ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ನಿಯಮ! ಪಾಲಿಸದಿದ್ದರೆ ಸಬ್ಸಿಡಿ ಬಂದ್
Gas Cylinder Subsidy : ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ನೀಡಿರುವುದು ಮಾತ್ರವಲ್ಲದೆ, ಪ್ರತಿ ಗ್ಯಾಸ್ ಸಿಲಿಂಡರ್ ಖರೀದಿಯ ಮೇಲೆ 300 ರೂಪಾಯಿಗಳ ಸಬ್ಸಿಡಿ ಕೂಡ ನೀಡಲಾಗುತ್ತದೆ
Gas Cylinder Subsidy : ಇನ್ನೇನು 2023 ಕಳೆದು 2024 ಅಂದರೆ ಹೊಸ ವರ್ಷ ಆರಂಭವಾಗಲಿದೆ. ಹೊಸ ವರ್ಷದ ಹೊಸ್ತಿಲಿನಲ್ಲಿ ಸರ್ಕಾರದ ಸಾಕಷ್ಟು ನಿಯಮಗಳಲ್ಲಿ ಬದಲಾವಣೆಗಳು ಆಗಲಿವೆ.
ಈ ನಿಯಮಗಳು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಕೂಡ ಅನ್ವಯವಾಗಲಿದ್ದು ಕೆಲವು ಕೆಲಸಗಳನ್ನು ಡಿಸೆಂಬರ್ 31ರ ಒಳಗೆ ಮಾಡಬೇಕು. ಇಲ್ಲವಾದರೆ ನಿಮಗೆ ಅದರ ಪ್ರಯೋಜನ ಲಭ್ಯವಾಗದೆ ಇರಬಹುದು.
ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟ ವ್ಯಕ್ತಿ ಮೃತಪಟ್ಟರೆ ಆ ಹಣ ಯಾರಿಗೆ ಸೇರಬೇಕು?
ಎಲ್ ಪಿ ಜಿ ಗ್ಯಾಸ್ ಗೆ ಈಕೆವೈಸಿ ಕಡ್ಡಾಯ! (Ekyc mandatory for LPG gas)
ಇಂದು ಬಹುತೇಕ ಎಲ್ಲರೂ ಕೂಡ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG Gas cylinder) ಬಳಸಿಯೇ ಬಳಸುತ್ತಾರೆ. ಆದರೆ ನೀವು ಕೂಡ ಹೀಗೆ ಗ್ಯಾಸ್ ಬಳಸಿ ಸರ್ಕಾರದಿಂದ ಈಗ ಸಿಗುತ್ತಿರುವ ಸಬ್ಸಿಡಿಯನ್ನು ಮತ್ತೆ ಪಡೆದುಕೊಳ್ಳಬೇಕು ಅಂದ್ರೆ ಡಿಸೆಂಬರ್ 31ರ ಒಳಗೆ ಈ ಕೆಲಸ ಮಾಡಿಕೊಳ್ಳಿ.
ಹೌದು, ಈಗಾಗಲೇ ಸರ್ಕಾರ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ 200 ರೂಪಾಯಿಗಳ ಸಬ್ಸಿಡಿ (subsidy) ಘೋಷಣೆ ಮಾಡಿದೆ. ಅದೇ ರೀತಿ ಉಜ್ವಲ ಯೋಜನೆಯ (PM Ujjwala scheme) ಅಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ (Free Gas Connection) ನೀಡಿರುವುದು ಮಾತ್ರವಲ್ಲದೆ, ಪ್ರತಿ ಗ್ಯಾಸ್ ಸಿಲಿಂಡರ್ ಖರೀದಿಯ ಮೇಲೆ 300 ರೂಪಾಯಿಗಳ ಸಬ್ಸಿಡಿ ಕೂಡ ನೀಡಲಾಗುತ್ತದೆ.
ಅಂದ್ರೆ ಕೇವಲ 603 ರೂಪಾಯಿಗಳಿಗೆ ಉಜ್ವಲ ಯೋಜನೆಯ ಫಲಾನುಭವಿಗಳು ಗ್ಯಾಸ್ ಸಿಲಿಂಡರ್ ಖರೀದಿಸಬಹುದು. ಆದರೆ ಇನ್ನು ಮುಂದೆ ಈ ಎಲ್ಲಾ ಸಬ್ಸಿಡಿ ನಿಮ್ಮ ಖಾತೆಗೆ (Bank Account) ಬರಬೇಕು ಅಂದ್ರೆ ಗ್ಯಾಸ್ ಸಂಪರ್ಕ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ (Aadhaar Card link) ಮಾಡುವುದು ಕಡ್ಡಾಯವಾಗಿದೆ.
ಕೋಳಿ ಸಾಕಾಣಿಕೆ ಮಾಡೋಕೆ ಎಸ್‌ಬಿಐನಿಂದ ಸಿಗುತ್ತಿದೆ 9 ಲಕ್ಷ ರೂಪಾಯಿ ಸಾಲ ಸೌಲಭ್ಯ
ಈಕೆವೈಸಿ ಮಾಡಿಸಿಕೊಳ್ಳುವುದು ಹೇಗೆ? (How to do eKYC)
ಮೊದಲನೆಯದಾಗಿ ನೀವು ನಿಮ್ಮ ಗ್ಯಾಸ್ ವಿತರಕರ ಕಚೇರಿಗೆ (Gas agency office) ಹೋಗಬೇಕು. ನಿಮ್ಮ ಆಧಾರ್ ಕಾರ್ಡ್ ಗ್ಯಾಸ್ ಸಂಖ್ಯೆ ಮಾಹಿತಿಯನ್ನು ನೀಡಬೇಕು. ಬಯೋಮೆಟ್ರಿಕ್ (biometric) ಮೂಲಕ ದಾಖಲೆಗಳನ್ನು ನೀಡಿ ಲಿಂಕ್ ಮಾಡಿಸಿಕೊಳ್ಳಬಹುದಾಗಿದೆ.
6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:00 ವರೆಗೆ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ನೀವು ಈಕೆ ವೈ ಸಿ ಮಾಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಗ್ಯಾಸ್ ಸಂಪರ್ಕ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ರಕ್ರಿಯೆ ನವೆಂಬರ್ 25 ರಿಂದಲೇ ಆರಂಭವಾಗಿದೆ ಈಗ ಡಿಸೆಂಬರ್ 31 ಕೊನೆಯ ದಿನಾಂಕವಾಗಿದ್ದು ನಿಮ್ಮ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆದುಕೊಳ್ಳಬೇಕು ಅಂದ್ರೆ ತಕ್ಷಣವೇ ಈ ಕೆಲಸ ಮಾಡಿ ಇಲ್ಲವಾದರೆ ಸಬ್ಸಿಡಿ ರದ್ದಾಗುತ್ತದೆ.
A new rule for those who use LPG gas cylinders at home