ಪ್ರತಿ ಮನೆಯ ಶೌಚಾಲಯ ನಿರ್ಮಾಣಕ್ಕೆ ಸಿಗಲಿದೆ 12,000 ರೂಪಾಯಿ ಉಚಿತ ಸಹಾಯಧನ

ಸ್ವಚ್ಛ ಭಾರತ ಅಭಿಯಾನ (swachh Bharat abhiyan) ದ ಅಡಿಯಲ್ಲಿ 10.9 ಕೋಟಿಗೂ ಅಧಿಕ ಶೌಚಾಲಯ (toilet) ಗಳನ್ನು ನಿರ್ಮಾಣ ಮಾಡಲಾಗಿದೆ.

Bengaluru, Karnataka, India
Edited By: Satish Raj Goravigere

ಪ್ರಧಾನಿ ನರೇಂದ್ರ ಮೋದಿ (PM Narendra Modi ji) ರವರ ನೇತೃತ್ವದಲ್ಲಿ ಈಗಾಗಲೇ ಭಾರತ ದೇಶದ ಅತ್ಯಂತ ಸ್ವಚ್ಛ ಭಾರತ ಅಭಿಯಾನ (swachh Bharat abhiyan) ದ ಅಡಿಯಲ್ಲಿ 10.9 ಕೋಟಿಗೂ ಅಧಿಕ ಶೌಚಾಲಯ (toilet) ಗಳನ್ನು ನಿರ್ಮಾಣ ಮಾಡಲಾಗಿದೆ.

ಈ ಮೊದಲು ಶೌಚಾಲಯ ಮಾಡಿಸುವುದಕ್ಕಾಗಿ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತಿತ್ತು ಆದರೆ ಈಗ ಅದನ್ನು 12,000ಗಳಿಗೆ ಹೆಚ್ಚಿಸಿರುವಂತಹ ಗುಡ್ ನ್ಯೂಸ್ ಅನ್ನು ಸರ್ಕಾರ ನೀಡಿದೆ.

Free subsidy of Rs 12,000 will be provided for construction of toilet

ಮಹಿಳೆಯರಿಗಾಗಿ ಇಲ್ಲಿದೆ ದುಡ್ಡು ಮಾಡುವಂತಹ ಬಿಸಿನೆಸ್ ಐಡಿಯಾಗಳು! ಕೈತುಂಬಾ ಕಾಸು

ಉಚಿತ ಶೌಚಾಲಯ ಸ್ಕೀಮ್ 2024 (Free toilet Scheme 2024)

2014ರಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಭಾರತದ ಎಲ್ಲಾ ಮನೆಗಳಿಗೆ ಸುಲಭ ಶೌಚಾಲಯವನ್ನು ಸ್ಥಾಪಿಸುವುದು ಕೇಂದ್ರ ಸರ್ಕಾರದ ಗುರಿಯಾಗಿತ್ತು. 2019ರ ಒಳಗೆ ಈ ಕೆಲಸವನ್ನು ಮುಗಿಸುವಂತಹ ಶಪಥ ಮಾಡಿದ ಸರ್ಕಾರ ಈ ಯೋಜನೆಯನ್ನು ಈಗ 2024ರ ವರೆಗೆ ವಿಸ್ತರಿಸಲಾಗಿದೆ.

ಉಚಿತ ಶೌಚಾಲಯವನ್ನು ನಿರ್ಮಾಣ ಮಾಡುವುದಕ್ಕಾಗಿ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ನೀಡಲಾಗುತ್ತಿತ್ತು. ಅದಾಗಲೇ 10.9 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು ಈಗ ನೀಡುವಂತಹ ಸಹಾಯಧನವನ್ನು 10 ಸಾವಿರದಿಂದ ಹನ್ನೆರಡು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಯೋಜನೆಯ ಪ್ರಯೋಜನಗಳು

* ಸ್ವಚ್ಛ ಭಾರತ್ ಮಿಷನ್ (swachh Bharat mission) ಯೋಜನೆ ಅಡಿಯಲ್ಲಿ ಈಗಾಗಲೇ 10.9 ಕೋಟಿಗೂ ಹೆಚ್ಚಿನ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದ್ದು ಭಾರತದ ನಾಗರಿಕರು ತಮ್ಮ ಸ್ವಾಸ್ಥ್ಯ ಹಾಗೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

* ಸಹಾಯಧನವನ್ನು 10,000 ಗಳಿಂದ ಹನ್ನೆರಡು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

ಯಾವುದೇ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿರೋರಿಗೆ ಗುಡ್ ನ್ಯೂಸ್

Swacch Bharat missionಉಚಿತ ಶೌಚಾಲಯಕ್ಕಾಗಿ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು

* ಎಲ್ಲಕ್ಕಿಂತ ಪ್ರಮುಖವಾಗಿ ನೀವು ಭಾರತೀಯ ನಾಗರಿಕರಾಗಿರಬೇಕು ಹಾಗೂ ನಿಮ್ಮ ಬಳಿ ಆಧಾರ್ ಕಾರ್ಡ್ ಇರಬೇಕು.
* ಅಡ್ರೆಸ್ ಪ್ರೂಫ್ ಹಾಗೂ ನಿಮ್ಮ ವಯಸ್ಸಿನ ಪ್ರೂಫ್ ಬೇಕಾಗಿರುತ್ತದೆ.
* ಇಮೇಲ್ ಐಡಿ ಮೊಬೈಲ್ ನಂಬರ್ ಹಾಗೂ ಪಾಸ್ಪೋರ್ಟ್ ಸೈಜ್ ನ ಫೋಟೋವನ್ನು ಒದಗಿಸಬೇಕಾಗಿರುತ್ತದೆ.

ಕಡಿಮೆ ಬಂಡವಾಳ, ಹೆಚ್ಚು ಆದಾಯ; ಇಂಥ ಬಿಸಿನೆಸ್ ಮಾಡುದ್ರೆ ಲಾಭವೋ ಲಾಭ!

ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಆನ್ಲೈನ್: ಸ್ವಚ್ಛ ಭಾರತ್ ಮಿಷನ್ ನ ಅಧಿಕೃತ ವೆಬ್ಸೈಟ್ ಗೆ ನೀವು ಹೋಗಬೇಕಾಗಿರುತ್ತದೆ. ಅಲ್ಲಿ ಟಾಯ್ಲೆಟ್ ಸ್ಕೀಮ್ ಅಡಿಯಲ್ಲಿ ಅರ್ಜಿ ಸಲ್ಲಿಸುವಂತಹ ಆಯ್ಕೆ ಸಿಗುತ್ತದೆ ನೀವು ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ಕೇಳಿದ ಆಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಹಾಗೂ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಬೇಕಾಗಿರುತ್ತದೆ. ಎಲ್ಲಾ ವಿವಾಹ ಹಾಗೂ ಡಾಕ್ಯುಮೆಂಟ್ ಗಳನ್ನು ನೀಡಿದ ನಂತರ ಸಬ್ಮಿಟ್ ಮಾಡಿದರೆ ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದಂತಾಗುತ್ತದೆ.

ಮಹಿಳೆಯರಿಗೆ ಗುಡ್ ನ್ಯೂಸ್! ಇಂಥವರಿಗೆ ಸಿಗುತ್ತೆ ಪ್ರತಿ ತಿಂಗಳು 800 ರೂಪಾಯಿ ಉಚಿತ

ಆಫ್ಲೈನ್: ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಉಚಿತ ಶೌಚಾಲಯ ಮಾಡುವಂತಹ ಫಾರ್ಮ್ ಅನ್ನು ತೆಗೆದುಕೊಂಡು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ಕೂಡ ಅಟ್ಯಾಚ್ ಮಾಡಿ ಅವರಿಗೆ ನೀಡಿ. ಸಂಬಂಧಪಟ್ಟಂತಹ ಕಚೇರಿಗೆ ನೀಡಿದ ನಂತರ ನೀವು ಅರ್ಜಿ ಸಲ್ಲಿಸಿರುವ ಪ್ರಕ್ರಿಯೆ ಯಶಸ್ವಿಯಾಗುತ್ತದೆ ಹಾಗೂ ನಿಮಗೆ ಉಚಿತ ಶೌಚಾಲಯ ಕಟ್ಟಲು ಹಣ ಸಹಾಯವನ್ನು ನೀಡಲಾಗುತ್ತದೆ.

Free subsidy of Rs 12,000 will be provided for construction of toilet