Bank Holidays: ಬ್ಯಾಂಕ್ ಗ್ರಾಹಕರಿಗೆ ಅಲರ್ಟ್! ಈ ವಾರ ಬ್ಯಾಂಕ್ಗಳಿಗೆ ಸಾಲು-ಸಾಲು ರಜೆಗಳು
ಈ ವಾರದಲ್ಲಿ ಬ್ಯಾಂಕ್ ಹೋಗುವ ಗ್ರಾಹಕರಿಗೆ ಮುಖ್ಯ ಎಚ್ಚರಿಕೆ ಕೆಲವು ನಗರಗಳಲ್ಲಿ ಹಬ್ಬ ಮತ್ತು ರಾಷ್ಟ್ರೀಯ ಕಾರಣಗಳಿಂದ ಸತತ ಮೂರು ದಿನಗಳು ಬ್ಯಾಂಕ್ ಶಾಖೆಗಳು ಮುಚ್ಚಿರುವ ಸಾಧ್ಯತೆ ಇರುವುದರಿಂದ ಮುಂಚಿತ ಯೋಜನೆ ಮಾಡಿಕೊಂಡು ಸಮಯ ಹಣ ಉಳಿಸಿಕೊಳ್ಳಿ ಎಂದು ಆರ್ಬಿಐ ಸೂಚನೆ
Bank Holidays: ಈ ವಾರ ಬ್ಯಾಂಕ್ ಸಂಬಂಧಿತ ಕೆಲಸಗಳನ್ನು ಯೋಜಿಸುತ್ತಿರುವವರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಕೆಲವು ದಿನಗಳಲ್ಲಿ ನಿರಂತರ ರಜೆಗಳಿರುವುದರಿಂದ, ಶಾಖೆಗಳಿಗೆ ತೆರಳುವ ಮುನ್ನ ಗ್ರಾಹಕರು ಸ್ವಲ್ಪ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪ್ರಕಟಿಸಿರುವ ಅಧಿಕೃತ ರಜೆ ಪಟ್ಟಿ ಪ್ರಕಾರ, ಜನವರಿ 19ರಿಂದ ಆರಂಭವಾಗುವ ವಾರದಲ್ಲಿ ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ಬ್ಯಾಂಕ್ ರಜೆಗಳು ಜಾರಿಯಲ್ಲಿರುತ್ತವೆ. ಹಬ್ಬಗಳು ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಕಾರಣದಿಂದ ಈ ರಜೆಗಳು ಘೋಷಿಸಲ್ಪಟ್ಟಿವೆ.
ಇದನ್ನೂ ಓದಿ: ಚಿನ್ನದ ಬೆಲೆ ಇಂದು ಮತ್ತೆ ಇಳಿಕೆ; ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿ ನಗರವಾರು ದರ ಮಾಹಿತಿ
ಜನವರಿ 23ರಂದು ಈ ನಗರಗಳಲ್ಲಿ ಬ್ಯಾಂಕ್ ಬಂದ್
ಜನವರಿ 23 ಶುಕ್ರವಾರ ಅಗರ್ತಲಾ, ಭುವನೇಶ್ವರ್ ಮತ್ತು ಕೋಲ್ಕತಾದ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ. ಈ ದಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ, ಸರಸ್ವತಿ ಪೂಜೆ, ಬಸಂತ್ ಪಂಚಮಿ ಸೇರಿದಂತೆ ಸ್ಥಳೀಯ ಹಬ್ಬಗಳ ಕಾರಣ ರಜೆ ನೀಡಲಾಗಿದೆ. ಆದರೆ ಈ ನಗರಗಳನ್ನು ಹೊರತುಪಡಿಸಿ ಉಳಿದ ಭಾಗಗಳಲ್ಲಿ ಬ್ಯಾಂಕ್ ಸೇವೆಗಳು ಸಾಮಾನ್ಯವಾಗಿರುತ್ತವೆ.
ಜನವರಿ 24 ಮತ್ತು 26ರಂದು ರಾಷ್ಟ್ರಮಟ್ಟದ ರಜೆ
ಜನವರಿ 24 ನಾಲ್ಕನೇ ಶನಿವಾರವಾಗಿರುವುದರಿಂದ ದೇಶದಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳು ಬಂದ್ ಆಗುತ್ತವೆ. ಅದರ ಮುಂದಿನ ದಿನ ಭಾನುವಾರವೂ ಬ್ಯಾಂಕ್ ರಜೆ. ನಂತರ ಜನವರಿ 26ರಂದು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ರಜೆ ಜಾರಿಯಲ್ಲಿರುತ್ತದೆ.
ಈ ಕಾರಣಗಳಿಂದ ಬ್ಯಾಂಕ್ಗೆ ಸಂಬಂಧಿಸಿದ ಮಹತ್ವದ ಕೆಲಸಗಳಿದ್ದರೆ, ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಉತ್ತಮ. ಡಿಜಿಟಲ್ ಸೇವೆಗಳನ್ನು ಬಳಸುವುದರಿಂದ ಅನಗತ್ಯ ತೊಂದರೆ ತಪ್ಪಿಸಬಹುದು.



