ರೈತರಿಗೆ ಬಂಪರ್ ಗಿಫ್ಟ್! ಈ ಯೋಜನೆಯಲ್ಲಿ ಕೇಂದ್ರದಿಂದ ಸಿಗಲಿದೆ 3,000 ಪಿಂಚಣಿ

Pension Scheme : ಕೇಂದ್ರ ಸರ್ಕಾರವಾಗಲಿ (central government) ಅಥವಾ ರಾಜ್ಯ ಸರ್ಕಾರವಾಗಲಿ (State government) ರೈತರಿಗೆ (farmers) ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದು ರೈತರ ಸ್ವಾವಲಂಬನೆಯ ಜೀವನವನ್ನು ಯಾವಾಗಲೂ ಪ್ರೋತ್ಸಾಹಿಸುತ್ತವೆ.

ದೇಶದ ಜೀವಾಳವಾಗಿರುವ ರೈತರ ಅಭಿವೃದ್ಧಿಗಾಗಿ, ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವುದು ಸರ್ಕಾರದ ಉದ್ದೇಶವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (pradhanmantri Kisan Samman Nidhi scheme) , ರೈತರಿಗೆ ವಾರ್ಷಿಕವಾಗಿ 6,000ಗಳನ್ನು ನೀಡುವ ಯೋಜನೆ ಯಾಗಿದ್ದು ಕೋಟ್ಯಾಂತರ ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಇನ್ಮುಂದೆ ಬ್ಯಾಂಕ್ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದೆ ಇದ್ರೆ ದಂಡ! ಹೊಸ ಅಪ್ಡೇಟ್

ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ (Pradhanmantri Kisan mandhan scheme)

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಂತೆ, 2019ರಲ್ಲಿ ರೈತರಿಗಾಗಿ ಪ್ರಧಾನ್ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯನ್ನು ಕೂಡ ಕೇಂದ್ರ ಸರ್ಕಾರ ಆರಂಭಿಸಿದೆ. ಇದು ರೈತರಿಗೆ ಪಿಂಚಣಿಯನ್ನು ಒದಗಿಸುವ ಯೋಜನೆಯಾಗಿದೆ.

ಯೋಜನೆಯ ಪ್ರಯೋಜನ! (Benefits of scheme)

ಸಾಮಾನ್ಯವಾಗಿ ಸರ್ಕಾರಿ ನೌಕಾರಿಯಾಗಿದ್ದಾರೆ ಅಥವಾ ಕೆಲವು ಪ್ರಮುಖ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಪಿಂಚಣಿ (pension) ಸೌಲಭ್ಯ ಇರುತ್ತದೆ. ಆದರೆ ರೈತರಿಗೆ ಪಿಂಚಣಿಯನ್ನು ಯಾರು ಕೊಡುತ್ತಾರೆ ಅಲ್ಲವೇ. ಹಾಗಂತ ಚಿಂತೆ ಬೇಡ ರೈತರಿಗೂ ಕೂಡ ಪ್ರತಿ ತಿಂಗಳು 3,000 ಗಳನ್ನು 60 ವರ್ಷಗಳ ನಂತರ ಪಡೆದುಕೊಳ್ಳುವಂತೆ ಪ್ರಧಾನಮಂತ್ರಿ ಕಿಸಾನ್ ಮನ್ ಧನ್ ಯೋಜನೆ ಸಹಕಾರಿಯಾಗಲಿದೆ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ನೀವು ಕನಿಷ್ಠ 55 ರೂಪಾಯಿಗಳಿಂದ ಗರಿಷ್ಠ 210ಗಳವರೆಗೆ ಹೂಡಿಕೆ ಮಾಡಬಹುದು.

ನಿಮ್ಮ ಬಳಿ ಈ 5 ರೂಪಾಯಿ ಹಳೆಯ ನೋಟು ಇದ್ರೆ ನೀವೇ ಲಕ್ಷಾಧಿಪತಿ! ಹೇಗೆ ಗೊತ್ತಾ?

Pension Scheme18 ವರ್ಷಕ್ಕೆ ಪಿಎಂ ಕಿಸಾನ್ ಮನದನ್ ಯೋಜನೆಯ ಖಾತೆ ಆರಂಭಿಸಿದರೆ, ಪ್ರತಿ ತಿಂಗಳು 55 ರೂಪಾಯಿಗಳ ಪ್ರೀಮಿಯಂ ಹಣವನ್ನು ಪಾವತಿ ಮಾಡಬೇಕು. ಅದೇ ರೀತಿ 40 ವರ್ಷ ವಯಸ್ಸಿನಲ್ಲಿ ಪಿಂಚಣಿ ಯೋಜನೆ ಆರಂಭಿಸಿದರೆ 200 ರೂಪಾಯಿಗಳನ್ನು ಪ್ರತಿ ತಿಂಗಳು ಪಾವತಿ ಮಾಡಬೇಕಾಗುತ್ತದೆ.

ಇನ್ನು ಈ ಯೋಜನೆಯಲ್ಲಿ ಪಿಂಚಣಿ ಪಡೆಯುವುದಕ್ಕೂ ಮೊದಲು ರೈತ ಮೃತಪಟ್ಟರೆ ರೈತನ ಪತ್ನಿಗೆ ಕನಿಷ್ಠ ರೂ. 1,500 ಪಿಂಚಣಿ ಸಿಗುತ್ತದೆ. ಆದರೆ ಈ ಯೋಜನೆಯಲ್ಲಿ ನಾಮಿನಿ ರೈತನ ಪತ್ನಿ ಆಗಿರಬೇಕು ಹೊರತು ಮಕ್ಕಳು ಅಥವಾ ಇತರ ಸಂಬಂಧಿಗಳನ್ನು ನಾಮಿನಿ (nominee) ಆಗಿ ಆಯ್ಕೆ ಮಾಡುವಂತಿಲ್ಲ.

ಫೋನ್ ಪೇ, ಗೂಗಲ್ ಪೇ, UPI ಪೇಮೆಂಟ್ ಮಾಡೋರಿಗೆ ಹೊಸ ರೂಲ್ಸ್; ನಿಯಮ ತಿಳಿದುಕೊಳ್ಳಿ!

ಖಾತೆ ತೆರೆಯಲು ಬೇಕಾಗಿರುವ ದಾಖಲೆಗಳು! (Documents)

ರೈತರು ತಮ್ಮ ಆಧಾರ್ ಕಾರ್ಡ್ ಜಮೀನಿನ ಪಹಣಿ ವಿಳಾಸದ ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ರೈತ ಸೇವಾ ಕೇಂದ್ರದಲ್ಲಿ ಖಾತೆ ಆರಂಭಿಸಬಹುದು ಅಥವಾ ನೇರವಾಗಿ ಬ್ಯಾಂಕಿಗೆ (Bank) ಹೋಗಿ ಮನ್ ಧನ್ ಖಾತೆ ತೆರೆಯಬಹುದು.

ಮೊದಲ ಕಂತಿನ ಪ್ರೀಮಿಯಂನ ನೀವು ನೇರವಾಗಿ ಕ್ಯಾಶ್ ಮೂಲಕ ಅಥವಾ ಯುಪಿಐ (UPI) ಮೂಲಕ ಪೇಮೆಂಟ್ ಮಾಡಬಹುದು. ಮುಂದಿನ ಪ್ರೀಮಿಯಂ (premium) ನಿಂದ ಬ್ಯಾಂಕ್ ಆಟೋ ಡಿಟೆಕ್ಟ್ ಮಾಡಿಕೊಳ್ಳುವ ವ್ಯವಸ್ಥೆ ಇದೆ.

ಬ್ಯಾಂಕ್ ಖಾತೆಯಿಂದ (Bank Account) ನೇರವಾಗಿ ನಿಗದಿತ ದಿನಾಂಕದಲ್ಲಿ ಪ್ರೀಮಿಯಂ ಹಣ ಕಡಿತಗೊಳ್ಳುತ್ತದೆ. ದೇಶದ ಪ್ರತಿಯೊಬ್ಬ ರೈತನೂ ಕೂಡ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಗ್ಯಾಸ್ ಸಬ್ಸಿಡಿ ಹಣ ಬಿಡುಗಡೆ ಆಗಿದೆ, ನಿಮ್ಮ ಖಾತೆಗೆ ಜಮಾ ಆಗಿದ್ಯಾ ಈ ರೀತಿ ತಿಳಿಯಿರಿ

Bumper gift to farmers, 3,000 pension from the center under this scheme

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories