ಹಣಕಾಸು ಹಾಗೂ ಹಣಕಾಸೇತರ ಕ್ಷೇತ್ರಗಳಿಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ನಿಯಮಗಳು ಬದಲಾವಣೆ ಆಗುತ್ತಿರುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ (Reserve Bank of India) ಸಾಲದ ನಿಯಮಗಳ ಮೇಲೆಯೂ ಸಾಕಷ್ಟು ಬದಲಾವಣೆಗಳನ್ನು ಜಾರಿಗೆ ತಂದಿದೆ.
ಆರ್‌ಬಿಐ (RBI) ತನ್ನ ರೆಪೋ ದರ (repo rate) ವನ್ನು ಕೂಡ ಪರಿಷ್ಕರಿಸಿದೆ, ಇದೀಗ ರೆಪೋ ದರ 6.50 ನಷ್ಟು ಇದೆ. ಆದರೆ ಕಳೆದ ಪರಿಷ್ಕೃತ ದರಕ್ಕಿಂತ ಈ ಬಾರಿ ಯಾವುದೇ ವ್ಯತ್ಯಾಸ ಆಗದೆ ಇರುವ ಕಾರಣ ರೆಪೋದರ ಯಥಾ ಸ್ಥಿತಿಯಲ್ಲಿಯೇ ಉಳಿದುಕೊಂಡಿದೆ.
ಆರ್‌ಬಿಐ ತನ್ನ ರೆಪೋ ದರವನ್ನು ಘೋಷಿಸಿದ ನಂತರ ಬ್ಯಾಂಕುಗಳು (banks) ತಮ್ಮಲ್ಲಿನ ಸಾಲದ (Loan) ಹಾಗೂ ಡೆಪಾಸಿಟ್ (deposits) ಮೇಲಿನ ಬಡ್ಡಿ ದರವನ್ನು (interest rate) ಪರಿಷ್ಕರಿಸಿವೆ.
ಆದರೆ ಈ ಬಾರಿ ಬಡ್ಡಿದರ ಪರಿಷ್ಕರಣೆಯಿಂದಾಗಿ ಕೆನರಾ ಬ್ಯಾಂಕ್ ನ (Canara Bank) ಗ್ರಾಹಕರಿಗೆ ಆತಂಕ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಈ ಪರಿಷ್ಕರಣೆಯ ದರ ಗ್ರಾಹಕರ ಸಾಲದ (Loan) ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಯಾವುದೇ ಬ್ಯಾಂಕ್ ನಲ್ಲಿ ಸಾಲ ಮಾಡಿರುವ ಅನ್ನದಾತ ರೈತರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ
ಕೆನರಾ ಬ್ಯಾಂಕ್ ಹೆಚ್ಚಿಸಿದ ಬಡ್ಡಿ ದರ
ಖಾಸಗಿವಲಯದ ಅತಿ ದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್, ತನ್ನ ಗ್ರಾಹಕರಿಗೆ ಹೊಸ ಸುದ್ದಿ ಒಂದನ್ನು ನೀಡಿದೆ. ಆರ್ ಬಿ ಐ ನ ರೆಪೋ ದರ ಪರಿಷ್ಕರಣೆ ಗೊಂಡ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ಕೂಡ ತನ್ನ ಬಡ್ಡಿ ತರದ ಪರಿಷ್ಕರಣೆ ನಡೆಸಿದ್ದು ಸಾಲದ ಮೇಲಿನ ಬಡ್ಡಿ ಏರಿಕೆ ಮಾಡಲು ನಿರ್ಧರಿಸಿದೆ.
ಇದರಿಂದ ಕೆನರಾ ಬ್ಯಾಂಕ್ ಅಲ್ಲಿ ಸಾಲ ಮಾಡಿದವರಿಗೆ ನಷ್ಟ ಉಂಟಾಗಬಹುದು. ಯಾಕಂದ್ರೆ ಈಗ ಪಾವತಿ ಮಾಡುತ್ತಿರುವ ಇಎಂಐ (EMI) ದರ ಅಧಿಕವಾಗಿ ಆರ್ಥಿಕ ಹೊರೆ ಹೆಚ್ಚಾಗಬಹುದು. ಈ ರೀತಿ ಏಕಾಏಕಿ ಬ್ಯಾಂಕ್ ಸಾಲದ ಹೆಚ್ಚಳದಿಂದಾಗಿ ಕೆನರಾ ಬ್ಯಾಂಕ್ ನ ಸಾಕಷ್ಟು ಗ್ರಾಹಕರಿಗೆ ತೊಂದರೆ ಆಗದೆ.
ಮನೆ ಬಾಡಿಗೆಗೆ ಕೊಟ್ಟಿರುವ ಮಾಲೀಕರಿಗೆ ಹೊಸ ನಿಯಮ! ಈ ತಪ್ಪನ್ನು ಎಂದೂ ಮಾಡಬೇಡಿ
ಎಷ್ಟು ಹೆಚ್ಚಳವಾಗಿದೆ ಸಾಲದ ದರ?
ಹೌದು ಕೆನರಾ ಬ್ಯಾಂಕ್ ತನ್ನ ಸಾಲದ ದರವನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ. MCLR (Marginal cost of funds based lending rate) ದರವನ್ನು ಕೆನರಾ ಬ್ಯಾಂಕ್ ಹೆಚ್ಚಿಸಿದೆ. ಎಂ ಎಸ್ ಸಿ ಎಲ್ ಆರ್ 0.05 ಬೇಸಿಸ್ ಪಾಯಿಂಟ್ ಗಳಿಗೆ ಏರಿಕೆಯಾಗಿದೆ. ಈ ರೀತಿ ಎಂ ಸಿ ಎಲ್ ಆರ್ ಹೆಚ್ಚಳದಿಂದಾಗಿ ಸಾಲ ತೆಗೆದುಕೊಂಡವರು ಪಾವತಿಸುವ ಈ ಎಂಐ ದರ ಕೂಡ ಹೆಚ್ಚಳವಾಗುತ್ತದೆ.
ನಿಮ್ಮ ಊರಲ್ಲೂ ನೀವೇ ಶುರು ಮಾಡಿ ಜಿಯೋ ಪೆಟ್ರೋಲ್ ಬಂಕ್; ಲಕ್ಷ ಲಕ್ಷ ಹಣ ಗಳಿಸಿ!
ಕೆನರಾ ಬ್ಯಾಂಕ್ ನಲ್ಲಿ ಹೆಚ್ಚಳವಾದ ಎಂಸಿಎಲ್ಆರ್ ದರ:
*ಒಂದು ತಿಂಗಳ ಎಮ್ ಸಿ ಎಲ್ ಆರ್ ದರ 8.05% ಏರಿಕೆ
*ಮೂರು ತಿಂಗಳ ಎಂ ಸಿ ಎಲ್ ಆರ್ ದರ 8.15% ಏರಿಕೆ
*ಆರು ತಿಂಗಳ ಎಂ ಸಿ ಎಲ್ ಆರ್ ದರ 8.50% ಏರಿಕೆ
*ಒಂದು ವರ್ಷದ ಎಂ ಸಿ ಎಲ್ ಆರ್ ದರ 8.70% ಏರಿಕೆ.
ಈ ರೀತಿ ಕೆನರಾ ಬ್ಯಾಂಕ್ ಎಂಸಿಎಲ್ಆರ್ ಅದರ ಹೆಚ್ಚಿಸಿದ್ದು ಇದು ನೇರವಾಗಿ ಗ್ರಾಹಕರ ಸಾಲದ ಮೊತ್ತದ ಮೇಲೆ ಪರಿಣಾಮ ಬೀರಲಿದೆ.
Canara Bank Loan Interest Rates Changes
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.