ಇಂತಹ ವಿದ್ಯಾರ್ಥಿಗಳಿಗೆ ₹15000 ಸ್ಕಾಲರ್ಶಿಪ್, ಉಚಿತ ಹಾಸ್ಟೆಲ್ ಸೇರಿ ಇನ್ನಷ್ಟು ಬೆನಿಫಿಟ್! ಅರ್ಜಿ ಸಲ್ಲಿಸಿ

Education scholarship : ಹಿಂದುಳಿದ ವರ್ಗಕ್ಕೆ ಸೇರಿದ್ದು, UPSC ಪರೀಕ್ಷೆಗೆ ತರಬೇತಿ ಪಡೆದು, ಪರೀಕ್ಷೆ ಬರೆಯಬೇಕು ಎಂದುಕೊಂಡಿರುವ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ವಾಸ್ತವ್ಯದ ಜೊತೆಗೆ ತರಬೇತಿಯನ್ನು ಸಹ ಕೊಡುವುದಕ್ಕೆ ಸರ್ಕಾರ ಮುಂದಾಗಿದೆ.

Bengaluru, Karnataka, India
Edited By: Satish Raj Goravigere

Education scholarship : ಇತ್ತೀಚೆಗೆ SCSP/TSP ರಾಜ್ಯ ಪರಿಷತ್ ನಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಬಗ್ಗೆ ಹೊಸದಾಗಿ ಸಭೆ ನಡೆಸಲಾಗಿದೆ. ಈ ಮೂಲಕ ಪರಿಶಿಷ್ಟ ಅಭ್ಯುದಯಕ್ಕಾಗಿ ಒಟ್ಟು 39,121 ಕೋಟಿ ರೂಪಾಯಿಗಳ ಅನುದಾನ ಕೊಡಲಾಗಿದ್ದು, ಇಷ್ಟು ದೊಡ್ಡ ಮೊತ್ತದಲ್ಲಿ 27,673 ಕೋಟಿ ರೂಪಾಯಿಗಳನ್ನು SCSP ಸಮುದಾಯಕ್ಕೆ ಮೀಸಲಾಗಿ ಇಡಲಾಗಿದ್ದು, 11,447 ಕೋಟಿ ರೂಪಾಯಿಗಳನ್ನು TCP ಸಮುದಾಯಕ್ಕೆ ಮೀಸಲಾಗಿ ಇಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಈ ಅನುದಾನ ಹಣದ ಬಗ್ಗೆ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರು ಮುಖ್ಯವಾದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದು, ಈ ಹಣದಿಂದ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಸಹಾಯ ಆಗಬೇಕು, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ (Education scholarship) ಸಿಗಬೇಕು ಎಂದು ನಿರ್ಧಾರ ಮಾಡಿದ್ದಾರೆ.

15000 Education scholarship, free hostel and more benefits for such students

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ? ಚಿಂತೆಬೇಡ ಮತ್ತೆ ಡೌನ್ಲೋಡ್ ಮಾಡಿಕೊಳ್ಳಿ ಹೊಸ ಕಾರ್ಡ್

SCSP ಮತ್ತು TCP ಮೀಟಿಂಗ್ ನಲ್ಲಿ ಯಾವೆಲ್ಲಾ ವಿಚಾರಗಳು ಚರ್ಚೆಗೆ ಒಳಗಾಗಿದೆ, ಇದರಿಂದ ಜನರಿಗೆ ಏನೆಲ್ಲಾ ಅನುಕೂಲ ಸಿಗಲಿದೆ ಎಂದು ತಿಳಿಸುತ್ತೇವೆ ನೋಡಿ..

ಹಲವು ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಇಂಥ ಕಠಿಣ ಪರೀಕ್ಷೆಗಳಿಗೆ ಪ್ರಿಪೇರ್ ಆಗಿ, ಓದಿ, ಪರೀಕ್ಷೆ ಕ್ಲಿಯರ್ ಮಾಡಿ, ಉತ್ತಮ ಸ್ಥಾನಕ್ಕೆ ತಲುಪಬೇಕು, ಬದುಕಿನಲ್ಲಿ ದೊಡ್ಡದಾಗಿ ಸಾಧನೆ ಮಾಡಬೇಕು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಬಡವರ ಮಕ್ಕಳಿಗೆ ಹಣ ಕೊಟ್ಟು, ಕೋಚಿಂಗ್ ಪಡೆದು ಪ್ರಿಪೇರ್ ಆಗಲು ಕಷ್ಟವಾಗುತ್ತದೆ, ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಈ ಕಾರಣಕ್ಕೆ ರಾಜ್ಯ ಸರ್ಕಾರ ಅಂಥ ಮಕ್ಕಳಿಗೆ ಸಹಾಯ ಮಾಡಲು ಮುಂದಾಗಿದೆ.

ಕೇವಲ 5 ನಿಮಿಷಗಳಲ್ಲಿ ಸಿಗಲಿದೆ 1 ಲಕ್ಷ ತನಕ ಸಾಲ! ಫೋನ್ ಪೇ ಬಳಕೆದಾರರಿಗೆ ಬಂಪರ್ ಕೊಡುಗೆ

Education Scholarshipಹೌದು, ಹಿಂದುಳಿದ ವರ್ಗಕ್ಕೆ ಸೇರಿದ್ದು, UPSC ಪರೀಕ್ಷೆಗೆ ತರಬೇತಿ ಪಡೆದು, ಪರೀಕ್ಷೆ ಬರೆಯಬೇಕು ಎಂದುಕೊಂಡಿರುವ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ವಾಸ್ತವ್ಯದ ಜೊತೆಗೆ ತರಬೇತಿಯನ್ನು ಸಹ ಕೊಡುವುದಕ್ಕೆ ಸರ್ಕಾರ ಮುಂದಾಗಿದೆ.

ಇದು UPSC ಪರೀಕ್ಷೆ ಬರೆಯಬೇಕು ಎಂದುಕೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಆಗಿದೆ. ಇದರ ಜೊತೆಗೆ ಇನ್ನು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಅದರ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ..

40 ವರ್ಷ ಮೇಲಪಟ್ಟವರಿಗೆ ಪ್ರತಿ ತಿಂಗಳು ಸಿಗಲಿದೆ ₹1000 ರೂಪಾಯಿ, ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ

ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು:

*ಐಎಎಸ್, ಐಪಿಎಸ್, ಐ.ಆರ್.ಎಸ್ ಮತ್ತು ಇನ್ಯಾವುದೇ ಕಾಂಪಿಟೇಟಿವ್ ಎಕ್ಸಾಂ ಗಳಿಗೆ ತಯಾರಿ ನಡೆಸುತ್ತಿರುವ SC/ST ವರ್ಗದ ವಿದ್ಯಾರ್ಥಿಗಳಿಗೆ ದೆಹಲಿಯಲ್ಲಿ ಉಚಿತ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತದೆ.

*ಈ ಮೊದಲು SC/ST ವರ್ಗದ ಮಕ್ಕಳಿಗೆ ಪ್ರತಿ ತಿಂಗಳು ₹10000 ರೂಪಾಯಿಗಳ ಸ್ಕಾಲರ್ಶಿಪ್ ಕೊಡಲಾಗುತ್ತಿತ್ತು, ಆದರೆ ಇನ್ನುಮುಂದೆ ಸ್ಕಾಲರ್ಶಿಪ್ ಮೊತ್ತವನ್ನು ಏರಿಕೆ ಮಾಡಲಾಗಿದ್ದು, ₹15,000 ರೂಪಾಯಿ ಸ್ಕಾಲರ್ಶಿಪ್ ನೀಡಲಾಗುತ್ತದೆ.

*ದೆಹಲಿಯಲ್ಲಿ ತಯಾರಾಗುವ ಹಾಸ್ಟೆಲ್ ನಲ್ಲಿ ಹೈಟೆಕ್ ಲೈಬ್ರರಿ ಸೌಲಭ್ಯ ಒದಗಿಸಿಕೊಡಲಾಗುತ್ತದೆ.

*ಪರೀಕ್ಷೆಗೆ ಓದಲು ಬೇಕಾಗುವ ಎಲ್ಲಾ ಪುಸ್ತಕಗಳು ಲೈಬ್ರರಿಯಲ್ಲಿ ಸಿಗಲಿದೆ.

15000 Education scholarship, free hostel and more benefits for such students