ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸಲುವಾಗಿ ಬೇರೆ ಬೇರೆ ಬ್ಯಾಂಕ್ಗಳು (banks) ಬೇರೆ ಬೇರೆ ರೀತಿಯ ನಿಯಮಗಳನ್ನು (Bank rules) ಹೊಂದಿದ್ದು ಆ ಮೂಲಕ ಜನರಿಗೆ ಉತ್ತಮವಾದ ಸೇವೆ ನೀಡುತ್ತವೆ. ಗ್ರಾಹಕರು ಹೊಂದಿರುವ ಉಳಿತಾಯ ಖಾತೆಯಿಂದ (Savings Account) ಹಿಡಿದು ಬ್ಯಾಂಕಿನಲ್ಲಿ ಮಾಡುವ ಎಲ್ಲಾ ರೀತಿಯ ವ್ಯವಹಾರಗಳು ಕೂಡ, ಬೆಂಕಿನಿಂದ ಬ್ಯಾಂಕಿಗೆ ವಿಭಿನ್ನವಾಗಿರುತ್ತದೆ ಎನ್ನಬಹುದು.

ಬ್ಯಾಂಕ್ ನಲ್ಲಿ ಉಳಿತಾಯ ಖಾತೆಯನ್ನು (Bank savings account) ಹೊಂದಿದ್ದರೆ ಅದರಲ್ಲಿ ಕನಿಷ್ಠ ಮೊತ್ತ (minimum balance) ವನ್ನು ಕಾಯ್ದುಕೊಳ್ಳಲೇಬೇಕು. ಈ ಮೊತ್ತ ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ರೀತಿಯದ್ದಾಗಿರುತ್ತದೆ.

Bank holiday for 14 days in August, finish all work asap

ಇಂತಹ ಕಾರ್ಮಿಕರಿಗೆ ಸಿಗುತ್ತೆ 2 ಲಕ್ಷ ರೂಪಾಯಿ ಜೀವ ವಿಮೆ! ಕೂಡಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ನಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದೆ ಇದ್ದರೆ ಬ್ಯಾಂಕುಗಳು ದಂಡವನ್ನು ಕೂಡ ವಿಧಿಸಬಹುದು. ಅದರಲ್ಲೂ ಈ ಕೆಲವು ಪ್ರಮುಖ ಬ್ಯಾಂಕುಗಳಲ್ಲಿ ನೀವು ಖಾತೆಯನ್ನು ಹೊಂದಿದ್ದರೆ ಅದರ ಕನಿಷ್ಠ ಬ್ಯಾಲೆನ್ಸ್ ಹಾಗೂ ದಂಡದ ಬಗ್ಗೆ ತಿಳಿದುಕೊಳ್ಳಲೇಬೇಕು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; (State Bank of India – SBI)

ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ನೀವು ಉಳಿತಾಯ ಖಾತೆಯನ್ನು ಹೊಂದಿದ್ದರೆ ಗ್ರಾಮೀಣ ಭಾಗದಲ್ಲಿ ಒಂದು ಸಾವಿರ ರೂಪಾಯಿಗಳನ್ನು ಹಾಗೂ ಅರೆ ನಗರ ಭಾಗದಲ್ಲಿ 2000 ಹಾಗೂ ನಗರದಲ್ಲಿ ಇರುವ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ ಕನಿಷ್ಠ 3000 ರೂಪಾಯಿಗಳ ಕನಿಷ್ಠ ಮೊತ್ತ ಕಾಯ್ದುಕೊಳ್ಳಬೇಕು.

ನಂದಿನಿ ಹಾಲಿನ ಡೈರಿ ಆರಂಭಿಸಿ, ಲಕ್ಷಗಟ್ಟಲೆ ಹಣ ಗಳಿಸಿ! ಈ ರೀತಿ ಅರ್ಜಿ ಸಲ್ಲಿಸಿ

Bank Accountಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank)

ನೀವು ವಾಸಿಸುವ ಪ್ರದೇಶದ ಆಧಾರದ ಮೇಲೆ ಎಚ್ ಡಿ ಎಫ್ ಸಿ ಬ್ಯಾಂಕ್ ಖಾತೆಯ ಕನಿಷ್ಠ ನಿಗದಿಯಾಗುತ್ತದೆ. ಗ್ರಾಮೀಣ ಭಾಗದಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಇದ್ದು, ಅದರಲ್ಲಿ ನೀವು ಖಾತೆಯನ್ನು ಹೊಂದಿದ್ದರೆ 2,500 ಕನಿಷ್ಠ ಮೊತ್ತ ಹೊಂದಿರಬೇಕು. ಅರೆ ನಗರ ಭಾಗದಲ್ಲಿ ಇರುವ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದರೆ 5,000 ಕನಿಷ್ಠ ಮೊತ್ತ, ಹಾಗೂ ಮೆಟ್ರೋ ಭಾಗದಲ್ಲಿ ಬ್ಯಾಂಕ್ ಖಾತೆ ಹೊಂದಿದ್ದರೆ 10,000 ಕನಿಷ್ಠ ಮೊತ್ತವನ್ನು ನಿಮ್ಮ ಖಾತೆಯಲ್ಲಿ ಕಾಯ್ದುಕೊಳ್ಳಬೇಕಾಗುತ್ತದೆ.

ಚಿನ್ನದ ಬೆಲೆ ಭಾರೀ ಇಳಿಕೆ! ಚಿನ್ನ ಬೆಳ್ಳಿ ಖರೀದಿ ಮಾಡೋಕೆ ಇದುವೇ ಬೆಸ್ಟ್ ಟೈಮ್

ಐಸಿಐಸಿಐ ಬ್ಯಾಂಕ್ (ICICI Bank)

ದೇಶದ ಮತ್ತೊಂದು ಪ್ರಮುಖ ಬ್ಯಾಂಕ್ಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರೆ, ನಗರ ಭಾಗದ ವಾಸಿಗಳು ಹತ್ತು ಸಾವಿರ ರೂಪಾಯಿಗಳನ್ನು ಕನಿಷ್ಠ ಮೊತ್ತವನ್ನು ಹೊಂದಿರಬೇಕು. ಅರೆ ನಗರ ಭಾಗದಲ್ಲಿನ ಜನರು 5,000ಗಳನ್ನು ಹಾಗೂ ಗ್ರಾಮೀಣ ಭಾಗದ ಜನರು 2,500 ಕನಿಷ್ಠ ಮೊತ್ತವಾಗಿ ಉಳಿಸಿಕೊಳ್ಳಬೇಕು.

ಎಲ್ಲ ಬ್ಯಾಂಕುಗಳಲ್ಲಿಯೂ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳಬೇಕು ಎನ್ನುವ ನಿಯಮ ಇಲ್ಲ. ಮುಂಬರುವ ದಿನಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳದೆ ಇರುವ ಖಾತೆಗಳಿಗೆ ವಿಧಿಸಲಾಗುವ ದಂಡ (penalty) ವನ್ನು ಕಡಿತಗೊಳಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.

ಇನ್ಮುಂದೆ ಮನೆಯಲ್ಲಿ ಕ್ಯಾಶ್ ಇಟ್ಟುಕೊಳ್ಳೋದಕ್ಕೂ ಇದೇ ಲಿಮಿಟ್; ಮಿತಿಮೀರಿದರೆ ದಂಡ

ಆದರೆ ಬ್ಯಾಂಕುಗಳ ನಿರ್ದೇಶನ ಮಂಡಳಿ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆಯೋ ಅದೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ. ಹಾಗಾಗಿ ಪ್ರತಿ ವರ್ಷ ಬೀಳುವ ಹೆಚ್ಚುವರಿ ದಂಡವನ್ನು ತಪ್ಪಿಸಿಕೊಳ್ಳಲು ನಿಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ (minimum balance) ಕಾಯ್ದುಕೊಳ್ಳುವುದು ಒಳ್ಳೆಯದು.

Big Update for SBI, HDFC, ICICI Bank Account Holders