ಯಾವ ಬ್ಯಾಂಕ್ ನಲ್ಲೂ ಲೋನ್ ಸಿಗ್ತಾಯಿಲ್ವಾ? ಇಲ್ಲಿದೆ ಸಿಬಿಲ್ ಸ್ಕೋರ್ ಹೆಚ್ಚಿಸುವ ಟಿಪ್ಸ್
Bank Loan / CIBIL Score : ಕಡಿಮೆ ಸಿಬಿಲ್ ಸ್ಕೋರ್ ಇರುವುದರಿಂದ ನಿಮಗೆ ಸಾಲ ನೀಡುತ್ತಿಲ್ಲವೇ ? ಸಿಬಿಲ್ ಸ್ಕೋರ್ ಹೆಚ್ಚಿಸುವ ಸರಳ ವಿಧಾನಗಳು ಇಲ್ಲಿವೆ!
Bank Loan / CIBIL Score : ಹಣದ ಅಗತ್ಯ ಯಾರಿಗೆ ಬರುವುದಿಲ್ಲ ಹೇಳಿ. ಕೆಲವು ಸನ್ನಿವೇಶಗಳು ಹಾಗೂ ಹಣದ ತುರ್ತು ಪರಿಸ್ಥಿತಿ, ಹೇಳಿಕೇಳಿ ಬರುವುದಿಲ್ಲ. ಹೀಗೆ ಹಣದ ಅಗತ್ಯ ಬಂದಾಗ ಹಲವಾರು ಹಣಕಾಸು ಸಂಸ್ಥೆಗಳು ನಮ್ಮ ನೆರವಿಗೆ ಬರಲು ಸಿದ್ಧ ಆಗಿರುತ್ತವೆ.
ಆಚಾನಕ್ ಆಗಿ ಬಂದ ಆರ್ಥಿಕ ಅಗತ್ಯಗಳನ್ನು ಹಣಕಾಸು ಸಂಸ್ಥೆಗಳಿಂದ ಅಥವಾ ಬ್ಯಾಂಕುಗಳಿಂದ (Bank Loan) ಪರಿಹರಿಸಿಕೊಂಡು, ಪ್ರತಿ ತಿಂಗಳು ಸಾಲ ಮರುಪಾವತಿ (Loan Re Payment) ಮಾಡಬಹುದು. ಇಂದಿನ ಡಿಜಿಟಲ್ ಯುಗದಲ್ಲಂತೂ ಯಾವುದೇ ಕಚೇರಿಗೆ ಭೇಟಿ ನೀಡದೆ ಕೇವಲ ಮೊಬೈಲ್ನ ಮೂಲಕವೇ ಅಕೌಂಟಿಗೆ (Bank Account) ಸಾಲದ ಹಣ ಜಮೆ ಮಾಡಿಸಿಕೊಳ್ಳಬಹುದು.
ಆದರೆ ಹಲವಾರು ಜನರ ಒಂದು ದೊಡ್ಡ ಸಮಸ್ಯೆ ಎಂದರೆ ಸಾಲವನ್ನು ಅಪ್ಲೈ ಮಾಡಲು ಹೋದಾಗ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿ ಇಲ್ಲದ ಕಾರಣ, ಸಾಲದ ಅಪ್ಲಿಕೇಶನ್ ರಿಜೆಕ್ಟ್ ಆಗಿರುತ್ತದೆ.
ಮಹಿಳೆಯರಿಗೆ ಸಿಗುತ್ತೆ 15 ಸಾವಿರ ರೂಪಾಯಿ ಕಿಟ್; ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್!
ಹಣಕಾಸು ಸಂಸ್ಥೆಗಳು ಸಾಲವನ್ನು ನೀಡಿದಾಗ ಅದರ ಮರುಪಾವತಿ ಬಗ್ಗೆ ಕೂಡ ಆಲೋಚನೆ ಮಾಡಿರುತ್ತದೆ. ಸಾಲ ಸರಿಯಾದ ಸಮಯದಲ್ಲಿ ಹಣಕಾಸು ಸಂಸ್ಥೆಗಳಿಗೆ ಸೇರಿದರಷ್ಟೇ ಅವರು ಲಾಭ ಮಾಡುತ್ತಾರೆ.
ಹೀಗೆ ಸಾಲ ಮರುಪಾವತಿ ಮಾಡುವ ಕ್ಷಮತೆ ಜನರಿಗೆ ಎಷ್ಟಿದೆ ಎನ್ನುವುದರ ಬಗ್ಗೆ ಒಂದು ಸ್ಟೋರ್ ಇದೆ, ಇದನ್ನೇ ಸಿಬಿಲ್ ಸ್ಕೋರ್ (Credit Score) ಎನ್ನಲಾಗುತ್ತದೆ. ನಮ್ಮ ಇಲ್ಲಿಯ ತನಕದ ಎಲ್ಲಾ ಹಣಕಾಸು ವಹಿವಾಟುಗಳನ್ನು ಟ್ರ್ಯಾಕ್ ಮಾಡಿ, ನಾವು ಎಷ್ಟು ಸರಿಯಾಗಿ ಹಣ ಮರುಪಾವತಿ ಮಾಡುತ್ತಿದ್ದೇವೆ? ಅವಧಿ ಮೀರಿ ಸಮಯ ತೆಗೆದುಕೊಳ್ಳುತ್ತಿದ್ದೇವೆಯೇ? ಎಂಬೆಲ್ಲ ಮಾಹಿತಿಗಳ ಆಧಾರದಲ್ಲಿ ಒಂದು ಸ್ಕೋರ್ ಸಿಗಲಿದೆ.
ಆ ಸ್ಕೋರ್ ಉತ್ತಮವಾಗಿದ್ದಲ್ಲಿ ನಮ್ಮ ಮರುಪಾವತಿಯ ಕ್ಷಮತೆ ಚೆನ್ನಾಗಿದೆ ಎಂದರ್ಥ. ಆಗ ಹಣಕಾಸು ಸಂಸ್ಥೆಗಳು ಸುಲಭವಾಗಿ ಸಾಲವನ್ನು ನೀಡುತ್ತವೆ.
ನೀವು ಯಾವುದೇ ಒಂದು ಸಾಲ ಪಡೆಯಲು ಹೋದಾಗ ನಿಮ್ಮ ಸಿಬಿಲ್ ಸ್ಕೋರ್ ಸರಿ ಇಲ್ಲ ಎಂದು ಅಪ್ಲಿಕೇಶನ್ ರಿಜೆಕ್ಟ್ ಆದರೆ ಚಿಂತಿಸಬೇಡಿ. ಈ ಕೆಳಗಿನ ಕೆಲವು ಸುಲಭ ಕೆಲಸಗಳನ್ನು ಮಾಡುವ ಮೂಲಕ ನಿಮ್ಮ ಸಿಬಿಲ್ ಸ್ಕೋರನ್ನು ಹೆಚ್ಚಿಸಿಕೊಳ್ಳಬಹುದು.
ಪಿಯುಸಿ ಪಾಸಾದವರಿಗೆ ಸಿಗುತ್ತೆ 20,000 ಸ್ಕಾಲರ್ಶಿಪ್; ತಕ್ಷಣ ಅಪ್ಲೈ ಮಾಡಿ! ಬಂಪರ್ ಯೋಜನೆ
ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿ – Credit Card Bill
ಕ್ರೆಡಿಟ್ ಕಾರ್ಡ್ ಬಳಕೆ ಮಾಡುವವರು ಕೆಲವೊಮ್ಮೆ ಸರಿಯಾಗಿ ಗಮನಿಸದೆ ಕೊನೆಯ ದಿನಾಂಕದ ನಂತರ ಕ್ರೆಡಿಟ್ ಕಾರ್ಡ್ ಬಿಲ್ಲನ್ನು ಪಾವತಿಸುತ್ತಾರೆ. ಹೀಗೆ ಮಾಡಿದಾಗ ಅದು ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ.
ಮಹಿಳೆಯರಿಗಾಗಿ ಇಲ್ಲಿದೆ ದುಡ್ಡು ಮಾಡುವಂತಹ ಬಿಸಿನೆಸ್ ಐಡಿಯಾಗಳು! ಕೈತುಂಬಾ ಕಾಸು
ಸಾಲದ ಆಫರ್ ಗಳನ್ನು ಆಗಾಗ ಚೆಕ್ ಮಾಡಬೇಡಿ
ನಿಮಗೆ ಸಾಲದ ಅಗತ್ಯ ಇಲ್ಲ ಎಂದಾದಲ್ಲಿ ಯಾವುದೋ ಲಿಂಕ್ ಬಳಸಿ ನಿಮಗೆ ಎಷ್ಟು ಸಾಲ ಸಿಗಲಿದೆ ಎಂಬ ವರದಿಗಳನ್ನು ಚೆಕ್ ಮಾಡುತ್ತಿರಬೇಡಿ. ಇದು ನಿಮ್ಮ ಕ್ರೆಡಿಟ್ ಲೈನ್ ನ ಮೇಲೆ ಪರಿಣಾಮ ಬೀರುತ್ತದೆ. ಸಾಲದ ಅಗತ್ಯ ಇದೆ ಎಂದಾದ ಮಾತ್ರಕ್ಕೆ ಹಣಕಾಸು ಸಂಸ್ಥೆಯವರಿಗೆ ಸಿಬಿಲ್ ಚೆಕ್ ಮಾಡಲು ಅನುಮತಿ ನೀಡಿ ಅಥವಾ ನೀವು ನಿಮ್ಮಷ್ಟಕ್ಕೆ ಚೆಕ್ ಮಾಡಿ.
ಕ್ರೆಡಿಟ್ ಲಿಮಿಟ್ ಬಳಕೆ
ನಿಮಗೆ ಸಿಕ್ಕ ಅಷ್ಟು ಕ್ರೆಡಿಟ್ ಲಿಮಿಟ್ ಅನ್ನು ಬಳಸಿಕೊಳ್ಳಬೇಡಿ. ಎಪ್ಪತ್ತು ಶೇಕಡಕ್ಕಿಂತ ಹೆಚ್ಚಿನ ಕ್ರೆಡಿಟ್ ಲಿಮಿಟ್ ಬಳಕೆ ಮಾಡಿದಲ್ಲಿ ನಿಮ್ಮ ಸಿಬಿಲ್ ಸ್ಕೋರ್ನ ಮೇಲೆ ಪರಿಣಾಮ ಬೀರಲಿದೆ. ಅನಗತ್ಯವಾಗಿ ಖರ್ಚು ಮಾಡುತ್ತಿದ್ದೀರಿ ಎಂದಾದಲ್ಲಿ ನಿಮ್ಮ ಕ್ರೆಡಿಟ್ ಲಿಮಿಟ್ ನ 70% ಮೀರದಂತೆ ಕ್ರೆಡಿಟ್ ಲಿಮಿಟ್ ಬಳಸಿಕೊಳ್ಳಿ.
Can you get a loan from any bank, Here are tips to increase CIBIL score