್ದು ಅವುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಕೂಡಲೇ ಈ ಕೆಲಸ ಮಾಡದೆ ಇದ್ರೆ, ಉಚಿತ ಎಲ್‍ಪಿಜಿ ಸಿಲಿಂಡರ್ ಸೌಲಭ್ಯ ರದ್ದು! ಮಹತ್ವದ ಆದೇಶ
ಸಿಮ್ ಕಾರ್ಡ್ ಖರೀದಿಸುವವರಿಗೆ ಹೊಸ ನಿಯಮ (New rules on SIM card purchase)
ಇನ್ನು ಮುಂದೆ ಯಾರೂ ಕೂಡ ಬಲ್ಕ್ ಆಗಿ ಸಿಮ್ ಕಾರ್ಡ್ ಖರೀದಿಸುವಂತಿಲ್ಲ ಸಿಮ್ ಕಾರ್ಡ್ ಮಾರಾಟ ಮಾಡುವವರು ಪೊಲೀಸ್ ಪರಿಶೀಲನೆಗೆ ಒಳಗಾಗಬೇಕು. ಸಿಮ್ ಕಾರ್ಡ್ ಡೀಲರ್ ಗಳು ಅಥವಾ ಸಿಮ್ ಕಾರ್ಡ್ ವ್ಯಾಪಾರ ಮಾಡುವವರು ಕೆವೈಸಿ (KYC) ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ
ಇದು ಮಾರಾಟಗಾರರಿಗೆ ಮಾತ್ರವಲ್ಲದೆ ಖರೀದಿ ಮಾಡುವವರೆಗೂ ಕೂಡ ಅನ್ವಯವಾಗುತ್ತಿದೆ. ಎಲ್ಲ ಮೊಬೈಲ್ ಸಿಮ್ ಕಾರ್ಡ್ ಡೀಲರ್ ಗಳು ಕೂಡ ನೋಂದಣಿ (sim Card dealers registration mandatory) ಮಾಡಿಕೊಳ್ಳಬೇಕು.
ಇದರ ಜೊತೆಗೆ ಬಯೋಮೆಟ್ರಿಕ್ (biometric) ಕೂಡ ಕಡ್ಡಾಯವಾಗಿದೆ, ಇಲ್ಲದೆ ಹೋದಲ್ಲಿ ಸಿಮ್ ಕಾರ್ಡ್ ಮಾರಾಟ ಮಾಡುವವರಿಗೆ 10 ಲಕ್ಷ ರೂಪಾಯಿಗಳ ವರೆಗೆ ದಂಡ ಹಾಗೂ ಮತ್ತೆ ಅದೇ ತಪ್ಪನ್ನು ಮಾಡಿದರೆ ಜೈಲು ಶಿಕ್ಷೆಯನ್ನು ಕೂಡ ವಿದಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ ಒಂದರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.
ಇನ್ಮುಂದೆ ಇಂತಹವರಿಗೆ ಪ್ರತಿ ತಿಂಗಳು ಸಿಗಲಿದೆ ₹5,000 ಪಿಂಚಣಿ! ಹೀಗೆ ಅಪ್ಲೈ ಮಾಡಿ
ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ (HDFC credit card usage)
ಎಚ್ ಡಿ ಎಫ್ ಸಿ ಯ ಪ್ರಮುಖ ಜನಪ್ರಿಯ ಎರಡು ಕ್ರೆಡಿಟ್ ಕಾರ್ಡ್ಗಳಾದ (Credit Cards) ರೆಗಾಲಿಯ ಮತ್ತು ಮಿನೇಲಿಯಾ ಬದಲಾವಣೆ ಡಿಸೆಂಬರ್ 1ರಿಂದ ಆರಂಭವಾಗಲಿದೆ. Lounge ಪ್ರವೇಶದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ.
ನೀವು ಲೌಂಜ್ ಪ್ರವೇಶಿಸುವುದು ನಿಮ್ಮ ಕ್ರೆಡಿಟ್ ಕಾರ್ಡ್ (Credit Card) ವೆಚ್ಚದ ಮೇಲೆ ಆಧಾರಿತವಾಗಿರುತ್ತದೆ. ಕ್ರೆಡಿಟ್ ಕಾರ್ಡ್ ವೆಚ್ಚ ತ್ರೈಮಾಸಿಕದಲ್ಲಿ ( ಜನವರಿಯಿಂದ ಮಾರ್ಚ್, ಏಪ್ರಿಲ್ ನಿಂದ ಜೂನ್, ಜುಲೈ ನಿಂದ ಸೆಪ್ಟೆಂಬರ್, ಅಕ್ಟೋಬರ್ ನಿಂದ ಡಿಸೆಂಬರ್ ) ಈ ರೀತಿ ತ್ರೈಮಾಸಿಕದ ವೆಚ್ಚ ಒಂದು ಲಕ್ಷ ಅಥವಾ ಅದನ್ನ ಮೀರಿದರೆ ಲೌಂಜ್ ಪ್ರವೇಶ ಪಡೆಯಬಹುದು. ಈ ಹೊಸ ನಿಯಮ ಡಿಸೆಂಬರ್ ತಿಂಗಳಿನಿಂದ ಆರಂಭವಾಗಲಿದೆ.
ನಿಮ್ಮ ಹೊಸ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ
ಬ್ಯಾಂಕ್ ಸಾಲ ನಿಯಮಗಳಲ್ಲಿ ಬದಲಾವಣೆ (Rules changed in bank loan)
ಡಿಸೆಂಬರ್ ತಿಂಗಳಿನಿಂದ ಬ್ಯಾಂಕ್ ಸಾಲಕ್ಕೆ (Bank Loan) ಸಂಬಂಧಪಟ್ಟ ಹಾಗೆ ಹೊಸ ನಿಯಮ ಜಾರಿಗೆ ಬರಲಿದ್ದು ಇದರಿಂದ ಗ್ರಾಹಕರಿಗೆ ಸ್ವಲ್ಪ ಸಮಾಧಾನ ಆಗಬಹುದು.
ಇದಕ್ಕೆ ಮುಖ್ಯ ಕಾರಣ ಸಾಮಾನ್ಯವಾಗಿ ಜನರು ಸಾಲ ತೆಗೆದುಕೊಂಡಾಗ ಅದಕ್ಕೆ ಆಸ್ತಿ ಪತ್ರವನ್ನು (property documents) ಅಡವಿಡುತ್ತಾರೆ. ಹೀಗೆ ಸಾಲ ತೆಗೆದುಕೊಂಡು ಸಾಲ ತೀರಿಸಿದ (Loan Re Payment) ನಂತರ ಕೆಲವು ಬ್ಯಾಂಕುಗಳು ಸಾಲಗಾರರ ಅಡಮಾನ ಪತ್ರವನ್ನು ಹಿಂತಿರುಗಿಸುವುದಿಲ್ಲ
ಆದರೆ ಇನ್ನು ಮುಂದೆ ಕೇವಲ 30 ದಿನಗಳ ಒಳಗೆ ಸಾಲ ತೀರಿಸಿದ ವ್ಯಕ್ತಿಗೆ ಆತನ ಮನೆ ಪತ್ರ ಅಥವಾ ಆಸ್ತಿ ದಾಖಲೆಗಳನ್ನು ಹಿಂತಿರುಗಿಸಬೇಕು ಇಲ್ಲವಾದಲ್ಲಿ ಬ್ಯಾಂಕುಗಳು ಆ ಪತ್ರವನ್ನು ಸಾಲಗಾರನಿಗೆ ಕೊಡುವವರೆಗೂ ಪ್ರತಿದಿನ ರೂ.50ಗಳನ್ನು ದಂಡವಾಗಿ ಪಾವತಿಸಬೇಕು.
ದಿನಕ್ಕೆ ₹2 ರೂಪಾಯಿ ಉಳಿಸಿದರೆ ಪ್ರತಿ ವರ್ಷ ₹36,000 ಪಿಂಚಣಿ; ಇಂದೇ ಅರ್ಜಿ ಸಲ್ಲಿಸಿ
ಪಿಂಚಣಿ ನಿಯಮ (Pension rules can be changed)
ಹಿರಿಯ ನಾಗರಿಕರು ಅಥವಾ ಅರವತ್ತು ವರ್ಷ ಮೇಲ್ಪಟ್ಟವರು ಪಿಂಚಣಿ ಯನ್ನು 2024ರಲ್ಲಿಯೂ ಕೂಡ ಪಡೆದುಕೊಳ್ಳಬೇಕಿದ್ದರೆ ಮುಖ್ಯವಾಗಿ ಜೀವನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಲೇಬೇಕು.
ಸರ್ಕಾರ ಇದಕ್ಕೆ ನವೆಂಬರ್ 30ರವರೆಗೆ ನೀಡಿದೆ. ಅಂದರೆ ಇಂದೇ ನೀವು ಜೀವನ ಪ್ರಮಾಣ ಪತ್ರ ಸಲ್ಲಿಕೆ (life certificate) ಮಾಡದೆ ಇದ್ದರೆ ಡಿಸೆಂಬರ್ ತಿಂಗಳಿನಿಂದ ಪಿಂಚಣಿ ಹಣ ಖಾತೆಗೆ (Bank Account) ಜಮಾ ಆಗುವುದಿಲ್ಲ, ತಕ್ಷಣವೇ ಈ ಕೆಲಸ ಮಾಡಿ.
ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರದಲ್ಲಿ ವ್ಯತ್ಯಾಸ (LPG gas rules changed)
ನವೆಂಬರ್ ತಿಂಗಳಿನಲ್ಲಿ ತೈಲ ಕಂಪನಿಗಳು ಬೆಲೆ ಹೆಚ್ಚಿಸಿದ್ದ ಪರಿಣಾಮವಾಗಿ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿತ್ತು ಇದೀಗ ಡಿಸೆಂಬರ್ ತಿಂಗಳಿನಲ್ಲಿ ಬೆಲೆ ಪರಿಷ್ಕರಣೆ ಮತ್ತೆ ನಡೆಯಲಿದ್ದು ಕನಿಷ್ಠ ಡಿಸೆಂಬರ್ ತಿಂಗಳಿನಿಂದ ಆದರೂ ಬೆಲೆ ಇಳಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಇಲ್ಲವಾದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.
These rules will change from December 1, Including Credit Card, Bank Loan