ನಿಮ್ಮತ್ರ ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ನಿಮಗೆ ಪ್ರತಿ ತಿಂಗಳು 5,000 ಬೆನಿಫಿಟ್!

ಕೇಂದ್ರ ಸರ್ಕಾರ 2015ರಲ್ಲಿ ಅಟಲ್ ಪಿಂಚಣಿ ಯೋಜನೆ (Atal pension scheme) ಜಾರಿಗೆ ತಂದಿದೆ, ಏನೆಲ್ಲಾ ಬೆನಿಫಿಟ್ ಇದೆ ಈಗ ನೋಡೋಣ

ಕೇಂದ್ರ ಸರ್ಕಾರ (Central government) ದೇಶದಲ್ಲಿ ವಾಸಿಸುತ್ತಿರುವ ಆರ್ಥಿಕವಾಗಿ ಹಿಂದುಳಿದವರ ಕಲ್ಯಾಣಕ್ಕಾಗಿ ಈ ಪ್ರಮುಖ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ನೀವು ಅತಿ ಕಡಿಮೆ ಹಣವನ್ನ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು 5000 ವರೆಗೆ ಪಿಂಚಣಿ (pension) ಪಡೆಯಬಹುದು

ಸಾಮಾನ್ಯವಾಗಿ ಪಿಂಚಣಿ ಅನ್ನುವುದು ಯಾವುದೇ ಸರಕಾರಿ ಉದ್ಯೋಗದಲ್ಲಿ ಇರುವವರಿಗೆ ಹಾಗೂ ಖಾಸಗಿ ಕ್ಷೇತ್ರದಲ್ಲಿ ಕೆಲವು ಪ್ರಮುಖ ಕಂಪನಿಗಳು ತನ್ನ ಕಂಪನಿಗಳಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ನೀಡುವಂತದ್ದು, ಆದರೆ ಮನೆಯಲ್ಲೇ ಇರುವವರು ಅಥವಾ ಕೃಷಿ ಕೆಲಸ ಮಾಡುವವರು ಹಾಗೂ ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ ವ್ಯವಸ್ಥೆ ಇರುವುದಿಲ್ಲ.

ರೈತರ ಮಕ್ಕಳಿಗೆ ಸಿಗಲಿದೆ 11,000 ರೂಪಾಯಿಗಳ ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

ನಿಮ್ಮತ್ರ ಬಿಪಿಎಲ್ ಕಾರ್ಡ್ ಇದ್ರೆ ಸಿಗಲಿದೆ ನಿಮಗೆ ಪ್ರತಿ ತಿಂಗಳು 5,000 ಬೆನಿಫಿಟ್! - Kannada News

ಹೀಗೆ ಯಾರಿಗೆ ಪಿಂಚಣಿ ಬರುವುದಿಲ್ಲವೋ ಅವರು ವೃದ್ಧಾಪ್ಯದ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಇದನ್ನ ಬಹಳ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ 2015ರಲ್ಲಿ ಅಟಲ್ ಪಿಂಚಣಿ ಯೋಜನೆ (Atal pension scheme) ಜಾರಿಗೆ ತಂದಿದೆ

ಈ ಯೋಜನೆಯ ಅಡಿಯಲ್ಲಿ ನೀವು ಅತಿ ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು 5000 ನಿಮ್ಮ ಖಾತೆಗೆ (Bank Account) ಬರುವಂತೆ ಮಾಡಿಕೊಳ್ಳಬಹುದು.

ಅಟಲ್ ಪಿಂಚಣಿ ಯೋಜನೆ! (Atal pension scheme)

ಇದು ಸರ್ಕಾರದ 100% ಗ್ಯಾರಂಟಿ ಹೊಂದಿರುವ ಯೋಜನೆ ಆಗಿದ್ದು 18ರಿಂದ 40 ವರ್ಷ ವಯಸ್ಸಿನವರು ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ವಯಸ್ಸಾದ ನಂತರ ಪ್ರತಿ ತಿಂಗಳು 5000ಗಳನ್ನು ಪಿಂಚಣಿಯಾಗಿ ಪಡೆಯಬಹುದು.

ಕೋಳಿ ಫಾರ್ಮ್ ಆರಂಭಿಸೋಕೆ ಸರ್ಕಾರದಿಂದಲೇ ಸಿಗುತ್ತೆ 30 ಲಕ್ಷ ಸಹಾಯಧನ! ಅರ್ಜಿ ಹಾಕಿ

Pension Schemeಯಾರು ಅರ್ಜಿ ಸಲ್ಲಿಸಬಹುದು?

ಪ್ರಾಥಮಿಕ ಅಸಂಘಟಿತ (non organised sector) ವಲಯದಲ್ಲಿ ಕೆಲಸ ಮಾಡುವ ಕುಟುಂಬದವರ ಆರ್ಥಿಕ ನೆರವಿಗಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ನೀವು ಯಾವುದೇ ಬ್ಯಾಂಕ್ ನಲ್ಲಿ ಜನ್ ಧನ್ ಖಾತೆಯನ್ನು ಹೊಂದಿದ್ದರೆ ಅಲ್ಲಿ ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ನಿಮ್ಮ ಹೂಡಿಕೆ ಆರಂಭಿಸಬಹುದು. ಅಥವಾ ಅಂಚೆ ಕಚೇರಿಯಲ್ಲಿ ಹೂಡಿಕೆ ಆರಂಭಿಸಲು ಅವಕಾಶ ಇದೆ.

ಇನ್ನು ಎಷ್ಟು ಹಣ ಹೂಡಿಕೆ (Investment) ಮಾಡಬೇಕು ಎಂಬುದನ್ನು ನೋಡುವುದಾದರೆ 18 ವರ್ಷದಲ್ಲಿ ನೀವು ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಹೂಡಿಕೆ ಆರಂಭಿಸಿದರೆ, ದಿನಕ್ಕೆ ಕೇವಲ ಏಳು ರೂಪಾಯಿಗಳನ್ನು ಮೀಸಲಿಟ್ಟರೆ ಸಾಕು.

ಬ್ಯಾಂಕ್ ಅಕೌಂಟ್ ಮಿನಿಮಂ ಬ್ಯಾಲೆನ್ಸ್ ಎಷ್ಟಿರ ಬೇಕು ಗೊತ್ತಾ? ಬಂತು ಹೊಸ ರೂಲ್ಸ್

ಗಂಡ ಹೆಂಡತಿ ಜಂಟಿಯಾಗಿ ಖಾತೆ ತೆರೆದು ಕೂಡ ಈ ಯೋಜನೆಯನ್ನು ಆರಂಭಿಸಬಹುದು. ಅಲ್ಲಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.

ಅರವತ್ತು ವರ್ಷಗಳ ಬಳಿಕ ಆರ್ಥಿಕವಾಗಿ ಯಾವುದೇ ತೊಂದರೆ ಆಗದೆ ಇರುವ ರೀತಿಯಲ್ಲಿ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಅಟಲ್ ಪಿಂಚಣಿ ಯೋಜನೆ ಬಹಳ ಸಹಕಾರಿಯಾಗಿದೆ. ಇದು ಸರ್ಕಾರದ ಯೋಜನೆ ಆಗಿರುವುದರಿಂದ ನಿಮ್ಮ ಹೂಡಿಕೆಗೆ 100% ಗ್ಯಾರೆಂಟಿ ಇರುತ್ತದೆ, ಯಾವುದೇ ಮಾರುಕಟ್ಟೆ ಅಪಾಯವು ಇಲ್ಲ.

ಇಲ್ಲಿ ನಿಮ್ಮ ಬಳಿ ಎಷ್ಟು ಸಾಧ್ಯವೋ ಅಷ್ಟು ಹೂಡಿಕೆ ಮಾಡಬಹುದು. ಅಂದರೆ ಕನಿಷ್ಠ 1,000 ರೂಪಾಯಿಗಳಿಂದ ಗರಿಷ್ಠ 5000 ಗಳ ವರೆಗಿನ ಪಿಂಚಣಿ ಪಡೆದುಕೊಳ್ಳಲು ಅಗತ್ಯ ಇರುವ ಹೂಡಿಕೆ ಮಾಡಬೇಕು.

ಹಾಗಾದ್ರೆ ಇನ್ಯಾಕೆ ತಡ ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಹೋಗಿ ಪ್ರಧಾನಮಂತ್ರಿ ಅಟಲ್ ಪಿಂಚಣಿ ಯೋಜನೆಯ ಅಡಿಯಲ್ಲಿ ಅತಿ ಸಣ್ಣ ಹೂಡಿಕೆ ಶುರು ಮಾಡಿ ಹಾಗೂ ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿ ಪಡೆದುಕೊಳ್ಳಿ.

ರೈತರ ಬಳಿ ಈ ಕಾರ್ಡ್ ಇದ್ರೆ 3 ಲಕ್ಷ ರೂಪಾಯಿ ಸಾಲ ಸಿಗುತ್ತೆ, ಈ ರೀತಿ ಅಪ್ಲೈ ಮಾಡಿ

5,000 benefit every month if you have BPL Ration card

Follow us On

FaceBook Google News

5,000 benefit every month if you have BPL Ration card