ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟ ವ್ಯಕ್ತಿ ಮೃತಪಟ್ಟರೆ ಆ ಹಣ ಯಾರಿಗೆ ಸೇರಬೇಕು?
Bank Account : ಬ್ಯಾಂಕ್ ನಲ್ಲಿ ನೀವು ಯಾವುದೇ ರೀತಿಯ ಹೂಡಿಕೆ (investment) ಮಾಡಬಹುದು, ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ (Savings Account), ಚಾಲ್ತಿ ಖಾತೆ, ಜಂಟಿ ಖಾತೆ ಮೊದಲಾದ ಖಾತೆ ತೆರೆಯಲು ಅವಕಾಶವಿದೆ.
Bank Account : ಅಚಾನಕ್ ಆಗಿ ಬ್ಯಾಂಕ್ ಖಾತೆಯಲ್ಲಿ ಹಣ ಇಟ್ಟಿರುವ ವ್ಯಕ್ತಿ ಮರಣ ಹೊಂದಿದ್ದಾರೆ ಎಂದು ಭಾವಿಸಿ. ತನ್ನ ಖಾತೆಯಲ್ಲಿ ಇರುವ ಹಣ ಯಾರಿಗೆ ಸೇರಬೇಕು ಎಂದು ಪ್ರಶ್ನೆ ಮೂಡುತ್ತೆ. ನಾಮಿನಿ ಕೂಡ ಮಾಡಿಟ್ಟಿಲ್ಲ, ಅಂತಹ ಸಂದರ್ಭದಲ್ಲಿ ಯಾರಿಗೆ ಸೇರುತ್ತೆ ಗೊತ್ತಾ ಆ ಹಣ? ಈ ಬಗ್ಗೆ ಆರ್‌ಬಿಐನ ನಿಯಮ ಏನು ತಿಳಿದುಕೊಳ್ಳಿ.
ಬ್ಯಾಂಕ್ ನಲ್ಲಿ ನೀವು ಯಾವುದೇ ರೀತಿಯ ಹೂಡಿಕೆ (investment) ಮಾಡಬಹುದು, ಬ್ಯಾಂಕ್ಗಳಲ್ಲಿ ಉಳಿತಾಯ ಖಾತೆ (Savings Account), ಚಾಲ್ತಿ ಖಾತೆ, ಜಂಟಿ ಖಾತೆ ಮೊದಲಾದ ಖಾತೆ ತೆರೆಯಲು ಅವಕಾಶವಿದ್ದು ಎಫ್ ಡಿ (Fixed Deposit), ಮರುಕಳಿಸುವ ಠೇವಣಿ (RD) ಮೊದಲಾದ ಯೋಜನೆಯ ಅಡಿಯಲ್ಲಿ ಹೂಡಿಕೆ ಕೂಡ ಮಾಡಬಹುದು.
ಕೋಳಿ ಸಾಕಾಣಿಕೆ ಮಾಡೋಕೆ ಎಸ್‌ಬಿಐನಿಂದ ಸಿಗುತ್ತಿದೆ 9 ಲಕ್ಷ ರೂಪಾಯಿ ಸಾಲ ಸೌಲಭ್ಯ
ದುಡಿದ ಹಣವನ್ನೆಲ್ಲ ಹೂಡಿಕೆ ಮಾಡುತ್ತೀರಿ ಎಂದಾದರೆ ಬ್ಯಾಂಕ್ ನ ಕೆಲವು ನಿಯಮಗಳನ್ನು ತಿಳಿದುಕೊಳ್ಳಲೇಬೇಕು ಇಲ್ಲವಾದರೆ ನಿಮ್ಮ ಹಣ ಯಾರ ಪಾಲಾಗುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆ ಆಗಬಹುದು.
ಮೊದಲು ನಾಮಿನಿ ಆಯ್ಕೆ ಮಾಡಿ (Select your nominee before invest )
ಮನುಷ್ಯನ ಜೀವ ಯಾವಾಗ ಇರುತ್ತೆ ಯಾವಾಗ ಹೋಗುತ್ತೆ ಅಂತ ಖಂಡಿತವಾಗಿಯೂ ಯಾರಿಗೂ ಊಹಿಸಲು ಕೂಡ ಸಾಧ್ಯವಿಲ್ಲ. ಹಾಗಾಗಿ ಬದುಕಿರುವಾಗ ನಾವು ತೆಗೆದುಕೊಳ್ಳುವ ಒಂದಿಷ್ಟು ನಿರ್ಣಯಗಳು ಪ್ರತಿಯೊಬ್ಬರಿಗೂ ಸಹಾಯಕವಾಗುವಂತೆ ಇರಬೇಕು
ಉದಾಹರಣೆಗೆ ನೀವು ಬ್ಯಾಂಕ್ ನಲ್ಲಿ ಹೂಡಿಕೆ ಮಾಡುತ್ತೀರಿ ಎಂದಾದರೆ ಭವಿಷ್ಯದ ಬಗ್ಗೆ ಯೋಚನೆ ಇರಬೇಕು, ಹಾಗಾಗಿ ನಾಮಿನಿ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.
ಒಂದು ವೇಳೆ ನೀವು ನಾಮಿನಿ ಆಯ್ಕೆ ಮಾಡದೆ ಇದ್ದು ಅಕಾಲಿಕ ಮರಣ ಹೊಂದಿದರೆ ನಿಮ್ಮ ಖಾತೆಯಲ್ಲಿ ಇರುವ ಹಣ ಯಾರಿಗೆ ಸೇರಬೇಕು ಎನ್ನುವ ಗೊಂದಲ ಸೃಷ್ಟಿಯಾಗುತ್ತೆ.
ನೀವು ನಿಮ್ಮ ಪ್ರೀತಿ ಪಾತ್ರರನ್ನು ನಾಮಿನಿ ಆಗಿ ಆಯ್ಕೆ ಮಾಡಬಹುದು, ಹೀಗೆ ಆಯ್ಕೆ ಮಾಡಿದರೆ ಅವರಿಗೆ ನಿಮ್ಮ ಮರಣದ ನಂತರ ಬ್ಯಾಂಕ್ ಖಾತೆಯಲ್ಲಿ ಇರುವ ಹಣ ಸಂದಾಯವಾಗುತ್ತದೆ. ಜಂಟಿ ಖಾತೆಯಲ್ಲಿ ಎಲ್ಲರ ಒಪ್ಪಿಗೆ ಪಡೆದು ನಾಮಿನಿ ಆಯ್ಕೆ ಮಾಡಬಹುದು. ಬದುಕಿರುವಾಗ ಆನ್ಲೈನ್ ಮೂಲಕವೇ ನಾಮಿನಿ ಹೆಸರು ಬದಲಾಯಿಸಲು ಕೂಡ ಅವಕಾಶವಿದೆ.
6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸಿಗಲಿದೆ ₹10,000 ಸ್ಕಾಲರ್ಶಿಪ್! ಅರ್ಜಿ ಸಲ್ಲಿಸಿ
ಖಾತೆದಾರ ಮರಣ ಹೊಂದಿದ್ರೆ ಅಕೌಂಟ್ ಹಣ ಯಾರಿಗೆ ತಲುಪಬೇಕು?
ಒಬ್ಬ ವ್ಯಕ್ತಿ ಬ್ಯಾಂಕ್ ನಲ್ಲಿ ಖಾತೆ ತೆರೆದು ಅದರಲ್ಲಿ ಸಾಕಷ್ಟು ಹಣ ಹೂಡಿಕೆ ಮಾಡಿ ಅಕಾಲಿಕ ಮರಣ ಹೊಂದಿದರೆ, ಆ ಹಣ ಯಾರಿಗೆ ತಲುಪಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಂತಹ ಸಂದರ್ಭದಲ್ಲಿ ವ್ಯಕ್ತಿ ಖಾತೆಯಲ್ಲಿ ಇರುವ ಹಣ ಆತ ನಾಮಿನಿ ಆಗಿ ಯಾರ ಹೆಸರನ್ನು ಸೂಚಿಸಿರುತ್ತಾನೋ ಅವರಿಗೆ ಬ್ಯಾಂಕ್ ಹಣವನ್ನು ವರ್ಗಾವಣೆ ಮಾಡುತ್ತದೆ, ಇದಕ್ಕೆ ಕೆಲವು ಬ್ಯಾಂಕ್ ಪ್ರೊಸೀಜರ್ ( bank procedures) ಗಳನ್ನು ಕೂಡ ನಡೆಸಲಾಗುತ್ತದೆ.
ಆಧಾರ್ ಉಚಿತ ಸೇವೆ, ಗಡುವು ಮಾರ್ಚ್ 14ರ ತನಕ ಮತ್ತೊಮ್ಮೆ ವಿಸ್ತರಣೆ
ನಾಮಿನಿ ಇಲ್ಲದೆ ಇದ್ದರೆ ಖಾತೆಯ ಹಣ ಯಾರಿಗೆ?
ಒಂದು ವೇಳೆ ವ್ಯಕ್ತಿ ಖಾತೆ ತೆರೆದು ಹೂಡಿಕೆ ಮಾಡಿ ಅಥವಾ ತನ್ನ ಖಾತೆಯಲ್ಲಿ ಒಂದಷ್ಟು ಹಣವನ್ನು ಉಳಿತಾಯ ಮಾಡಿ ನಾಮಿನಿ ಹೆಸರನ್ನು ಸೂಚಿಸದೆ ಇದ್ದು ಅಕಾಲಿಕ ಮರಣ ಹೊಂದಿದರೆ ಆ ಹಣ ಯಾರಿಗೆ ಸೇರಬೇಕು ಎನ್ನುವುದಕ್ಕೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗುತ್ತವೆ.
ವ್ಯಕ್ತಿ ಮರಣ ಹೊಂದಿದಾಗ ಆತನ ಸಂಬಂಧಿಕರು ತಾವೇ ವಾರಸುದಾರ ಎಂದು ಹೇಳಿಕೊಂಡು ಬ್ಯಾಂಕ್ ಗೆ ಬರಬಹುದು. ಇನ್ನು ನಿಜವಾದ ವಾರಸುದಾರ ತಾನೇ ಆ ವ್ಯಕ್ತಿಗೆ ವಾರಸುದಾರ ಎಂದು ಸಾಬೀತುಪಡಿಸಿಕೊಳ್ಳಲು ಸಾಕಷ್ಟು ದಾಖಲೆಗಳನ್ನು ನೀಡಬೇಕಾಗುತ್ತದೆ.
ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಈ ಸಲಹೆಗಳೊಂದಿಗೆ ಪಡೆಯಿರಿ ಇನ್ನಷ್ಟು ಬೆನಿಫಿಟ್
50,000 ಗಳಷ್ಟು ಖರ್ಚು ಮಾಡಿ ಪ್ರೊಬೆಟ್ ಕೂಡ ಪಡೆದುಕೊಳ್ಳಬೇಕು. ನಾಮಿನಿ ಇಲ್ಲದೆ ಹೂಡಿಕೆ ಮಾಡುವುದು ಒಳ್ಳೆಯದಲ್ಲ ಹೂಡಿಕೆ ಮಾಡುವಾಗ ಅಥವಾ ಖಾತೆಯಲ್ಲಿ ಉಳಿತಾಯದ ಹಣ ಇಡುವಾಗ ತಪ್ಪದೇ ನಾಮಿನಿ ಹೆಸರನ್ನು ಬ್ಯಾಂಕ್ಗೆ ಸೂಚಿಸಿ.
If the person who deposited the money in the bank account dies, what happens to the money