ಇಂತಹ ಎಲ್ಲಾ ಮಹಿಳೆಯರಿಗೆ ಸಿಗಲಿದೆ ₹11,000 ರೂಪಾಯಿ! ಕೇಂದ್ರದಿಂದ ಹೊಸ ಯೋಜನೆ ಜಾರಿ

ಕೇಂದ್ರ ಸರ್ಕಾರ ಮಹಿಳೆಯರಿಗೆ ಜಾರಿಗೆ ತಂದಿರುವ ಈ ಒಂದು ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ₹11,000 ರೂಪಾಯಿ ಹಣ ಸಿಗಲಿದೆ.

Bengaluru, Karnataka, India
Edited By: Satish Raj Goravigere

ಕೇಂದ್ರ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಇರಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದ್ದು, ಈ ಕಾರಣದಿಂದ ಬಡತನದಲ್ಲಿ ಇರುವ ಮಹಿಳೆಯರಿಗೆ ಹಣಕಾಸಿನ ಸಹಾಯ ಆಗಲಿ ಎಂದು ಈ ಕೆಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇಂದು, ಮಹಿಳೆಯರಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಯೋಜನೆಯ ಬಗ್ಗೆ ತಿಳಿಸಲಿದ್ದೇವೆ..

ಕೇಂದ್ರ ಸರ್ಕಾರ ಮಹಿಳೆಯರಿಗೆ ಜಾರಿಗೆ ತಂದಿರುವ ಈ ಒಂದು ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ₹11,000 ರೂಪಾಯಿ ಹಣ ಸಿಗಲಿದೆ. ಹೌದು, ಅರ್ಹತೆ ಇರುವ ಮಹಿಳೆಯರು ಈ ಒಂದು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅಷ್ಟಕ್ಕೂ ಈ ಯೋಜನೆ ಯಾವುದು? ಯಾವೆಲ್ಲಾ ಮಹಿಳೆಯರಿಗೆ ಈ ಯೋಜನೆಯ ಸೌಲಭ್ಯ ಸಿಗುತ್ತದೆ? ಎಲ್ಲವನ್ನು ಸಂಪೂರ್ಣವಾಗಿ ತಿಳಿಸುತ್ತೇವೆ ನೋಡಿ..

Such women will get 11,000 rupees, 90 Percent people do not know about this scheme

ಫೋನ್‌ಪೇ ಬಳಕೆದಾರರಿಗೆ ಭರ್ಜರಿ ಸುದ್ದಿ! ಒಂದೇ ನಿಮಿಷದಲ್ಲಿ ಸಿಗಲಿದೆ 1 ಲಕ್ಷದವರೆಗೂ ಲೋನ್

ಮಾತೃತ್ವ ವಂದನಾ ಯೋಜನೆ:

ಕೇಂದ್ರ ಸರ್ಕಾರದ ಕಡೆಯಿಂದ ₹11,000 ರೂಪಾಯಿಗಳ ಸಹಾಯ ಸಿಗುವಂಥ ಯೋಜನೆ ಇದೇ ಆಗಿದ್ದು, ಮಾತೃತ್ವ ವಂದನಾ ಯೋಜನೆಯನ್ನು ಗರ್ಭಿಣಿ ಸ್ತ್ರೀಯರಿಗಾಗಿ ಜಾರಿಗೆ ತರಲಾಗಿದೆ. ಈ ಒಂದು ಯೋಜನೆಯ ಮೂಲಕ ಗರ್ಭಿಣಿ ಸ್ತ್ರೀಯರಿಗೆ ಆರ್ಥಿಕ ಸಹಾಯ ಸಿಗಲಿದೆ.

ಹಣಕಾಸಿನ ವಿಚಾರಕ್ಕೆ ಇವರು ಯಾರ ಮೇಲೂ ಅವಲಂಬಿಸಿ ಇರುವ ಅಗತ್ಯವಿಲ್ಲ. ಮಾತೃತ್ವ ವಂದನಾ ಯೋಜನೆಯಲ್ಲಿ ₹11,000 ರೂಪಾಯಿಗಳ ವರೆಗು ಗರ್ಭಿಣಿ ಮಹಿಳೆಯರಿಗೆ ಸಹಾಯ ಸಿಗಲಿದೆ.

ಒಬ್ಬ ಮಹಿಳೆ ಮೊದಲ ಸಾರಿ ಗರ್ಭಿಣಿ ಆದಾಗ ₹5000 ಸಿಗುತ್ತದೆ. ಎರಡನೇ ಸಾರಿ ಗರ್ಭಿಣಿ ಆದಾಗ ₹6000 ಸಿಗುತ್ತದೆ. ಒಟ್ಟಾರೆಯಾಗಿ ₹11,000 ರೂಪಾಯಿಗಳು ತಾಯಿಯಾಗುವ ಮಹಿಳೆಗೆ ಸಿಗಲಿದೆ.

ಇದರ ಜೊತೆಗೆ ಗರ್ಭಿಣಿ ಸ್ತ್ರೀಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಹೆರಿಗೆ ಮಾಡಿಸಿಕೊಳ್ಳಬಹುದು. ಹಾಗೂ ಸರ್ಕಾರದ ಇನ್ನಿತರ ಸೌಲಭ್ಯಗಳನ್ನು ಪಡೆಯಬಹುದು. ಜೊತೆಗೆ ಮಹಿಳೆಯ ಬಾಣಂತನದ ಜವಾಬ್ದಾರಿಯನ್ನು ಅಂಗನವಾಡಿ ಕಾರ್ಯಕರ್ತೆಯರು ನೋಡಿಕೊಳ್ಳುತ್ತಾರೆ.

10ನೇ ತರಗತಿ ಪಾಸ್ ಆಗಿದ್ರೆ ಸಾಕು ಸಿಗಲಿದೆ ಸರ್ಕಾರಿ ಕೆಲಸ, ಪೋಸ್ಟ್ ಆಫೀಸ್ ಹುದ್ದೆ! ಅರ್ಜಿ ಸಲ್ಲಿಸಿ

ಮಾತೃತ್ವ ವಂದನಾ ಯೋಜನೆಯ ಅರ್ಹತೆಗಳು:

*ಈ ಯೋಜನೆಯ ಲಾಭ ಪಡೆಯಲು ಬಯಸುವ ಮಹಿಳೆ ನಮ್ಮ ದೇಶದ ಪ್ರಜೆಯೇ ಆಗಿರಬೇಕು

*ಗರ್ಭಿಣಿ ಮಹಿಳೆಯ ವಯಸ್ಸು 19 ವರ್ಷ ದಾಟಿರಬೇಕು.

*ಮಾತೃತ್ವ ವಂದನಾ ಯೋಜನೆಯ ಸೌಲಭ್ಯ ಗರ್ಭಿಣಿ ಸ್ತ್ರೀಯರಿಗೆ ಮಾತ್ರ ಸಿಗುತ್ತದೆ.

*ಗರ್ಭಿಣಿ ಮಹಿಳೆ ತನ್ನ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಪಾಸ್ ಬುಕ್ ಜೊತೆಗೆ ಲಿಂಕ್ ಮಾಡಿಸಿರಬೇಕು.

ಇದಿಷ್ಟು ಕೆಲಸ ಮಾಡಿರುವ ಮಹಿಳೆಯರು ಮಾತೃತ್ವ ವಂದನಾ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

60 ವರ್ಷ ಮೇಲ್ಪಟ್ಟವರಿಗೆ ಸಿಹಿ ಸುದ್ದಿ, ಪಿಂಚಣಿ ನಿಯಮದಲ್ಲಿ ದೊಡ್ಡ ಬದಲಾವಣೆ! ಇಲ್ಲಿದೆ ಮಾಹಿತಿ

All such women will get 11,000 rupees, Implementation of a new scheme by the Centre