ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಇದ್ರೂ ಕೂಡ ₹10,000 ಡ್ರಾ ಮಾಡಬಹುದು! ಹೊಸ ಯೋಜನೆ
ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದೇ ಒಂದು ರೂಪಾಯಿ ಕೂಡ ಇಲ್ಲವಾದರೂ (No balance in Bank account) ಅರ್ಜೆಂಟಾಗಿ ಹಣ ಬೇಕಾ? ಹಾಗಾದ್ರೆ ಚಿಂತೆ ಬೇಡ ಹಣ ಇಲ್ಲದೆ ಇದ್ದಾಗಲೂ ಕೂಡ 10,000ಗಳನ್ನ ನೀವು ಬ್ಯಾಂಕ್ನಿಂದ ಪಡೆಯಬಹುದು
ಆದರೆ ಇದಕ್ಕೆ ನೀವು ಒಂದು ವಿಶೇಷವಾದ ಖಾತೆ ಹೊಂದಿರುವುದು ಕಡ್ಡಾಯ. ಹಾಗಾದ್ರೆ ಯಾವ ಖಾತೆ ಹೊಂದಿರುವವರಿಗೆ ಈ ಪ್ರಯೋಜನ ಸಿಗಲಿದೆ ನೋಡೋಣ.
ಜನ್ ಧನ್ ಖಾತೆ ಹೊಂದಿರುವವರಿಗೆ ವಿಶೇಷ ಬೆನಿಫಿಟ್! (Jan dhan account in bank)
ಜೀರೋ ಬ್ಯಾಲೆನ್ಸ್ (zero balance) ಅಡಿಯಲ್ಲಿ ಬ್ಯಾಂಕ್ ಖಾತೆ ತೆರೆಯಲು ಪ್ರತಿಯೊಬ್ಬರಿಗೂ ಅವಕಾಶ ನೀಡುವ ಜನ್ ಧನ್ ಯೋಜನೆಯನ್ನು ಸರ್ಕಾರ 2014ರಲ್ಲಿ ಜಾರಿಗೆ ತಂದಿತ್ತು. ಯೋಜನೆ ಜಾರಿಗೆ ಬಂದ ಮೇಲೆ ಇಂದು ಕೋಟ್ಯಾಂತರ ಜನ್ ಧನ್ ಖಾತೆಯನ್ನು ಬ್ಯಾಂಕ್ಗಳಲ್ಲಿ (open Jan dhan account in bank) ಹೊಂದಿದ್ದಾರೆ ಎನ್ನಬಹುದು. ಈ ಯೋಜನೆ ಅಡಿಯಲ್ಲಿ ಒಂದು ರೂಪಾಯಿಗಳನ್ನು ಕೂಡ ಬ್ಯಾಲೆನ್ಸ್ ಮೊತ್ತವಾಗಿ ಇಡದೆ ನೀವು ಖಾತೆ ತೆರೆಯಬಹುದು, ಹಣಕಾಸಿನ ವಹಿವಾಟು ನಡೆಸಬಹುದು.
ಚಿನ್ನ ಖರೀದಿಗೂ ಇದೆ ಲಿಮಿಟ್, ಇದಕ್ಕಿಂತ ಹೆಚ್ಚಿನ ಚಿನ್ನ ಮನೆಯಲ್ಲಿ ಇಟ್ಕೊಂಡ್ರೆ ಕಟ್ಟಬೇಕು ಟ್ಯಾಕ್ಸ್
ಜನ್ ಧನ್ ಖಾತೆಯ ಓವರ್ ಡ್ರಾಫ್ಟ್ ಸೇವೆ (Overdraft benefit in Janardhan account)
ಜನ್ ಧನ್ ಖಾತೆಯನ್ನು ತೆರೆದರೆ ಸಿಗುವ ಅತ್ಯಂತ ಪ್ರಮುಖ ಬೆನಿಫಿಟ್ ಅಂದರೆ ಓವರ್ ಡ್ರಾಫ್ಟ್. ಅಂದರೆ ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ (Bank Balance) ಇಲ್ಲದೆ ಇರುವಾಗ ಕೂಡ ಹತ್ತು ಸಾವಿರ ರೂಪಾಯಿಗಳ ವರೆಗೆ ಬ್ಯಾಂಕ್ನಿಂದ ಪಡೆಯಬಹುದಾಗಿದೆ. ಇದರ ಜೊತೆಗೆ ಪಾಸ್ ಬುಕ್, ಚೆಕ್ ಬುಕ್, ಜೀವ ವಿಮೆ, (Life Insurance) ಅಪಘಾತ ವಿಮೆ ಮೊದಲಾದ ಪ್ರಯೋಜನಗಳನ್ನು ಕೂಡ ಪಡೆಯಬಹುದು.
ಓವರ್ ಡ್ರಾಫ್ಟ್ ಸೌಲಭ್ಯ ಪಡೆಯುವುದು ಹೇಗೆ! (How to get overdraft)
ಜನ್ ಧನ್ ಖಾತೆಯನ್ನು ತೆರೆದರೆ ನೀವು ಶೂನ್ಯ ಮೊತ್ತದಲ್ಲಿ ಹಣಕಾಸಿನ ವ್ಯವಹಾರ ಮಾಡಬಹುದು ಅಂದರೆ ಬ್ಯಾಂಕ್ ನಲ್ಲಿ ಒಂದು ರೂಪಾಯಿ ಬ್ಯಾಲೆನ್ಸ್ ಇಲ್ಲದೆ ಇದ್ದರೂ ಕೂಡ ಹೆಚ್ಚುವರಿ ಶುಲ್ಕ ಕಡಿತಗೊಳಿಸುವುದಿಲ್ಲ. ಇನ್ನು 10,000 ರೂ. ಗಳ ವರೆಗೆ ಓವರ್ ಡ್ರಾಫ್ಟ್ ಸೌಲಭ್ಯ ಪಡೆಯಬಹುದು.
ಇದು ಅಲ್ಪಾವಧಿಯ ಸಾಲ (short term loan) ಇದ್ದಂತೆ. ಬ್ಯಾಂಕ್ ನಲ್ಲಿ ಜನ್ ಧನ್ ಖಾತೆ ತೆರೆದು ಆರು ತಿಂಗಳು ಕಳೆದಿದ್ದರೆ ಹತ್ತು ಸಾವಿರ ರೂಪಾಯಿಗಳ ಡ್ರಾಫ್ಟ್ ಪಡೆದುಕೊಳ್ಳಬಹುದು ಹಾಗೂ ಆರು ತಿಂಗಳ ಒಳಗೆ 2,000 ರೂ. ಓವರ್ ಡ್ರಾಫ್ಟ್ ಸೌಲಭ್ಯ ಸಿಗುತ್ತದೆ. ಇನ್ನು ಜನಧನ್ ಖಾತೆ ತೆರೆದ 65 ವರ್ಷ ವಯಸ್ಸಿನ ಮೇಲ್ಪಟ್ಟವರು ಈ ಪ್ರಯೋಜನ ಪಡೆಯಬಹುದು.
ಎಲ್ಐಸಿಯಿಂದ ಹೊಸ ಪಾಲಿಸಿ; ಐದು ವರ್ಷಗಳ ಹೂಡಿಕೆಗೆ ಜೀವನ ಪೂರ್ತಿ ಆದಾಯ
ಜನ್ ಧನ್ ಖಾತೆಯ ಇತರ ಪ್ರಯೋಜನಗಳು! ( Benefit of Jandhan account )
* ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಬೇಕಾದ ಅಗತ್ಯವಿಲ್ಲ
*ಉಳಿತಾಯ ಖಾತೆಗೆ ಸಮಾನವಾದ ಬಡ್ಡಿಯನ್ನು ಪಡೆಯಬಹುದು.
*ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ
*ಈ ಖಾತೆ ಹೊಂದಿದ್ರೆ 2 ಲಕ್ಷ ರೂಪಾಯಿ ಜೀವ ವಿಮೆ 5 ರವರೆಗಿನ ಅಪಘಾತ ವಿಮೆ ಸಿಗುತ್ತದೆ.
*10 ಸಾವಿರ ರೂಪಾಯಿಗಳ ಓವರ್‌ಡ್ರಾಫ್ಟ್ ಸೌಲಭ್ಯ
*ನಗದು ಹಿಂಪಡೆಯಲು ಮತ್ತು ಶಾಪಿಂಗ್ ಮಾಡಲು ರುಪೇ ಕಾರ್ಡ್ (Rupay card) ಪಡೆಯಬಹುದು.
ಕೂಡಲೇ ಈ ಕೆಲಸ ಮಾಡದೆ ಇದ್ರೆ, ಉಚಿತ ಎಲ್‍ಪಿಜಿ ಸಿಲಿಂಡರ್ ಸೌಲಭ್ಯ ರದ್ದು! ಮಹತ್ವದ ಆದೇಶ
ಜನ್ ಧನ್ ಖಾತೆಯನ್ನು ಹೊಸದಾಗಿ ತೆರೆಯಬೇಕು ಎಂದೇನು ಇಲ್ಲ ನಿಮ್ಮ ಬ್ಯಾಂಕ್ ನಲ್ಲಿ ಇರುವ ಉಳಿತಾಯ ಖಾತೆಯನ್ನು ಜನ್ ಧನ್ ಖಾತೆಯಾಗಿ ಬದಲಾಯಿಸಬಹುದು.
ಇನ್ನು ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಬಡ್ಡಿಯನ್ನು ಕೂಡ ವಿಧಿಸಲಾಗುತ್ತದೆ. ನಿಮ್ಮ ಬಳಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಇದ್ದರೆ ಸುಲಭವಾಗಿ ಬ್ಯಾಂಕುಗಳಲ್ಲಿ ಜನ್ ಧನ್ ಖಾತೆ ಆರಂಭಿಸಲು ಸಾಧ್ಯವಿದೆ.
ಒಟ್ಟಿನಲ್ಲಿ ಒಂದು ರೂಪಾಯಿ ಬ್ಯಾಲೆನ್ಸ್ ಇಲ್ಲದೆ ಇರುವಾಗ ಕೂಡ ಬ್ಯಾಂಕ್ನಿಂದ 10,000 ರೂ.ಗಳನ್ನು ಯಾವುದೇ ಶ್ಯೂರಿಟಿ ಇಲ್ಲದೆ ಜನ್ ಧನ್ ಖಾತೆ ಹೊಂದಿದ್ದವರು ಪಡೆದುಕೊಳ್ಳಬಹುದು.
You can draw Rs 10,000 even if your bank balance is zero