2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದ ನಂತರ ಹೆಣ್ಣು ಮಕ್ಕಳಿಗೂ ಕೂಡ ತಂದೆ ಹಾಗೂ ತಾಯಿಯ ಪಿತ್ರಾರ್ಜಿತ ಆಸ್ತಿ (Inherited property) ಯಲ್ಲಿ ಸಮಾನ ಪಾಲು ನೀಡಲೇಬೇಕು.
ಗಂಡು ಮಕ್ಕಳಿಗೆ ತಂದೆ ತಾಯಿಯ ಆಸ್ತಿ (parents property) ಯಲ್ಲಿ ಎಷ್ಟು ಹಕ್ಕು ಇದೆಯೋ ಹೆಣ್ಣು ಮಕ್ಕಳಿಗೂ ಕೂಡ ಅಷ್ಟೇ ಹಕ್ಕು ಇದೆ ಎನ್ನುವುದನ್ನು ಈಗಾಗಲೇ ಕಾನೂನಾತ್ಮಕವಾಗಿ ಆದೇಶ ಹೊರಡಿಸಲಾಗಿದೆ.
ಸರ್ಕಾರದಿಂದಲೇ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಜೊತೆಗೆ ತರಬೇತಿ; ಅರ್ಜಿ ಸಲ್ಲಿಸಿ
ತಂದೆಯ ಸ್ವಯಾರ್ಜಿತ ಆಸ್ತಿ (Freehold property) ಯಲ್ಲಿ ಗಂಡು ಮಕ್ಕಳಿಗಾಗಲಿ ಅಥವಾ ಹೆಣ್ಣು ಮಕ್ಕಳಿಗಾಗಲಿ ಹಕ್ಕು (rights) ಚಲಾಯಿಸಲು ಸಾಧ್ಯವಿಲ್ಲ. ಆದರೆ ತಂದೆ ಯಾರಿಗೆ ತನ್ನ ಸ್ವಯಾರ್ಜಿತ ಆಸ್ತಿಯನ್ನು ಕೊಡಲು ಇಷ್ಟಪಡುತ್ತಾರೋ ಅಂತವರು ಆ ಆಸ್ತಿಯನ್ನು ಪಡೆದುಕೊಳ್ಳಬಹುದು. ಹಾಗೂ ಯಾರಿಗೆ ಸ್ವಯಾರ್ಜಿತ ಆಸ್ತಿಯಲ್ಲಿ ಪಾಲು ಸಿಕ್ಕಿಲ್ಲವೂ ಅವರು ಪ್ರಶ್ನೆ ಮಾಡುವಂತಿಲ್ಲ.
ಆದರೆ ಪಿತ್ರಾರ್ಜಿತ ಆಸ್ತಿ ಹಾಗಲ್ಲ, ಇದು ನಾಲ್ಕು ತಲೆಮಾರುಗಳಿಂದ ಅಪ್ಪನಿಂದ ಮಗನಿಗೆ ಮಗನಿಂದ ಮೊಮ್ಮಗನಿಗೆ ವರ್ಗಾವಣೆ ಆಗುತ್ತದೆ. ಹಾಗಾಗಿ ಅಜ್ಜನ ಆಸ್ತಿ ಅಂದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ಸಮಾನ ಪಾಲು ಸಿಗುತ್ತದೆ.
ಮದುವೆ ಆದ ಮಹಿಳೆಗೆ ಆಸ್ತಿ ಹಕ್ಕು!
ಒಂದು ವೇಳೆ ಹೆಣ್ಣು ಮಗಳಿಗೆ ಮದುವೆ ಆದ ನಂತರವೂ ಕೂಡ ತಂದೆ ತಾಯಿಯ ಆಸ್ತಿಯಲ್ಲಿ ಹಕ್ಕು ಇದ್ದೆ ಇರುತ್ತದೆ. ಆದರೆ ನಿಮಗೆ ಗೊತ್ತಾ, ಮದುವೆಯಾಗಿ ಗಂಡನ ಮನೆಗೆ ಹೋದ ಹೆಣ್ಣು ಮಗಳಿಗೆ ತನ್ನ ಮಾವನ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕು ಇರುತ್ತದೆಯೇ? ಈ ಬಗ್ಗೆ ಭಾರತೀಯ ಕಾನೂನಿನಲ್ಲಿ ಏನು ಹೇಳಲಾಗಿದೆ ಎನ್ನುವುದನ್ನು ನೋಡೋಣ.
ಸ್ವಂತ ಬಿಸಿನೆಸ್ ಮಾಡೋರಿಗೆ ಹೊಸ ಯೋಜನೆ! 15 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ
ಮಾವನ ಆಸ್ತಿಯ ಮೇಲೆ ಸೊಸೆಗೆ ಹಕ್ಕು ಇದೆಯೇ? (Property rights on father in law property)
ಹೆಣ್ಣು ಮಕ್ಕಳಿಗೆ ಆಸ್ತಿ ಸಿಗಬೇಕು ಎನ್ನುವ ಕಾರಣಕ್ಕೆ 2005ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಹಿಂದೂ ಅವಿಭಜಿತ ಕುಟುಂಬದಲ್ಲಿ ಜೀವನ ನಡೆಸುವ ಹೆಣ್ಣುಮಗಳು ಗಂಡನ ಆಸ್ತಿಯಲ್ಲಿ ಪಾಲು ಹೊಂದಿರುತ್ತಾಳೆ. ಆದರೆ ಮಾವನ ಆಸ್ತಿಯಲ್ಲಿ ಆಕೆಗೆ ಸೀಮಿತ ಪಾಲು ಮಾತ್ರ ಸಿಗುತ್ತದೆ.
ಕೇವಲ 29 ರೂಪಾಯಿಗೆ ರೈಸ್, ಭಾರತ್ ಅಕ್ಕಿಗೆ ಮುಗಿಬಿದ್ದ ಜನ! ಎಲ್ಲಿ ಸಿಗುತ್ತೆ ಗೊತ್ತಾ?
ಮಾವನ ಆಸ್ತಿಯಲ್ಲಿ ಸೊಸೆ ಪಾಲು ಪಡೆದುಕೊಳ್ಳುವುದು ಹೇಗೆ?
ಇನ್ನು ಭಾರತೀಯ ಕಾನೂನಿನ ಪ್ರಕಾರ ನೋಡುವುದಾದರೆ, ಗಂಡನ ಮನೆಯಲ್ಲಿ ವಾಸಿಸಲು ಹೆಣ್ಣಿಗೆ ಅವಕಾಶ ಇದ್ದರೂ ಕೂಡ ಆಕೆ ಮಾವನ ಅಥವಾ ಅತ್ತೆಯ ಹೆಸರಿನಲ್ಲಿ ಇರುವ ಆಸ್ತಿಯ ಮೇಲೆ ಯಾವುದೇ ರೀತಿಯ ಹಕ್ಕನ್ನು ಹೊಂದಿರುವುದಿಲ್ಲ. ಗಂಡನ ಆಸ್ತಿಯಲ್ಲಿ ಆಕೆಗೆ ಪಾಲು ಸಿಗಬಹುದೇ ಹೊರತು ಅತ್ತೆ ಅಥವಾ ಮಾವನ ಆಸ್ತಿಯಲ್ಲಿ ಆಕೆಗೆ ಪಾಲು ಪಡೆದುಕೊಳ್ಳುವ ಹಕ್ಕು ಇರುವುದಿಲ್ಲ ಒಂದು ವೇಳೆ ಅವರಾಗಿಯೇ ಕೊಟ್ಟರೆ ಸಮಸ್ಯೆ ಇಲ್ಲ. ಆದರೆ ಆಕೆ ಕಾನೂನಾತ್ಮಕವಾಗಿ ಮಾವ ಅಥವಾ ಅತ್ತೆಯ ಆಸ್ತಿಯಲ್ಲಿ ಪಾಲು ಬೇಕು ಎಂದು ಪ್ರಶ್ನಿಸುವಂತಿಲ್ಲ.
ಒಂದು ವೇಳೆ ಅತ್ತೆ ಅಥವಾ ಮಾವ ಮರಣ ಹೊಂದಿದ ನಂತರ ಅವರ ಆಸ್ತಿ ಸಹಜವಾಗಿಯೇ ಮಗನಿಗೆ ಸೇರುತ್ತದೆ ಹಾಗೂ ಮಗನಿಂದ ಆತನ ಹೆಂಡತಿಗೆ ಬರಬಹುದು. ಗಂಡ ತೀರಿಕೊಂಡರೆ ಆಗಲು ಗಂಡನ ಆಸ್ತಿಯಲ್ಲಿ ಮಾತ್ರ ಸೊಸೆಗೆ ಪಾಲು ಇರುತ್ತದೆಯೇ ಹೊರತು ಮಾವ ಅಥವಾ ಅತ್ತೆ ಆಸ್ತಿಯಲ್ಲಿ ಪಾಲು ಕೇಳುವಂತಿಲ್ಲ.
ರೈತರಿಗೆ ಗುಡ್ ನ್ಯೂಸ್; ಸಿಗಲಿದೆ 3000 ಪಿಂಚಣಿ ಹಾಗೂ ಕೃಷಿಗಾಗಿ ಇನ್ನಷ್ಟು ಸೌಲಭ್ಯ!
ಇಲ್ಲಿ ಮದುವೆಯಾದ ಹೆಣ್ಣು ಮಕ್ಕಳಿಗೆ ಇರುವ ಒಂದೇ ಒಂದು ಬೆನಿಫಿಟ್ ಅಂದ್ರೆ ಮದುವೆಯಾದ ಬಳಿಕ ಅಥವಾ ಮದುವೆಯ ಸಂದರ್ಭದಲ್ಲಿ ಯಾರೇ ದುಬಾರಿ ಬೆಲೆಯ ಗಿಫ್ಟ್ ನೀಡಿದ್ದರೆ ಅದನ್ನು ಆಕೆ ಹಿಂಪಡೆಯುವ ಹಕ್ಕನ್ನು ಹೊಂದಿರುತ್ತಾಳೆ.
ಹಾಗಾಗಿ ಹೆಣ್ಣು ಮಕ್ಕಳು ಮದುವೆಯ ಸಂದರ್ಭದಲ್ಲಿ ತಮಗೆ ಸಿಕ್ಕ ಗಿಫ್ಟ್ ಅಥವಾ ಚಿನ್ನಾಭರಣಗಳ ಬಗ್ಗೆ ಸರಿಯಾಗಿ ಮಾಹಿತಿ ಹೊಂದಿರುವುದು ಒಳ್ಳೆಯದು. ವಿಚ್ಛೇದನದ (divorce) ಸಂದರ್ಭದಲ್ಲಿಯೂ ಕೂಡ ಆಕೆ ಈ ಎಲ್ಲಾ ವಸ್ತುಗಳನ್ನು ಹಿಂಪಡೆಯಲು ಅರ್ಹಳಾಗಿರುತ್ತಾಳೆ.
Is daughter-in-law right in father-in-law’s property
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.