ಮಹಿಳೆಯರಿಗೆ ಸಿಗುತ್ತೆ 15 ಸಾವಿರ ರೂಪಾಯಿ ಕಿಟ್; ಅರ್ಜಿ ಸಲ್ಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್!
ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ (Loan) ಸೌಲಭ್ಯ ಒದಗಿಸುವುದರಿಂದ ಹಿಡಿದು ಸ್ವಂತ ಉದ್ಯಮ ಮಾಡುವುದಕ್ಕೆ ಸಹಾಯಧನ
ಸ್ನೇಹಿತರೆ, ಗೃಹಲಕ್ಷ್ಮಿ ಯೋಜನೆ ಹಾಗೂ ಮತ್ತಿತರ ಯೋಜನೆಯ ಮೂಲಕ ರಾಜ್ಯ ಸರ್ಕಾರ ಮಹಿಳೆಯರಿಗೆ ಆರ್ಥಿಕ ಭದ್ರತೆ ಒದಗಿಸಿದರೆ ಕೇಂದ್ರ ಸರ್ಕಾರ (Central government) ಇನ್ನು ಸಾಕಷ್ಟು ಯೋಜನೆಗಳನ್ನು ಸ್ವಾವಲಂಬಿ ಮಹಿಳೆ (independent women ) ಯರಿಗಾಗಿಯೇ ಜಾರಿಗೆ ತಂದಿದೆ.
ತಮ್ಮ ಸ್ವಂತ ಉದ್ಯಮ (Own Business) ಮಾಡಿ ಕೊಳ್ಳುವುದರ ಮೂಲಕ ಮಹಿಳೆಯರು ಆರ್ಥಿಕ ಭದ್ರತೆಯನ್ನು ಕಾಣಬಹುದಾಗಿದೆ. ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ (Loan) ಸೌಲಭ್ಯ ಒದಗಿಸುವುದರಿಂದ ಹಿಡಿದು ಸ್ವಂತ ಉದ್ಯಮ ಮಾಡುವುದಕ್ಕೆ ಸಹಾಯಧನ ಅಥವಾ ಸಬ್ಸಿಡಿ ನೀಡುವವರೆಗೆ ಸರಕಾರದ ಹಲವು ಯೋಜನೆಗಳು ಮಹಿಳೆಯರಿಗೆ ಮುಕ್ತವಾಗಿ ಜೀವನ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸಿ ಕೊಡುತ್ತಿವೆ.
ಪ್ರತಿ ಮನೆಯ ಶೌಚಾಲಯ ನಿರ್ಮಾಣಕ್ಕೆ ಸಿಗಲಿದೆ 12,000 ರೂಪಾಯಿ ಉಚಿತ ಸಹಾಯಧನ
ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸಿಗುತ್ತೆ 15 ಸಾವಿರ ರೂಪಾಯಿಗಳ ಕಿಟ್!
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ 2021 22ನೇ ಸಾಲಿನಲ್ಲಿ ಜಾರಿಗೆ ತರಲಾಗಿದ್ದು, ಈ ಯೋಜನೆಯ ಮೂಲಕ ಕುಶಲಕರ್ಮಿಗಳಿಗೆ ತಮ್ಮ ಉದ್ಯಮವನ್ನು ಮಾಡಿಕೊಳ್ಳಲು ಸರಕಾರದಿಂದ ಸಾಕಷ್ಟು ಅನುಕೂಲ ಮಾಡಿಕೊಡಲಾಗುತ್ತಿದೆ.
ಸ್ವಂತ ಉದ್ಯಮ ಮಾಡುವವರು ತಮ್ಮದೇ ಆದ ಬ್ರಾಂಡಿಂಗ್ ಕ್ರಿಯೇಟ್ (branding creation) ಮಾಡಿಕೊಳ್ಳಲು ಈ ಯೋಜನೆ ಸಹಾಯ ಮಾಡುತ್ತದೆ ಎನ್ನಬಹುದು. ಸಾಲ ಸೌಲಭ್ಯ (Loan facility) ನೀಡುವುದು, ಉಚಿತ ಟೂಲ್ ಕಿಟ್ ಒದಗಿಸುವುದು ಹಾಗೂ ಉಚಿತವಾಗಿ ಕೌಶಲ್ಯ ತರಬೇತಿ (still training) ನೀಡುವುದು ಈ ಯೋಜನೆಯ ಪ್ರಮುಖ ವಿಷಯಗಳಾಗಿದ್ದು ಇದರಿಂದ ಸಾಕಷ್ಟು ಜನರು ಬೆನೆಫಿಟ್ ಪಡೆದುಕೊಳ್ಳುತ್ತಿದ್ದಾರೆ.
ಮಹಿಳೆಯರಿಗಾಗಿ ಇಲ್ಲಿದೆ ದುಡ್ಡು ಮಾಡುವಂತಹ ಬಿಸಿನೆಸ್ ಐಡಿಯಾಗಳು! ಕೈತುಂಬಾ ಕಾಸು
ಕುಶಲಕರ್ಮಿಗಳು ಸಾಂಪ್ರದಾಯಿಕವಾಗಿ ತಮ್ಮ ಕೆಲವು ಉದ್ಯಮಗಳನ್ನು ಮಾಡಿಕೊಂಡು ಬರುತ್ತಾರೆ ಅಂತವರಿಗೆ ತಮ್ಮ ಉದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಮತ್ತು ತಮ್ಮದೇ ಆಗಿರುವ ಬ್ರಾಂಡಿಂಗ್ ಕ್ರಿಯೇಟ್ ಮಾಡಿಕೊಳ್ಳಲು ಅವರಿಗೆ ಈ ಕಾಮರ್ಸ್ ಜಾಹೀರಾತು (E-Commerce advertisement) ತರಬೇತಿಯನ್ನು ನೀಡಲಾಗುತ್ತದೆ
ಸುಮಾರು ಒಂದು ವಾರದ ವರೆಗೆ ನಡೆಯುವ ಈ ತರಬೇತಿ ಅವಧಿಯಲ್ಲಿ ಪ್ರತಿದಿನ ಅಭ್ಯಾಸಗಳಿಗೆ ಐನೂರು ರೂಪಾಯಿಗಳ ಸ್ಟೈಫಂಡ್ ಕೂಡ ನೀಡಲಾಗುವುದು. ಇದರ ಜೊತೆಗೆ ಕುಶಲಕರ್ಮಿಗಳು ತಮ್ಮ ಉದ್ಯಮಕ್ಕೆ ಬೇಕಾಗಿರುವ ವಸ್ತು ಖರೀದಿಗಾಗಿ 15,000ಗಳನ್ನು ನೀಡಲಾಗುವುದು ಅಂದರೆ ಈ ಮೂಲಕ ಕಿಟ್ ಖರೀದಿ ಮಾಡಬಹುದು.
ಯಾವುದೇ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿರೋರಿಗೆ ಗುಡ್ ನ್ಯೂಸ್
ಇನ್ನು ಯಾವುದೇ ಗ್ಯಾರಂಟಿ ಇಲ್ಲದೆ 3 ಲಕ್ಷ ರೂಪಾಯಿಗಳವರೆಗೆ ಕುಶಲಕರ್ಮಿಗಳು ಸುಲಭವಾಗಿ ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಒಮ್ಮೆ ಸಾಲವನ್ನು ಮರುಪಾವತಿ ಮಾಡಿದ ನಂತರ ಮತ್ತೆ ಸಾಲ ಪಡೆದುಕೊಳ್ಳಲು ಅವಕಾಶವಿದೆ. ಯೋಜನೆಗೆ ಮಹಿಳೆಯ ಅಥವಾ ಮನೆಯ ಇತರ ಸದಸ್ಯರು ಅರ್ಜಿ ಸಲ್ಲಿಸಬಹುದು.
ಟೂಲ್ ಕಿಟ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಮೊಬೈಲ್ ಸಂಖ್ಯೆ
* ಬ್ಯಾಂಕ್ ಖಾತೆ ವಿವರ
* ಪ್ಯಾನ್ ಕಾರ್ಡ್
* ಖಾಯಂ ನಿವಾಸದ ಪ್ರಮಾಣ ಪತ್ರ
* ಸ್ವಯಂ ಘೋಷಣಾ ಪ್ರಮಾಣ ಪತ್ರ
* ಪಾಸ್ಪೋರ್ಟ್ ಅಳತೆಯ ಫೋಟೋ
ಕಡಿಮೆ ಬಂಡವಾಳ, ಹೆಚ್ಚು ಆದಾಯ; ಇಂಥ ಬಿಸಿನೆಸ್ ಮಾಡುದ್ರೆ ಲಾಭವೋ ಲಾಭ!
ಅರ್ಜಿ ಸಲ್ಲಿಸುವುದು ಹೇಗೆ?
ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದ್ದು ಇದಕ್ಕಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ https://pmvishwakarma.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಲಾಗಿನ್ ಆಗುವುದರ ಮೂಲಕ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು ನಿಮ್ಮ ಅರ್ಜಿ ಸ್ವೀಕರಿಸಿಕೊಂಡಿದ್ದರೆ ನೀವು ಫಲಾನುಭವಿಗಳಾಗಿದ್ದರೆ ಕೆಲವೇ ದಿನಗಳಲ್ಲಿ ಟೂಲ್ ಕಿಟ್ ಖರೀದಿಗೆ 15,000 ನಿಮ್ಮ ಖಾತೆಗೆ (Bank Account) ನೇರವಾಗಿ ಜಮಾ ಆಗುತ್ತದೆ.
15 thousand rupees kit for women, Here is the direct link to apply