ಮನೆ, ಜಮೀನು, ಸ್ವಂತ ಆಸ್ತಿ ಇದ್ದೋರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ನಡೆಯೋದಿಲ್ಲ ಆಸ್ತಿ ಫೋರ್ಜರಿ

Story Highlights

ಈಗ ಭೂಮಿ ವಿಚಾರದಲ್ಲಿ ಮೋಸ ಆಗುತ್ತಿರುವುದು ಕೂಡ ಜಾಸ್ತಿ ಇದೆ. ಸುಳ್ಳು ಆಸ್ತಿ ಪತ್ರಗಳನ್ನು ತೋರಿಸಿ, ಅಮಾಯಕರನ್ನು ಮರಳು ಮಾಡುತ್ತಿರುವ ಘಟನೆಗಳು ಕೂಡ ಸಾಕಷ್ಟು ನಡೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಭೂಮಿ, ಜಮೀನು (Property) ಇವುಗಳಿಗೆ ಇರುವ ಬೇಡಿಕೆ ಮತ್ತೊಂದಿಲ್ಲ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಇಂದು ಭೂಮಿ ಖರೀದಿ (Buy Property Land) ಮಾಡಿದರೆ, ಮುಂದೊಂದು ದಿನ ಆ ಭೂಮಿಗೆ ಚಿನ್ನದ ಬೆಲೆ (Gold Price) ಬರುತ್ತದೆ ಎಂದು ಹೇಳಬಹುದು.

ಹಾಗಾಗಿ ಹೆಚ್ಚಿನ ಜನರು ಚಿನ್ನ, ಯೋಜನೆಗಳು ಇದೆಲ್ಲವನ್ನು ಬಿಟ್ಟು, ಭೂಮಿಯ ಮೇಲೆಯೇ ಹೆಚ್ಚಾಗಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಭೂಮಿ ಖರೀದಿಯ ವಿಚಾರಕ್ಕೆ ಬಂದಾಗ ನೀವು ಬಹಳ ಹುಷಾರಾಗಿ ಇರಬೇಕು…

ಏಕೆಂದರೆ ಈಗ ಭೂಮಿ ವಿಚಾರದಲ್ಲಿ ಮೋಸ ಆಗುತ್ತಿರುವುದು ಕೂಡ ಜಾಸ್ತಿ ಇದೆ. ಸುಳ್ಳು ಆಸ್ತಿ ಪತ್ರಗಳನ್ನು ತೋರಿಸಿ, ಅಮಾಯಕರನ್ನು ಮರಳು ಮಾಡುತ್ತಿರುವ ಘಟನೆಗಳು ಕೂಡ ಸಾಕಷ್ಟು ನಡೆಯುತ್ತಿದೆ.

ನಿಮ್ಮ ₹50 ಸಾವಿರಕ್ಕೆ ಸಿಗಲಿದೆ ₹1 ಲಕ್ಷ, ಪೋಸ್ಟ್ ಆಫೀಸ್ ನಲ್ಲಿ ಇನ್ನೊಂದು ಹೊಸ ಸ್ಕೀಮ್ ಬಿಡುಗಡೆ

ಹಾಗಾಗಿ ಜನರು ಈ ಒಂದು ವಿಚಾರದ ಬಗ್ಗೆ ಹುಷಾರಾಗಿ ಇರಬೇಕು. ಇದರ ಬಗ್ಗೆ ಈಗ ಸರ್ಕಾರ ಕೂಡ ಕ್ರಮ ತೆಗೆದುಕೊಂಡಿದೆ, ಭೂಮಿ ವಿಷಯದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಲು, ಇದೀಗ ಸರ್ಕಾರವು ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದಕ್ಕೆ ಮುಂದಾಗಿದೆ. ಇದರಿಂದ ಜನರಿಗೆ ಅನುಕೂಲ.

ಹೌದು, ಸ್ವಂತ ಭೂಮಿ ಹೊಂದಿರುವ ಪ್ರತಿಯೊಬ್ಬರು ಕೂಡ ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲೈಸ್ ಮಾಡಿಬಿಟ್ಟರೆ, ಆಗ ಯಾವುದೇ ಮೋಸ ನಡೆಯಲು ಸಾದ್ಯವಿಲ್ಲ. ಇದಕ್ಕಾಗಿ ಕಂದಾಯ ಇಲಾಖೆ ಮತ್ತು ತಾಲ್ಲೂಕು ಕಚೇರಿಗಳು ಕಷ್ಟಪಡುತ್ತಿವೆ.

ಎಲ್ಲರಿಗೂ ಕೂಡ ತಮ್ಮ ಜಾಗದ ದಾಖಲೆಗಳನ್ನು ಪೋರ್ಟಲ್ ಗಳಲ್ಲಿ ಅಪ್ಲೋಡ್ ಮಾಡುವುದಕ್ಕೆ ತಿಳಿಸಲಾಗಿದೆ. ಈ ಕೆಲಸ ಮಾಡಿದರೆ, ಜಮೀನಿನ ದಾಖಲೆಗಳನ್ನು ಪಡೆದುಕೊಳ್ಳಲು ಜನರು ತಾಲ್ಲೂಕು ಆಫೀಸ್ ಗೆ, ಕಂದಾಯ ಇಲಾಖೆಗೆ ಅಲೆದಾಡುವುದು ತಪ್ಪುತ್ತದೆ..

2014ಕ್ಕಿಂತ ಮುಂಚೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಇಲ್ಲಿದೆ ಬಿಗ್ ಅಪ್ಡೇಟ್! ವಿಳಾಸ ಪುರಾವೆಗೆ ಹೊಸ ದಾಖಲೆಗಳು

ಈ ಪ್ರಕ್ರಿಯೆ ಶುರು ಆಗೋದು ಯಾವಾಗ?

ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಅನುಸಾರ, ಭೂಮಿ ಪತ್ರಗಳ (Property Documents) ಡಿಜಿಟಲೀಕರಣ ಪ್ರಕ್ರಿಯೆ ಮುಂದಿನ ಜನವರಿ ತಿಂಗಳಿನಿಂದ ಶುರುವಾಗಬಹುದು ಎಂದು ಮಾಹಿತಿ ಸಿಕ್ಕಿದೆ.

ಇದರ ಜೊತೆಗೆ ಎಲ್ಲರೂ ಕೂಡ ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳ ಜೊತೆಗೆ ಆಧಾರ್ ಕಾರ್ಡ್ ಅನ್ನು ಕೂಡ ಲಿಂಕ್ ಮಾಡಬೇಕು. ಈ ಒಂದು ಕೆಲಸವನ್ನು ಸರ್ಕಾರ ಕಡ್ಡಾಯಗೊಳಿಸಿದ್ದು, ಇದರಿಂದಲೂ ಮೋಸದ ನಡೆಯುವುದನ್ನು ತಡೆಗಟ್ಟಬಹುದು.

ಕೆನರಾ ಬ್ಯಾಂಕ್ ನಲ್ಲಿ 3 ವರ್ಷಕ್ಕೆ ಅಂತ 1 ಲಕ್ಷ ಇಟ್ರೆ ಹಿರಿಯ ನಾಗರಿಕರಿಗೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಡೀಟೇಲ್ಸ್

ಉಪಯೋಗ ಏನು?

ಎಲ್ಲರೂ ಸಹ ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲೈಸ್ ಮಾಡಿದರೆ, ಎಲ್ಲಾ ದಾಖಲೆಗಳನ್ನು ಪಡೆದುಕೊಳ್ಳುವುದು ಸುಲಭ ಆಗುತ್ತದೆ. ಅಕ್ರಮವಿಲ್ಲದೆ ಭೂಮಿಯ ಹಂಚಿಕೆ ನಡೆಯುತ್ತದೆ, ಡಿಜಿಟಲ್ ರೂಪದಲ್ಲಿ ದಾಖಲೆಗಳು ಇದ್ದರೆ, ಅದನ್ನು ಪಡೆದು ಚೆಕ್ ಮಾಡುವುದು ಕೂಡ ಸುಲಭ, ಜಮೀನಿನ ಬಗ್ಗೆ ಮಾಹಿತಿ ಕೂಡ ಬೇಗ ಸಿಗುತ್ತದೆ.

ಇದರಿಂದ ನಕಲಿ ದಾಖಲೆ, ಫೋರ್ಜರಿ, ಮಾರಾಟ, ಇಂಥ ಪ್ರಕರಣಗಳು ಕೂಡ ಕಡಿಮೆ ಆಗುತ್ತದೆ. ಹಾಗಾಗಿ ಜನರು ಒಳ್ಳೆಯದಾಗಲಿಕ್ಕೆ, ಈ ಪ್ರಕ್ರಿಯೆಗೆ ಸಹಕರಿಸಬೇಕು.

Big update for those who have house, land, own property, No more property forgery

Related Stories