ನಿತ್ಯ 50 ಲೀಟರ್ ಹಾಲು ಕೊಡುವ ಈ ತಳಿಯ ಹಸು ಸಾಕಿದ್ರೆ! ತಿಂಗಳಲ್ಲೇ ಲಕ್ಷ ಲಕ್ಷ ಆದಾಯ

ಹೈನುಗಾರಿಕೆ (dairy farming) ಅಥವಾ ಪಶು ಸಂಗೋಪನೆ ಎನ್ನುವುದು ಬಹಳ ಮಹತ್ವ ಪಡೆದುಕೊಳ್ಳುತ್ತಿದೆ, ಇದು ಈಗ ಕೇವಲ ಹಳ್ಳಿಗಳ ಉದ್ಯೋಗ (Own business) ಮಾತ್ರವಲ್ಲದೆ. ವೃತ್ತಿಪರ ಹಾಗೂ ಹೆಚ್ಚು ಆದಾಯ ನೀಡುವಂತಹ ಉದ್ಯಮವಾಗಿದೆ.

Bengaluru, Karnataka, India
Edited By: Satish Raj Goravigere

ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ (dairy farming) ಅಥವಾ ಪಶು ಸಂಗೋಪನೆ ಎನ್ನುವುದು ಬಹಳ ಮಹತ್ವ ಪಡೆದುಕೊಳ್ಳುತ್ತಿದೆ, ಇದು ಈಗ ಕೇವಲ ಹಳ್ಳಿಗಳ ಉದ್ಯೋಗ (Own business) ಮಾತ್ರವಲ್ಲದೆ. ವೃತ್ತಿಪರ ಹಾಗೂ ಹೆಚ್ಚು ಆದಾಯ ನೀಡುವಂತಹ ಉದ್ಯಮವಾಗಿದೆ.

ಯುವಕರು ಕೂಡ ಹೈನುಗಾರಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ವಿಶೇಷ, ಹೈನುಗಾರಿಕೆ ಮಾಡಿದರೆ ಹೆಚ್ಚು ಲಾಭವು ಸಿಗುತ್ತದೆ. ಇನ್ನು ಹಸು ಅಥವಾ ಎಮ್ಮೆ ಸಾಕಾಣಿಕೆ ಮಾಡುವಾಗ ನೀವು ಆಯ್ದುಕೊಳ್ಳುವ ತಳಿ ಯಾವುದು ಎನ್ನುವುದರ ಮೇಲೆ ನಿಮ್ಮ ಆದಾಯ ನಿರ್ಧಾರಿತವಾಗುತ್ತದೆ.

ನಿತ್ಯ 50 ಲೀಟರ್ ಹಾಲು ಕೊಡುವ ಈ ತಳಿಯ ಹಸು ಸಾಕಿದ್ರೆ! ತಿಂಗಳಲ್ಲೇ ಲಕ್ಷ ಲಕ್ಷ ಆದಾಯ - Kannada News

ಯಾಕೆಂದರೆ ಕೆಲವು ತಳಿಯ ಹಸುಗಳು ಅತಿ ಹೆಚ್ಚು ಹಾಲು ಕೊಡುತ್ತವೆ ಹಾಗೂ ಆ ಹಸುಗಳ ಹಾಲಿಗೆ ಎಲ್ಲಿಲ್ಲದ ಬೇಡಿಕೆ ಕೂಡ ಇರುತ್ತದೆ ಅಂತಹ ಹಸುಗಳಲ್ಲಿ ಗಿರ್ ತಳಿಯ ಹಸು ಕೂಡ ಒಂದು.

ಆಧಾರ್ ಕಾರ್ಡ್ ನಲ್ಲಿ ಫೋಟೋ ಬದಲಾವಣೆ ಈಗ ಇನ್ನಷ್ಟು ಸುಲಭ! ಇಲ್ಲಿದೆ ಸುಲಭ ವಿಧಾನ

ಗಿರ್ ಎಂಬ ಸ್ವದೇಶಿ ತಳಿ! (Gir cow)

ಸಾಮಾನ್ಯವಾಗಿ ಗುಜರಾತ್ (Gujarat) ಮಧ್ಯಪ್ರದೇಶ ಇಂತಹ ಪ್ರದೇಶಗಳಲ್ಲಿ ಮಾತ್ರ ಸಿಗುವ ಗಿರ್ ಎನ್ನುವ ಸ್ವದೇಶಿ ತಳಿಯ ಆಕಳನ್ನು ಸಾಕಿದರೆ ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ (income) ಗಳಿಸಲು ಸಾಧ್ಯವಿದೆ

ಈ ಹಸುಗಳು ಬಹಳ ಸೌಮ್ಯ ಸ್ವಭಾವ ಹೊಂದಿವೆ, ಆದರೆ ನೋಡುವುದಕ್ಕೆ ಮಾತ್ರ ಬಹಳ ದೊಡ್ಡದಾಗಿ ಕಾಣಿಸುತ್ತದೆ. ಗಿರ್ ತಳಿಯ ಹಸುವಿನ ಕಿವಿಗಳು ಉದ್ದವಾಗಿದ್ದು ಕೆಳಕ್ಕೆ ಬಾಗಿರುತ್ತವೆ, ಅದೇ ರೀತಿ ಚರ್ಮಗಳು ಸಡಿಲವಾಗಿದ್ದು ನೇತಾಡುವಂತೆ ಕಾಣಿಸುತ್ತವೆ. ಗಿರ್ ತಳಿಯ ಹಸು ಕಡು ಕೆಂಪು, ಕಡು ಕಂದು ಹಾಗೂ ಬಿಳಿಯ ಬಣ್ಣಗಳಲ್ಲಿ ಇರುತ್ತವೆ.

ಗಿರಿ ತಳಿಯ ಹಸುವಿನ ವೈಶಿಷ್ಟ್ಯತೆ!

Gir Cow ಸಾಮಾನ್ಯವಾಗಿ ಯಾವ ವಾತಾವರಣಕ್ಕೂ ಕೂಡ ಹೊಂದಿಕೊಳ್ಳಬಹುದಾದ ಸೌಮ್ಯ ಸ್ವಭಾವ ಗಿರ್ ತಳಿಯ ಹಸುವಿನದ್ದು. ಗಿರ್ ತಳಿಯ ಹಸುವಿನ ಹಾಲು ಬಹಳ ಆರೋಗ್ಯಕರವಾಗಿದ್ದು ಅನಾರೋಗ್ಯ ಪೀಡಿತರಿಗೆ ಹಾಗೂ ಮಕ್ಕಳಿಗೆ ಕುಡಿಸಿದರೆ, ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಿರ್ ಹಸುವಿನ ಹಾಲಿಗೆ (milk) ಹೆಚ್ಚು ಬೇಡಿಕೆಯು ಇದೆ.

ಈ ದಾಖಲೆ ಕೊಟ್ರೆ ಸಾಕು, ಸ್ವಂತ ವ್ಯಾಪಾರ ಮಾಡಿಕೊಳ್ಳೋಕೆ ಸಿಗುತ್ತೆ ಒಂದು ಲಕ್ಷ ಸಬ್ಸಿಡಿ ಸಾಲ

ಗಿರ್ ತಳಿಯ ಹಸುವಿನ ಉದ್ಯಮ!

ಗಿರ್ ತಳಿಯ ಹಸುವನ್ನು ನೀವು ದೇಸಿ ಇತರ ಹಸುಗಳಂತೆ ಸಾಕಬಹುದು, ಈ ಹಸುಗಳಿಗೆ ಹೆಚ್ಚು ಉಷ್ಣವಾದರೆ ಆಗುವುದಿಲ್ಲ ಅಂದರೆ ನೆರಳಿನ ಪ್ರದೇಶಗಳಲ್ಲಿ ಆರೋಗ್ಯವಾಗಿ ಇರುತ್ತವೆ. ಒಂದು ಹೆಣ್ಣು ಗಿರ್ ತಳಿಯ ಹಸು ಸುಮಾರು 385 ಕೆಜಿ ತೂಕ ಹೊಂದಿದ್ದು 135 ರ ಸೆಂಟಿಮೀಟರ್ ಎತ್ತರವಾಗಿರುತ್ತದೆ.

ಅದೇ ಗಂಡು ಗಿರ್ ತಳಿ 545 ಕೆಜಿ ಅಷ್ಟು ಇರುತ್ತದೆ. ಬಾರ್ಲಿ, ಗೋದಿ ಶೇಂಗಾ, ಜೋಳ, ಎಳ್ಳು, ಸಾಸಿವೆ ಇವುಗಳಿಂದ ತಯಾರಿಸಿದ ಕುಟಾಕ್ ಅಥವಾ ಗೌರ್ ಪುಡಿಯನ್ನು ಆಹಾರವಾಗಿ ಕೊಡಬಹುದು.

ಇನ್ನು gir ತಳಿಯ ಉದ್ಯಮದ ಬಗ್ಗೆ ಹೇಳುವುದಾದರೆ ದಿನಕ್ಕೆ ಸುಮಾರು 30 ರಿಂದ 50 ಮೀಟರ್ ಹಾಲು ಕೊಡುವ ಸಾಮರ್ಥ್ಯ ಈ ತಳಿಯ ಹಸುಗಳಿಗೆ ಇದೆ ಹಾಗೂ ಈ ತಳಿಯ ಹಸುವಿನ ಹಾಲಿಗೆ ಬಹಳ ಉತ್ತಮ ಬೇಡಿಕೆ ಕೂಡ ಇದೆ

ಸುಮಾರು ಒಂದರಿಂದ ಎರಡು ಲಕ್ಷ ರೂಪಾಯಿಗಳಿಗೆ ಈ ತಲಿ ಹಸು ಖರೀದಿ ಮಾಡಬಹುದು. ಒಟ್ಟಿನಲ್ಲಿ ನಿಮ್ಮ ಬಳಿ 10 ಗಿರ್ ಹಸುಗಳು ಇದ್ದರೂ ಖಂಡಿತವಾಗಿಯೂ ನೀವು ಪ್ರತಿ ತಿಂಗಳು ಲಕ್ಷಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಬಹುದು.

This breed of cow that gives 50 liters of milk every day, Best Income