ಚಿನ್ನ ಖರೀದಿಗೂ ಇದೆ ಲಿಮಿಟ್, ಇದಕ್ಕಿಂತ ಹೆಚ್ಚಿನ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಕಟ್ಟಬೇಕು ಟ್ಯಾಕ್ಸ್
ಚಿನ್ನ (Gold) ಇಷ್ಟವಾಗದೆ ಇರುವವರು ಯಾರೂ ಇಲ್ಲ, ಕೆಲವರು ಚಿನ್ನವನ್ನ ಆಭರಣದ (gold jewellery) ರೂಪದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದರೆ ಇನ್ನೂ ಕೆಲವರು ಚಿನ್ನವನ್ನ ಹೂಡಿಕೆಯ (Gold investment) ಬಹಳ ದೊಡ್ಡ ಅಸೆಟ್ಸ್ (assets) ಆಗಿ ಬಳಸಿಕೊಳ್ಳುತ್ತಾರೆ.
ಸಾಕಷ್ಟು ಜನ ಕೈಯಲ್ಲಿ ದುಡ್ಡು ಇರುವಾಗ ಬೇರೆ ಯಾವುದಕ್ಕೂ ಖರ್ಚು ಮಾಡುವುದಿಲ್ಲ. ಬದಲಿಗೆ ಚಿನ್ನಕ್ಕಾಗಿ ಆ ಹಣವನ್ನು ಮೀಸಲಿಡುತ್ತಾರೆ. ಚಿನ್ನದ ಬೆಲೆ (Gold Price) ದಿನದಿಂದ ದಿನಕ್ಕೆ ಎಷ್ಟೇ ಜಾಸ್ತಿ ಆಗುತ್ತಿದ್ದರು ಕೂಡ ಚಿನ್ನ ಖರೀದಿ ಮಾಡುವುದನ್ನು ಮಾತ್ರ ಜನ ಬಿಟ್ಟಿಲ್ಲ.

ಎಲ್ಐಸಿಯಿಂದ ಹೊಸ ಪಾಲಿಸಿ; ಐದು ವರ್ಷಗಳ ಹೂಡಿಕೆಗೆ ಜೀವನ ಪೂರ್ತಿ ಆದಾಯ
ಚಿನ್ನದ ಸಂಗ್ರಹದ ಮೇಲಿನ ಟ್ಯಾಕ್ಸ್ (Tax on gold)
CBDT ಹೊರಡಿಸಿರುವ ಸುತ್ತೋಲೆಯ ಪ್ರಕಾರ ಒಂದು ಮಿತಿಯ ಒಳಗೆ ಸಂಗ್ರಹಿಸಿಟ್ಟಿರುವ ಚಿನ್ನಕ್ಕೆ ಯಾವುದೇ ದಾಖಲೆ ಅಥವಾ ಪುರಾವೆ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಆದರೆ ಒಬ್ಬ ವ್ಯಕ್ತಿ ಎಷ್ಟು ಚಿನ್ನವನ್ನ ಮನೆಯಲ್ಲಿ ಸಂಗ್ರಹಿಸಬಹುದು ಎನ್ನುವುದಕ್ಕೂ ಕೂಡ ಮಿತಿ ಇದೆ.
ಉದಾಹರಣೆಗೆ ವಿವಾಹವಾದ ಮಹಿಳೆ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು, ಅದೇ ರೀತಿ ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನ ಹಾಗೂ ಪುರುಷರು 100 ಗ್ರಾಂ ಚಿನ್ನವನ್ನು ಯಾವುದೇ ರಶೀದಿ ಅಥವಾ ಪುರಾವೆ ಇಲ್ಲದೆ ತಮ್ಮ ಬಳಿ ಸಂಗ್ರಹಿಸಿಟ್ಟುಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯ ಟ್ಯಾಕ್ಸ್ ಪಾವತಿಸುವ ಅಗತ್ಯವಿಲ್ಲ.
ಕೂಡಲೇ ಈ ಕೆಲಸ ಮಾಡದೆ ಇದ್ರೆ, ಉಚಿತ ಎಲ್‍ಪಿಜಿ ಸಿಲಿಂಡರ್ ಸೌಲಭ್ಯ ರದ್ದು! ಮಹತ್ವದ ಆದೇಶ
ಚಿನ್ನದ ಸಂಗ್ರಹದ ಮೇಲೆ ಜಿ ಎಸ್ ಟಿ (GST on gold)
ಆದಾಯ ತೆರಿಗೆ ಕಾಯಿದೆ (income tax), 1961 ರ ವಿಭಾಗ 115BBE ನಲ್ಲಿ ಹೇಳಿರುವಂತೆ, ವಿಭಾಗ 69B ಅಡಿಯಲ್ಲಿ ತೆರಿಗೆಗೆ ಪಾವತಿಸಬೇಕು. ಮಿತಿಗಿಂತ ಹೆಚ್ಚಿನ ಚಿನ್ನ ಇಟ್ಟುಕೊಂಡಾಗ ಅಧಿಕಾರಿಗಳು ದಾಖಲೆ ಕೇಳಿದಾಗ ನೀಡಬೇಕು ಇಲ್ಲವಾದರೆ ದಂಡಪಾವತಿಸಬೇಕಾಗುತ್ತದೆ.
ಚಿನ್ನ ಖರೀದಿಯ ಮೇಲೆ 3% ಹಾಗೂ ಶುಲ್ಕದ ಮೇಲೆ 5% GST ವಿಧಿಸಲಾಗುತ್ತದೆ. ಹೊಸ ಆಭರಣ ಖರೀದಿಗಾಗಿ ಹಳೆಯ ಆಭರಣಗಳ ವಿನಿಮಯ ಮಾಡಿಕೊಂಡರೆ ಆ ಆಭರಣದ ಮೇಲೆ ಮತ್ತೆ ಜಿಎಸ್‌ಟಿ ಪಾವತಿಸುವ ಅಗತ್ಯವಿಲ್ಲ.
ಹೊಸ ಚಿನ್ನಾಭರಣ ಅಧಿಕ ತೂಕ ಹೊಂದಿದ್ದರೆ ಅದರ ಮೇಲೆ ಜಿಎಸ್ಟಿ (GST) ಪಾವತಿಸಬೇಕು. ಆದರೆ ಚಿನ್ನದ ಮಾರಾಟದ ಮೇಲೆ ಯಾವುದೇ ಜಿಎಸ್ಟಿ ಪಾವತಿಸುವ ಅಗತ್ಯವಿಲ್ಲ.
ಒಮ್ಮೆಲೇ ನಿಮ್ಮ ಬ್ಯಾಂಕ್ ಖಾತೆಯಿಂದ ಎಷ್ಟು ಹಣ ಡ್ರಾ ಮಾಡಬಹುದು? ಹೊಸ ನಿಯಮ
ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ತೆರಿಗೆ (LTCG)
ಚಿನ್ನ ಖರೀದಿಸಿ (Buy Gold) ಮೂರು ವರ್ಷಗಳ ನಂತರ ಮಾರಾಟ ಮಾಡಿದರೆ ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ (long term capital gain tax) ತೆರಿಗೆ ಅನ್ವಯವಾಗುತ್ತದೆ, ಈ ತೆರಿಗೆ 20% ನಷ್ಟು ಇರುತ್ತದೆ.
ಮಾರಾಟದಿಂದ ಬಂದಿರುವ ನಿವ್ವಳ ಆದಾಯವನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಬಾಂಡ್ ಗಳಂತಹ ಸರ್ಕಾರಿ ಬಾಂಡ್ ಗಳನ್ನೂ ಖರೀದಿಸಲು ಬಳಸಿದರೆ ಈ ತೆರಿಗೆ ಕಡಿತಗೊಳ್ಳುತ್ತದೆ. ಹಾಗಾಗಿ ಇನ್ನು ಮುಂದೆ ಚಿನ್ನ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕಿಂತ ಮೊದಲು ಆದಾಯ ತೆರಿಗೆಯ ನಿಯಮಗಳ ಬಗ್ಗೆ ತಿಳಿದುಕೊಂಡು ಅದೇ ನೀತಿಯಲ್ಲಿ ಚಿನ್ನಾಭರಣಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ, ಜೊತೆಗೆ ಎಲ್ಲಾ ದಾಖಲೆಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ.
ನಿಮ್ಮ ಹೊಸ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ
There is also a limit for buying gold, if you keep more than this gold at home, you have to pay tax