ತಂದೆಯ ಒಟ್ಟಾರೆ ಆಸ್ತಿಯಲ್ಲಿ ಮಗಳಿಗೆ ಎಷ್ಟಿದೆ ಹಕ್ಕು ಗೊತ್ತಾ? ಇಲ್ಲಿದೆ ಮಾಹಿತಿ
ಹೆಣ್ಣು ಮಕ್ಕಳ ಆಸ್ತಿ ಹಕ್ಕಿನ ಬಗ್ಗೆ ಆಗಾಗ ಸಾಕಷ್ಟು ಪ್ರಶ್ನೆಗಳು ಏಳುತ್ತವೆ. ಯಾಕೆಂದರೆ ಆಸ್ತಿಗೆ (Property) ಸಂಬಂಧ ಪಟ್ಟ ಹಾಗೆ ನಮ್ಮ ದೇಶದಲ್ಲಿ ವಾದ ವಿವಾದಗಳು, ವ್ಯಾಜ್ಯಗಳು ಯಾವಾಗಲೂ ಇದ್ದಿದ್ದೇ.
ಜೊತೆಗೆ ಹುಟ್ಟಿದ ಅಣ್ಣ ತಮ್ಮಂದಿರು, ಕೂಡ ಆಸ್ತಿ (Property) ವಿವಾದ ಆರಂಭವಾಗಿ ದಾಯಾದಿಗಳಾಗುತ್ತಾರೆ. ಹಾಗಾಗಿ ಆಸ್ತಿ ವಿವಾದಗಳು ಇಂದು ನಿನ್ನೆಯದಲ್ಲ. ಆಸ್ತಿಗೆ ಸಂಬಂಧಪಟ್ಟ ವಿವಾದಗಳು ಸಾಕಷ್ಟು ಇಂದಿಗೂ ಬಗ್ಗೆ ಹರಿಯದೆ ಕೋರ್ಟ್ ನಲ್ಲಿ ನೆನೆಗುದಿಗೆ ಬಿದ್ದಿವೆ.
ಇನ್ನು ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಪಾಲಿನ ಬಗ್ಗೆ ಮಾತನಾಡುವುದಾದರೆ, ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅನುಸಾರ ಹೆಣ್ಣುಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿದೆ ಎಂಬುದನ್ನು ಈಗಲೇ ಕೋರ್ಟ್ ತೀರ್ಪನ್ನು ನೀಡಿದೆ.
ಬ್ಯಾಂಕ್ ಅಕೌಂಟ್ ನಲ್ಲಿ ಹೆಚ್ಚು ಹಣ ಇಟ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ಎಷ್ಟು ಹಣ ಇಡಬಹುದು
ಇದರ ಜೊತೆಗೆ ಒಂದು ವೇಳೆ ಉಯಲು ಮಾಡಿಡದೆ ಇದ್ದರೆ ಅಂತಹ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗುತ್ತದೆಯೇ ಇಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇದರ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಉಯಿಲು ಮಾಡಿಡದೆ ಇದ್ರೂ ಸಿಗುತ್ತೆ ಆಸ್ತಿಯ ಪಾಲು!
ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅನುಸಾರ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಸಮಾನವಾದ ಪಾಲು ನೀಡಲಾಗುವುದು. ಒಬ್ಬ ಹಿಂದೂ ತಂದೆ, ತನ್ನ ಆಸ್ತಿಯನ್ನು ಯಾರ ಹೆಸರಿಗೂ ಬರೆಯದೆ.. ಅಂದರೆ ವಿಲ್ ಮಾಡದೆ ಮರಣ ಹೊಂದಿದರೆ, ಆಗಲು ಹೆಣ್ಣು ಮಕ್ಕಳಿಗೆ ಅದರಲ್ಲಿ ಸಮಾನವಾದ ಪಾಲು ನೀಡಲಾಗುವುದು. ಗಂಡು ಮಕ್ಕಳಿಗೆ ಮಾತ್ರವಲ್ಲದೆ ಹೆಣ್ಣು ಮಕ್ಕಳಿಗೂ ತಂದೆಯ ಸ್ವಾಧೀನದ ಆಸ್ತಿಯಲ್ಲಿ ಸಮಾನವಾದ ಪಾಲು ಕೊಡಬೇಕು ಎಂದು ಕೋರ್ಟ್ ತಿಳಿಸಿದೆ.
ಈ ಟಿಪ್ಸ್ ಫಾಲೋ ಮಾಡಿ! ಬೇಸಿಗೆಯಲ್ಲೂ ಹಸು ಹೆಚ್ಚು ಹಾಲು ಕೊಡುವಂತೆ ಮಾಡಬಹುದು
ಮೃತ ವ್ಯಕ್ತಿಯ ಸಹೋದರನ ಮಕ್ಕಳಿಗೆ ಹೋಲಿಸಿದರೆ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹೆಚ್ಚಿನ ಅಧಿಕಾರ ಇರುತ್ತದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಹೆಣ್ಣು ಮಕ್ಕಳ ಆಸ್ತಿ ವಿಚಾರದಲ್ಲಿ ನ್ಯಾಯಯುತ ತೀರ್ಮಾನವನ್ನು ಈಗಾಗಲೇ ನೀಡಿವೆ.
ರಾಜ್ಯದ ವಿದ್ಯಾರ್ಥಿಗಳಿಗೆ ಇಲ್ಲಿದೆ ಗುಡ್ ನ್ಯೂಸ್! ಸರಕಾರದಿಂದ ಸಿಗುತ್ತೆ 15,000 ಸ್ಕಾಲರ್ಶಿಪ್
ಸುಪ್ರೀಂ ಕೋರ್ಟ್, ತಂದೆ ಸ್ವಯಂ ಸಂಪಾದಿಸಿರುವ ಅಥವಾ ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ಸಹೋದರನ ಮಕ್ಕಳಿಗಿಂತ ಹೆಚ್ಚಿನ ಹಕ್ಕಿದೆ ಎಂಬುದನ್ನು ಪ್ರತಿಪಾದಿಸಿದೆ. ಹಿಂದೂ ಸಾಂಪ್ರದಾಯಿಕ ಕಾನೂನು ಮಾತ್ರ ಅಲ್ಲದೆ ಇತರ ವಿವಿಧ ಕಾನೂನಿನ ಅಡಿಯಲ್ಲಿಯೂ ಹೆಣ್ಣು ಮಕ್ಕಳಿಗೆ ಹಕ್ಕು ಇದೆ ಎಂಬುದನ್ನು ತಿಳಿಸಲಾಗಿದೆ.
Do you know how much right the daughter has in the total property of the father