ಹಿರಿಯ ನಾಗರಿಕರಿಗೆ ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್! ಹೊಸ ಉಳಿತಾಯ ಯೋಜನೆ
ಪ್ರತಿಯೊಬ್ಬರೂ ದುಡಿಯುವುದೇ ನಮ್ಮ ಮುಂದಿನ ಭವಿಷ್ಯ (future) ಚೆನ್ನಾಗಿರಬೇಕು ಎನ್ನುವ ಸಲುವಾಗಿ. ಹಾಗಾಗಿಯೇ ದುಡಿದ ಹಣದಲ್ಲಿ ಸ್ವಲ್ಪ ಭಾಗವನ್ನು ಉಳಿತಾಯ (savings) ಮಾಡಲು ಇಚ್ಚಿಸುತ್ತಾರೆ.
ಹೀಗೆ ಉಳಿತಾಯ ಮಾಡಿದ ಹಣ ಜೇಬಿನಲ್ಲೇ ಇದ್ದರೆ ಯಾವುದಾದರೂ ಕೆಲಸಕ್ಕೆ ಖಾಲಿಯಾಗಿಬಿಡುತ್ತದೆ. ಹಾಗಾಗಿ ಇಂತಹ ಹಣವನ್ನು ಒಂದು ಒಳ್ಳೆಯ ಕಡೆ ಹೂಡಿಕೆ (investment) ಮಾಡಿದರೆ ಆ ಹಣವು ಉಳಿಯುತ್ತದೆ. ಜೊತೆಗೆ ಹೆಚ್ಚಿನ ಲಾಭವು ದೊರೆಯುತ್ತದೆ.
ಈ 5 ಬ್ಯಾಂಕುಗಳಲ್ಲಿ ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತಿದೆ ಪರ್ಸನಲ್ ಲೋನ್!
ಈಗ ಬೇಕಾದಷ್ಟು ಖಾಸಗಿ ಕಂಪನಿಗಳು ಹೂಡಿಕೆ ಪ್ರೋತ್ಸಾಹಿಸುತ್ತವೆ. ಆದರೆ ಇವುಗಳನ್ನು ಪೂರ್ಣವಾಗಿ ನಂಬಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸರ್ಕಾರಿ ಭದ್ರತೆ ಇರುವ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣವು ಭದ್ರವಾಗಿರುತ್ತದೆ.
ಈಗ ಅಂಚೆ ಕಚೇರಿಯಲ್ಲಿ ಹಿರಿಯ ನಾಗರೀಕರಿಗಾಗಿ ಹೊಸ ಯೋಜನೆಯೊಂದನ್ನು ಪರಿಚಯಿಸಿದ್ದಾರೆ. ಹಾಗಾದರೆ ಆ ಯೋಜನೆ ಯಾವುದು, ಆ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಏನೇನು ಲಾಭ ಸಿಗುತ್ತದೆ ಎಂದು ನೋಡೋಣ.
ಹಿರಿಯ ನಾಗರೀಕರ ಉಳಿತಾಯ ಯೋಜನೆ: (savings plan for senior citizen)
ಅಂಚೆ ಇಲಾಖೆ (Post office) ಯಿಂದ ಹಿರಿಯ ನಾಗರೀಕರಿಗಾಗಿಯೇ ಉಳಿತಾಯ ಯೋಜನೆ ಜಾರಿಗೆ ತರಲಾಗಿದೆ. ಇದನ್ನು ಅಂಚೆ ಕಚೇರಿಯಲ್ಲಿ ತೆರೆಯುವುದರಿಂದ ನಿಮ್ಮ ಹಣ ಭದ್ರವಾಗಿರುತ್ತದೆ. ಯಾವುದೇ ರೀತಿಯ ಅಂಜಿಕೆ ಬೇಡ. ಈಗ ಗರಿಷ್ಟ ಠೇವಣಿ ಮಿತಿ ಹಾಗೂ ಅದರ ಮೇಲೆ ಗಳಿಸಿದ ಬಡ್ಡಿಯ ಹೆಚ್ಚಳದೊಂದಿಗೆ ಯೋಜನೆ ಹಿಂದಿನ ಯೋಜನೆಗಿಂತ ಆಕರ್ಷಕವಾಗಿದೆ.
ಹಸು, ಕುರಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ಸಾಲ
ಬಡ್ಡಿದರ, ಠೇವಣಿ ಮಿತಿ ಮತ್ತು ಅರ್ಹತೆ:
ಈಗ ಹಿರಿಯ ನಾಗರೀಕರ ಉಳಿತಾಯ ಯೋಜನೆಯ ಠೇವಣಿ (deposit) ಮಿತಿಯನ್ನು 3೦ ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಈ ಯೋಜನೆ ಆರಂಭವಾದಾಗ ಅದರ ಮಿತಿ 15 ಲಕ್ಷ ರೂ. ಇತ್ತು. ಈ ವರ್ಷ ಮಂಡಿಸಿದ ಬಜೆಟ್ನಲ್ಲಿ ಈ ಮಿತಿ ಹೆಚ್ಚಳ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವರು ಘೋಷಣೆ ಮಾಡಿದ್ದಾರೆ. ಕಳೆದ ವರ್ಷ ಏಪ್ರಿಲ್ 1ರಿಂದ ಈ ಯೋಜನೆ ಅಡಿಯಲ್ಲಿ ಠೇವಣಿ ಇಡುವ ಹಣಕ್ಕೆ ವಾರ್ಷಿಕವಾಗಿ ಶೇ. 8.೦2 ರಷ್ಟು ಬಡ್ಡಿ ನೀಡಲಾಗುತ್ತಿದೆ. ಈ ಬಡ್ಡಿದರ ಪ್ರತಿ ವರ್ಷ ಮಾರ್ಚ್ ತ್ರೈ ಮಾಸಿಕಕ್ಕೆ ಬದಲಾಗುತ್ತದೆ.
ಈ ಹಿರಿಯ ನಾಗರೀಕರ ಠೇವಣಿ ಯೋಜನೆ ಅಡಿಯಲ್ಲಿ ನೀವು ಕನಿಷ್ಟ ಒಂದು ಸಾವಿರ ರೂ.ನಿಂದ ಹೂಡಿಕೆ ಪ್ರಾರಂಭಿಸಬಹುದಾಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವುದರಿಂದ ಸೆಕ್ಷನ್ 8೦ ಸಿ ಅಡಿಯಲ್ಲಿ 1.5೦ ಲಕ್ಷ ರೂ. ವರೆಗಿನ ಆದಾಯ ಪಾವತಿಯಿಂದ ರಕ್ಷಣೆ ಪಡೆಯಬಹುದಾಗಿದೆ.
ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದಿಯಾ! ಇಲ್ವಾ? ಇಲ್ಲಿದೆ ಮಹತ್ವದ ಮಾಹಿತಿ
ಹಿರಿಯ ನಾಗರೀಕರು ಅದರಲ್ಲೂ ಪತಿ-ಪತ್ನಿ ಒಟ್ಟಾಗಿ ಈ ಖಾತೆ ತೆರೆಯುವುದರಿಂದ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಅಲ್ಲದೆ ಪತಿ ಪತ್ನಿ ಬೇರೆ ಬೇರೆ ಆಗಿಯೂ ಖಾತೆ ತೆರೆಯಬಹುದಾಗಿದೆ. ಒಟ್ಟಾಗಿ 6೦ ಲಕ್ಷ ರೂ.ಗಳ ವರೆಗೆ ಠೇವಣಿ ಇಡಬಹುದಾಗಿದೆ.
ಈ ಯೋಜನೆ ಅಡಿಯಲ್ಲಿ 5 ವರ್ಷಗಳ ಕಾಲ ಠೇವಣಿ ಇಡಬಹುದು. ಮುಂದುವರಿಸಲು ಬಯಸಿದರೆ ಮತ್ತೆ ಮೂರು ವರ್ಷಗಳ ಕಾಲ ಅದನ್ನೇ ಮುಂದುವರಿಸಲು ಸಹ ಅವಕಾಶ ಇದೆ. ಒಟ್ಟಿನಲ್ಲಿ ಹಿರಿಯ ನಾಗರಿಕರಿಗೆ ಹೇಳಿ ಮಾಡಿಸಿದಂತ ಉಳಿತಾಯ ಪ್ಲಾನ್ ಇದು.
Best investment plan for senior citizens, New savings plan
Our Whatsapp Channel is Live Now 👇