ಸರ್ಕಾರದಿಂದಲೇ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಜೊತೆಗೆ ತರಬೇತಿ; ಅರ್ಜಿ ಸಲ್ಲಿಸಿ

Loan Scheme : ಸ್ವ-ಉದ್ಯೋಗ (own business ) ಮಾಡುವುದರಿಂದ ಜೀವನದಲ್ಲಿ ಸ್ವಾತಂತ್ರ್ಯವೂ ಇರುತ್ತದೆ. ಜೊತೆಗೆ ಹೆಚ್ಚಿನ ಆದಾಯವನ್ನು ಗಳಿಸಬಹುದು.

Loan Scheme : ಇಂದಿನ ದಿನದಲ್ಲಿ ಎಷ್ಟು ದುಡಿದರೂ ಸಾಲುವುದಿಲ್ಲ. ಆದರೂ ಸಾಲ (loan) ಮಾಡುವ ಪರಿಸ್ಥಿತಿ ಬರುತ್ತದೆ. ಅದರಲ್ಲೂ ಯಾವುದಾದರೂ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡರೆ ಅವರು ಕೊಡುವ ತಿಂಗಳ ಸಂಬಳದಲ್ಲೇ ಜೀವನ ನಡೆಸುವ ಅನಿವಾರ್ಯತೆ ಉಂಟಾಗುತ್ತದೆ.

ಆದರೆ ಸ್ವ-ಉದ್ಯೋಗ (own business ) ಮಾಡುವುದರಿಂದ ಜೀವನದಲ್ಲಿ ಸ್ವಾತಂತ್ರ್ಯವೂ ಇರುತ್ತದೆ. ಜೊತೆಗೆ ಹೆಚ್ಚಿನ ಆದಾಯವನ್ನು ಗಳಿಸಬಹುದು. ಇದಕ್ಕಾಗಿ ಸರ್ಕಾರಗಳು ಸಹ ಸಹಾಯಧನ ಜೊತೆಗೆ ತರಬೇತಿಯನ್ನು ನೀಡುತ್ತಿದೆ.

ಇದೀಗ ಪಿಎಂ ವಿಶ್ವಕರ್ಮ ಯೋಜನೆ (pradhanmantri Vishwakarma Yojana) ಅಡಿಯಲ್ಲಿ ಹೊಲಿಗೆ ವೃತ್ತಿ ಮಾಡುವವರಿಗೆ ಸಹಾಯಧನ ನೀಡಲಾಗುತ್ತಿದೆ. ಹಾಗಾದರೆ ಎಷ್ಟು ಸಹಾಯಧನ ನೀಡಲಾಗುತ್ತದೆ? ಅರ್ಜಿ ಸಲ್ಲಿಸುವುದು ಹೇಗೆ? ಯಾರು ಯಾರು ಅರ್ಜಿ ಸಲ್ಲಿಸಬಹುದು ಎಂದು ಈಗ ತಿಳಿದುಕೊಳ್ಳೋಣ.

ಸರ್ಕಾರದಿಂದಲೇ ಸಿಗಲಿದೆ ಉಚಿತ ಹೊಲಿಗೆ ಯಂತ್ರ, ಜೊತೆಗೆ ತರಬೇತಿ; ಅರ್ಜಿ ಸಲ್ಲಿಸಿ - Kannada News

ಸ್ವಂತ ಬಿಸಿನೆಸ್ ಮಾಡೋರಿಗೆ ಹೊಸ ಯೋಜನೆ! 15 ಲಕ್ಷ ಸಹಾಯಧನ! ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಮಿಷನ್ (free sewing machine) ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆ ಅಡಿಯಲ್ಲಿ ಗ್ರಾಮೀಣ ಹಾಗೂ ನಗರ ಭಾಗದ ಹದಿನೆಂಟು ವರ್ಗದ ಕುಶಲಕರ್ಮಿಗಳಿಗೆ ವಿಶ್ವಕರ್ಮ ಯೋಜನೆಯ ಮೂಲಕ ತರಬೇತಿ ನೀಡುವ ಜೊತೆಗೆ 15 ಸಾವಿರ ರೂ. ಕಿಟ್ ಅಥವಾ ಹೊಲಿಗೆ ಮಿಷನ್ ನೀಡಲಾಗುತ್ತಿದೆ.

ಅರ್ಜಿ ಸಲ್ಲಿಸಲು ಬಯಸುವವರು ಮೊದಲು ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿದ ನಂತರ ನೀವು ಯೋಜನೆಗೆ ಅರ್ಹರಾಗಿದ್ದರೆ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ. ನಂತರ ನಿಮಗೆ ಹೊಲಿಗೆ ಮಿಷನ್ ನೀಡಲಾಗುತ್ತದೆ. ಜೊತೆಗೆ ನಿಮಗೆ ಅಗತ್ಯ ಇದೆ ಎಂದಾದರೆ ಸೂಕ್ತ ತರಬೇತಿ (training) ಯನ್ನು ನೀಡಲಾಗುತ್ತದೆ.

ಕೇವಲ 29 ರೂಪಾಯಿಗೆ ರೈಸ್, ಭಾರತ್ ಅಕ್ಕಿಗೆ ಮುಗಿಬಿದ್ದ ಜನ! ಎಲ್ಲಿ ಸಿಗುತ್ತೆ ಗೊತ್ತಾ?

free sewing machineಯಾರ್ಯಾರು ಅರ್ಜಿ ಸಲ್ಲಿಸಬಹುದು?: (who can apply)

ಅರ್ಜಿದಾರರ ವಯಸ್ಸು ಕನಿಷ್ಟ 18 ವರ್ಷದ ಮೇಲ್ಪಟ್ಟಿರಬೇಕು.
ಅರ್ಜಿದಾರರ ಕುಟುಂಬದ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.
ಅರ್ಜಿದಾರರು ಅರ್ಜಿ ಸಲ್ಲಿಸುವ ಸಮಯದಲ್ಲಿ ಕಳೆದ 5 ವರ್ಷಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಸ್ವ-ಉದ್ಯೋಗ ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಂಡಿರಬಾರದು.
ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ಅರ್ಜಿ ಸಲ್ಲಿಸುವ ಹಾಗಿಲ್ಲ.

ಹೊಸ ಯೋಜನೆ! ಇಂತಹ ಮಹಿಳೆಯರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷಗಳ ಸಾಲ!

ಬೇಕಾಗುವ ದಾಖಲಾತಿಗಳು:

ಅರ್ಜಿದಾರರ ಆಧಾರ್ ಕಾರ್ಡ್ ನಕಲು, ರೇಶನ್ ಕಾರ್ಡ್ ನಕಲು, ಬ್ಯಾಂಕ್ ಪಾಸ್ಬುಕ್ ನಕಲು, ಸ್ವ-ಉದ್ಯೋಗದ ಪ್ರಮಾಣ ಪತ್ರ, ಅರ್ಜಿ ದಾರರ ಮೊಬೈಲ್ ಸಂಖ್ಯೆ ನೀಡಬೇಕಾಗುತ್ತದೆ.

ಈ ಎಲ್ಲ ದಾಖಲೆಗಳೊಂದಿಗೆ ನೀವು ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, ಅಟಲ್ಜೀ ಜನಸ್ನೇಹಿ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು. ಇಲ್ಲವೇ ಪ್ರಧಾನ ಮಂತ್ರಿ ವಿಶ್ವ ಕರ್ಮ ಯೋಜನೆ ವೆಬ್ಸೈಟ್ಗೆ (https://pmvishwakarma.gov.in/Login) ಭೇಟಿ ನೀಡಿ ಅಲ್ಲಿ ಕಾಣುವ ಅರ್ಜಿ ಫಾರಂನ್ನು ಸೂಕ್ತ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.

ಯಾವುದೇ ಬ್ಯಾಂಕ್ ನ ಎಟಿಎಂ ಕಾರ್ಡ್ ಇದ್ದವರಿಗೆ ಬಂಪರ್ ಗುಡ್ ನ್ಯೂಸ್

Free sewing machines will be provided by the government, along with training

Follow us On

FaceBook Google News

Free sewing machines will be provided by the government, along with training