ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಸೇಲ್! ಮೊಬೈಲ್ ಫೋನ್ ಗಳ ಭರ್ಜರಿ ಆಫರ್ಸ್
ಸೆಪ್ಟೆಂಬರ್ 22 ರಿಂದ ಫ್ಲಿಪ್ಕಾರ್ಟ್, ಅಮೆಜಾನ್ನಲ್ಲಿ ನಡೆಯಲಿರುವ ದೊಡ್ಡ ಸೇಲ್ ಮೂಲಕ ನಿಮಗೆ ಬಂಪರ್ ಡಿಸ್ಕೌಂಟ್ಗಳೊಂದಿಗೆ ಫ್ಲಾಗ್ಶಿಪ್ ಮೊಬೈಲ್ಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಅವಕಾಶ ಸಿಕ್ಕಿದೆ. ಸ್ಮಾರ್ಟ್ಫೋನ್ ಪ್ರಿಯರಿಗೆ ಇದು ಭರ್ಜರಿ ಅವಕಾಶ.

ಈ ಬಾರಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ನಲ್ಲಿ ಸೆಪ್ಟೆಂಬರ್ 22ರಿಂದ ಪ್ರಾರಂಭವಾಗುತ್ತಿರುವ ಬಿಗ್ ಬಿಲಿಯನ್ ಡೇ ಸೇಲ್ ನಿಮಗಾಗಿ ಫ್ಲಾಗ್ಶಿಪ್ ಮೊಬೈಲ್ಗಳನ್ನು (Smartphones) ಅದ್ಭುತ ಬೆಲೆಗೆ ಖರೀದಿಸಲು ಅವಕಾಶ ಕೊಟ್ಟಿದೆ. ಐಫೋನ್, Samsung, ಗೂಗಲ್ ಪಿಕ್ಸೆಲ್ ಸೇರಿದಂತೆ ಹಲವು ಬ್ರಾಂಡ್ ಫೋನ್ಗಳ ಮೇಲೆ ಅತ್ಯುತ್ತಮ ಡಿಸ್ಕೌಂಟ್ಗಳನ್ನು ಪಡೆಯಬಹುದಾಗಿದೆ.
ಈ ಮಾರಾಟದಲ್ಲಿ ಐಫೋನ್ 16 ಪ್ರೋ ಸೀರೀಸ್ ವಿಶೇಷ ಗಮನ ಸೆಳೆಯುತ್ತಿದೆ. ಐಫೋನ್ 17 ಬಿಡುಗಡೆಯಾದ ಹಿನ್ನೆಲೆಯಲ್ಲಿ, 16 ಪ್ರೋ ಸುಮಾರು ₹70,000ಕ್ಕೆ ಲಭ್ಯವಿರಲಿದೆ. ಇದರಲ್ಲಿ ಸಂಪೂರ್ಣ ಟೈಟಾನಿಯಂ ಬಾಡಿ, ಶಕ್ತಿಶಾಲಿ A18 ಪ್ರೋ ಚಿಪ್, ಪ್ರೀಮಿಯಂ ಕ್ಯಾಮೆರಾ ಸೆಟಪ್ ಮತ್ತು ಉತ್ತಮ ಬ್ಯಾಟರಿ ಪರ್ಫಾರ್ಮೆನ್ಸ್ ಒಳಗೊಂಡಿದೆ. ಪ್ರೋ ಮ್ಯಾಕ್ಸ್ ಆಪ್ಷನ್ ಬೇಕಾದರೆ ₹90,000 ದಲ್ಲಿಯೇ ಲಭ್ಯ.
Samsung Galaxy S24 ಮತ್ತು S25 ಅಲ್ಟ್ರಾ ಕೂಡ ಬೇಸಿಕ್ ಬಡ್ಜೆಟ್ ಸೆಗ್ಮೆಂಟ್ನಲ್ಲಿ ಲಭ್ಯ. S24 ನಲ್ಲಿ 6.1 ಇಂಚಿನ AMOLED ಡಿಸ್ಪ್ಲೇ, IP68 ರೇಟಿಂಗ್, Snapdragon 83 ಪ್ರೊಸೆಸರ್ ಸೇರಿವೆ. S25 ಅಲ್ಟ್ರಾದಲ್ಲಿ 200MP ಕ್ಯಾಮೆರಾ, QHD+ ಡಿಸ್ಪ್ಲೇ ಮತ್ತು LPDDR5X RAM ಇದೆ. ಆಂಡ್ರಾಯ್ಡ್ ಪ್ರಿಯರಿಗೆ ಉತ್ತಮ ಆಯ್ಕೆಗಳು.
ಇತರ ಆಕರ್ಷಕ ಡೀಲ್ಸ್ಗಳಲ್ಲಿ Google Pixel 9 ಇದೆ, ₹40,000 ಕ್ಕೆ ಲಭ್ಯ. 6.99 ಇಂಚಿನ OLED ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು Tensor Chip ಇದೆ. ಜೊತೆಗೆ Nothing Phone (3a) ಕೂಡ ಗಮನ ಸೆಳೆಯುತ್ತಿದೆ – ₹40,000–₹45,000 ರಲ್ಲಿ ಖರೀದಿಸಬಹುದಾದ ಈ ಮೊಬೈಲ್ 6.67 ಇಂಚಿನ OLED ಡಿಸ್ಪ್ಲೇ, 5100mAh ಬ್ಯಾಟರಿ ಹೊಂದಿದೆ.
ಅದರ ಜೊತೆಗೆ, Realme GT ಸರಣಿಯ ಹಾಗೂ 13 ಸಿರೀಸ್ ಫೋನ್ಗಳ ಮೇಲೂ ಉತ್ತಮ ಡಿಸ್ಕೌಂಟ್ಗಳು ಲಭ್ಯವಾಗುವ ಸಾಧ್ಯತೆ ಇದೆ. ವಿಶೇಷವಾಗಿ ಕ್ರೆಡಿಟ್ ಕಾರ್ಡ್ (Credit Card) ಬಳಸಿದರೆ ಹೆಚ್ಚುವರಿ ಡಿಸ್ಕೌಂಟ್ ಸಿಗಲಿದೆ. ಈ ಬಾರಿ ನಿಮ್ಮ ಇಷ್ಟದ ಫೋನ್ ಅನ್ನು ಕಡಿಮೆ ಬೆಲೆಗೆ ಖರೀದಿಸಲು ಇದು ಉತ್ತಮ ಅವಕಾಶ.
Best Flagship Mobile Deals on Flipkart and Amazon Sale



