Business NewsIndia News

10ನೇ ತರಗತಿ ಪಾಸ್ ಆಗಿದ್ರೂ ಸಾಕು, ಸಿಗಲಿದೆ ಸರ್ಕಾರಿ ಕೆಲಸ! ಕನ್ನಡ ಓದೋಕೆ ಬರೆಯೋಕೆ ಬಂದ್ರೆ ಸಾಕು

ಕೇಂದ್ರ ಸರ್ಕಾರದ ಹುದ್ದೆ (Government Job) ಪಡೆಯಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಅಂಥವರಿಗೆ ಒಳ್ಳೆಯ ಅವಕಾಶ ಇದು. ಪೋಸ್ಟ್ ಆಫೀಸ್ ನಲ್ಲಿ ಖಾಲಿ (Post Office Recruitment) ಇರುವಂಥ ಗ್ರಾಮೀಣ ಡಾಕ್ ಸೇವಕ್, ಅಸಿಸ್ಟಂಟ್ ಬ್ರಾಂಚ್, ಪೋಸ್ಟ್ ಮಾಸ್ಟರ್, ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು ಖಾಲಿ ಇದೆ, ವಿವಿಧ ರಾಜ್ಯಗಳಲ್ಲಿ ಒಟ್ಟು 44,226 ಪೋಸ್ಟ್ ಗಳು ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡಲು ಆದೇಶ ನೀಡಲಾಗಿದೆ. ಹಾಗಾಗಿ ಆಸಕ್ತಿ ಇರುವವರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು.

10ನೇ ತರಗತಿ ಪಾಸ್ ಆಗಿರುವವರು ಪೋಸ್ಟ್ ಆಫೀಸ್ ನ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸ್ ಆಗಿದ್ರೆ ಸಾಕು. ಹಾಗೆಯೇ ಅರ್ಜಿ ಸಲ್ಲಿಸುವ ಅಭ್ಯರ್ಥಿ ಸರ್ಕಾರದ ಮಾನ್ಯತೆ ಹೊಂದಿರುವ ಸಂಸ್ಥೆ ಇಂದ ಗಣಿತ ಕಲಿತಿರಬೇಕು, ಜೊತೆಗೆ ಆ ಊರಿನ ಸ್ಥಳೀಯ ಭಾಷೆಯನ್ನು (Local Language) ಓದಲು, ಬರೆಯಲು ಬರಬೇಕು. ಹಾಗೂ ಇಂಗ್ಲಿಷ್ ಗೊತ್ತಿರಬೇಕು. ಇದಿಷ್ಟು ಅರ್ಹತೆ ಇರುವವರು ಅಪ್ಲೈ ಮಾಡಬಹುದು. ಸಂಪೂರ್ಣ ಮಾಹಿತಿ ತಿಳಿಯೋಣ..

10th class pass is enough, you will get a job in post office

ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದೋರಿಗೆ ಅತೀ ಕಡಿಮೆ ಬಡ್ಡಿಗೆ ಸಿಗಲಿದೆ ಹೋಮ್ ಲೋನ್! ಅರ್ಜಿ ಸಲ್ಲಿಸಿ

ವಯೋಮಿತಿ:

ಈ ಹುದ್ದೆಗೆ ಅರ್ಜಿ ಸಲ್ಲಿಸುವವರ ವಯಸ್ಸು 2024ರ ಜುಲೈ 15ಕ್ಕೆ 18 ರಿಂದ 40 ವರ್ಷಗಳ ಒಳಗಿರಬೇಕು. ಆದರೆ ಕೆಲವು ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
SC/ST – 5 ವರ್ಷಗಳು
OBC – 3 ವರ್ಷ
PWD – 10 ವರ್ಷ

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಪ್ಲೈ ಮಾಡಿ, ಯಾವೆಲ್ಲಾ ಅಭ್ಯರ್ಥಿಗಳು ಆಯ್ಕೆ ಆಗುತ್ತಾರೋ, ಅಂಥವರನ್ನು 10ನೇ ಕ್ಲಾಸ್ ನಲ್ಲಿ ಪಡೆದಿರುವ ಮಾರ್ಕ್ಸ್ ನ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ ಬೇರೆ ಯಾವುದೇ ಇಂಟರ್ವ್ಯೂ (Interview) ಅಥವಾ ಪರೀಕ್ಷೆ (Exam) ಇರುವುದಿಲ್ಲ.

ಬ್ಯಾಂಕ್ ಅಕೌಂಟ್ ನಲ್ಲಿ ನಾಮಿನಿ ಹೆಸರು ಇಲ್ಲದಾಗ ಖಾತೆ ಇದ್ದ ವ್ಯಕ್ತಿ ಸತ್ತರೆ ಹಣ ಏನಾಗುತ್ತೆ ಗೊತ್ತಾ?

Post Office Jobಪ್ರಮುಖ ದಿನಾಂಕ:

15/7/2024 – ಅರ್ಜಿ ಸಲ್ಲಿಕೆ ಆರಂಭ ಆಗಿರುವ ದಿನಾಂಕ
5/8/2024 – ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

ಅರ್ಜಿ ಶುಲ್ಕ:

ಜೆನೆರಲ್/OBC – ₹100 ರೂಪಾಯಿಗಳು
SC/ST/PWD/ಮಹಿಳೆಯರು/ Transgender – ಶುಲ್ಕ ಇಲ್ಲ

ನಿಮ್ಮತ್ರ ಹರಿದ ನೋಟು ಇದ್ರೆ ಏನು ಮಾಡಬೇಕು? ಬ್ಯಾಂಕ್ ವಾಪಸ್ ತಗೊಳ್ಳುತ್ತ? ಬಂತು ಹೊಸ ನಿಯಮ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

https://indiapostgdsonline.gov.in/ ಈ ಲಿಂಕ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲನೆಯದಾಗಿ ಇಲ್ಲಿ ನೀವು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ನೀಡುವ ಮೂಲಕ, ಖಾತೆ ತೆರೆಯಬೇಕು. ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇದೆಲ್ಲವನ್ನು ಕೇಳುತ್ತದೆ.

ಬಳಿಕ ನೀವು ಲಾಗಿನ್ ಡೀಟೇಲ್ಸ್ ಬಳಸಿ, ಮತ್ತೆ ಲಾಗಿನ್ ಮಾಡಿ, ಬೇರೆ ಎಲ್ಲಾ ಮಾಹಿತಿಗಳನ್ನು ನೀಡಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ನೆಟ್ ಬ್ಯಾಂಕಿಂಗ್ (Net Banking) ಅಥವಾ ಕ್ರೆಡಿಟ್ ಕಾರ್ಡ್ (Credit Card), ಡೆಬಿಟ್ ಕಾರ್ಡ್ (Debit Card) ಮೂಲಕ ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಿ. ಬಳಿಕ ಅರ್ಜಿಯ ಪ್ರಿಂಟೌಟ್ ತೆಗೆದುಕೊಳ್ಳಿ.

ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ! ಕೇವಲ ₹20,000 ಹಣ ಇಟ್ಟು ಒನ್ ಟು ಡಬಲ್ ಮಾಡ್ಕೊಳ್ಳಿ!

10th class pass is enough, you will get a job in post office

Our Whatsapp Channel is Live Now 👇

Whatsapp Channel

Kannada News Today

Kannada News Today 🌐

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
FacebookX
We value your thoughts!
Send your feedback to us at kannadanewstoday@gmail.com

Related Stories