ಕೆನರಾ ಬ್ಯಾಂಕ್ ಗ್ರಾಹಕರಿಗೆ ಬಿಗ್ ಗಿಫ್ಟ್! ಈ ಯೋಜನೆಯಲ್ಲಿ 14,325 ಬಡ್ಡಿಯೇ ಸಿಗುತ್ತೆ - Canara Bank FD
ಕೆನರಾ ಬ್ಯಾಂಕ್ ತನ್ನ FD ಯೋಜನೆಗಳಲ್ಲಿ ಸಾಮಾನ್ಯರಿಗೆ, ಹಿರಿಯ ಹಾಗೂ ಸೂಪರ್ ಹಿರಿಯರಿಗೆ ಆಕರ್ಷಕ ಬಡ್ಡಿ ನೀಡುತ್ತಿದೆ. ₹1 ಲಕ್ಷ ಹೂಡಿಕೆ ಮಾಡಿದ್ರೆ 2 ವರ್ಷಗಳ ಬಳಿಕ ₹14,325 ಸ್ಥಿರ ಲಾಭ ಸಿಗಲಿದೆ.

Canara Bank FD : ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ರೆಪೊ ದರವನ್ನು ಕಡಿತಗೊಳಿಸಿದ್ದರಿಂದ ಎಫ್‌ಡಿ (Fixed Deposit) ಬಡ್ಡಿದರಗಳಲ್ಲಿ ಇಳಿಕೆ ಕಂಡುಬಂದಿದೆ. ಆದರೆ ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಇನ್ನೂ ಸ್ಪರ್ಧಾತ್ಮಕ ಬಡ್ಡಿಯನ್ನು ನೀಡುತ್ತಿದ್ದು, ಹೂಡಿಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ.
444 ದಿನಗಳ ವಿಶೇಷ FD ಯೋಜನೆ ಅಡಿಯಲ್ಲಿ ಸಾಮಾನ್ಯರಿಗೆ ಶೇ.6.50, ಹಿರಿಯರಿಗೆ ಶೇ.7.00 ಮತ್ತು ಸೂಪರ್ ಹಿರಿಯರಿಗೆ ಶೇ.7.10 ಬಡ್ಡಿ ನೀಡಲಾಗುತ್ತಿದೆ.
ಇದನ್ನೂ ಓದಿ: ಸ್ವಂತ ವ್ಯವಹಾರ ನಡೆಸಲು ಸಣ್ಣ ವ್ಯಾಪಾರಿಗಳಿಗೆ 90 ಸಾವಿರ! ಕೇಂದ್ರದಿಂದ ಶುಭ ಸುದ್ದಿ
2 ವರ್ಷಗಳ FD ಮೇಲೆ ಸಾಮಾನ್ಯರಿಗೆ ಶೇ.6.25, ಹಿರಿಯರಿಗೆ ಶೇ.6.75 ಬಡ್ಡಿ ಲಭ್ಯ. ಈ ಕಾರಣದಿಂದ ಅನೇಕರು ದೀರ್ಘಾವಧಿ ಹೂಡಿಕೆಗೆ ಕೆನರಾ ಬ್ಯಾಂಕಿನ FD ಯೋಜನೆಯನ್ನು ಆರಿಸುತ್ತಿದ್ದಾರೆ.
ಒಬ್ಬ ಸಾಮಾನ್ಯ ಹೂಡಿಕೆದಾರನು ₹1 ಲಕ್ಷವನ್ನು 2 ವರ್ಷಗಳ FDಯಲ್ಲಿ ಇಟ್ಟರೆ ಮೆಚ್ಯೂರಿಟಿ ನಂತರ ₹1,13,205 ದೊರೆಯುತ್ತದೆ. ಅಂದರೆ ₹13,205 ಬಡ್ಡಿ ಲಾಭ. ಹಿರಿಯ ನಾಗರಿಕರಿಗೆ ಇದೇ ಅವಧಿಯಲ್ಲಿ ₹1,14,325 ಲಾಭ ಸಿಗುತ್ತದೆ. ಅಂದರೆ ₹14,325 ಸ್ಥಿರ ಬಡ್ಡಿ ಲಾಭ ಲಭ್ಯ.
ಇದನ್ನೂ ಓದಿ: ಭರ್ಜರಿ ಪೋಸ್ಟ್ ಆಫೀಸ್ ಯೋಜನೆ, 5 ಲಕ್ಷ ಹೂಡಿಕೆ ಮಾಡಿದ್ರೆ 15 ಲಕ್ಷ ಲಾಭ! ಬಂಪರ್ ಸ್ಕೀಮ್
ಕೆನರಾ ಬ್ಯಾಂಕ್‌ನಲ್ಲಿ FD ಖಾತೆ ತೆರೆಯಲು ಕನಿಷ್ಠ 7 ದಿನಗಳು ಮತ್ತು ಗರಿಷ್ಠ 10 ವರ್ಷಗಳ ಅವಧಿ ಆಯ್ಕೆ ಮಾಡಬಹುದು. FD ಯೋಜನೆಯ ವಿಶೇಷತೆ ಎಂದರೆ, ಮಾರುಕಟ್ಟೆ ಏರಿಳಿತದಿಂದ ಯಾವುದೇ ಪ್ರಭಾವವಿಲ್ಲದೆ ನಿಗದಿತ ಬಡ್ಡಿ ಲಭ್ಯವಾಗುವುದು. ಹೀಗಾಗಿ ಸುರಕ್ಷಿತ ಹೂಡಿಕೆಗೆ ಇದು ಉತ್ತಮ ಆಯ್ಕೆಯಾಗಬಹುದು. ಸುರಕ್ಷಿತ ಹಾಗೂ ದೀರ್ಘಾವಧಿ ಹೂಡಿಕೆಗೆ ಕೆನರಾ ಬ್ಯಾಂಕಿನ FD ಒಳ್ಳೆಯ ಆಯ್ಕೆ ಎಂದು ತಜ್ಞರು ಸಲಹೆ ನೀಡಿದ್ದಾರೆ.



