ಈ 5 ಬ್ಯಾಂಕುಗಳಲ್ಲಿ ಅತಿ ಕಡಿಮೆ ಬಡ್ಡಿಯಲ್ಲಿ ಸಿಗುತ್ತಿದೆ ಪರ್ಸನಲ್ ಲೋನ್!

ಬ್ಯಾಂಕ್ಗಳಲ್ಲಿ ವೈಯಕ್ತಿಕ ಸಾಲ (Personal Loan), ಗೃಹ ಸಾಲ (Home Loan), ಚಿನ್ನದ ಮೇಲಿನ ಸಾಲ (Gold Loan), ವಾಹನ ಸಾಲ (Vehicle Loan) ಹೀಗೆ ಬೇರೆ ಬೇರೆ ಸಾಲ ಸೌಲಭ್ಯ ಇರುತ್ತದೆ.

Personal Loan : ಯಾವುದೇ ಹಣಕಾಸಿನ ತುರ್ತು ಪರಿಸ್ಥಿತಿ ಎದುರಾದರೆ ಸಹಜವಾಗಿಯೇ ಬ್ಯಾಂಕ್ (Bank) ನ ಮೂಲಕ ತುರ್ತು ಪರಿಸ್ಥಿತಿಗೆ ಅಗತ್ಯ ಆಗಿರುವ ಹಣವನ್ನು ಹೊಂದಿಸಿಕೊಳ್ಳುತ್ತೇವೆ, ಅಂದ್ರೆ ಬ್ಯಾಂಕ್ನಿಂದ ಸಾಲ (Bank loan) ತೆಗೆದುಕೊಳ್ಳುತ್ತೇವೆ . ಬ್ಯಾಂಕ್ಗಳಲ್ಲಿ ವೈಯಕ್ತಿಕ ಸಾಲ (Personal Loan), ಗೃಹ ಸಾಲ (Home Loan), ಚಿನ್ನದ ಮೇಲಿನ ಸಾಲ (Gold Loan), ವಾಹನ ಸಾಲ (Vehicle Loan) ಹೀಗೆ ಬೇರೆ ಬೇರೆ ರೀತಿಯ ಸಾಲ ಸೌಲಭ್ಯ ಇರುತ್ತದೆ.

ಬೇರೆ ಬೇರೆ ಬ್ಯಾಂಕ್ಗಳು ಬೇರೆ ಬೇರೆ ರೀತಿಯ ಸಾಲಕ್ಕೆ ವಿಭಿನ್ನವಾದ ಶರತ್ತುಗಳನ್ನು ನಿಗದಿಪಡಿಸಿರುತ್ತವೆ. ಜೊತೆಗೆ ಬಡ್ಡಿ ದರ (rate of interest) ದಲ್ಲಿಯೂ ವ್ಯತ್ಯಾಸ ಇರುತ್ತದೆ. ಇನ್ನು ನಿಮಗೆ ತುರ್ತು ಪರಿಸ್ಥಿತಿ (emergency situation) ಇದ್ದಾಗ ಅಥವಾ ಅನಿವಾರ್ಯತೆಯ ಸಂದರ್ಭದಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಲು ಬಯಸಿದರೆ, ಯಾವ ಬ್ಯಾಂಕ್ ಕಡಿಮೆ ದರಕ್ಕೆ ಸಾಲ ನೀಡುತ್ತದೆ ಹಾಗೂ ಯಾವ ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡರೆ ಸಿಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಹಸು, ಕುರಿ ಸಾಕಾಣಿಕೆ ಮಾಡೋರಿಗೆ ಸಿಗಲಿದೆ ಬಡ್ಡಿ ರಹಿತ 3 ಲಕ್ಷ ರೂಪಾಯಿ ಸಾಲ

ಈ ಪ್ರಮುಖ ಐದು ಬ್ಯಾಂಕ್ಗಳಲ್ಲಿ ನೀವು ಸುಲಭವಾಗಿ ವೈಯಕ್ತಿಕ ಸಾಲವನ್ನು ಪಡೆಯಬಹುದು ಇಲ್ಲಿ ಬಡ್ಡಿ ದರವು ಕಡಿಮೆ ಜೊತೆಗೆ ನೀವು ತಕ್ಷಣ ಸಾಲ ಪಡೆದುಕೊಳ್ಳಲು ಬ್ಯಾಂಕ್ ಸಹಕರಿಸುತ್ತದೆ.

ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank)

ಈ ಬ್ಯಾಂಕ್ ನಲ್ಲಿ ಶರತ್ತು ಬದ್ಧ ವೈಯಕ್ತಿಕ ಸಾಲವನ್ನು ಕಡಿಮೆ ಅವಧಿಯಲ್ಲಿ ಪಡೆದುಕೊಳ್ಳಬಹುದು. 40 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಸೌಲಭ್ಯ ಸಿಗುತ್ತದೆ ಹಾಗೂ ಮರುಪಾವತಿಗೆ ಮೂರರಿಂದ 72 ತಿಂಗಳುಗಳ ಅವಧಿ ಇರುತ್ತದೆ. ನೀವು ಎಷ್ಟು ಹಣವನ್ನು ಸಾಲವಾಗಿ ಪಡೆಯುತ್ತೀರಿ ಎನ್ನುವುದರ ಆಧಾರದ ಮೇಲೆ ಮರುಪಾವತಿಯ ಸಮಯ ನಿಗದಿಯಾಗುತ್ತದೆ. 10.75% ನಿಂದ 24% ವರೆಗೆ ಸಾಲ ಪಡೆದುಕೊಳ್ಳಬಹುದು. ಸಿಬಿಲ್ ಸ್ಕೂಲ್ ಉತ್ತಮವಾಗಿದ್ದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಲಭ್ಯವಿದೆ.

ಎಸ್ ಬಿ ಐ ಬ್ಯಾಂಕ್ (SBI Bank)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿದ್ದು 20 ಲಕ್ಷದ ವರೆಗೆ ಸುಲಭವಾಗಿ ವೈಯಕ್ತಿಕ ಸಾಲವನ್ನು ಮಂಜೂರು ಮಾಡುತ್ತದೆ ಹಾಗೂ 11.11% ನಿಂದ ಬಡ್ಡಿ ಆರಂಭವಾಗುತ್ತದೆ.

ಮಾವನ ಆಸ್ತಿಯಲ್ಲಿ ಸೊಸೆಗೆ ಹಕ್ಕು ಇದಿಯಾ! ಇಲ್ವಾ? ಇಲ್ಲಿದೆ ಮಹತ್ವದ ಮಾಹಿತಿ

ಐಸಿಐಸಿಐ ಬ್ಯಾಂಕ್ (ICICI Bank)

ಐಸಿಐಸಿಐ ಬ್ಯಾಂಕ್ ನಲ್ಲಿ 10.65% ನಿಂದ 16% ವರೆಗೆ ವೈಯಕ್ತಿಕ ಸಾಲದ ಮೇಲೆ ಬಡ್ಡಿ ದರ ವಿಧಿಸಲಾಗಿದೆ. ಗ್ರಾಹಕರು ಸಾಲದ 2.5% ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Personal Loanಕೋಟಕ್ ಮಹೀಂದ್ರಾ ಬ್ಯಾಂಕ್ (Kotak Mahindra Bank)

ಕೋಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ 10.99 ಪರ್ಸೆಂಟ್ ಬಡ್ಡಿ ದರದಲ್ಲಿ 50,000 ದಿಂದ 40 ಲಕ್ಷದವರೆಗೆ ವೈಯಕ್ತಿಕ ಸಾಲ ನೀಡಲಾಗುವುದು. ಗ್ರಾಹಕರು ತೆಗೆದುಕೊಂಡ ಸಾಲದ ಶೇಕಡ 3. ಸಂಸ್ಕರಣ ಶುಲ್ಕ (processing fee) ವನ್ನು ಪಾವತಿಸಬೇಕು.

ಸ್ವಂತ ಕೃಷಿ ಭೂಮಿ ಇರುವ ರೈತರಿಗೆ ಸರ್ಕಾರದಿಂದ ಸಿಗಲಿದೆ 25,000 ರೂಪಾಯಿ!

ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank)

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 12.75% ನಿಂದ 17.25% ವರೆಗಿನ ಬಡ್ಡಿ ದರ ವೈಯಕ್ತಿಕ ಸಾಲದ ಮೇಲೆ ವಿಧಿಸಲಾಗುತ್ತದೆ.

ಈ ಮೇಲಿನ ಬ್ಯಾಂಕುಗಳನ್ನು ಹೊರತುಪಡಿಸಿ ಇನ್ನೂ ಸಾಕಷ್ಟು ಬ್ಯಾಂಕ್ಗಳು ಸುಲಭ ವಯಕ್ತಿಕ ಸಾಲವನ್ನು ನೀಡುತ್ತದೆ. ನೀವು ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಸಾಲ ಪಡೆದುಕೊಳ್ಳಲು ಸಾಧ್ಯವಿದೆ ಅಥವಾ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಸಾಲ ಪಡೆಯಬಹುದು.

Personal loan is available at the lowest interest rate in these 5 banks