Business News

1ಕ್ಕಿಂತ ಹೆಚ್ಚು ಮನೆ ಬಾಡಿಗೆ ಕೊಟ್ಟಿರೋ ಓನರ್‌ಗಳಿಗೆ ಬಿಗ್ ಅಪ್ಡೇಟ್! ಖಡಕ್ ಸೂಚನೆ

1963ರ ಕಾಯ್ದೆಯಂತೆ, ಒಂದು ಖಾಸಗಿ ಆಸ್ತಿಯನ್ನು 12 ವರ್ಷಗಳ ಕಾಲ ನಿರಂತರವಾಗಿ ಬಳಕೆ ಮಾಡಿದರೆ, ಬಾಡಿಗೆದಾರನು ಆ ಆಸ್ತಿಯ ಮೇಲೆ ಹಕ್ಕು ಕೇಳಬಹುದಾಗಿದೆ.

Publisher: Kannada News Today (Digital Media)

  • 12 ವರ್ಷಗಳಿಂದ ನಿರಂತರ ವಾಸವಿದ್ದರೆ ಕಾನೂನು ಹಕ್ಕು ಸಾಧ್ಯ
  • Limitations Act, 1963 ಅಡಿಯಲ್ಲಿ ‘ಪ್ರತಿಕೂಲ ಸ್ವಾಧೀನ’ದ ಪಾಠ
  • ಖಾಸಗಿ ಆಸ್ತಿಗೆ 12 ವರ್ಷ, ಸರ್ಕಾರಿ ಆಸ್ತಿಗೆ 30 ವರ್ಷ

ನೀವು ಮನೆಯೊಂದನ್ನು (Rent property) ಬಾಡಿಗೆಗೆ ಕೊಡುತ್ತಿದ್ದೀರಾ? ಅಂದರೆ ಈ ಮಾಹಿತಿ ನಿಮಗಾಗಿ. ಭಾರತದಲ್ಲಿ 1963 ರಲ್ಲಿ ಜಾರಿಗೆ ಬಂದಿರುವ ಕಾಯ್ದೆಯ (Limitation Act) ಪ್ರಕಾರ, ಬಾಡಿಗೆದಾರರು ಅಥವಾ ಯಾರಾದರೂ ವ್ಯಕ್ತಿಗಳು ನಿರಂತರವಾಗಿ 12 ವರ್ಷಗಳ ಕಾಲ ಒಂದು ಖಾಸಗಿ ಆಸ್ತಿಯನ್ನು ಬಳಸುತ್ತಿದ್ದರೆ, ಅವರು ಆ ಆಸ್ತಿಯ ಮೇಲೆ ಹಕ್ಕು (ownership claim) ಕೇಳಬಹುದಾಗಿದೆ ಎಂಬ provision ಇದೆ.

ಇದನ್ನು ಕಾನೂನುಭಾಷೆಯಲ್ಲಿ “ಪ್ರತಿಕೂಲ ಸ್ವಾಧೀನ” (Adverse Possession) ಎನ್ನುತ್ತಾರೆ. ಇದರ ಅರ್ಥ, ಆಸ್ತಿಯ ಮೂಲ ಮಾಲೀಕರು ತಮ್ಮ ಹಕ್ಕನ್ನು ಸಾಭೀತುಪಡಿಸಲು ವಿಫಲರಾದರೆ ಮತ್ತು ಬಾಡಿಗೆದಾರನು ಅಥವಾ ಬಳಕೆದಾರನು ನಿರಂತರವಾಗಿ ಆ ಆಸ್ತಿಯಲ್ಲಿ ವಾಸವಿದ್ದರೆ, ಅವನು ಆ ಆಸ್ತಿಯ ‘ಹಕ್ಕುದಾರ’ ಎನ್ನಿಸಿಕೊಂಡು ಕಾನೂನಿನ ಮೂಲಕ ಒತ್ತಾಯಿಸಬಹುದಾಗಿದೆ.

1ಕ್ಕಿಂತ ಹೆಚ್ಚು ಮನೆ ಬಾಡಿಗೆ ಕೊಟ್ಟಿರೋ ಓನರ್‌ಗಳಿಗೆ ಬಿಗ್ ಅಪ್ಡೇಟ್! ಖಡಕ್ ಸೂಚನೆ

ಇದನ್ನೂ ಓದಿ: ಇಂತಹ ಎಸ್‌ಬಿಐ, ಕೆನರಾ ಬ್ಯಾಂಕ್ ಖಾತೆಗಳು ರದ್ದು! ಕೇಂದ್ರ ಮತ್ತು ಬ್ಯಾಂಕ್‌ಗಳಿಂದ ಕ್ರಮ

ಪ್ರೈವೇಟ್ ಆಸ್ತಿಗೆ ಈ ನಿಯಮ 12 ವರ್ಷಗಳ ಕಾಲ ಅನ್ವಯಿಸುತ್ತದೆ. ಆದರೆ ಸರ್ಕಾರಿ ಅಥವಾ ಪಬ್ಲಿಕ್ ಆಸ್ತಿಗಳಿಗೆ ಇದು 30 ವರ್ಷಗಳ ಕಾಲ ಅಗತ್ಯವಿದೆ. ಇದನ್ನು Limitation Period ಎಂದು ಕರೆಯಲಾಗುತ್ತದೆ.

ಆದರೆ ಇಲ್ಲಿ ಮಹತ್ವಪೂರ್ಣ ಅಂಶವೊಂದಿದೆ: ಈ ಸ್ವಾಧೀನವು ನಿರಂತರವಾಗಿರಬೇಕು, ಮಾಲೀಕರಿಂದ ಯಾವುದೇ ತಡೆಯಿಲ್ಲದೇ ನಡೆಯಬೇಕು. ಬಾಡಿಗೆದಾರರು ಲೀಸ್ ಅಥವಾ ಒಪ್ಪಂದದ ಅವಧಿ ಮುಗಿದ ಬಳಿಕ ಕೂಡಾ ವಾಸವನ್ನು ಮುಂದುವರಿಸಿದ್ದರೆ, ಅದು ಪ್ರತಿಕೂಲ ಸ್ವಾಧೀನದ ಅಡಿಗೆ ಬರುವ ಸಾಧ್ಯತೆ ಇರುತ್ತದೆ.

Rent Agreement

ಈ ಕಾನೂನು provisions ಬಗ್ಗೆ ಮನೆ ಮಾಲೀಕರು (property owners) ಕೂಡ ತಿಳಿದಿರಬೇಕು. ಒಂದು ವೇಳೆ ಇಂತಹ ಪರಿಸ್ಥಿತಿ ಸಂಭವಿಸಿದರೆ, ನೀವು ನಿಮ್ಮ ಆಸ್ತಿ ಮೇಲೆ ಮತ್ತೆ ಹಕ್ಕು ಪಡೆಯುವುದು ಕಷ್ಟವಾಗಬಹುದು.

ಇದನ್ನೂ ಓದಿ: ಆಧಾರ್ ಕಾರ್ಡ್ ಇದ್ದೋರಿಗೆ ಗುಡ್ ನ್ಯೂಸ್! ನಿಮಗೆ ಈ ಸೌಲಭ್ಯ ಸಂಪೂರ್ಣ ಉಚಿತ

ಅದಕ್ಕಾಗಿಯೇ ಬಹುತೇಕ ಮಾಲೀಕರು ಮನೆಯ ಅಥವಾ ಇನ್ನಾವುದೇ ಬಾಡಿಗೆ ಜಾಗಕ್ಕೆ ಕಡಿಮೆ ಅವಧಿಯ ಲೀಸ್ ಮಾಡಿಸುತ್ತಾರೆ. ಮನೆ ಬಾಡಿಗೆ ಕೊಡುವುದರ ಜೊತೆಗೆ ಅದರ ಕಾನೂನುಗಳನ್ನೂ ಅರಿಯುವುದು ಒಳಿತು, ಇಲ್ಲವೇ ಮುಂದೆ ನೀವು ಕಾನೂನು ಸಂಕಷ್ಟ ಅನುಭವಿಸಬೇಕು, ನಿಜವಾದ ಮಾಲೀಕರು ನೀವೇ ಆದರೂ ಸಾಭೀತುಪಡಿಸಬೇಕಾದ ಸಂದರ್ಭ ಎದುರಾಗಬಹುದು.

Can a Tenant Become the Property Owner?

English Summary

Our Whatsapp Channel is Live Now 👇

Whatsapp Channel

Related Stories