Business NewsIndia News

ಬಡವರು ಸ್ವಂತ ಮನೆ ಕಟ್ಟಿಕೊಳ್ಳಲು ₹2.67 ಲಕ್ಷ ಸಹಾಯಧನ! ಕೇಂದ್ರ ಸರ್ಕಾರದ ಯೋಜನೆ

ದೇಶದಲ್ಲಿ ಜನರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಎಷ್ಟು ಉತ್ತಮವಾಗಿರುವ ಯೋಜನೆಗಳನ್ನು (schemes) ಜಾರಿಗೆ ತರುತ್ತದೆಯೋ ಅಷ್ಟೇ ಮುತುವರ್ಜಿಯಿಂದ ಜನರು ವಾಸಿಸಲು ಬೇಕಾಗಿರುವ ಒಂದು ಸೂರು ನಿರ್ಮಿಸಿ (Own House) ಕೊಡುವಲ್ಲಿಯೂ ಸರ್ಕಾರ ಗಮನ ನೀಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಬಡವರಿಗೆ ಹಾಗೂ ಮಧ್ಯಮ ಕುಟುಂಬದವರಿಗೆ ಅವರ ಕನಸಿನ ಸ್ವಂತ ಸೂರು (own house) ನಿರ್ಮಾಣಕ್ಕೆ ಸರ್ಕಾರ ಕೈಜೋಡಿಸಿದೆ. ಸಾಲ ಸೌಲಭ್ಯ (Home Loan) ಮಾತ್ರವಲ್ಲದೆ ಮನೆ ನಿರ್ಮಾಣದ ಮೇಲೆ ಸಬ್ಸಿಡಿಯನ್ನು (subsidy Loan) ಕೂಡ ನೀಡುತ್ತಿದೆ

Free house in housing scheme, 1 lakh rupees will be given as subsidy

ಅಂತಹ ಸರಕಾರದ ಒಂದು ಯೋಜನೆಯ ಬಗ್ಗೆ ಇಲ್ಲಿಗೆ ಸಂಪೂರ್ಣ ಮಾಹಿತಿ!

ನಿತ್ಯ 50 ಲೀಟರ್ ಹಾಲು ಕೊಡುವ ಈ ತಳಿಯ ಹಸು ಸಾಕಿದ್ರೆ! ತಿಂಗಳಲ್ಲೇ ಲಕ್ಷ ಲಕ್ಷ ಆದಾಯ

ಪ್ರಧಾನ ಮಂತ್ರಿ ಆವಾಸ್ ಯೋಜನೆ – Pradhanmantri Aawas Yojana – PMAY

ಪ್ರಧಾನಮಂತ್ರಿಯ ಆವಾಸ್ ಯೋಜನೆಯನ್ನು 2015 ಜೂನ್ 1 ರಿಂದ ಕೇಂದ್ರ ಸರ್ಕಾರ ಆರಂಭಿಸಿತ್ತು, ಈ ಯೋಜನೆಯ ಅಡಿಯಲ್ಲಿ ವಾರ್ಷಿಕವಾಗಿ 6.50% ಬಡ್ಡಿ ದರದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಸಾಲ (loan) ಪಡೆದುಕೊಳ್ಳಬಹುದು.

ಅದನ್ನು ನೀವು ಪಡೆದ ಸಾಲದಲ್ಲಿ 2.67 ಲಕ್ಷಕ್ಕೆ ಸರ್ಕಾರದಿಂದ ಸಹಾಯಧನ (subsidy Loan) ಸಿಗುತ್ತದೆ. ಬಡವರು ಮಧ್ಯಮ ಕುಟುಂಬದವರು ತಮ್ಮದೇ ಆಗಿರುವ ಸ್ವಂತ ಸೂರು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪ್ರಯೋಜನ (benefit of PMAY)

Home Loanಯೋಜನೆಯನ್ನು ಎರಡು ವಿಧಗಳಲ್ಲಿ ನೀಡಲಾಗುತ್ತಿದೆ, ಒಂದು ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ, ಇನ್ನೊಂದು ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ. ಹಿಂದೆ ಇದ್ದ ಇಂದಿರಾ ಗಾಂಧಿ ವಸತಿ ಯೋಜನೆಯನ್ನು ಪ್ರಧಾನಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಎಂದು ಮರುನಾಮಕರಣ ಮಾಡಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಖರೀದಿ ಮಾಡಲು ಒಬ್ಬ ವ್ಯಕ್ತಿ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಿದ ನಂತರ 6.50 ಪರ್ಸೆಂಟ್ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ಗೃಹ ಸಾಲ (Home Loan) ಪಡೆದುಕೊಳ್ಳಬಹುದು.

ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆ ಈಗ ಇನ್ನಷ್ಟು ಸುಲಭ! ಇಲ್ಲಿದೆ ಸುಲಭ ವಿಧಾನ

ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅರ್ಜಿ ಸಲ್ಲಿಸಲು ಯಾರು ಅರ್ಹರು?

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು
ಬಿಪಿಎಲ್ ಕಾರ್ಡ್ ಹೊಂದಿರುವವರು, ಅಲ್ಪಸಂಖ್ಯಾತರು,
ಕೂಲಿ ಕಾರ್ಮಿಕರು
ಅರೆಸೇನಾ ಪಡೆಗಳು
ವಿಧವೆಯರು
ಮಾಜಿ ಸೈನಿಕರು

ಅರ್ಜಿ ಸಲ್ಲಿಸುವುದು ಹೇಗೆ?

PMAY ಯೋಜನೆಗೆ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು, ಇದಕ್ಕಾಗಿ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ https://pmaymis.gov.in/open/Check_Aadhar_Existence.aspx?comp=b ಗೆ ಭೇಟಿ ನೀಡಿ.

ಇಲ್ಲಿ ನೀವು ಫಲಾನುಭವಿಗಳ ಸೆಕ್ಷನ್ ಆಯ್ಕೆ ಮಾಡಿಕೊಂಡು ನಿಮ್ಮ ಆಧಾರ್ ಕಾರ್ಡ್ ಹಾಗೂ ಮತ್ತಿತರ ಮಾಹಿತಿ ನೀಡಿ ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸುವಾಗ ಬಹಳ ಗಮನವಿಟ್ಟು ಮಾಹಿತಿಯನ್ನು ಭರ್ತಿ ಮಾಡಿ ಒಂದು ವೇಳೆ ತಪ್ಪಾಗಿ ನೀವು ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

2.67 lakh subsidy Loan to build own house, Apply for government scheme

Our Whatsapp Channel is Live Now 👇

Whatsapp Channel

Related Stories