ಜೀವನ ಪರ್ಯಂತ ಉಚಿತ ಕರೆಂಟ್ ಯೋಜನೆಗೆ ಅರ್ಜಿ ಸಲ್ಲಿಸಿ! ಇಲ್ಲಿದೆ ಡೀಟೇಲ್ಸ್
ಕೇಂದ್ರ ಸರ್ಕಾರದ ಸೂರ್ಯ ಘರ್ ಯೋಜನೆಗೆ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು!
ರಾಜ್ಯ ಸರ್ಕಾರ 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ (Gruha jyothi scheme) ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಯೋಜನೆಯ ಅಡಿಯಲ್ಲಿ ಎಲ್ಲರಿಗೂ ಉಚಿತ ವಿದ್ಯುತ್ (free electricity) ಸೌಲಭ್ಯ ಸಿಗುವುದಿಲ್ಲ.
200 ಯೂನಿಟ್ ಗಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುವವರಿಗೆ, ಗೃಹಜ್ಯೋತಿ ಯೋಜನೆಯ ಅಡಿಯಲ್ಲಿ, ಉಚಿತ ವಿದ್ಯುತ್ ಸಿಗುವುದಿಲ್ಲ. ಅಂಥವರಿಗಾಗಿಯೇ ಕೇಂದ್ರ ಸರ್ಕಾರ (Central government) ಮತ್ತೊಂದು ಹೊಸ ಯೋಜನೆಯನ್ನು ಪರಿಚಯಿಸಿದ್ದು ಅದುವೇ ಸೂರ್ಯೋದಯ ಯೋಜನೆ.
ಜಸ್ಟ್ 1 ಸಾವಿರ ಹೂಡಿಕೆ ಮಾಡಿದ್ರು ಸಾಕು, ಪ್ರತಿ ತಿಂಗಳು ಸಿಗುತ್ತೆ 20 ಸಾವಿರ ಆದಾಯ
ಸೂರ್ಯೋದಯ ಯೋಜನೆಯ ಪ್ರಯೋಜನಗಳು!
ಸೂರ್ಯಘರ್ ಯೋಜನ ಅಥವಾ ಸೂರ್ಯೋದಯ ಯೋಜನೆ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಸುಮಾರು ಒಂದು ಕೋಟಿ ಮನೆಗಳ ಮೇಲ್ಚಾವಣಿಯ ಮೇಲೆ ಉಚಿತ ಸೋಲಾರ್ ಪ್ಯಾನೆಲ್ (solar panel) ಅಳವಡಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು ಈ ನಿಟ್ಟಿನಲ್ಲಿ ಸೋಲಾರ್ ಪ್ಯಾನೆಲ್ (Solar Panel) ಅಳವಡಿಸಿಕೊಳ್ಳುವ ಕುಟುಂಬಕ್ಕೆ 40 ರಿಂದ 60%ವರಿಗೆ ಸರ್ಕಾರ ನೀಡುತ್ತದೆ ಹಾಗೂ ಉಳಿದ ಹಣವನ್ನು ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು.
ಸುಮಾರು 25 ವರ್ಷಗಳವರೆಗೆ ಸೋಲಾರ್ ಪ್ಯಾನೆಲ್ ಉಪಯೋಗಕ್ಕೆ ಬರಲಿದ್ದು, ಸೋಲಾರ್ ಪ್ಯಾನೆಲ್ ಅಳವಡಿಕೆಗೆ ತೆಗೆದುಕೊಂಡು ಸಾಲ ಐದರಿಂದ ಆರು ವರ್ಷಗಳಲ್ಲಿ ತೀರಿಸಬಹುದು ಹಾಗೂ ಉಳಿದ 20 ವರ್ಷಗಳ ಸುಧೀರ್ಘ ಸಮಯ 300 ಯೂನಿಟ್ ವರೆಗೂ ಉಚಿತ ವಿದ್ಯುತ್ ಬಳಸಿಕೊಳ್ಳಬಹುದು ಅಷ್ಟೇ ಅಲ್ಲ 15,000ಗಳನ್ನು ವಿದ್ಯುತ್ ಮಾರಾಟದಿಂದಲೇ ಪ್ರತಿ ತಿಂಗಳು ಪಡೆಯಬಹುದು.
ವರ್ಷಕ್ಕೆ 6 ಲಕ್ಷ ಲಾಭ ಕೊಡುತ್ತೆ ಈ ಬಿಸಿನೆಸ್! ಕಡಿಮೆ ಬಂಡವಾಳ, ಕೈತುಂಬಾ ಆದಾಯ
ಸರ್ಕಾರದಿಂದ ಎಷ್ಟು ಸಿಗುತ್ತೆ ಸಬ್ಸಿಡಿ?
ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸಲು ಕನಿಷ್ಠ 10 ಚದರ್ ಮೀಟರ್ ಜಾಗ ಬೇಕು ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನೆಲ್ ಅಳವಡಿಕೆಗೆ, 40% ಸಬ್ಸಿಡಿ ಪಡೆಯಬಹುದು ಹಾಗೂ ಕಂಪನಿಗಳ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವುದಾದರೆ 60% ವರೆಗೆ ಸರಕಾರ ಸಬ್ಸಿಡಿ ನೀಡಲಿದೆ ಒಟ್ಟಾರೆಯಾಗಿ ಗರಿಷ್ಠ 78,000ಗಳ ವರೆಗೆ ಸಬ್ಸಿಡಿ ಹಣವನ್ನು ಪಡೆಯಬಹುದು.
ಇನ್ನು ಕೇಂದ್ರ ಸರ್ಕಾರವೇ ಸೂಚಿಸಿದ ಕಂಪನಿಯ ಮೂಲಕ ನೀವು ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಬಹುದು. ಹಾಗೂ ಈ ಯೂನಿಟ್ ನಲ್ಲಿ ಏನೇ ಸಮಸ್ಯೆ ಬಂದರೂ ಕೂಡ ಅವರೇ ಬಂದು ಉಚಿತವಾಗಿ ಸರಿ ಮಾಡಿ ಕೊಡುತ್ತಾರೆ. ಹಾಗಾದ್ರೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಎಲ್ಲಿ ಅರ್ಜಿ ಸಲ್ಲಿಸಬಹುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು ಅದಕ್ಕೆ ಎಲ್ಲಿದೆ ಉತ್ತರ.
ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಸಿನೆಸ್ ಮಾಡಿ! ಪ್ರತಿ ತಿಂಗಳು 80,000 ಆದಾಯ
ಅಂಚೆ ಕಚೇರಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಅರ್ಜಿ ಸಲ್ಲಿಸಿ!
ಕೇಂದ್ರ ಸರ್ಕಾರ ಅಧಿಕೃತ ವೆಬ್ಸೈಟ್ ಆಗಿರುವ, https://pmsuryaghar.gov.in/ ಈ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು ಆದರೆ ಎಷ್ಟೋ ಬಾರಿ ತಾಂತ್ರಿಕ ಸಮಸ್ಯೆಗಳಿಂದ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆಗದೆ ಇರಬಹುದು ಅಂತಹ ಸಂದರ್ಭದಲ್ಲಿ ನೀವು ಹತ್ತಿರದ ಅಂಚೆ ಕಚೇರಿಗೆ ಹೋಗಿ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಇದರಿಂದ ಸರ್ಕಾರದ ಸಬ್ಸಿಡಿ ನಿಮ್ಮ ಖಾತೆಗೆ (Bank Account) ನೇರವಾಗಿ ಜಮಾ ಆಗುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಉಚಿತ ವಿದ್ಯುತ್ ಯೋಜನೆ ಸ್ಥಗಿತಗೊಂಡರೂ ಕೂಡ ಸೋಲಾರ್ ಪ್ಯಾನೆಲ್ ನಿಮ್ಮ ಮನೆಯಲ್ಲಿ ಇದ್ದರೆ ವಿದ್ಯುತ್ ಗೆ ಮಾತ್ರ ಯಾವುದೇ ಸಮಸ್ಯೆ ಆಗುವುದಿಲ್ಲ.
ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ; ಹೊಸ ರೂಲ್ಸ್
Apply for Lifetime Free Electricity Scheme, Here are the details