ಬಿಎಸ್‌ಎನ್‌ಎಲ್ ಸ್ಪೆಷಲ್ ಆಫರ್, ಕಡಿಮೆ ಬೆಲೆಯಲ್ಲಿ ಒಂದು ವರ್ಷದ ವ್ಯಾಲಿಡಿಟಿ
ಬಿಎಸ್‌ಎನ್‌ಎಲ್ ಹೊಸ 4ಜಿ ಪ್ಲಾನ್ ಮೂಲಕ ಗ್ರಾಹಕರಿಗೆ 330 ದಿನಗಳ ವ್ಯಾಲಿಡಿಟಿ, ಅನ್ಲಿಮಿಟೆಡ್ ಕಾಲಿಂಗ್, ಡೇಟಾ ಹಾಗೂ ಉಚಿತ ರೋಮಿಂಗ್ ಸೌಲಭ್ಯ.

BSNL Recharge Plan: ಸರ್ಕಾರದ ಟೆಲಿಕಾಂ ಸಂಸ್ಥೆಯಾದ ಭಾರತ ಸಂಚಾರ ನಿಗಮ್ ಲಿಮಿಟೆಡ್ (BSNL) ಇತ್ತೀಚೆಗೆ ತನ್ನ 4ಜಿ ಸೇವೆಯನ್ನು ದೇಶದಾದ್ಯಂತ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಹೊಸ ಆಕರ್ಷಕ ಪ್ಲಾನ್‌ಗಳನ್ನು ಪರಿಚಯಿಸುತ್ತಿದ್ದು, ಗ್ರಾಹಕರಿಗೆ ವಿಶೇಷ ಆಫರ್ ನೀಡುತ್ತಿದೆ. ಅದರ ಭಾಗವಾಗಿ ₹1999 ಪ್ಲಾನ್ ಈಗ 330 ದಿನಗಳ ವ್ಯಾಲಿಡಿಟಿಯೊಂದಿಗೆ ಲಭ್ಯವಿದೆ.
ಈ ಪ್ಲಾನ್ ಮೂಲಕ ಗ್ರಾಹಕರು ಭಾರತದೆಲ್ಲೆಡೆ ಅನ್ಲಿಮಿಟೆಡ್ ಕಾಲಿಂಗ್, ಉಚಿತ ರೋಮಿಂಗ್ ಹಾಗೂ ಪ್ರತಿದಿನ 1.5GB 4ಜಿ ಡೇಟಾ ಪಡೆಯಬಹುದು. ಜೊತೆಗೆ ಪ್ರತಿದಿನ 100 ಉಚಿತ SMS ಸೌಲಭ್ಯವೂ ನೀಡಲಾಗಿದೆ.
ಅದೇ ಅಲ್ಲದೆ, BSNL ವೆಬ್‌ಸೈಟ್ ಅಥವಾ ಸೆಲ್ಫ್‌ಕೇರ್ ಆಪ್ ಮೂಲಕ ರೀಚಾರ್ಜ್ ಮಾಡಿದರೆ 2% ಹೆಚ್ಚುವರಿ ಡಿಸ್ಕೌಂಟ್ ದೊರೆಯುತ್ತದೆ. ಕಂಪನಿ ಗ್ರಾಹಕರಿಗೆ 350ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು ಮತ್ತು ಹಲವಾರು OTT ಆಪ್‌ಗಳಿಗೆ ಪ್ರವೇಶ ಸೌಲಭ್ಯವನ್ನು ಸಹ ನೀಡಿದೆ.
ಬಿಎಸ್‌ಎನ್‌ಎಲ್ ಅಧಿಕಾರಿಗಳ ಪ್ರಕಾರ, ಮುಂದಿನ ಒಂದು ವರ್ಷದೊಳಗೆ ಸಂಸ್ಥೆ 5ಜಿ ಸೇವೆ ಪ್ರಾರಂಭಿಸಲು ಸಿದ್ಧವಾಗುತ್ತಿದೆ. 4ಜಿ ನಂತರ 5ಜಿಗೂ ಕಡಿಮೆ ದರದ ಪ್ಲಾನ್‌ಗಳನ್ನು ತರಲು ಯೋಜನೆ ಇದೆ. ಕಂಪನಿಯು ಈಗಾಗಲೇ ಲಕ್ಷಕ್ಕಿಂತ ಹೆಚ್ಚು 4ಜಿ ಟವರ್‌ಗಳನ್ನು ಸ್ಥಾಪಿಸಿದೆ ಎಂದು ವರದಿ ತಿಳಿಸಿದೆ.
ಇಂದು ಅಕ್ಟೋಬರ್ 15ರವರೆಗೆ ಈ ವಿಶೇಷ ಆಫರ್ ಲಭ್ಯವಿದ್ದು, ಇದರ ನಂತರ ಈ ಡಿಸ್ಕೌಂಟ್ ಮುಕ್ತಾಯವಾಗಲಿದೆ. ಬಿಎಸ್‌ಎನ್‌ಎಲ್ ಈ ಕ್ರಮದ ಮೂಲಕ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಜಿಯೋ ಹಾಗೂ ಏರ್‌ಟೆಲ್‌ಗೆ ಸ್ಪರ್ಧೆ ನೀಡುವ ಉದ್ದೇಶ ಹೊಂದಿದೆ.
BSNL Special Recharge Plan Offers 330 Days Validity



