ಉಚಿತ ಮನೆಗೆ ಅರ್ಜಿ ಸಲ್ಲಿಸಿ! ಗ್ರಾಮ ಪಂಚಾಯಿತಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿ

ಎಲ್ಲರ ಆರ್ಥಿಕ ಪರಿಸ್ಥಿತಿ (financial condition) ಉತ್ತಮವಾಗಿ ಇರುವುದಿಲ್ಲ, ಹಾಗಾಗಿ ಅದೆಷ್ಟೋ ವರ್ಷಗಳಿಂದ ಸಾಕಷ್ಟು ಜನ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡು ಬಂದಿದ್ದಾರೆ. ಬಡವರು ಮನೆ ನಿರ್ಮಾಣದ ಕನಸು ಕಂಡರೂ ಅದನ್ನ ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಆದರೆ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ದೇಶದಲ್ಲಿ ವಾಸಿಸುವ ಪ್ರತಿಯೊಂದು ಬಡ ಕುಟುಂಬವು ಕೂಡ ಸ್ವಂತ ಮನೆ (Own House) ಹೊಂದಿರಬೇಕು ಎನ್ನುವ ಕಾರಣಕ್ಕಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಈ ಯೋಜನೆಯಡಿಯಲ್ಲಿ ಯಾರೆಲ್ಲಾ ಸ್ವಂತ ಮನೆ ನಿರ್ಮಾಣ ಮಾಡಬಹುದು ಎನ್ನುವುದನ್ನು ನೋಡೋಣ.

ಸರ್ಕಾರವೇ ಕೊಡುತ್ತೆ 75,000 ವರೆಗಿನ ವಿದ್ಯಾರ್ಥಿವೇತನ! ಕೂಡಲೇ ಯೋಜನೆಗೆ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)

ಬಡವರು ಮತ್ತು ಮಧ್ಯಮ ವರ್ಗದವರ ಅನುಕೂಲಕ್ಕಾಗಿಯೇ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ, ನಿಜಕ್ಕೂ ಒಂದು ಅತ್ಯುತ್ತಮವಾಗಿರುವ ಯೋಜನೆ ಇದಾಗಿದ್ದು ಈಗಾಗಲೇ ಕೋಟ್ಯಾಂತರ ಮನೆ ನಿರ್ಮಾಣ ಮಾಡಿಕೊಟ್ಟು ಬಡವರು ಕೂಡ ತಮ್ಮ ಸ್ವಂತ ಸೂರು ಕಾಣುವಂತೆ ಸರ್ಕಾರ ಮಾಡಿದೆ ಎನ್ನಬಹುದು.

ಇನ್ನು ಐದು ವರ್ಷಗಳ ಅವಧಿಯಲ್ಲಿ ಎರಡು ಕೋಟಿಗೂ ಅಧಿಕ ಮನೆ ನಿರ್ಮಾಣ ಮಾಡಿ ದೇಶದಲ್ಲಿ ವಾಸಿಸುವ ಬಹುತೇಕ ಎಲ್ಲಾ ಕುಟುಂಬಗಳು ಸ್ವಂತ ಮನೆಯಲ್ಲಿಯೇ ವಾಸ ಮಾಡಬೇಕು ಎನ್ನುವ ಧ್ಯೆಯೋದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ.

ಪೋಸ್ಟ್ ಆಫೀಸ್ ನಲ್ಲಿ 2 ಲಕ್ಷ ರೂಪಾಯಿ ಇಟ್ರೆ ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ? ಇಲ್ಲಿದೆ ಮಾಹಿತಿ

ಗ್ರಾಮೀಣ ಭಾಗದ ಜನರಿಗೆ ಅನುಕೂಲ!

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ಎರಡು ಪ್ರಕಾರಗಳನ್ನು ಮಾಡಲಾಗಿದೆ, ಮೊದಲನೇದಾಗಿ ಗ್ರಾಮೀಣ ಭಾಗದ ಜನರಿಗಾಗಿ ಗ್ರಾಮೀಣ ಅವಾಸ್ ಯೋಜನೆ ಹಾಗೂ ನಗರ ಪ್ರದೇಶದ ಜನರಿಗಾಗಿ ನಗರ ಆವಾಸ್ ಯೋಜನೆ.

2019 ರಿಂದ ಆರಂಭವಾದ ಈ ಯೋಜನೆಯ ಅಡಿಯಲ್ಲಿ ಈಗಾಗಲೇ ಸಾಕಷ್ಟು ಮನೆ ನಿರ್ಮಾಣ ಮಾಡಲಾಗಿದ್ದು ಈಗ ಗ್ರಾಮೀಣ ಭಾಗದಲ್ಲಿ ವಾಸಿಸುವವರು ಸ್ವಂತ ಮನೆ (Own House) ನಿರ್ಮಾಣಕ್ಕೆ ಅರ್ಜಿ ಸಲ್ಲಿಸಬಹುದು.

ಈ ಹಸು ದಿನಕ್ಕೆ 50 ಲೀಟರ್ ಹಾಲು ಕೊಡುತ್ತೆ! ತಿಂಗಳಿಗೆ 50 ಸಾವಿರಕ್ಕೂ ಹೆಚ್ಚು ಆದಾಯ

Free Housing Schemeಯಾರು ಅರ್ಜಿ ಸಲ್ಲಿಸಬಹುದು?

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು
* ಆರ್ಥಿಕವಾಗಿ ದುರ್ಬಲರಾಗಿರುವ ವರ್ಗ
* ಕಡಿಮೆ ಆದಾಯದ ಗುಂಪು
* ಮಧ್ಯಮ ಆದಾಯದ ಗುಂಪು -1
* ಮಧ್ಯಮ ಆದಾಯದ ಗುಂಪು – 2

ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್
ರೇಷನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ವಿಳಾಸದ ಪುರಾವೆ

ಹೊಸ ಸ್ಕೀಮ್! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 5500 ರೂಪಾಯಿ

ಎಷ್ಟು ಸಿಗುತ್ತೆ ಸಬ್ಸಿಡಿ ಹಣ!

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಆಯಾ ವರ್ಗದ ವಾರ್ಷಿಕ ಆದಾಯದ ಆಧಾರದ ಮೇಲೆ ಸಬ್ಸಿಡಿ ಹಣವನ್ನು ನೀಡಲಾಗುವುದು.

ಗೃಹ ಸಾಲ (Home Loan) ಪಡೆದುಕೊಳ್ಳುವವರು ಈ ಸಬ್ಸಿಡಿ ಮೊತ್ತವನ್ನು ಪಡೆದುಕೊಳ್ಳುತ್ತಾ,ರೆ ಮೂರರಿಂದ 18 ಲಕ್ಷ ರೂಪಾಯಿಗಳ ವಾರ್ಷಿಕ ಆದಾಯ ಇರುವವರೆಗೂ ಕೂಡ 2.96 ಲಕ್ಷ ರೂಪಾಯಿಗಳ ಸಬ್ಸಿಡಿ ನೀಡಲಾಗುವುದು.

ಬಯಲು ಸೀಮೆ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ 1,20,000 ಹಾಗೂ ಗುಡ್ಡಗಾಡು ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವವರಿಗೆ 1,30,000ಗಳನ್ನ ನೀಡಲಾಗುವುದು.

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಅರ್ಜಿ ಸಲ್ಲಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಬಹುದು.

Apply for a free Housing Scheme, Register your name in Gram Panchayat

TRENDING ARTICLES1 / 4
Show More

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories