ಯಾವುದೇ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡಿರೋರಿಗೆ ಗುಡ್ ನ್ಯೂಸ್

Story Highlights

ಬ್ಯಾಂಕುಗಳಲ್ಲಿ, ಫೈನಾನ್ಸ್ ಕಂಪನಿಗಳಲ್ಲಿ ಸಾಲ ಮಾಡುವವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ!

ರೈತರು ತಮ್ಮ ಕೃಷಿ ಚಟುವಟಿಕೆ (Agriculture activities) ಗಳಿಗೆ ಅಗತ್ಯವಾದ ವಸ್ತುಗಳನ್ನು ಒದಗಿಸಲು ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ (Investment) ಮಾಡಬೇಕಾಗುತ್ತದೆ, ಆದರೆ ಇಷ್ಟು ಬಂಡವಾಳ ಎಲ್ಲಾ ಕೃಷಿಕರ ಬಳಿ ಇರುವುದಿಲ್ಲ.

ಅಂತಹ ಸಂದರ್ಭದಲ್ಲಿ ಬೆಳೆ ಸಾಲದ (Loan) ಮೊರೆ ಹೋಗಬೇಕಾಗುತ್ತದೆ. ಯಾವುದೇ ರೈತರಿಗೆ ನಿಶ್ಚಿತ ಆದಾಯ ಎನ್ನುವುದು ಇರುವುದಿಲ್ಲ. ಹಾಗಾಗಿ ಬಂಡವಾಳ ಹೂಡಿಕೆ ಮಾಡಿ ಸರಿಯಾದ ರೀತಿಯಲ್ಲಿ ಬೆಳೆ ಬೆಳೆದು ಫಸಲು ಉತ್ತಮವಾಗಿ ಬಂದರೆ ಮಾತ್ರ ತೆಗೆದುಕೊಂಡಿರುವ ಸಾಲವನ್ನು ಮರುಪಾವತಿ (Loan Re Payment) ಮಾಡಿ ಒಂದಿಷ್ಟು ಉಳಿತಾಯ (saving) ವನ್ನ ಮಾಡಬಹುದು.

ಒಂದು ವೇಳೆ ಫಸಲು ಸರಿಯಾಗಿ ಬಾರದಿದ್ದರೆ ಬೆಳೆ ಸಾಲ ತೀರಿಸುವುದಕ್ಕೂ ಕೂಡ ಕಷ್ಟಪಡುವ ಪರಿಸ್ಥಿತಿ ಎದುರಾಗುತ್ತದೆ.

ಕಡಿಮೆ ಬಂಡವಾಳ, ಹೆಚ್ಚು ಆದಾಯ; ಇಂಥ ಬಿಸಿನೆಸ್ ಮಾಡುದ್ರೆ ಲಾಭವೋ ಲಾಭ!

ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದ್ದು ರೈತರಿಗೆ ಅನುಕೂಲ ವಾಗುವಂತಹ ಯೋಜನೆಗಳನ್ನು ಪರಿಚಯಿಸಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸರ್ಕಾರ ಘೋಷಿಸಿದ್ದಂತೆ 5 ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದಿದೆ ಇದರಲ್ಲಿ ರೈತರಿಗೆ ಬಡವರಿಗೆ ಹಾಗೂ ಮಹಿಳೆಯರಿಗೆ ಅನುಕೂಲವಾಗುವ ಯೋಜನೆಗಳು ಇಂದಿಗೂ ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗಿವೆ ಎನ್ನಬಹುದು.

ಹೀಗಾಗಿ ಲೋಕಸಭಾ ಚುನಾವಣೆಯ ಅವಧಿಯಲ್ಲಿಯೂ ಕೂಡ ರಾಜ್ಯ ಸರ್ಕಾರ ತಾನು ಗೆಲ್ಲುವುದಕ್ಕೆ ಕಾರಣವಾಗಿದ್ದ ಗ್ಯಾರಂಟಿ ಯೋಜನೆ (guarantee schemes) ಗಳನ್ನು ದೇಶದ ಜನತೆಗೆ ನೀಡುವ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಹೇಳಿಕೊಂಡಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ಬ್ಯಾಂಕುಗಳಲ್ಲಿ (Banks) ಮತ್ತು ಸಂಘ ಸಂಸ್ಥೆಗಳಲ್ಲಿ ಸಾಲ ಮಾಡಿದ್ರೆ ಗುಡ್ ನ್ಯೂಸ್ ಅನ್ನು ಕೂಡ ಸರ್ಕಾರ ನೀಡಿದೆ.

ಬರೋಬ್ಬರಿ 17 ಲಕ್ಷ ಸಿಗುವ ಪೋಸ್ಟ್ ಆಫೀಸ್ ಹೊಸ ಸ್ಕೀಮ್ ಇದು! ಬಂಪರ್ ಕೊಡುಗೆ

ಕಡಿಮೆ ಬಡ್ಡಿ ದರದ ಸಾಲ! (Low cost loan)

Bank Loanರೈತರು ಯಾವುದೇ ಸರ್ಕಾರಿ ಬೆಂಬಲಿತ ಬ್ಯಾಂಕ್ ಗಳಲ್ಲಿ ಅಥವಾ ಸಹಕಾರಿ ಸಂಘಗಳಲ್ಲಿ ಸಾಲ (Loan) ತೆಗೆದುಕೊಂಡರೆ ಅಂತವರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಹೌದು, ಕೃಷಿ ಚಟುವಟಿಕೆಗಾಗಿ ರೈತರು ಸಾಲ ಮಾಡುತ್ತಾರೆ. ಈ ರೀತಿ ಬೆಳೆ ಸಾಲ ಮಾಡಿದಾಗ ಅದನ್ನು ತೀರಿಸಲು ಕೂಡ ರೈತರು ಕಷ್ಟ ಪಡಬೇಕಾಗುತ್ತದೆ ಆದರೆ ಸರ್ಕಾರ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದರ ಮೂಲಕ ರೈತರಿಗೆ ಸುಲಭವಾಗಿ ಸಾಲವನ್ನು ಮರುಪಾವತಿ ಮಾಡಲು ಅವಕಾಶ ಮಾಡಿಕೊಡುತ್ತಿದೆ.

ತಂದೆಯ ಒಟ್ಟಾರೆ ಆಸ್ತಿಯಲ್ಲಿ ಮಗಳಿಗೆ ಎಷ್ಟಿದೆ ಹಕ್ಕು ಗೊತ್ತಾ? ಇಲ್ಲಿದೆ ಮಾಹಿತಿ

ಈಗಾಗಲೇ ಲೋಕಸಭೆ ಚುನಾವಣೆಯ ಮೊದಲನೆಯ ಹಂತ ಮುಕ್ತಾಯಗೊಂಡಿದೆ. ಇನ್ನು ಮೇ ಏಳು 2024 ಮತ್ತೊಂದು ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಹಿಡಿದು ರಾಜ್ಯ ಸರ್ಕಾರದ ವರೆಗೆ ಎಲ್ಲಾ ಬೇರೆ ಬೇರೆ ಸರ್ಕಾರಗಳು ಕೂಡ ಸಾರ್ವಜನಿಕರಿಗೆ ಅಗತ್ಯವಾದ ಕೆಲವು ಪ್ರಮುಖ ಯೋಜನೆಗಳನ್ನು ಘೋಷಿಸಿವೆ. ಎಷ್ಟು ಬಾರಿ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದರು ಅದು ರೈತರವರೆಗೆ ತಲುಪುವುದಿಲ್ಲ ಯಾಕೆಂದರೆ ಈ ಯೋಜನೆಗಳ ಬಗ್ಗೆ ಹಳ್ಳಿ ಪ್ರದೇಶಗಳಲ್ಲಿ ವಾಸಿಸುವ ರೈತರಿಗೆ ತಿಳಿದಿರುವುದಿಲ್ಲ.

ಇನ್ನು ಮುಂದೆ ಸರ್ಕಾರ ಸಾಲ ಸೌಲಭ್ಯದ ಬಗ್ಗೆ ಹಾಗೂ ರೈತರಿಗೆ ಇರುವ ಇತರ ಬೆನಿಫಿಟ್ ಬಗ್ಗೆ ಮಾಹಿತಿ ನೀಡಲು ಕೂಡ ಉಪಕ್ರಮ ಕೈಗೊಂಡಿದೆ. ಇನ್ನು ಮುಂದೆ ಲೇವಾದೇವಿ ವ್ಯವಹಾರ ಮಾಡುವವರ ಬಳಿ ಕೈಚಾಚಿ ಅತಿ ಹೆಚ್ಚಿನ ಬಡ್ಡಿ ದರಕ್ಕೆ ರೈತರು ಸಾಲ ಪಡೆದುಕೊಂಡು ತಮ್ಮ ಮನೆ ಮಠ ಮಾರಾಟ ಮಾಡಿಕೊಳ್ಳುವ ಅಗತ್ಯ ಇಲ್ಲ.

ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ಎಷ್ಟು ಹಣ ಇಡಬಹುದು

ಅದರ ಬದಲು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಅಥವಾ ಸಹಕಾರ ಸಂಘಗಳಲ್ಲಿ ಕಡಿಮೆ ಬಡ್ಡಿ ದರಕ್ಕೆ ಸಾಲ ಪಡೆದುಕೊಂಡು ತಮ್ಮ ಕೃಷಿ ಚಟುವಟಿಕೆಯ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಹಾಗೂ ಸಾಲವನ್ನು ಸುಲಭವಾಗಿ ಮರುಪಾವತಿ ಮಾಡಿಕೊಳ್ಳಬಹುದು.

Good news for borrowers from any bank and finance company