ಮಹಿಳೆಯರಿಗಾಗಿ ಭರ್ಜರಿ ಪೋಸ್ಟ್ ಆಫೀಸ್ ಸ್ಕೀಮ್ ಬಿಡುಗಡೆ! ಸಿಗುತ್ತೆ ಕೈತುಂಬಾ ಹಣ

ಹಣವನ್ನು ನೀವು ಅಂಚೆ ಕಚೇರಿಯಲ್ಲಿ (Post Office Scheme) ಹೂಡಿಕೆ ಮಾಡಿದ್ರೆ ನಿಮ್ಮ ಹಣ ಕೆಲವೇ ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ.

ಮಹಿಳೆಯರು, ಪತಿ ಮನೆ ಖರ್ಚು ನಿಭಾಯಿಸಲು ಕೊಡುವ ಹಣದಲ್ಲಿಯೇ ಸ್ವಲ್ಪ ಸ್ವಲ್ಪ ಉಳಿತಾಯ ಮಾಡಿ ಸೇವಿಂಗ್ಸ್ (savings) ಮಾಡುತ್ತಾರೆ. ಆದರೆ ಈ ರೀತಿ ಸೇವಿಂಗ್ಸ್ ಗಳು ಕೇವಲ ಅಡುಗೆ ಮನೆಯಲ್ಲಿ ಇರುವ ಸಾಸಿವೆ ಡಬ್ಬದ ಒಳಗೆ ಹಣ ಇಡುವುದಕ್ಕೆ ಸೀಮಿತವಾಗಿರುತ್ತೆ.

ಅದರ ಬದಲು ಅದೇ ಹಣವನ್ನು ನೀವು ಅಂಚೆ ಕಚೇರಿಯಲ್ಲಿ (Post Office Scheme) ಹೂಡಿಕೆ ಮಾಡಿದ್ರೆ ನಿಮ್ಮ ಹಣ ಕೆಲವೇ ವರ್ಷಗಳಲ್ಲಿ ದುಪ್ಪಟ್ಟಾಗುತ್ತದೆ. ಎಷ್ಟೇ ಕಡಿಮೆ ಮೊತ್ತ ಇದ್ದರೂ ಕೂಡ ನೀವು ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಬಹುದು.

ಕೇಂದ್ರ ಸರ್ಕಾರ ಮಹಿಳಾ ಸಮ್ಮಾನ್ ಪ್ರಮಾಣ ಪತ್ರ ಯೋಜನೆ ಆರಂಭಿಸಿದ್ದು ಈ ಯೋಜನೆಯ ಅಡಿಯಲ್ಲಿ ಉತ್ತಮ ಬಡ್ಡಿ ದರದಲ್ಲಿ ಹೆಣ್ಣು ಮಕ್ಕಳು ಆದಾಯ ಗಳಿಸಬಹುದು.

ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ 50 ಲಕ್ಷ ಸಹಾಯಧನ! ತಕ್ಷಣ ಅರ್ಜಿ ಸಲ್ಲಿಸಿ

ಏನಿದು ಮಹಿಳಾ ಸಮ್ಮಾನ್ ಸರ್ಟಿಫಿಕೇಟ್! (Mahila Samman savings certificate)

ಅಂಚೆ ಕಚೇರಿ (post office) ಸರ್ಕಾರದಿಂದಲೇ ನಡೆಯುವುದರಿಂದ ಯಾವುದೇ ಮಾರುಕಟ್ಟೆ ಅಪಾಯವಿಲ್ಲದೆ ನೀವು ಇದರಲ್ಲಿ ಹೂಡಿಕೆ ಮಾಡಬಹುದು. ಅದೇ ರೀತಿ ಈಗ ಹೊಸದಾಗಿ ಮಹಿಳಾ ಸಮ್ಮಾನ ಉಳಿತಾಯ ಯೋಜನೆ ಆರಂಭಿಸಲಾಗಿದ್ದು ಇದರಲ್ಲಿ ಹೂಡಿಕೆ ಮಾಡಿದ ಮಹಿಳೆಯರಿಗೆ 7.5% ಬಡ್ಡಿ ದರವನ್ನು ನೀಡಲಾಗುವುದು.

ಮಹಿಳೆಯರು ಕಡಿಮೆ ಅವಧಿಯಲ್ಲಿ ಹೂಡಿಕೆ ಮಾಡಿ ಉತ್ತಮ ಆದಾಯ ಗಳಿಸಿಕೊಳ್ಳುವ ಯೋಜನೆ ಆಗಿದೆ ಹಾಗಾದ್ರೆ ಈ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಕೇವಲ ಎರಡು ವರ್ಷಗಳ ಅವಧಿಯ ಹೂಡಿಕೆ!

ದೇಶದಲ್ಲಿ ವಾಸಿಸುವ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ಇದಾಗಿದೆ. ಅಂಚೆ ಕಚೇರಿಯಲ್ಲಿ ನೀವು ಮಹಿಳಾ ಸಮ್ಮಾನ ಉಳಿತಾಯ ಖಾತೆ ಆರಂಭಿಸಿದರೆ, ಎರಡು ವರ್ಷಗಳಲ್ಲಿ ಈ ಯೋಜನೆ ಮೆಚ್ಯೂರ್ಡ್ ಆಗುತ್ತದೆ. ನೀವು ಗರಿಷ್ಟ ಎರಡು ಲಕ್ಷ ರೂಪಾಯಿಗಳ ವರೆಗೆ ಸಿಂಗಲ್ ಪ್ರೀಮಿಯಂ ನಲ್ಲಿ ಪಾವತಿ ಮಾಡಬಹುದು.

ಮಹಿಳೆಯರ ಬಳಿ ಈ ದಾಖಲೆ ಇದ್ರೆ ಸಾಕು ಕೇಂದ್ರ ಸರ್ಕಾರವೇ ಕೊಡುತ್ತೆ 3 ಲಕ್ಷ ರೂಪಾಯಿ!

Post Office Scheme2023ರಲ್ಲಿ ಯೋಜನೆ ಆರಂಭವಾಯಿತು. ಯೋಜನೆಯಲ್ಲಿ ಮಹಿಳೆಯರು ಮಾತ್ರವಲ್ಲದೆ ಚಿಕ್ಕ ಮಕ್ಕಳ ಹೆಸರಿನಲ್ಲಿ ಅಂದರೆ ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳ ಹೆಸರಿನಲ್ಲಿಯೂ ಖಾತೆ ಆರಂಭಿಸಬಹುದು, ಆದರೆ ಇದಕ್ಕೆ ಪಾಲಕರು ತಮ್ಮ ಡಿಟೇಲ್ಸ್ ಕೊಟ್ಟು ಖಾತೆ ಆರಂಭಿಸಬೇಕು ಜೊತೆಗೆ ಗಾರ್ಡಿಯನ್ ಆಗಿರಬೇಕು.

ಇನ್ನು ಈ ಯೋಜನೆಯಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಎರಡು ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ 7.5% ಬಡ್ಡಿ ಸಿಗುತ್ತದೆ ಅಂದರೆ ಮೊದಲ ವರ್ಷದಲ್ಲಿ 15 ಸಾವಿರ ರೂಪಾಯಿ ಬಡ್ಡಿ ಹಾಗೂ ಎರಡನೇ ವರ್ಷದಲ್ಲಿ 16,125 ಗಳ ಬಡ್ಡಿ ಪಡೆಯಬಹುದು.

ಕೆನರಾ ಬ್ಯಾಂಕ್ ಅಕೌಂಟ್ ಹೊಂದಿದ್ರೆ ಇಲ್ಲಿದೆ ಬಂಪರ್ ಕೊಡುಗೆ! ನಿಮ್ಮ ಹಣ ಡಬಲ್ ಆಗುವ ಸ್ಕೀಮ್

ಅಂದರೆ ಎರಡು ವರ್ಷಗಳ ಅವಧಿಗೆ 2 ಲಕ್ಷ ರೂಪಾಯಿಗಳ ಹೂಡಿಕೆಗೆ ಸಂಪೂರ್ಣ 31,125 ರೂಪಾಯಿಗಳನ್ನು ಹೆಚ್ಚುವರಿಯಾಗಿ ಹಿಂಪಡೆಯಬಹುದು. ಅಂದರೆ ಎರಡು ವರ್ಷಗಳ ಬಳಿಕ ಮಹಿಳೆಯರು 2,31,125 ಗಳನ್ನು ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯ ಅಡಿಯಲ್ಲಿ ಹಿಂಪಡೆಯಬಹುದು. ಅಲ್ಲದೆ ಆದಾಯ ತೆರಿಗೆ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಲಭ್ಯವಿದೆ.

ಹಾಗಾದ್ರೆ ಇನ್ಯಾಕೆ ತಡ ನೀವು ಕೂಡ ಹಣ ಉಳಿತಾಯ ಮಾಡಲು ಬಯಸಿದರೆ ಅಂಚೆ ಕಚೇರಿಗೆ ಹೋಗಿ ಈ ಯೋಜನೆಯಡಿಯಲ್ಲಿ ನಿಮ್ಮ ಖಾತೆಯನ್ನು ಆರಂಭಿಸಿ ಹಾಗೂ ಕೈತುಂಬ ಆದಾಯ ಗಳಿಸಿ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಮಹಿಳೆಯರಿಗೆ ಸಿಗಲಿದೆ 25 ಲಕ್ಷ ಸಾಲ ಸೌಲಭ್ಯ

Best Post Office Scheme Launched for Women