ಆಧಾರ್ ಕಾರ್ಡ್ ಇದ್ದೋರಿಗೆ ಗುಡ್ ನ್ಯೂಸ್! ನಿಮಗೆ ಈ ಸೌಲಭ್ಯ ಸಂಪೂರ್ಣ ಉಚಿತ
10 ವರ್ಷ ಹಳೆಯದಾದ ಆಧಾರ್ ಕಾರ್ಡ್ ಹೊಂದಿರುವವರಿಗೆ ಸಿಹಿ ಸುದ್ದಿ! ಜೂನ್ 14ರೊಳಗೆ ಉಚಿತವಾಗಿ ಆಧಾರ್ ಅಪ್‌ಡೇಟ್ ಮಾಡಿಸಬಹುದಾದ ಅವಕಾಶವನ್ನು UIDAI ಮತ್ತೆ ನೀಡಿದೆ.

- 10 ವರ್ಷ ಹಳೆಯ ಆಧಾರ್‌ಗಳಿಗೆ ಉಚಿತ ಅಪ್‌ಡೇಟ್ ಅವಕಾಶ
- ಜೂನ್ 14ರೊಳಗೆ ಆನ್‌ಲೈನ್ ಅಥವಾ ಸೆಂಟರ್‌ನಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿ
- ಸರ್ಕಾರದ ಎಲ್ಲ ಸೌಲಭ್ಯ ಪಡೆಯಲು ಆಧಾರ್ ಅಪ್‌ಡೇಟ್ ಅಗತ್ಯ
ಇನ್ನೂ ನೀವು 10 ವರ್ಷ ಹಳೆಯದಾದ ಆಧಾರ್ ಕಾರ್ಡ್ ಬಳಸುತ್ತಿದ್ದರೆ, ಕೂಡಲೇ ಅಪ್ಡೇಟ್ ಮಾಡಿಕೊಳ್ಳಿ. ಏಕೆಂದರೆ ಈ ಬಾರಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ನೀಡಿರುವ ಉಚಿತ ಆಧಾರ್ ಅಪ್‌ಡೇಟ್ ಕೊನೆಯ ದಿನಾಂಕ ಜೂನ್ 14, 2025 ಆಗಿದೆ.
ಇದರ ನಂತರ ಅಪ್‌ಡೇಟ್ ಮಾಡಲು ನಿಮಗೆ ಶುಲ್ಕ ತೆರಬೇಕಾಗುತ್ತದೆ. (free Aadhaar update)
ಈ ಅವಕಾಶದಿಂದ ಲಕ್ಷಾಂತರ ನಾಗರಿಕರು ಲಾಭ ಪಡೆಯುತ್ತಿರುವುದು ಸ್ಪಷ್ಟ. ಹೆಸರು, ವಿಳಾಸ, ಜನ್ಮ ದಿನಾಂಕ ಮುಂತಾದ ದತ್ತಾಂಶಗಳಲ್ಲಿ ಏನಾದರೂ ತಪ್ಪಿದ್ದರೆ, ಇದು ನಿಮ್ಮ ಬ್ಯಾಂಕಿಂಗ್ (banking) ಕೆಲಸಗಳಿಗೆ, ಪಾನ್ ಲಿಂಕ್, ಶಿಕ್ಷಣ ಹಾಗೂ ಪಿಂಚಣಿ ಸೇವೆಗಳಿಗೆ ಅಡ್ಡಿಯಾಗಬಹುದು.
ಇದನ್ನೂ ಓದಿ: ಒಂದೇ ಚಾರ್ಜ್‌ನಲ್ಲಿ 159 ಕಿ.ಮೀ! ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಮುಗಿಬಿದ್ದ ಜನ
ಸರ್ಕಾರದ (welfare schemes) ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಡೇಟಾ ನಿಖರವಾಗಿರಬೇಕಾದ್ದರಿಂದ, ಇದನ್ನು ಇಗ್ನೋರ್ ಮಾಡೋದು ತಪ್ಪು.
UIDAI ವೆಬ್‌ಸೈಟ್ ಮೂಲಕ ನೀವು ಮನೆಯಲ್ಲಿರುವಾಗಲೇ ಕೆಲವು ಮಾಹಿತಿಗಳನ್ನು ಸುಲಭವಾಗಿ ಅಪ್ಡೇಟ್ ಮಾಡಬಹುದು. ಅಪ್‌ಡೇಟ್ ಮಾಡುವ ವಿಧಾನ ಹೀಗಿದೆ:
- UIDAI ಅಧಿಕೃತ ವೆಬ್‌ಸೈಟ್ (https://uidai.gov.in) ಗೆ ಹೋಗಿ
- ‘My Aadhaar’ ವಿಭಾಗದಲ್ಲಿ ‘Document Update’ ಆಯ್ಕೆಮಾಡಿ
- ಆಧಾರ್ ಸಂಖ್ಯೆ ಹಾಗೂ captcha ನಮೂದಿಸಿ OTP ಇನ್ಪುಟ್ ಮಾಡಿ
- ನೀವು ಬದಲಾಯಿಸಬೇಕಾದ ಡಾಕ್ಯುಮೆಂಟ್ ಆಯ್ಕೆ ಮಾಡಿ, ಸಾಫ್ಟ್‌ಕಾಪಿ ಅಪ್‌ಲೋಡ್ ಮಾಡಿ
- ಸಮರ್ಪಿಸಿದ ನಂತರ SRN (Service Request Number) ದೊರೆಯುತ್ತದೆ, ಇದರಿಂದ ಸ್ಟೇಟಸ್ ಟ್ರ್ಯಾಕ್ ಮಾಡಬಹುದು
ಆದರೆ ಎಲ್ಲ ಅಪ್‌ಡೇಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ. ಕೆಲವು ವಿಷಯಗಳಿಗಾಗಿ ನೀವು ಹತ್ತಿರದ ಆಧಾರ್ ಸೇವಾ ಕೇಂದ್ರ (Aadhaar Seva Kendra)ಕ್ಕೆ ಹೋಗಬೇಕಾಗಬಹುದು. ಎಲ್ಲೇ ಮಾಡಿದರೂ, ಜೂನ್ 14ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ.
ಇದನ್ನೂ ಓದಿ: ಕಾರು ಕೊಳ್ಳೋಕೆ ಯಾವ ಲೋನ್ ಸೂಕ್ತ? ಪರ್ಸನಲ್ ಲೋನ್ vs ಕಾರ್ ಲೋನ್
UIDAI ಈಗ ಮ್ಯಾಸ್ಕ್ಡ್ ಆಧಾರ್ (Masked Aadhaar) ಜಾರಿಗೆ ತಂದಿದೆ, ಇದರಿಂದ ನಿಮ್ಮ ಮಾಹಿತಿಯು ಹೆಚ್ಚು ಸುರಕ್ಷಿತವಾಗಿರುತ್ತದೆ. ಇಂತಹ ಹೊಸ ವಿಧಾನಗಳನ್ನು ಬಳಸಲು ಸಹ ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು.
ಹೀಗಾಗಿ ಆಧಾರ್ ನಿಮ್ಮ ಮಾನ್ಯತೆ ಮಾತ್ರವಲ್ಲ, ಭವಿಷ್ಯಕ್ಕೂ ಮೂಲ ಅಧಾರವಾಗಿರುವುದರಿಂದ, ಇದನ್ನು ನವೀಕರಿಸಲು ಈ ಉಚಿತ ಅವಕಾಶವನ್ನು ಕಳೆದುಕೊಳ್ಳಬೇಡಿ!
Update Your Aadhaar for Free Before June 14




