ಕೇವಲ 100 ರೂಪಾಯಿ ಒಳಗೆ ಲಭ್ಯವಿರುವ ಬೆಸ್ಟ್ ರೀಚಾರ್ಜ್ ಪ್ಲಾನ್‌ಗಳು ಇವು!
ಇಂದಿನ ದಿನಗಳಲ್ಲಿ ಮಾಸಿಕ ರೀಚಾರ್ಜ್ ವೆಚ್ಚ ಹೆಚ್ಚಾಗಿದ್ದರೂ, ಕೇವಲ ಡೇಟಾ ಬಳಸುವವರಿಗೆ ₹100 ರೂಪಾಯಿ ಒಳಗಿನ ಅಗ್ಗದ ಮತ್ತು ಉಪಯುಕ್ತ ಪ್ಲಾನ್‌ಗಳು ಜಿಯೋ ಹಾಗೂ ಏರ್‌ಟೆಲ್‌ನಲ್ಲಿ ಲಭ್ಯವಿವೆ.

Recharge Plans: ರೀಚಾರ್ಜ್ ಪ್ಲಾನ್‌ಗಳ ದರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಒಂದು ತಿಂಗಳ ಮೊಬೈಲ್ ಪ್ಲಾನ್‌ಗೆ ಕನಿಷ್ಠ ₹200ಕ್ಕೂ ಹೆಚ್ಚು ವೆಚ್ಚವಾಗುತ್ತಿದೆ. ಆದರೆ ಕೇವಲ ಡೇಟಾ ಬಳಕೆದಾರರು ಅಥವಾ ಸಿಮ್ ಆಕ್ಟಿವ್ ಇಟ್ಟುಕೊಳ್ಳಬೇಕೆಂದು ಬಯಸುವವರು ₹100 ರೂಪಾಯಿ ಒಳಗಿನ ಅಗ್ಗದ ಪ್ಲಾನ್‌ಗಳನ್ನು ಆಯ್ಕೆಮಾಡಬಹುದು.
ಈ ರೀತಿಯ ಪ್ಲಾನ್‌ಗಳು ವಿಶೇಷವಾಗಿ ಆನ್‌ಲೈನ್ ಚಾಟ್, ವಾಟ್ಸಾಪ್ ಕಾಲಿಂಗ್ ಅಥವಾ ವೀಡಿಯೋ ಮೀಟಿಂಗ್‌ಗಳಂತಹ ಹಗುರ ಬಳಕೆಗೆ ಸೂಕ್ತ. ಜಿಯೋ ಮತ್ತು ಏರ್‌ಟೆಲ್ (Jio and Airtel) ಕಂಪನಿಗಳು ಈ ವಿಭಾಗದಲ್ಲಿ ಹಲವು ಹಗ್ಗದ ಮತ್ತು ಶಾರ್ಟ್ ವ್ಯಾಲಿಡಿಟಿ ಪ್ಯಾಕ್‌ಗಳನ್ನು ನೀಡುತ್ತಿವೆ.
ಜಿಯೋ ಕಂಪನಿಯು ₹39 ಪ್ಲಾನ್‌ನಡಿ ಮೂರು ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 3 ಜಿಬಿ ಡೇಟಾ ನೀಡುತ್ತಿದೆ. ಈ ಪ್ಲಾನ್ ಪ್ರಯಾಣದಲ್ಲಿರುವವರು ಅಥವಾ ಕೆಲವು ದಿನಗಳಿಗಷ್ಟೇ ಹೆಚ್ಚು ಡೇಟಾ ಬೇಕಾದವರಿಗೆ ಸೂಕ್ತವಾಗಿದೆ.
₹77 ಪ್ಲಾನ್‌ನಲ್ಲಿಯೂ 5 ದಿನಗಳ ವ್ಯಾಲಿಡಿಟಿಯೊಂದಿಗೆ 3 ಜಿಬಿ ಡೇಟಾ ಸಿಗುತ್ತದೆ. ಕೇವಲ ಒಂದು ದಿನಕ್ಕಷ್ಟೇ ಬೇಕಾದವರಿಗೆ ₹49 ಪ್ಲಾನ್ ಅತ್ಯುತ್ತಮ, ಇದರಲ್ಲಿ ಒಂದು ದಿನಕ್ಕೆ ಅನ್‌ಲಿಮಿಟೆಡ್ ಡೇಟಾ ಸೌಲಭ್ಯ ಇದೆ. ಇನ್ನೂ ₹29 ಪ್ಯಾಕ್‌ನಲ್ಲಿ ಎರಡು ದಿನಗಳಿಗಾಗುವ 2 ಜಿಬಿ ಡೇಟಾ ಸಿಗುತ್ತದೆ.
ಇದೇ ವೇಳೆ ಏರ್‌ಟೆಲ್ ಬಳಕೆದಾರರಿಗೆ ₹33 ಪ್ಲಾನ್ ಒಂದು ದಿನಕ್ಕೆ ಮಾತ್ರ 2 ಜಿಬಿ ಡೇಟಾ ಒದಗಿಸುತ್ತದೆ. ಹಗುರ ಬಳಕೆಯವರಿಗೆ ಇದು ಸೂಕ್ತ ಆಯ್ಕೆ. ₹77 ಪ್ಲಾನ್‌ನಲ್ಲಿ 5 ಜಿಬಿ ಡೇಟಾ ಸಿಗುತ್ತಿದ್ದು, ಇದರ ವ್ಯಾಲಿಡಿಟಿ 7 ದಿನಗಳು. ಇನ್ನೂ ₹100 ಪ್ಲಾನ್‌ನಲ್ಲಿ ಗ್ರಾಹಕರು 6 ಜಿಬಿ ಡೇಟಾವನ್ನು ತಿಂಗಳವರೆಗೂ ಬಳಸಬಹುದು.
ಒಟ್ಟಾರೆ, ಕರೆಗಳಿಗಿಂತ ಡೇಟಾ ಬಳಕೆ ಹೆಚ್ಚಿರುವ ಬಳಕೆದಾರರಿಗೆ ₹100 ರೂಪಾಯಿ ಒಳಗಿನ ಈ ಪ್ಲಾನ್‌ಗಳು ಹಣ ಉಳಿತಾಯದ ಜೊತೆಗೆ ಪ್ರಾಯೋಜಕ ಆಯ್ಕೆಗಳಾಗಿವೆ.
Best Recharge Plans Under 100



