ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ಯಾ? ಚಿಂತೆಬೇಡ ಮತ್ತೆ ಡೌನ್ಲೋಡ್ ಮಾಡಿಕೊಳ್ಳಿ ಹೊಸ ಕಾರ್ಡ್
ಸಿಮ್ ಖರೀದಿ ಮಾಡುವುದರಿಂದ ಹಿಡಿದು, ಬ್ಯಾಂಕ್ ಕೆಲಸಗಳು (Banking), ಸರ್ಕಾರಿ ಸ್ಕೀಮ್ ಗಳು, ಹಣಕಾಸಿನ ಚಟುವಟಿಕೆ, ಟ್ರಾವೆಲ್ ಮಾಡಲು ಟಿಕೆಟ್ ಬುಕಿಂಗ್ (Ticket Booking) ಇದೆಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ
ಭಾರತದ ಪ್ರಜೆಗಳಿಗೆ ಆಧಾರ್ ಕಾರ್ಡ್ (Aadhaar Card) ಬಹಳ ಮುಖ್ಯವಾಗಿ ಬೇಕಾಗುವ ದಾಖಲೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಈಗ ಪ್ರತಿಯೊಂದು ಕೆಲಸಕ್ಕೆ ಕೂಡ ಆಧಾರ್ ಕಾರ್ಡ್ ಬೇಕೇ ಬೇಕು.
ಒಂದು ಸಿಮ್ ಖರೀದಿ ಮಾಡುವುದರಿಂದ ಹಿಡಿದು, ಬ್ಯಾಂಕ್ ಕೆಲಸಗಳು (Banking), ಸರ್ಕಾರಿ ಸ್ಕೀಮ್ ಗಳು, ಹಣಕಾಸಿನ ಚಟುವಟಿಕೆ, ಟ್ರಾವೆಲ್ ಮಾಡಲು ಟಿಕೆಟ್ ಬುಕಿಂಗ್ (Ticket Booking) ಇದೆಲ್ಲದಕ್ಕೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.
ದೇಶದ ನಾಗರೀಕರಾಗಿರುವ ಪ್ರತಿಯೊಬ್ಬರು ಕೂಡ ಆಧಾರ್ ಕಾರ್ಡ್ ಹೊಂದಿರಲೇಬೇಕು ಎಂದು ಸರ್ಕಾರ ಕೂಡ ಕಡ್ಡಾಯಗೊಳಿಸಿದೆ. ಮಗುವಿನಿಂದ ಹಿಡಿದು ಹಿರಿಯರವರೆಗೂ ಎಲ್ಲರ ಬಳಿ ಕೂಡ ಆಧಾರ್ ಕಾರ್ಡ್ ಇರಲೇಬೇಕು.
ಕೇವಲ 5 ನಿಮಿಷಗಳಲ್ಲಿ ಸಿಗಲಿದೆ 1 ಲಕ್ಷ ತನಕ ಸಾಲ! ಫೋನ್ ಪೇ ಬಳಕೆದಾರರಿಗೆ ಬಂಪರ್ ಕೊಡುಗೆ
ಇದು ಸರ್ಕಾರದಿಂದ ಜಾರಿಗೆ ಬಂದಿರುವ ಕಡ್ಡಾಯ ನಿಯಮ ಆಗಿದ್ದು, ಬಹುತೇಕ ಎಲ್ಲರ ಬಳಿ ಈಗ ಆಧಾರ್ ಕಾರ್ಡ್ ಇದೆ. ಆ ನಿಮ್ಮ ಪ್ರಮುಖ ದಾಖಲೆಯನ್ನು ಹುಷಾರಾಗಿ ಕಾಪಾಡಿಕೊಳ್ಳುವುದು ಕೂಡ ಬಹಳ ಮುಖ್ಯ ಎನ್ನುವುದು ಗೊತ್ತಿರಬೇಕು.
ಹೌದು, ಆಕಸ್ಮಾತ್ ಆಧಾರ್ ಕಾರ್ಡ್ ಕಳೆದು ಹೋದರೆ ಹೇಗೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಆದರೆ ಅದರ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ. ಒಂದು ವೇಳೆ ಆಧಾರ್ ಕಾರ್ಡ್ ಕಳೆದುಹೋದರೆ, ಕೇವಲ 5 ನಿಮಿಷಗಳಲ್ಲಿ ಅದನ್ನು ವಾಪಸ್ ಪಡೆಯಬಹುದು.
ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ಇದ್ದರೆ ಸಾಕು, ಆಧಾರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಅದು ಹೇಗೆ ಎಂದು ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ..
40 ವರ್ಷ ಮೇಲಪಟ್ಟವರಿಗೆ ಪ್ರತಿ ತಿಂಗಳು ಸಿಗಲಿದೆ ₹1000 ರೂಪಾಯಿ, ಹೊಸ ಯೋಜನೆಗೆ ಅರ್ಜಿ ಸಲ್ಲಿಸಿ
ಆಧಾರ್ ಡೌನ್ಲೋಡ್ ಮಾಡುವ ಪ್ರಕ್ರಿಯೆ:
*UIDAI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅದರ ಮೂಲಕ ಹೊಸದಾಗಿ ಆಧಾರ್ ಪಡೆದುಕೊಳ್ಳುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ
*ಇಲ್ಲಿ ನಿಮ್ಮ ಹೆಸರು, ಆಧಾರ್ ಗೆ ಲಿಂಕ್ ಆಗಿರುವ ಫೋನ್ ನಂಬರ್, ಇಮೇಲ್ ಅಡ್ರೆಸ್ ಎಂಟರ್ ಮಾಡಿ, ಜೊತೆಗೆ ಕ್ಯಾಪ್ಚ ಕೋಡ್ ಅನ್ನು ಫಿಲ್ ಮಾಡಿ.
*ಈಗ ಆಧಾರ್ ಗೆ ಲಿಂಕ್ ಆಗಿರುವ ನಿಮ್ಮ ಫೋನ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ಹಾಕಿದ ಬಳಿಕ ನಿಮ್ಮ ಆಧಾರ್ ನಂಬರ್ ಎಸ್.ಎಂ.ಎಸ್ ಮೂಲಕ ಬರುತ್ತದೆ.
*ಇಲ್ಲಿ ನಿಮಗೆ ಎರಡು ಆಯ್ಕೆ ಸಿಗುತ್ತದೆ, ಒಂದು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವುದು ಮತ್ತೊಂದು ಪ್ರಿಂಟ್ ಆಧಾರ್ ಸೇವೆಯನ್ನು ಪಡೆದುಕೊಳ್ಳುವುದು.
ಸ್ಟೇಟ್ ಬ್ಯಾಂಕಿನಲ್ಲಿ 10 ಸಾವಿರ ಫಿಕ್ಸೆಡ್ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಒನ್ ಟು ಡಬಲ್ ಆದಾಯ
*ನಿಮ್ಮ ಡಾಕ್ಯುಮೆಂಟ್ ಗಳಿಗೆ ಅನುಗುಣವಾಗಿ ಹೆಸರು, ಲಿಂಗ, ಜಿಲ್ಲೆ, ಪಿನ್ ಕೋಡ್ ಈ ಎಲ್ಲಾ ಮಾಹಿತಿಗಳನ್ನು ಎಂಟರ್ ಮಾಡಿ. ನೀವು ಹುಟ್ಟಿದ ವರ್ಷವನ್ನು ನಮೂದಿಸಿದರೆ, ದಾಖಲೆಗಳನ್ನು ಪಡೆಯಲು ಇನ್ನು ಸುಲಭ ಆಗುತ್ತದೆ.
*ಇದೆಲ್ಲವೂ ಆದ ನಂತರ ಫಿಂಗರ್ ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್ ಮಾಡಬಹುದು.
*ಇದೆಲ್ಲವು ಮುಗಿದ ನಂತರ 30 ರೂಪಾಯಿ ಶುಲ್ಕ ಪಡೆದು, ಹೊಸ ಆಧಾರ್ ಕಾರ್ಡ್ ಅನ್ನು ಪ್ರಿಂಟ್ ಮಾಡಿಕೊಡಲಾಗುತ್ತದೆ.
Lost your Aadhaar card, Get a new card again in just 5 minutes