ಕುಳಿತಲ್ಲೇ ವಾಟ್ಸಾಪ್ ಮೂಲಕವೇ ಬುಕ್ ಮಾಡಿ ಗ್ಯಾಸ್ ಸಿಲಿಂಡರ್! ಬುಕಿಂಗ್ ಇನ್ನಷ್ಟು ಸುಲಭ

Gas cylinder booking in WhatsApp : ಕೇವಲ ವಾಟ್ಸಾಪ್ನಲ್ಲಿಯೇ ನೀವು ಸುಲಭವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದಾಗಿದೆ.

Bengaluru, Karnataka, India
Edited By: Satish Raj Goravigere

ಮೆಟಾ ಮಾಲೀಕತ್ವದ ವಾಟ್ಸಪ್ (WhatsApp) ಸಾಕಷ್ಟು ಉತ್ತಮವಾಗಿರುವ ಫೀಚರ್ (WhatsApp features) ಗಳನ್ನು ಜನರಿಗೆ ನೀಡಿದೆ. ಹಿಂದೆ ಸಂದೇಶ ಕಳುಹಿಸುವುದಕ್ಕಾಗಿ ಹಾಗೂ ವಿಡಿಯೋ ಕರೆಗಾಗಿ ಮಾತ್ರ ಸೀಮಿತವಾಗಿದ್ದ ವಾಟ್ಸಪ್ ನಲ್ಲಿ ಈಗ ಹಣಕಾಸಿನ ವ್ಯವಹಾರವನ್ನು ಕೂಡ ಮಾಡಬಹುದು

ಬೇರೆ ಬೇರೆ ಬ್ಯಾಂಕ್ಗಳ ಸಹಯೋಗದೊಂದಿಗೆ ವಾಟ್ಸಾಪ್ ಹಣಕಾಸಿನ ವ್ಯವಹಾರಕ್ಕೂ ಅವಕಾಶ ಮಾಡಿಕೊಟ್ಟಿದೆ, ಹೀಗಾಗಿ ನೀವು ವಾಟ್ಸಪ್ ಬಳಸಿಕೊಂಡು ಪೇಮೆಂಟ್ ಕೂಡ ಮಾಡಬಹುದು.

Book gas cylinder like this and get Rupees 80 extra cash back

ಹೊಸ ಹೊಸ ಫೀಚರ್ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸಾಪ್ ಇದೀಗ ಗ್ರಾಹಕರಿಗೆ ಅನುಕೂಲವಾಗುವಂತಹ ಮತ್ತೊಂದು ಫೀಚರ್ ಬಿಡುಗಡೆ ಮಾಡಿದೆ, ಅದುವೇ ವಾಟ್ಸಾಪ್ ಮೂಲಕ ಗ್ಯಾಸ್ ಬುಕಿಂಗ್!

ಇಂತಹ ರೈತರು ಪ್ರತಿ ತಿಂಗಳು ಪಡೆದುಕೊಳ್ಳಬಹುದು ₹3,000 ರೂಪಾಯಿ! ಇಲ್ಲಿದೆ ಮಾಹಿತಿ

ವಾಟ್ಸಪ್ ಮೂಲಕ ಗ್ಯಾಸ್ ಸಿಲೆಂಡರ್ (gas cylinder booking in WhatsApp)

ಎಲ್ಲರಿಗೂ ಗೊತ್ತಿರುವ ಹಾಗೆ ಗ್ಯಾಸ್ ಸಿಲೆಂಡರ್ ಬುಕ್ ಮಾಡಲು ಒಂದು ನಂಬರ್ಗೆ ಕರೆ ಮಾಡಬೇಕು. ಅಲ್ಲಿಂದ ಅವರು ಕೇಳುವ ಹಂತಗಳನ್ನ ಪಾಲಿಸಿಕೊಂಡು ಹೋದರೆ ಮಾತ್ರ ನಿಮಗೆ Book ಆಗುತ್ತದೆ

ಆದರೆ ಇನ್ನು ಮುಂದೆ ಅಷ್ಟು ಕಷ್ಟ ಪಡಬೇಕಾಗಿಲ್ಲ, ಕೇವಲ ವಾಟ್ಸಾಪ್ನಲ್ಲಿಯೇ ನೀವು ಸುಲಭವಾಗಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಬಹುದಾಗಿದೆ. ನೀವು ಕೊಡುವ ಕೆಲವು ಪ್ರಮುಖ ದಾಖಲೆಗಳಿಂದ ವಾಟ್ಸಾಪ್ನಲ್ಲಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿಕೊಳ್ಳಲು ಸಾಧ್ಯವಿದೆ.

PhonePe Loan: ಫೋನ್‌ಪೇ ಮೂಲಕ ಪೇಮೆಂಟ್ ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಪಡೆಯಿರಿ ಲೋನ್

ವಾಟ್ಸಪ್ ನಲ್ಲಿ ಗ್ಯಾಸ್ ಸಿಲೆಂಡರ್ ಬುಕ್ ಮಾಡಿಕೊಳ್ಳುವುದು ಹೇಗೆ?

Gas Booking Through WhatsApp*ಸದ್ಯ ಇಂಡೆನ್ ಗ್ಯಾಸ್ (indane Gas) ಅನ್ನು ವಾಟ್ಸಪ್ ಮೂಲಕ ಬುಕ್ ಮಾಡಿಕೊಳ್ಳಲು, 7588888824 ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಿ.

* ಅಥವಾ ವಾಟ್ಸಪ್ ನಲ್ಲಿ ಈ ಸಂಖ್ಯೆಯನ್ನು ಟೈಪ್ ಮಾಡಿ ಅದಕ್ಕೆ BOOK ಅಥವಾ REFILL ಎಂದು ಟೈಪ್ ಮಾಡಿ ಸಂದೇಶ ಕಳುಹಿಸಿ.

*ನೀವು ಸಂದೇಶ ಕಳುಹಿಸುತ್ತಿದ್ದಂತೆ ನಿಮಗೆ ಗ್ಯಾಸ್ ಯಾವಾಗ ಮನೆ ಬಾಗಿಲಿಗೆ ಬರುತ್ತದೆ ಎನ್ನುವ ದಿನಾಂಕದ ಜೊತೆಗೆ ರಿಪ್ಲೈ ಕೂಡ ಬರುತ್ತದೆ.

*ನೀವು ನಿಮ್ಮ ಗ್ಯಾಸ್ ಬುಕಿಂಗ್ ಸ್ಟೇಟಸ್ ತಿಳಿದುಕೊಳ್ಳಲು ಮೇಲೆ ತಿಳಿಸಿರುವ ಸಂಖ್ಯೆಗೆ ಆರ್ಡರ್ ಸಂಖ್ಯೆಯನ್ನು ಮಾಡಿದರೆ, ಸ್ಟೇಟಸ್ ಮೆಸೇಜ್ ಅನ್ನು ಪಡೆಯುತ್ತೀರಿ.

ಎಜುಕೇಶನ್ ಲೋನ್ ತೆಗೆದುಕೊಳ್ಳುವ ಮುನ್ನ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

ವಾಟ್ಸಾಪ್ ಮೂಲಕ ಹೆಚ್ ಪಿ ಗ್ಯಾಸ್ ಬುಕಿಂಗ್ (HP gas booking) ಮಾಡುವುದು ಹೇಗೆ?

HP ಗ್ಯಾಸ್ ಬುಕಿಂಗ್ ಮಾಡಲು ನೀವು ನಿಮ್ಮ ವಾಟ್ಸಪ್ ನಲ್ಲಿ 9222201122 ಈ ಸಂಖ್ಯೆಗೆ ಸಂದೇಶ ಕಳುಹಿಸಬೇಕು. ನೀವು ಸಂದೇಶ ಕಳುಹಿಸಿದ ಕೆಲವೇ ಸೆಕೆಂಡ್ ಗಳಲ್ಲಿ ನಿಮಗೆ ಬುಕಿಂಗ್ ದಿನಾಂಕದ ಜೊತೆಗೆ ರಿಪ್ಲೈ ಬರುತ್ತದೆ. ನಿಮ್ಮ ಬುಕಿಂಗ್ ಆರ್ಡರ್ ನಂಬರ್ ಕೂಡ ಕೊಡಲಾಗಿರುತ್ತದೆ.

ಭಾರತ್ ಗ್ಯಾಸ್ ಬುಕಿಂಗ್ ಮಾಡಿಕೊಳ್ಳುವುದು ಹೇಗೆ? (Bharat Gas booking)

ನೀವು ಭಾರತ್ ಗ್ಯಾಸ್ ಗ್ರಾಹಕರಾಗಿದ್ದರೆ ಗ್ಯಾಸ್ ಖಾಲಿಯಾದ ತಕ್ಷಣ ಬುಕಿಂಗ್ ಮಾಡಿಕೊಳ್ಳಲು 7718955555 ಈ ನಂಬರಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ ತಕ್ಷಣ ನಿಮಗೆ ಗ್ಯಾಸ್ ಸಿಲೆಂಡರ್ ಯಾವಾಗ ನಿಮ್ಮ ಕೈ ಸೇರುತ್ತದೆ ಎನ್ನುವ ದಿನಾಂಕ ಹಾಗೂ ಆರ್ಡರ್ ಸಂಖ್ಯೆಯನ್ನು ಕಳುಹಿಸಲಾಗುತ್ತದೆ.

ಚಿನ್ನದ ಬೆಲೆ ಭಾರೀ ಇಳಿಕೆ, ಅಂಗಡಿಗಳ ಮುಂದೆ ಜನಜಂಗುಳಿ! ಇಲ್ಲಿದೆ ಫುಲ್ ಡೀಟೇಲ್ಸ್

ಇನ್ನು ಭಾರತ್ ಗ್ಯಾಸ್ ಸಿಲೆಂಡರ್ ಅನ್ನು ನೀವು ಮೊಬೈಲ್ ನಲ್ಲಿ ವೆಬ್ಸೈಟ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು, ಇದಕ್ಕಾಗಿ ಭಾರತ್ ಗ್ಯಾಸ್ ಸಿಲೆಂಡರ್ ನ https://my.ebharatgas.com/bharatgas/Home/Index ಈ ವೆಬ್ಸೈಟ್ ಗೆ ಭೇಟಿ ನೀಡಿ. ಇಲ್ಲಿ ನಿಮ್ಮ ರಿಜಿಸ್ಟ್ರರ್ಡ್ ಗ್ಯಾಸ್ ಬುಕಿಂಗ್ ಸಂಖ್ಯೆಯನ್ನು ಹಾಕಿ ಗ್ಯಾಸ್ ಬುಕ್ ಮಾಡಿಕೊಳ್ಳಬಹುದು.

ಈಗ ಮುಂಚಿನಂತೆ ಫೋನ್ ಕರೆ ಮಾಡಿ ಗ್ಯಾಸ್ ಬುಕಿಂಗ್ ಮಾಡಿಕೊಳ್ಳುವ ತಾಪತ್ರಯ ಇಲ್ಲ.

Book a gas cylinder through WhatsApp, Booking made even easier