ನಿಮ್ಮತ್ರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇದ್ಯಾ? ಹಾಗಾದ್ರೆ ತಪ್ಪದೆ ತಿಳಿಯಬೇಕಾದ 5 ವಿಚಾರಗಳು ಇವು

ಆರ್‌ಬಿಐ ಮತ್ತೆ ಎಚ್ಚರಿಕೆ ನೀಡಿದ್ದು, OTP ಅಥವಾ ಕಾರ್ಡ್ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬಾರದು. ಬ್ಯಾಂಕ್ ಸಿಬ್ಬಂದಿಯೂ ಈ ಮಾಹಿತಿಯನ್ನು ಕೇಳುವುದಿಲ್ಲ, ಸೈಬರ್ ಮೋಸದಿಂದ ದೂರವಿರಿ.

ಭಾರತೀಯ ರಿಸರ್ವ್ ಬ್ಯಾಂಕ್‌ (RBI) ಪದೇಪದೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದು, ಯಾವುದೇ ಸಂದರ್ಭದಲ್ಲಿಯೂ ಬ್ಯಾಂಕ್ ಅಧಿಕಾರಿಗಳು OTP ಅಥವಾ ಕಾರ್ಡ್ ವಿವರಗಳನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆದಾಗ್ಯೂ, ಜನರು ಅನಾಮಧೇಯ ಫೋನ್‌ಕಾಲ್‌ಗಳಿಗೆ ಒಳಗಾಗಿ ತಮ್ಮ ಕಾರ್ಡ್ ಮಾಹಿತಿಯನ್ನು ಹಂಚಿಕೊಳ್ಳುವ ಸಂದರ್ಭಗಳು ಹೆಚ್ಚುತ್ತಿವೆ.

ಇತ್ತೀಚೆಗೆ ಗುರ್ಗಾಂವ್‌ನಲ್ಲಿ ನಡೆದ ದೊಡ್ಡ ಮಟ್ಟದ ಮೋಸದಲ್ಲಿ, ಒಂದು ಕಾಲ್ ಸೆಂಟರ್ 350ಕ್ಕೂ ಹೆಚ್ಚು SBI ಗ್ರಾಹಕರನ್ನು ಮೋಸಮಾಡಿ ₹2.6 ಕೋಟಿಯಷ್ಟು ಹಣ ಕಳೆದುಕೊಂಡ ಘಟನೆ ವರದಿಯಾಗಿದೆ. ಅವರು ಬ್ಯಾಂಕ್‌ ಸಿಬ್ಬಂದಿಯಂತೆ ನಟಿಸಿ OTP, PIN, CVV ಮುಂತಾದ ಮಾಹಿತಿಯನ್ನು ಕೇಳಿ ಹಣ ಮೋಸಮಾಡಿದ್ದರು.

ಇದನ್ನೂ ಓದಿ: 70,000 ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಈಗ ಕೇವಲ 33,860ಕ್ಕೆ! 70 ಕಿ.ಮೀ ಮೈಲೇಜ್ ಕೊಡುತ್ತೆ

ನಿಮಗೆ ಯಾವುದೇ ಅನುಮಾನಾಸ್ಪದ ಕರೆ ಅಥವಾ ಸಂದೇಶ ಬಂದರೆ ತಕ್ಷಣ ನಿಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಿ. ಅಗತ್ಯವಿದ್ದರೆ ಸೈಬರ್ ಪೊಲೀಸರಿಗೆ ದೂರು ನೀಡಿ. ನಿಮ್ಮ ಖಾತೆಯಲ್ಲಿ ಅನುಮಾನಾಸ್ಪದ ವಹಿವಾಟು ಕಂಡುಬಂದರೆ ತಕ್ಷಣ ಬ್ಯಾಂಕ್‌ ಆಪ್ ಅಥವಾ ಗ್ರಾಹಕ ಸೇವೆಯ ಮೂಲಕ ಕಾರ್ಡ್‌ ಅನ್ನು ಬ್ಲಾಕ್‌ ಮಾಡುವುದು ಸುರಕ್ಷಿತ ಕ್ರಮ.

ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (Debit or Credit Card) ಸಂಖ್ಯೆಗಳು, CVV, ಅಥವಾ ಅವಧಿ ದಿನಾಂಕದಂತಹ ಮಾಹಿತಿಯನ್ನು ಸ್ನೇಹಿತನಾಗಲಿ ಅಥವಾ ಬ್ಯಾಂಕ್‌ ಹೆಸರಿನಲ್ಲಿ ಕರೆ ಮಾಡುವವರಿಗಾಗಲಿ, ಹಂಚಿಕೊಳ್ಳಬಾರದು. ಇದೇ ನಿಮ್ಮ ಹಣವನ್ನು ಸುರಕ್ಷಿತವಾಗಿಡುವ ಮುಖ್ಯ ಕವಚವಾಗಿದೆ.

ಇದನ್ನೂ ಓದಿ: ಚೆಕ್‌ನಲ್ಲಿ ಈ ರೀತಿ ಬರೆದರೆ ಬೌನ್ಸ್ ಆಗುತ್ತೆ! ಈ ವಿಚಾರ 99% ಜನಕ್ಕೆ ಗೊತ್ತೇ ಇಲ್ಲ

ಆದ್ದರಿಂದ ಯಾವುದೇ ಸಂದೇಹಾಸ್ಪದ ಸಂದೇಶ, ಲಿಂಕ್ ಅಥವಾ ಕರೆ ಕಂಡುಬಂದರೆ ಎಚ್ಚರದಿಂದಿರಿ ಮತ್ತು ತಕ್ಷಣ ಕ್ರಮ ಕೈಗೊಳ್ಳಿ. ಬ್ಯಾಂಕ್‌ಗಳು ಅಥವಾ ಆರ್‌ಬಿಐ ಯಾವಾಗಲೂ OTP ಕೇಳುವುದಿಲ್ಲ ಎಂಬುದನ್ನು ಮನನಮಾಡಿಕೊಳ್ಳಿ.

5 Important Safety Tips for Credit and Debit Card Users

Sai Teja Vasireddy

6 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿರುವ ಸಾಯಿ ತೇಜಾ ವಾಸಿರೆಡ್ಡಿ ರವರು, ತಂತ್ರಜ್ಞಾನ ಹಾಗೂ ಬಿಸಿನೆಸ್ ಪತ್ರಿಕೋದ್ಯಮದಲ್ಲಿ ಪರಿಣತರು. ವೇಗವಾಗಿ ಬದಲಾಗುವ ಆನ್‌ಲೈನ್… More »

Related Stories